ಮುಖ್ಯ ಮಂತ್ರಿಯವರ ಪ್ರವಾಸ ಕಾರ್ಯಕ್ರಮ
ಮೈಸೂರು,ಅ.31.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್4 ಹಾಗೂ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ನವೆಂಬರ್ 4 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 5 ಬೆಳಿಗ್ಗೆ 11 ಗಂಟೆಗೆ ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ನೂತನ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟಿಸುವರು.ಮಧ್ಯಾಹ್ನ 2 ಗಂಟೆಗೆ ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆ ವಿಭಜನೆಯ 75 ವರ್ಷ ತುಂಬಿರುವ ಸಂದರ್ಭದಲ್ಲಿ ಆಯೋಜಿಸಿರುವ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಮೈಸೂರು ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ ನಂತರ ರಾತ್ರಿ 7 ಗಂಟೆಗೆ ಬೆಂಗಳೂರಿಗೆ ತೆರಳುವರು.
ನ.1 ರಂದು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ
ಮೈಸೂರು,ಅ.31. 2014 ರ ದಸರಾ ವಸ್ತು ಪ್ರದರ್ಶನದ ಅಂಗವಾಗಿ ನವೆಂಬರ್ 1 ರಂದು ಸಂಜೆ 6-30 ಗಂಟೆಗೆ ವಸ್ತು ಪ್ರದರ್ಶನದ ಒಳ ಆವರಣದಲ್ಲಿರುವ ಬಿ.ವಿ.ಕಾರಂತ್ ರಂಗಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಉಪಮಹಾಪೌರರಾದ ಮಹದೇವಮ್ಮ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಉಪಾಧ್ಯಕ್ಷ ಎಲ್ ಮಹದೇವಪ್ಪ, ಸಾಂಸ್ಕøತಿಕ ಉಪಸಮಿತಿ ಅಧ್ಯಕ್ಷ ಆರ್. ಮೂರ್ತಿ, ಉಪಾಧ್ಯಕ್ಷ ಹೆಚ್.ಕೆ.ಅನಂತ, ಮೈ.ನಾ.ಗೋಪಾಲಕೃಷ್ಣ ಹಾಗೂ ಸಿ.ಎಸ್. ರಘು ಅವರು ಭಾಗವಹಿಸಲಿದ್ದಾರೆ.
ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ
ಮೈಸೂರು,ಅ.31.ಹಿಂದೂಸ್ಥಾನ್ ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ಬೆಂಗಳೂರು ಇವರು ಮೇಸಿನಿಸ್ಟ್ ಟ್ರೇಡ್ ಗಳಿಗೆ 3 ವರ್ಷಗಳ ಫುಲ್ ಟರ್ಮ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲಿದ್ದಾರೆ. ಅಸಕ್ತ ಅರ್ಹ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ. 9ನೇ ಮೇನ್ ಕೆ.ಹೆಚ್.ಬಿ ಕಟ್ಟಡ ಸರಸ್ವತಿಪುರಂ ಮೈಸೂರು-09 ಇವರಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 6 ರೊಳಗೆ ಸಲಿಸಬೇಕು.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಹಾಗೂ ಓ.ಬಿ.ಸಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯನ್ನು ಶೇ 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಪರಿಶಿಷ್ಟಜಾತಿ/ಪರಶಿಷ್ಟಪಂಗಡ/ವಿಕಲಚೇತರು ಶೇ50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಈ ಹುದ್ದೆಗೆ ಮಹಿಳೆಯರೂ ಅರ್ಹರಿರುತ್ತಾರೆ. ವಯೋಮಿತಿ:- 01-10-2014 ಕ್ಕೆ 15 ರಿಂದ 18 ವರ್ಷದೊಳಗಿರಬೇಕು.
ತರಬೇತಿಯು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಹಾಗೂ ಇತರೆ ಭತ್ಯೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2489972 ಯನ್ನು ಸಂಪರ್ಕಿಸುವುದು.
