Thursday, 2 October 2014

ಸ್ಥಳೀಯ ಸಂಸ್ಥೆಗಳಲ್ಲಿ ಪೊಲೀಸ್ ಆಡಳಿತ
ನಗರಸಭೆಯಲ್ಲಿ ಒಕ್ಕೊರಲಿನ ನಿರ್ಣಯ
ಮಂಡ್ಯ- ಸ್ಥಳೀಯ ಸಂಸ್ಥೆಗಳಲ್ಲಿ
ಪೊಲೀಸ್ ಆಡಳಿತ ನಡೆಸುವ ಹಿನ್ನೆಲೆಯಲ್ಲಿ ನಿನ್ನೆ ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಒಮ್ಮತದ  ನಿರ್ಣಯ ಕೈಗೊಳ್ಳಲಾಯಿತು.
ನಗರಸಭೆ ಸದಸ್ಯ  ಸೋಮಶೇಖರ್  ಕೆರಗೋಡು ನಗರದಲ್ಲಿ ತಲೆ ಎತ್ತುತ್ತಿರುವ ಅಕ್ರಮಗಳ ಬಗ್ಗೆ ವಿಚಾರ ಪ್ರಸ್ತಾಪಿಸಿ, À ಅಕ್ರಮ ಕಟ್ಟಡಗಳ ನಿರ್ಮಾಣ ತಡೆ ಕಠಿಣವಾದ ಕೆಲಸವಾಗಿದೆ. ಉಳ್ಳವರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.  ಕಂದಾಯ, ಕೆಇಬಿ ಸೇರಿದಂತೆ ಕೆಲ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಇಂತಹ ಕಾರ್ಯಗಳು ಜರುಗುತ್ತಿದ್ದು, ಇದರಿಂದ ನಗರಸಭೆಗೆ ಭಾರಿ ನಷ್ಟವಾಗುತ್ತಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ
ಪೊಲೀಸ್ಆಡಳಿತಕ್ಕೆ ಸಂವಿಧಾನದಲ್ಲಿ ಅವಕಾಶವಿರುವ ಬಗ್ಗೆ ವಿಚಾರ ಮಂಡಿಸಿದ ಸಂದರ್ಭ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡರು. 
ಕರ್ನಾಟಕ ಮುನಿಸಿಪಲ್‍ಕಾಯ್ದೆ  ಕಾಲಂ 285 (ಸಬ್ ಸೆP್ಷÀನ್ 3)ರ ಮೇರೆಗೆ ರಚಿಸುವ ನಿಯಮ , ಉಪಬಂಧಗಳ ವಿರುದ್ದವಾಗಿ ಮಾಡುವ ಯಾವುದೇ ಅಪರಾಧ, ಅಪರಾಧ ಯತ್ನಗಳ ಮಾಹಿತಿಯನ್ನು ಆಯುಕ್ತರಿಗೆ ನೀಡಬೇಕಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ನೌಕರರು ಅಧಿಕಾರ ಚಲಾಯಿಸುವುದಲ್ಲಿ
ಪೊಲೀಸರು ನೆರವಾಗಬೇಕೆಂದು ಕಾಯ್ದೆ ಹೇಳಿದೆ. ಆದರೆ  ಇದು ಜಾರಿಯಾಗಿಲ್ಲ ಎಂದು ನುಡಿದರು.
ಕೆಎಂಸಿ ಕಾಯ್ದೆ 1970ರ ಕಾಲಂ 491ರಡಿ ರಾಜ್ಯ ಸರಕಾರ  ಕೂಡ ಸ್ಥಳೀಯ ಸಂಸ್ಥೆಗಳಿಗೆ ಪೆÇೀಲಿಸ್ ಆಡಳಿತ ನೀಡಲು ಒಪ್ಪಿದೆ. ಅಲ್ಲದೇ ಸಂವಿಧಾನದ 74ನೇ ತಿದ್ದುಪಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನ ಮಾನ್ಯತೆ ನೀಡಿದೆ. ಅಧಿನಿಯಮದ ಪ್ರಕಾರ ಸ್ವತ್ತಿನ ರP್ಷÀಣೆ ಮತ್ತು ಒತ್ತುವರಿ ತಡೆಗಟ್ಟುವುದು, ನೀರಿನ ಸ್ಥಾವರ ರP್ಷÀಣೆ, ಬೀದಿ ಬದಿ ವ್ಯಾಪಾರಿಗಳ ರP್ಷÀಣೆ, ಅಕ್ರಮ ಕಟ್ಟಡಗಳ ನಿಯಂತ್ರಣ, ಉಪದ್ರವಗಳ ನಿಯಂತ್ರಣ, ಅಪಾಯಕಾರಿ ರೋಗ ನಿಯಂತ್ರಣ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.  