Saturday 21 March 2015

ಪಿರಿಯಾಪಟ್ಟಣ ಪೋಲೀಸ್ ಸುದ್ದಿ


“ತಂದೆಯನ್ನೇ ಕೊಲೆ ಮಾಡಿದ ಮಕ್ಕಳು
- 24 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ ಬೆಟ್ಟದಪುರ ಪೊಲೀಸರು”

ದಿನಾಂಕ 19.03.2015 ರಂದು ಬೆಳಿಗ್ಗೆ 7.00 ಗಂಟೆಯಲ್ಲಿ  ಪಿರಿಯಾಪಟ್ಟಣ ತಾಲ್ಲೋಕು, ಹಲಗನಹಳ್ಳಿ ಗ್ರಾಮದ ಕೆರೆಯ ಮೇಲ್ಭಾಗ ಕಲ್ಲು ಕಟ್ಟಡದ ಬಳಿ ರಸ್ತೆಯ ಕೆಳಗೆ ಗೋಣಿ ಚೀಲದ ಸಮೇತ ಒಂದು ಗಂಡಸು ಶವ ಬಿದ್ದಿದ್ದು,   ಸುಮಾರು 50 ವರ್ಷ ವಯಸ್ಸಿನ ಗಂಡಸಿನ ಶವವಾಗಿದ್ದು, ಆತನ ಎರಡು ಕಾಲುಗಳಿಗೆ ರಕ್ತಗಾಯ ಆಗಿದ್ದು, ಬಲ ಮೊಣಕಾಲು ಮುರಿದಿದ್ದು, ಎಡಗಾಲು ಜಜ್ಜಿದಂತೆ ರಕ್ತ ಗಾಯವಾಗಿರುತ್ತೆ.  ಬಲ ಮೊಣಕೈ ಬಳಿ ತರಚಿದ್ದು ಬಿಳಿ ಮತ್ತು ಕಪ್ಪು ಬಣ್ಣದ ಗಡ್ಡ ಮೀಸೆ ಇದ್ದು, ಒಂದು ಮಾಸಲು ಬಣ್ಣದ ಅಂಡರ್ ವೇರ್ ಮತ್ತು ನೀಲಿ ಮತ್ತು ಕೇಸರಿ ಮಾಸಲು ಬಣ್ಣದ ಟೀಶರ್ಟ್ ಧರಿಸಿದ್ದು, ತಲೆಯ ಮೇಲೆ ರಕ್ತ ಗಾಯವಾಗಿರುತ್ತದೆಂದು ಶ್ರೀ.ಇರ್ಫಾನ್ ಪಾಷ ಬಿನ್ ಮಹಮ್ಮದ್ ದಸ್ತಗೀರ್ ಹಲಗನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೋಕು. ರವರು ನೀಡಿದ ದೂರಿನ ಮೇರೆಗೆ  ಬೆಟ್ಟದಪುರ ಪೊಲೀಸ್ ಠಾಣಾ ಮೊನಂ 39/2015 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿಗಳ ಪತ್ತೆ ಬಗ್ಗೆ ಶ್ರೀ.ಅಭಿನವ ಖರೆ – ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಮೈಸೂರು ರವರ ಮಾರ್ಗದರ್ಶನದ  ಮೇರೆಗೆ,  ಅಪರ ಪೊಲೀಸ್ ಆಧೀಕ್ಷಕರು ಕಲಾ ಕೃಷ್ಣಸ್ವಾಮಿ, ರವರ ನಿರ್ದೇಶನದಂತೆ          ಶ್ರೀ.ಡಿ.ಜಯರಾಮ್-ಹುಣಸೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕÀು, ಶ್ರೀ.ಪ್ರಸನ್ನ ಕುಮಾರ್- ಪಿರಿಯಾಪಟ್ಟಣ ವೃತ್ತ ನಿರೀಕ್ಷಕರ ರವರ ನೇತೃತ್ವದಲ್ಲಿ ಪಿಎಸ್‍ಐ ರವರಾದ ಶ್ರೀ ಅನಿಲ್ ಕುಮಾರ್, ಮತ್ತು ಶ್ರೀ.ಮುದ್ದುಮಹದೇವ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡದವರು ಪ್ರಕರಣದ ತನಿಖೆಯನ್ನು ಮುಂದುವರೆಸಿ, ಮೃತ ವ್ಯಕ್ತಿಯು,  ದೇವರಸಯ್ಯ ಬಿನ್ ಬೂವಯ್ಯ, 48 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಬಿಳಿಕರೆ ಹೋಬಳಿ, ಹುಣಸೂರು ತಾಲ್ಲೋಕು ಎಂದು ಪತ್ತೆಮಾಡಿರುತ್ತಾರೆ.

