ವಾಲ್ಮೀಕಿ ಮನು ಕುಲ ವಿಕಾಸದ ಪ್ರತೀಕ-ಡಿ. ಮಲ್ಲು
ಮಂಡ್ಯ: ವಾಲ್ಮೀಕಿಯು ಮನು ಕುಲದ ವಿಕಾಸ, ಸಮಾನತೆ, ಮಮತೆ, ಹಾಗೂ ಆತ್ಮವಿಶ್ವಾಸದ ಪ್ರತೀಕ. ಅತ್ಯಂತ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದರೂ, ವಿಶ್ವಕ್ಕೆ ಅತ್ಯಂತ ಶ್ರೇಷ್ಠ ಕೊಡುಗೆಯನ್ನು ವಾಲ್ಮೀಕಿ ನೀಡಿದ್ದಾರೆ ಎಂದು ಹಿರಿಯ ಕೆಎಎಸ್ ನಿವೃತ್ತ ಅಧಿಕಾರಿ ಡಿ. ಮಲ್ಲು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ವತಿಯಿಂದ ಬುಧವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಾಲ್ಮೀಕಿಯು ಬಾಲ್ಯದಲ್ಲಿ ಗೊಂಡಾರಣ್ಯದಲ್ಲಿ ಸಾಮಾನ್ಯ ಬೇಡನಾಗಿ ಪ್ರಾಣಿಗಳ ಬೇಟೆಯಾಡುತ್ತಾ, ದಾರಿಹೋಕರನ್ನು ಸುಲಿಗೆ ಮಾಡುತ್ತಾ ಬದುಕುತ್ತಿದ್ದವನು. ದೈವಜ್ಞ ನಾರದರ ಭೇಟಿಯಿಂದ ಮನಃ ಪರಿವರ್ತನೆಯಾಗಿ ಮುಂದೆ ಬ್ರಹ್ಮರ್ಷಿಯಾಗಿ ವಿಶ್ವಕ್ಕೆ ಮಹಾಗ್ರಂಥ ನೀಡಿದ್ದಾರೆ ಎಂದು ಹೇಳಿದರು.
ಐದು ಸಾವಿರ ವರ್ಷಗಳ ಹಿಂದೆಯೇ 24 ಸಾವಿರ ಶ್ಲೋಕಗಳುಳ್ಳ ಮಹಾ ಕಾವ್ಯ ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿಯವ ರಾಮನ ಮಕ್ಕಳಾದ ಲವ ಮತ್ತು ಕುಶರಿಗೆ ಯುದ್ಧ ಕಲೆಯನ್ನು ಸಹ ಕಲಿಸಿದರು. ಇದರಿಂದ ವಾಲ್ಮೀಕಿ ಹಲವಾರು ವಿದ್ಯೆಗಳ ಪಾರಂಗತರಾಗಿದ್ದರು ಎಂದು ತಿಳಿಯಬಹುದು. ವಾಲ್ಮೀಕಿಯ ಆ ಶಕ್ತಿ ಈ ಸಮುದಾಯಕ್ಕೆ ಆದರ್ಶವಾಗಬೇಕು ಎಂದು ಹೇಳಿದರು.
ವಾಲ್ಮೀಕಿ ಜಯಂತಿ ಮೂಲಕ ಸಂಘಟಿತರಾಗಿ ಸಮಾಜದ ಅಭ್ಯುಯವಾಗಬೇಕು ಎಂಬ ಉz್ದÉೀಶದಿಂದ ಸರ್ಕಾರ ಪ್ರತೀ ವರ್ಷ ವಾಲ್ಮೀಕಿ ಜಯಂತ್ಯುತ್ಸವ ಆಚರಿಸುತ್ತಿದೆ. ಹಲವಾರು ಯೋಜನೆಗಳ ಮೂಲಕ ಪರಿಶಿಷ್ಟ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಪೆÇ್ರೀತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಅಭ್ಯುದಯಕ್ಕಾಗಿ ಪ್ರತ್ಯೇಕವಾದ ನಿರ್ದೇಶನಾಲಯ ಹಾಗೂ ಪರಿಶಿಷ್ಟ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮಕ್ಕೆ ಈ ವರ್ಷ ಆಯವ್ಯಯದಲ್ಲಿ 45 ಕೋಟಿ ರೂ.ಗಳ ಅನುದಾನ ನೀಡಿದೆ. ಈಗಾಗಲೇ 450 ಎಸ್.ಟಿ. ವಸತಿ ನಿಲಯಗಳಿದ್ದು, ಇನ್ನೂ 15 ವಸತಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಸುಮಾರು 160 ಕೋಟಿ ರೂ.ಗಳ ಅನುದಾನದಲ್ಲಿ 8 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪರಮೇಶ್ ಮಾತನಾಡಿ, ರಾಮಾಯಣದಲ್ಲಿ ರಾಮನನ್ನು ಆದರ್ಶ ಪುರುಷನನ್ನಾಗಿ ಬಿಂಬಿಸುವ ಮೂಲಕ ವಾಲ್ಮೀಕಿಯು ರಾಮ ರಾಜ್ಯದ ಕಲ್ಪನೆಯನ್ನು ಎಲ್ಲಾ ಆಡಳಿತಗಾರರಿಗೆ ನೀಡಿದ್ದಾರೆ. ವಾಲ್ಮೀಕಿಯ ಸಂದೇಶವನ್ನು ಅಳವಡಿಸಿಕೊಂಡು ನಾವು ರಾಮರಾಜ್ಯವನ್ನು ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್,ಜಿ.ಪಂ.ಅಧ್ಯಕ್ಷೆ ಮಂಜುಳಪರಮೇಶ್,ನಗರ ಸಭಾ ಅಧ್ಯಕ್ಷ ಬಿ.ಸಿದ್ದರಾಜು,ಜಿ.ಪಂ.ಸಿಇಒ ರೋಹಿಣಿ ಸಿಂಧೂರಿ,ಎನ್,ದೊಡ್ಡಯ್ಯ,ಎಂ.ಬಿ.ಶ್ರೀನಿವಾಸ್,ಪುಟ್ಟಂಕಯ್ಯ,ಕೃಷ್ಣಪ್ಪ,ಉಪಸ್ತಿತರಿದ್ದರು.
No comments:
Post a Comment