ಆದರೂ ಇದುವರೆಗೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1976 ಕೆಎಂಸಿ ಕಾಲಂ 486 ಕಾಲಂ ಎ ಮೇಲಿನ ಯಾವುದೇ ವಿಚಾರವನ್ನು ಉಲಂಘನೆ ಮಾಡಿದಲ್ಲಿ ಪೆÇೀಲಿಸರಿಗೆ ತಿಳಿದರೆ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕಿದೆ. ಆದ್ರೆ ನಾವು ಮನವಿ ಮಾಡಿದರೂ ಪೆÇೀಲಿಸ್ ಇಲಾಖೆ ಸಹಕಾರ ನೀಡುತ್ತಿಲ್ಲಎಂದರು.
ಕಂದಾಯ ಇಲಾಖೆಯಲ್ಲಿ ಎಸಿ, ಡಿಸಿ ಗಳಿಗೆ ಯಾವ ಪ್ರಕಾರ ಪೆÇೀಲಿಸ್ ಇಲಾಖೆ ಮೇಲೆ ನಿಯಂತ್ರಣ ಇದೆಯೋ ಅದೇ ರೀತಿ  ಆಯುಕ್ತರ ಅಧೀನದಲ್ಲಿರುವಂತೆ ಕಾನೂನು ತಿದ್ದುಪಡಿಯಾಗಬೇಕು,  ಇದು ಸಾಧ್ಯವಾಗದಿದ್ದಲ್ಲಿ 1976ರ ಕಾಲಂ 491 ಪ್ರಕಾರ ಸ್ಥಳೀಯ ನಗರಸಭೆಯ ಆಯುಕ್ತರನ್ನು ಸ್ಥಳೀಯ ಪೆÇೀಲಿಸ್ ಅಧಿಕಾರಿ ಎಂದು ಘೋಷಿಸಬೇಕು. ಆಯುಕ್ತರ ಆದೇಶ ಪಾಲನೆಗೆ ನಾಲ್ವರು ಪೆÇೀಲಿಸರನ್ನು ನಿಯೋಜಿಸಿ ಅವರ ವೇತನ ಮತ್ತು ಹಾಜರಾತಿಯನ್ನು ಪೆÇೀಲಿಸ್ ಇಲಾಖೆಯೇ ನೋಡಿಕೊಳ್ಳಬೇಕು, ಆಯುಕ್ತರು ಮತ್ತು ಸಿಬ್ಬಂದಿಗೆ ಕರ್ನಾಟಕ ಪೆÇೀಲಿಸ್ ಕಾಯ್ದೆ ಕಾಲಂ 70, 71, ಹಾಗೂ 74ರ ಪ್ರಕಾರ ಕ್ರಮ ಜರುಗಿಸಲು ಸರಕಾರ ಅಧಿಕಾರ ನೀಡಬೇಕು. ಹಾಗೂ ಆಯುಕ್ತರು ಸೂಚಿಸುವ ಅಧಿಕಾರಿಗೆ ನಗರಸಭೆ ಪರವಾಗಿ ಸಶಸ್ತ್ರ ಇಟ್ಟುಕೊಳ್ಳಲು ಅಧಿಕಾರ ನೀಡಬೇಕು. ನಗರಸಭೆ ತನ್ನದೇ ಜೈಲು ನಿರ್ಮಿಸಲು ಅನುಮತಿ ನೀಡಬೇಕು. ನಗರಸಭೆ ನೈರ್ಮಲ್ಯ, ತಾಂತ್ರಿಕ, ಕಂದಾಯ ಸಿಬ್ಬಂದಿಗಳನ್ನು ಸ್ಥಳೀಯ ಪೆÇೀಲಿಸರೆಂದು ಘೋಷಿಸಿ ಆಸ್ತಿ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಮವಸ್ತ್ರ ಧರಿಸಿಕೊಳ್ಳಲು ಅನುಮತಿ  ಹಾಗೂ ಶಿಸ್ತು ಪಾಲನೆಗೆ ಅವಶ್ಯಕವಾಗಿÀ ನಿಯಮ ರೂಪಿಸಬೇಕು ಇಲ್ಲವೇ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಬೇಕೆಂದು ವಿಚಾರ ಮಂಡಿಸಿದರು.
ಅಲ್ಲದೇ ಮಂಡ್ಯ ನಗರದಲ್ಲಿ ಕಾರ್ಯಪಡೆಯನ್ನು  ಆಯುಕ್ತರ ನೇತೃತ್ವದಲ್ಲಿ ರಚಿಸಲು ಬಗ್ಗೆಯೂ ಗಮನಸೆಳೆದಾದ ಈ ವಿಚಾರದ ಬಗ್ಗೆಯೂ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

No comments:

Post a Comment