ಧನ ಸಹಾಯ: ಅರ್ಜಿ ಆಹ್ವಾನ
ಮೈಸೂರು,ಅ.31.ಕೊಲ್ಕತ್ತಾದ ರಾಜಾರಾಂ ಮೋಹನ್‍ರಾಯ್ ಗ್ರಂಥಾಲಯ ಪ್ರತಿಷ್ಠಾನ 2014-15 ನೇ ಸಾಲಿಗೆ “ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ” ಯೋಜನೆ ಅಡಿಯಲ್ಲಿ ಧನ ಸಹಾಯ ಒದಗಿಸಲು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿಸೆ.
ಆಸಕ್ತರು ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 07.11.2014 ರ ಒಳಗೆ ಉಪನಿರ್ದೇಶಕರು ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು, ಇವರಿಗೆ ಸಲ್ಲಿಸುವುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2423678 ಯನ್ನು ಸಂಪರ್ಕಿಸುವುದು.
ಪ್ರಶಸ್ತಿಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ
ಮೈಸೂರು,ಅ.31.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಒಂದು ಜಿಲ್ಲಾ ಮಹಿಳಾ ಸಮ್ಮಾನ್ ಮತ್ತು ರಾಜ್ಯ ಮಹಿಳಾ ಸಮ್ಮಾನ್” ಪ್ರಶಸ್ತಿ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲಾ ಮಹಿಳಾ ಸಮ್ಮಾನ್ ಪ್ರಶಸ್ತಿಯು ರೂ.20000/-ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ರಾಜ್ಯ ಮಹಿಳಾ ಸಮ್ಮಾನ್ ಪ್ರಶಸ್ತಿಯು ರೂ.40000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಮಹಿಳೆಯರು ಜನವರಿ-2014ಕ್ಕೆ 21 ವರ್ಷ ಮೇಲ್ಪಟ್ಟವರಾಗಿರಬೇಕು, ಮಹಿಳಾ ಅಭಿವೃದ್ದಿ ಕ್ಷೇತ್ರಗಳಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ/ಸಲ್ಲಿಸುತ್ತಿರುವವರು ಆಗಿರಬೇಕು.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂ:9/ಎ, 3ನೇ ಮಹಡಿ, ಕೃಷ್ಣಧಾಮ ಎದುರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು-09, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ನವೆಂಬರ್ 10 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:2498031 ಅಥವಾ 2495432ನ್ನು ಸಂಪರ್ಕಿಸುವುದು.
ಫಲಾನುಭವಿಗಳಿಗೆ ಮನೆಗಳಿಗೆ ತೆರಳಲು ಸೂಚನೆ
ಮೈಸೂರು,ಅ.31.ಕರ್ನಾಟಕ ಕೊಳಗೇರಿ ಅಭಿವೃಧ್ಧಿ ಮಂಡಳಿ ವತಿಯಿಂದ ಮೈಸೂರು ನಗರದ ನಂ.1ನೇ ಉಪ-ವಿಭಾಗ ವ್ಯಾಪ್ತಿಯಲ್ಲಿ ಎಟಿಓUಖಒ-ಃSUP ಯೋಜನೆಯಡಿಯಲ್ಲಿ ಮೈಸೂರು ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಅನುಮೋದಿತ ಪಟ್ಟಿಯಲ್ಲಿರುವ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಹಂಚಿಕಾತಿ ಪಡೆದ ಕೆಲವು ಫಲಾನುಭವಿಗಳು ವಾಸಕ್ಕೆ ಬಂದಿರುವುದಿಲ್ಲ. ಹಂಚಿಕಾತಿ ಪಡೆದ ಫಲಾನುಭವಿಗಳು ಕೂಡಲೇ ಮನೆಗಳಿಗೆ ವಾಸಕ್ಕೆ ಬರತಕ್ಕದು. ತಪ್ಪಿದ್ದಲ್ಲಿ ಅಂತಹ ಫಲಾನುಭವಿಗಳು ಮಂಡಳಿಗೆ ಪಾವತಿಸಿರುವ ಫಲಾನುಭವಿಗಳ ವಂತಿಕೆ ಹಣವನ್ನು ಮಂಡಳಿಗೆ ಮುಟ್ಟುಗೋಲು ಹಾಕಿಕೊಂಡು ಹಂಚಿಕಾತಿಯನ್ನು ರದ್ದುಪಡಿಸಲಾಗುವುದು. ಎಂದು ಮೈಸೂರು ನಗರದ ನಂ.1ನೇ ಉಪ-ವಿಭಾಗದ ಕರ್ನಾಟಕ ಕೊಳಗೇರಿ ಅಭಿವೃಧ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ : ಸನ್ಮಾನ ಸಮಾರಂಭ
