Tuesday 10 March 2015


ಕೇಂದ್ರ ಸರ್ಕಾರದ ಪೆಟ್ರೋಲ್ ಧರ್ಮ ವಿರೋಧಿಸಿ ಕಾಂಗ್ರೆಸ್  ಫ್ರೀಡಮ್ ಪಾರ್ಕಿನಲ್ಲಿ ಪ್ರತಿಭಟನೆ.
   ಕೇಂದ್ರ ಸರ್ಕಾರದ ಪೆಟ್ರೋಲ್ ಧರ ನೀತಿ, ರೈತ ವಿರೋಧಿ ನೀತಿ, ವಿರೋಧಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ಶಾಸಕರಾದ               ಶ್ರೀ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪೆಟ್ರೋಲ್ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ 105 ಡಾಲರ್ ಇದ್ದಾಗ ಇಲ್ಲಿ 74 ರೂಪಾಯಿಗೆ 1 ಲೀಟರ್ ಬೆಲೆ ಇದ್ದು ಅದು ಕೂಡ 43 ಡಾಲರ್‍ಗೆ ಇಳಿದಾಗ ರೂ. 30 ರೂ ಗಳಿಗೂ ಕಡಿಮೆಯಾಗಬೇಕಾಗಿತ್ತು. ಆದರೆ ಹಾಗಗಲಿಲ್ಲ. ಕೇವಲ ಸಂಕೇತಕವಾಗಿ ಇಳಿಸಿ ಅದರ ಮೇಲೆ ಎಕ್ಸೈಸ್ ಡ್ಯೂಟಿಯನ್ನು ವಿಧಿಸಿ ಲಕ್ಷ ಲಕ್ಷ ಕೋಟಿಗಟ್ಟಲೆ ಹಣವನ್ನು ಕೇಂದ್ರದ ಬೋಕ್ಕಸ ತುಂಬಿಸಿಕೊಂಡರು ಈಗ 55 ಡಾಲರ್ ಒಂದು ಬ್ಯಾರಲ್‍ಗೆ ಇದ್ದರೂ ಈಗ ಕೂಡ 63 ಆಗಿದೆ ಇದನ್ನು ಪ್ರತಿಭಟಿಸಿ ರೂ. 30 ಗಳಿಗೆ 1 ಲೀಟರ್ ಪೆಟ್ರೋಲ್‍ನ್ನು ಧರದಂತೆ ಮಾರಾಟ ಮಾಡಿ ಪ್ರಧಾನ ಮಂತ್ರಿ ಮೋದಿಯವರ ಅಚ್ಚೇದೀನ ಬಂದರು ಅದನ್ನು ಜನಕ್ಕೆ ತಲುಪಿಸುತ್ತಿಲ್ಲ. ಆದರ ನೀತಿಯನ್ನು ಪ್ರತಿಭಟಿಸುತ್ತಿದ್ದೇವೆ. ರೈತರ ವರದಾನವಾಗಿ ಯು.ಪಿ.ಎ ಸರ್ಕಾರದ ಕೊನೆಯಲ್ಲಿ ಬಂದ ಹೊಸ ನೀತಿ ತೆಗೆದು ಹಾಕಿ ಸುಗ್ರೀವಾಜ್ಞೆಯ ಮುಖಾಂತರ ರೈತರು ಜಮೀನುಗಳನ್ನು ಕಳೆದುಕೊಂಡು ಆತ್ಮಹತ್ಯೆ ಹಾದಿ ಹಿಡಿಯುವ ಈ ಸರ್ಕಾರಕ್ಕೆ ಕೆಟ್ಟ ಸುಗ್ರೀವಾಜ್ಞೆಯನ್ನು ವಿರೋಧಿಸುತಿದ್ದೇವೆ. ರೈತರು ಬೆಳೆದ ಬೆಳಗೆ ಬೆಲೆ ಸಿಗದೆ ಅವರುಗಳು ಕೆಟ್ಟು ಪಟ್ಟಣ ಸೇರು ಎಂಬಂತೆ ನಗರ ಪ್ರದೇಶಗಳಲ್ಲಿ ಕೂಲಿ-ನಾಲಿ ಸಣ್ಣ ಪುಟ್ಟ ಕೆಲಸ ಮಾಡಿ ಪುಟ್‍ಬಾತ್‍ಗಳಲ್ಲಿ ಬದಕುತ್ತಿದ್ದಾರೆ. ಗಾಯದ ಮೇಲೆ ಬರೆಯಂತೆ ಇಂತಹ ಸುಗ್ರೀವಾಜ್ಞೆಯಿಂದ ರೈತರಿಗೆ ಆತ್ಮಹತ್ಯೆ ಇಲ್ಲದೆ ಬೇರೆ ದಾರಿ ಇಲ್ಲವೆಂಬಂತೆ ಈ ರೈತರು ನೇಣಿಗೆ ಶರಣು ಎಂಬ ಅಣುಕು ಪ್ರದರ್ಶನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಬಜೆಟ್‍ನಲ್ಲಿ ಕಲ್ಲಿದ್ದಲು ಮಾರಾಟದಿಂದ ಪೆಟ್ರೋಲ್ ಉತ್ಪನ್ನಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಲಾಭವಿದ್ದರೂ ಬಡವರು ಕೆಳ ಮಧ್ಯಮ ವರ್ಗದವರಿಗೆ ಯಾವುದೇ ಆದಾಯ ಕೊಡದೆ ಕಾರ್ಪೋರೇಟ್ ಕಂಪನಿಗಳಿಗೆ ಶೇಕಡ 30% ರಷ್ಟು ಟ್ಯಾಕ್ಸ್‍ನ್ನು ಶೇಕಡ ರೂ. 25 ಗಳಿಗೆ ಇಳಿಸುವುದರ ಮುಖಾಂತರ ಇದು ಯಾರ ಪರ ಇದ್ದಾರೆ ಎಂಬುವುದನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರುಗಳಾದ ಸುನೀಲ್, ಸುನೀಲ್ ಕುಮಾರ್, ಮುಖಂಡರುಗಳಾದ ಸೈಯದ್ ಸಾಧಿಖ್, ಮಾದೇಗೌಡ, ರಾಜೇಶ್, ರವಿಶಂಕರ್, ಯೋಗಿ, ಇದನ್ನು ವಿರೋಧಿಸಿ ಐನೂರಕ್ಕೂ ಹೆಚ್ಚು ಕಾರ್ಯಕರ್ತರು ಈ ದಿನ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.

No comments:

Post a Comment