Thursday 5 March 2015

 ದಿನಾಂಕ: 05/03/2015.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು/ಸಾಗಾಣಿಕೆ ಮಾಡುತ್ತಿದ್ದ ಶೆಡ್ ಮೇಲೆ ಸಿ.ಸಿ.ಬಿ. ಪೊಲೀಸರ ದಾಳಿ.  ಸುಮಾರು 2,09,300/-ರೂ ಬೆಲೆ ಬಾಳುವ 14,950 ಕೆ.ಜಿ. ಅಕ್ಕಿ
ಹಾಗೂ 1 ಲಾರಿ, 2 ಗೂಡ್ಸ್ ಆಟೋಗಳನ್ನ ಪೊಲೀಸರು ವಸಪಡಿಕೊಳಲಾಗಿದೆ ಎಂದು ಪೋಲೀಸ್ ಆಗುತ್ತೆ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈಸೂರುನಗರ ಸಿ.ಸಿ.ಬಿ. ಪೊಲೀಸರು ದಿನಾಂಕ: 03/03/2015 ಮೈಸೂರು ನಗರ ನರಸಿಂಹರಾಜ  ಪೊಲೀಸ್ ಠಾಣಾ ಸರಹದ್ದಿನ ಸಿದ್ಧಿಖಿ ನಗರ ದಾರುಲ್ ಉಲೂಂ ಸಿದ್ಧಿಖಿಯಾ (ಅರೇಬಿಕ್ ಕಾಲೇಜ್ ಟ್ರಸ್ಟ್) ಕಾಲೇಜಿನ ಪೂರ್ವದ ಕಡೆ ಇರುವ ರಸ್ತೆಯಲ್ಲಿರುವ ಅಫ್ತಾಬ್ ಎಂಬುವರಿಗೆ ಸೇರಿದ ರೆವಿನ್ಯೂ ಸೈಟ್‍ನಲ್ಲಿ ತಾತ್ಕಾಲಿಕವಾಗಿ ತಗಡಿನ ಶೀಟುಗಳಿಂದ ನಿರ್ಮಿಸಲಾಗಿರುವ ಶೆಡ್ ಮೇಲೆ ಧಾಳಿ ಮಾಡಿ ಅಕ್ರಮವಾಗಿ ದಾಸ್ತಾನು/ಸಾಗಾಣಿಕೆ ಮಾಡಲು ಬಚ್ಚಿಟ್ಟಿದ್ದ 1 ಲಾರಿ ಹಾಗೂ 2 ಆಟೋ ರಿಕ್ಷಾಗಳಲ್ಲಿ ತುಂಬಿದ್ದ 50 ಕೆ.ಜಿ. ಸಾಮಥ್ರ್ಯದ 299 ಚೀಲಗಳಲ್ಲಿ ತುಂಬಿದ್ದ ಒಟ್ಟು 2,09,300/-ರೂ ಬೆಲೆ ಬಾಳುವ 14,950 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು,  ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಈ   ದಾಳಿ   ಕಾರ್ಯವನ್ನು    ಮೈಸೂರುನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ. ಎಂ.ಎಂ. ಮಹದೇವಯ್ಯರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಕೆ.ಎನ್.ಮಾದಯ್ಯರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ರವರುಗಳಾದ ಪಿ.ಎ.ಸೂರಜ್, ಆರ್.ಜಗದೀಶ್, ಪಿ.ಎಸ್.ಐ.  ಎಂ.ಜೆ.ಜಯಶೀಲನ್, ಎ.ಎಸ್.ಐ.ಗಳಾದ .ಎ.ಜಾರ್ಜ್, ಶಾಂತಕುಮಾರ್, ಕೇಶವಮೂರ್ತಿ ಹಾಗೂ ಸಿಬ್ಬಂದಿರವರು ನಡೆಸಿದ್ದು,  ಮೈಸೂರು ನಗರದ ಪೊಲೀಸ್ ಆಯುಕ್ತರವರು ಈ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

ಸಾರ್ವಜನಿಕ ಸಂಪರ್ಕಾಧಿಕಾರಿಗಳು,ಪೊಲೀಸ್ ಆಯುಕ್ತರವರ ಕಛೇರಿ,ಮೈಸೂರುನಗರ

No comments:

Post a Comment