ಮೈಸೂರು,ಅ.31.ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 14 ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು, ಅವರನ್ನು ನವೆಂಬರ್ 1 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಸನ್ಮಾನಿಸಲಾಗುವುದು ಎಂದು ಮೈಸೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಆಯ್ಕೆಯಾದ ಮಹನೀಯರ ವಿವರ ಇಂತಿದೆ: ರಂಗಭೂಮಿ-ಬಿ.ವಾಸುದೇವ, ಪತ್ರಿಕೋದ್ಯಮ- ಅಂಶಿ ಪ್ರಸನ್ನಕುಮಾರ್, ವೈದ್ಯಾಕೀಯ- ಡಾ.ಬಸವನಗೌಡಪ್ಪ, ಸಾಹಿತ್ಯ- ಬನ್ನೂರು ಶ್ರೀ ಕೆ.ರಾಜು, ಕನ್ನಡ ಹೋರಾಟ- ನಾಲಾ ಬೀದಿ ಶ್ರೀ ರವಿ ಹಾಗೂ ಬಿ.ಎ.ಶಿವಶಂಕರ್, ಕ್ರೀಡೆ-ಸುಬ್ಬಶೆಟ್ಟಿ, ಶಿಲ್ಪಕಲೆ- ವಿ.ಶ್ರೀನಿವಾಸ್, ಪರಿಸರ ಕ್ಷೇತ್ರ- ಬಾನು ಮೋಹನ್, ಸಮಾಜ ಸೇವೆ- ವೇಣುಗೋಪಾಲ್, ಸಂಘ ಸಂಸ್ಥೆಗಳು- ಗಾನಭಾರತಿ ಸಂಸ್ಥೆ, ಕನ್ನಡಪರ ಹೋರಾಟ- ಶ್ರೀನಿವಾಸ್ ಮಿತ್ರ, ಛಾಯಚಿತ್ರ - ಪ್ರಗತಿ ಗೋಪಾಲಕೃಷ್ಣ ಹಾಗೂ ಜಾನಪದ ಕ್ಷೇತ್ರ - ಮಹದೇವು(ಕಂಸಾಳೆ).
ರೇಷ್ಮೆ ವ್ಯವಸಾಯ ಕುರಿತು ಚಲನಚಿತ್ರ ಪ್ರದರ್ಶನ
ಮೈಸೂರು,ಅ.31.ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿರುವ ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ನವೆಂಬರ್ 1 ಹಾಗೂ 2 ರಂದು ಸಂಜೆ 6 ಗಂಟೆಯಿಂದ ರೇಷ್ಮೆ ವ್ಯವಸಾಯ ಮಣ್ಣಿನಿಂದ ರೇಷ್ಮೆವರೆಗಿನ ಮಾಹಿತಿಯನ್ನು ಚಲನಚಿತ್ರ ರೂಪದಲ್ಲಿ ಪ್ರದರ್ಶಿಸಲಾಗುವುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೇಷ್ಮೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 1 ರಿಂದ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಪ್ರಾರಂಭ
ಮೈಸೂರು,ಅ.31.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ನವೆಂಬರ್ 1 ರಿಂದ ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟಕದಲ್ಲಿ 24x7 ಗಂಟೆಗಳು ಸಿಬ್ಬಂದಿಗಳು ಹಾಜರಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಎಲ್ಲಾ ಅಗತ್ಯ ಸೇವೆಗಳು ಒಂದೇ ಸೂರಿನಲ್ಲಿ ದೊರೆಯುವಂತೆ ವ್ಯವಸ್ಥೆಗೊಳಿಸಲಾಗಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಇವರ ಸುತ್ತೋಲೆ ಪ್ರಕಾರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ / ಬಾಲಕಿಯರಿಗೆ ಮೆಡಿಕೋಲೀಗಲ್ ಪ್ರಕರಣದಡಿ ದಾಖಲಿಸುವ ಬಗ್ಗೆ ವೈದ್ಯಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ.
ದೈಹಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಗುಣಾತ್ಮಕವಾದ ಮತ್ತು ಸೂಕ್ಷ್ಮ ತೆರನಾದ ಚಿಕಿತ್ಸೆಯನ್ನು ನೀಡುವುದರ ಮುಖಾಂತರ “ದ್ವಿತೀಯ ಹಿಂಸೆ”ಯನ್ನು ಮಹಿಳಾ ವಿಶೇಷ ಚಿಕಿತ್ಸಾ ಘಟಕವು ಕಡಿಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ದಿನದ 24 ಗಂಟೆಗಳು ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತದೆ.
ಉಚಿತ ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ ಮತ್ತು ಔಷಧೋಪಚಾರ, ಸ್ಥಳೀಯ ಠಾಣೆಯಿಂದ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್)ನ್ನು ದಾಖಲಿಸುವುದು, ಸರ್ಕಾರೇತರ ಸಂಸ್ಥೆಯಿಂದ ನೇಮಿಸಲ್ಪಟ್ಟ ಸಮಾಲೋಚಕರಿಂದ ಮಾನಸಿಕ ಸಮಾಲೋಚನೆ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ/ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಲ್ಪಟ್ಟ ನುರಿತ ವಕೀಲರಿಂದ ಕಾನೂನು ಸಮಾಲೋಚನೆ ಮತ್ತು ಕಾನೂನು ನೆರವು , ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ವಸತಿ ಮತ್ತು ಸುರಕ್ಷಿತ ವಾಸ್ತವ್ಯ ವ್ಯವಸ್ಥೆಯನ್ನುಈ ಘಟಕದಲ್ಲಿ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ಟಿ.ನರಸೀಪುರ-08227-261267, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742, ಮೈಸೂರು ನಗರ-0821-2491962, ಮೈಸೂರು ಗ್ರಾಮಾಂತರ 0821-2567940, ಹುಣಸೂರು-08222-252254, ಹೆಚ್.ಡಿ.ಕೋಟೆ-08228-255320, ಕೆ.ಆರ್.ನಗರ-08223-262714, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳು, ಮೈಸೂರು-0821-2543003, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ- ದೂ:0821-2495432 ಮತ್ತು 0821-2498031 ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
ಮೈಸೂರು,ಅ.29. ಜಿಲ್ಲಾಡಳಿತ ವತಿಯಿಂದ ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸುವರು.
ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ ಲೋಕಮಣಿ ಭಾಗವಹಿಸುವರು.
ಅಂದು ಬೆಳಗ್ಗೆ 8-30 ಗಂಟೆಗೆ ಅರಮನೆ ಆರವಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಕೆ ನಂತರ ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ ಪುಷ್ಪಾರ್ಚನೆ ನಂತರ ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೋರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಹಾದು ವಾಪಸ್ಸು ಪುರಭವನ ತಲುಪುವುದು.
ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಶಾಲಾ ಕಾಲೇಜು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚನೆ
ಮೈಸೂರು,ಅ.29.ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಮೈಸೂರು ನಗರದಲ್ಲಿರುವ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು (ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳು) ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತೋಟಗಾರಿಕೆ ಇಲಾಖೆಯ ಕರ್ಜನ್ ಪಾರ್ಕ್ ಆವರಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾತ್ಕಾಲಿಕ ಕಚೇರಿಯಲ್ಲಿ ಇರಿಸಲಾಗಿರುವ ಹಾಜರಾತಿ ವಹಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಮತ್ತು ನೌಕರರು ಸಹಿ ಮಾಡುವುದು. ಗೈರು ಹಾಜರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.