Wednesday 4 March 2015

      ಮೈಸೂರು ವಿಭಾಗ ಮಟ್ಟದ ಯುವಜನ ಮೇಳ
    ಮಂಡ್ಯ, ಮಾ.4. 2014-15ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಯುವಜನ ಮೇಳವನ್ನು ದಿನಾಂಕ 12-03-2015 ರಿಂದ 14-03-2015 ರವರೆಗೆ 3 ದಿನಗಳ ಕಾಲ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಸಂಘಟಿಸಲಾಗುತ್ತಿದೆ.
    ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆದ ಯುವ ಕಲಾವಿದರು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕಲಾ ತಂಡಗಳು  ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಅವಕಾಶ ಪಡೆದಿರುತ್ತಾರೆ. ಎಲ್ಲಾ ಕಲಾಬಂಧುಗಳು ದಿನಾಂಕ 12-03-2015 ರಂದು ಮಧ್ಯಾಹ್ನ 1.00 ಗಂಟೆಗೆ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.
    ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರಯಾಣಭತ್ಯೆ ಹಾಗೂ ಈ ಎರಡು ದಿನಗಳ ಕಾಲ ಉಚಿತ ಊಟ, ಸಾಮಾನ್ಯ ವಸತಿ ಸೌಕರ್ಯ ಕಲ್ಪಿಸಲಾಗಿರುತ್ತದೆ. ಲಘು, ಹಾಸಿಗೆ, ಹೊದಿಕೆಗಳೊಂದಿಗೆ ಎಲ್ಲಾ ಯುವಬಂಧುಗಳು ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ  ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಪರಿಚಿತ ಹೆಂಗಸಿನ ಶವ ಪತ್ತೆ
  ದಿನಾಂಕ 4-3-2015 ರಂದು ಬೆಳಿಗ್ಗೆ 8.00 ಗಂಟೆಯ ಸಮಯದಲ್ಲಿ ಹೆಬ್ಬಕವಾಡಿ ರಸ್ತೆಯ ಕಾಲುವೆ ಬಳಿ ಒಂದು ಅಪರಿಚಿತ ಹೆಂಗಸಿನ ಶವವು ತೇಲಿಕೊಂಡು ಬಂದು ಕಾಲುವೆಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಸೇತುವಯ ರಾಡಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಹೆಂಗÀಸಿನ ಶವ ಸಿಕ್ಕಿಹಾಕಿಕೊಂಡಿದ್ದು, ಮೃತಳು ಎಲ್ಲೋ ನೀರಿನಲ್ಲಿ ಬಿದ್ದು ಮೃತಪಟ್ಟು ತೇಲಿಕೊಂಡು ಬಂದಿರುವಂತೆ ಕಂಡು ಬಂದಿರುತ್ತದೆ.  ಶವದ ಮೈಮೇಲೆ ಕೆಂಪು ಮತ್ತು ಹಳದಿ ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದು, 161 ಸೆಂ.ಮೀ. ಎತ್ತರ, ದುಂಡು ಮುಖ, ದೃಢಕಾಯ ಶರೀರ, ಕಪ್ಪು ಮೈಬಣ್ಣ, ಬಲಗೈನಲ್ಲಿ ಶಿವಮ್ಮ, ಎಡಗೈನಲ್ಲಿ ಶಶಿ ಎಂಬ ಹೆಸರಿನ ಪಕ್ಕ ಒಂದು ರಂಗೋಲಿಯ ಚಿತ್ರ ಹಸಿರು ಹಚ್ಚೆ ಇರುತ್ತದೆ.  ಹೆಚ್ಚಿನ ಮಾಹಿತಿಗಾಗಿ  ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: 08232-224500, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ 08232-224200 ಹಾಗೂ ಮಂಡ್ಯ ಗ್ರಾಮಾಂತರ ಸಿ.ಪಿ.ಐ. ಕಚೇರಿ : 08232-221107 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಯುನೈಟೆಡ್ ಇನ್ಸೂರೆನ್ಸ್‍ನಿಂದ ಮಾ. 6 ರಂದು ಎರಡು ವಿಮಾ ಪಾಲಿಸಿ ಬಿಡುಗಡೆ
ಕೇಂದ್ರ ಸರ್ಕಾರದ ಸಾರ್ವಜನಿಕ ಸಾಮಾನ್ಯ ವಿಮಾ ಸಂಸ್ಥೆಯಾದ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಸರ್ಕಾರೇತರ ಸಂಸ್ಥೆಯಾದ ಐ25 ಆರ್‍ಎಂಸಿಎಸ್ (ಇಂಟಿಗ್ರಾ) ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಮಾ. 6 ರಂದು ಮಂಡ್ಯದಲ್ಲಿ ಎರಡು ಗ್ರಾಮೀಣ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಮಂಡ್ಯ ಶಾಖಾ ವ್ಯವಸ್ಥಾಪಕರಾದ ಸಿ. ಗಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ರಕ್ಷಣೆ ನೀಡುವ ‘ಜನತಾ ಅಪಘಾತ ವಿಮೆ’ ಮತ್ತು 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸಾಮಾಜಿಕ ಭದ್ರತೆ ನೀಡುವ ‘ಭಾಗ್ಯಶ್ರೀ ಚೈಲ್ಡ್ ವೆಲ್‍ಫೇರ್ ವಿಮೆ’ ಯೋಜನೆಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅತ್ಯಂತ ಕಡಿಮೆ ಪ್ರೀಮಿಯಂ ದರದಲ್ಲಿ ಗ್ರಾಮೀಣ ಜನತೆಗೆ ಅನುಕೂಲವಾಗುವ ರೀತಿ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಹಿತಿದೃಷ್ಟಿಯಿಂದ ರೂಪಿತಗೊಂಡಿರುವ ಈ ಪಾಲಿಸಿಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಯೋಜನೆಗಳನ್ನು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಮಹಾ ಪ್ರಬಂಧಕರಾದ ಹೇಮಾಮಾಲಿನಿಯವರು ಬಿಡುಗಡೆಗೊಳಿಸುವರು. ಕಂಪನಿಯ ಬೆಂಗಳೂರು ಕ್ಷೇತ್ರದ ಸಹಾಯಕ ಮಹಾ ಪ್ರಬಂಧಕರಾದ ಉಷಾ ರಾಮಸ್ವಾಮಿ, ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಪಿ.ಬಿ. ನಂದಾ, ಇಂಟಿಗ್ರಾ ಮೈಕ್ರೋ ಸಿಸ್ಟಮ್ಸ್‍ನ ವ್ಯವಸ್ಥಾಪಕರಾದ ಭಾಸ್ಕರ್ ಜ್ಯೋತಿ ಫುಖಾನ್, ಲೀಡ್ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******


No comments:

Post a Comment