ನಂತರ ಮೃತನ ಮಕ್ಕಳಾದ ಕೆಂಡಗಣ್ಣ ಮತ್ತು ಶಿವಲಿಂಗ ರವರುಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ, ತಂದೆ ದೇವರಸಯ್ಯ  ಆಗ್ಗಾಗೆ ಕುಡಿದು ಗಲಾಟೆ ಮಾಡುತ್ತಿದ್ದರಿಂದ, ಇಬ್ಬರು ಸೇರಿಕೊಂಡು ತನ್ನ ತಂದೆಯ ಕಾಲಿನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಶವವನ್ನು ಯಾರಿಗೂ ಗೊತ್ತಾಗದಿರಲಿ ಎಂದು ಆಟೋದಲ್ಲಿ ಹಾಕಿಕೊಂಡು 80 ಕಿ.ಮೀ ದೂರದ ಹಲಗನಹಳ್ಳಿ ಗ್ರಾಮದ ಬಳಿ ಇರುವ ಹಾರನಕಟ್ಟೆ ಕೆರೆ ಬಳಿ ಬಿಸಾಕಿ ಹೋಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.
ನಂತರ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಕಲ್ಲು, ಹಾಗೂ ಕೆಎ 45 – 7137ರ ಗೂಡ್ಸ್ ಆಪೇ ಆಟೋವನ್ನು   ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.

ಆರೋಪಿತರ ವಿವರ ಈ ಕೆಳಕಂಡಂತೆ ಇರುತ್ತದೆ.
1. ಕೆಂಡಗಣ್ಣ ಬಿನ್ ದೇವಸರಯ್ಯ, 29ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಗ್ರಾಮ, ಬಿಳಿಕೆರೆ ಹೋಬಳಿ, ಹುಣಸೂರು ತಾಲ್ಲೋಕು.
2. ಶವಲಿಂಗ ಬಿನ್ ದೇವಸರಯ್ಯ, 28ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಗ್ರಾಮ, ಬಿಳಿಕೆರೆ ಹೋಬಳಿ, ಹುಣಸೂರು ತಾಲ್ಲೋಕು.

ಸದರಿ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಿದ ಶ್ರೀ.ಡಿ.ಜಯರಾಮ್-ಹುಣಸೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕÀು,  ಶ್ರೀ ಪ್ರಸನ್ನ ಕುಮಾರ್, ಸಿಪಿಐ, ಪಿರಿಯಾಪಟ್ಟಣ ವೃತ್ತ, ಶ್ರೀ.ಅನಿಲ್ ಕುಮಾರ್, ಪಿಎಸ್‍ಐ, ಬೆಟ್ಟದಪುರ ಠಾಣೆ, ಶ್ರೀ.ಮುದ್ದುಮಹದೇವ-ಪಿಎಸ್‍ಐ ಬೈಲಕುಪ್ಪೆ ಠಾಣೆ, ಶ್ರೀ.ಜಯಸ್ವಾಮಿ-ಎಎಸ್‍ಐ, ರಂಗಸ್ವಾಮಿಶೆಟ್ಟಿ-ಎಎಸ್‍ಐ  ಹಾಗೂ ಸಿಬ್ಬಂದಿಗಳಾದ ಶ್ರೀ.ಬೊಮ್ಮರಸೇಗೌಡ, ಶ್ರೀ.ಜಯರಾಮೇಗೌಡ, ಶ್ರೀ.ಜಗದೀಶ, ಶ್ರೀ.ನಾರಾಯಣಶೆಟ್ಟಿ, ಶ್ರೀ.ದಿಲೀಪ, ಶ್ರೀ.ಮಧುಕುಮಾರ್, ಶ್ರೀ.ರವಿ ಕುಮಾರ್, ಶ್ರೀ.ಅಸ್ಲಂ ಪಾಷಾ, ಶ್ರೀ.ಉಮೇಶ, ಶ್ರೀ.ರವೀಶ, ಕುಮಾರಿ.ಶೀತಲ್ ರವರುಗಳ  ಕಾರ್ಯವನ್ನು ಶ್ರೀ.ಅಭಿನವ ಖರೆ – ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ರವರು ಶ್ಲಾಘಿಸಿ, ಬಹುಮಾನ ಘೋಷಿಸಿರುತ್ತಾರೆ.

No comments:

Post a Comment