Monday 23 March 2015

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮಾಧ್ಯಮ ಸಂವಾದ
       ಮೈಸೂರು,ಮಾ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು, ಹಿಂದುಳಿದ ವರ್ಗಗಳ ಆಯೋಗ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಸರ್ವರ ಸಮೀಕ್ಷೆ -ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿಷಯ ಕುರಿತು ಮಾಧ್ಯಮ ಸಂವಾದ ಆಯೋಜಿಸಲಾಗಿದೆ.
     ಜಿಲ್ಲಾ ಪತ್ರಕರ್ತರ ಸಂಘದಲ್ಲಿ ದಿನಾಂಕ 24-03-2015 ರಂದು ಬೆಳಿಗ್ಗೆ 11 ಗಂಟೆಗೆ ಸಂವಾದ ಆಯೋಜಿಸಲಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಎನ್. ಉಷಾರಾಣಿ ಆಶಯ ನುಡಿಗಳನ್ನಾಡುವರು. ಮೈಸೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ|| ಶಿವಪ್ಪ, ವಿಜಯ ಕರ್ನಾಟಕ ಪತ್ರಿಕೆ ಮುಖ್ಯ ಉಪ ಸಂಪಾದಕ ಚೀ.ಜ. ರಾಜೀವ್ ಪ್ರತಿಕ್ರಿಯೆ ನೀಡುವರು. ಜಿಲ್ಲಾಧಿಕಾರಿ ಸಿ. ಶಿಖಾ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಹಿಂದುಳಿದ ವರ್ಗಗಳ ಇಲಾಖೆಯು ಜಿಲ್ಲಾ ಅಧಿಕಾರಿ ಜಿ.ಎಸ್. ಸೋಮಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಗ್ರಾಹಕರಿಂದ ವಿಷ ಮಿಶ್ರಿತ ಆಹಾರ ಸೇವನೆ: ಡಾ. ಚಿದಂಬರ
       ಮೈಸೂರು,ಮಾ.23.ವ್ಯಾಪಾರಸ್ಥರÀ ಹೆಚ್ಚು ಲಾಭsದಾಯಕÀ ದುರಾಸೆಯಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವಿಷ ಮಿಶ್ರಿತ ಆಹಾರವನ್ನು ಸೇವಿಸುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ ಎಂದು ವೈದ್ಯಾಧಿಕಾರಿ ಡಾ|| ಚಿದಂಬರ ಅವರು ಹೇಳಿದರು.  
      ಇಂದು ನಗರದ ಕಲಾಮಂದಿರದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
       ಬಹುತೇಕ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ಆಹಾರ ಪದಾಥರ್Àದಲ್ಲಿ ವಿಷ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಬೆರಸುತ್ತಿದ್ದಾರೆ. ಇದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸತತವಾಗಿ 5 ರಿಂದ 6 ವರ್ಷಗಳ ಕಾಲ ಬಣ್ಣದ ರಾಸಾಯನಿಕದಿಂದ ಕೂಡಿರುವ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಹಾಗೂ ಇತರೆ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸನ್ನಿವೇಶಗಳು ಹೆಚ್ಚಿದೆ. ಆದ್ದರಿಂದ ಗ್ರಾಹಕರು ಆಹಾರ ಪದಾಥರ್Àಗಳನ್ನು ಖರೀದಿಸುವ ಮುನ್ನ ಬಹಳ ಎಚ್ಚರಿಕೆಯಿಂದ ಕ್ರಮ ವಹಿಸಬೇಕಾಗಿದೆ ಎಂದು ತಿಳಿಸಿದರು.
      ಬಹಳಷ್ಟು ತರಕಾರಿ ಹಾಗೂ ಸೊಪ್ಪುಗಳನ್ನು ಕೊಳಚೆ ನೀರಿನಿಂದ ಬೆಳೆಯಲಾಗುತ್ತಿದೆ. ತರಕಾರಿ ಹಾಗೂ ಸೊಪ್ಪಿನ ಪೌಷ್ಠಿಕತೆ ಕಡಿಮೆಯಾದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಹಸಿ ತರಕಾರಿ ಹಾಗೂ ಸೊಪ್ಪನ್ನು ಬಿಸಿ ನೀರಿನಿಂದ ತೊಳೆಯದೆ ಸೇವಿಸಬಾರದು. ಆಹಾರ ಪದಾಥರ್Àವನ್ನು ಗ್ರಾಹಕರು ಖರೀದಿಸುವಾಗ ಅದರ ಉತ್ಪಾದನೆ ಹಾಗೂ ಬಳಕೆಯ ದಿನಾಂಕದ ಮೇಲೆ ನಿಗಾವಹಿಸಬೇಕು. ಅಲ್ಲದೇ ಗ್ರಾಹಕರು ಪದಾಥರ್Àಗಳ ಗುಣಮಟ್ಟದ ಬಗ್ಗೆ ವ್ಯಾಪಾರಸ್ಥರಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಹಾಗೂ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದು ಡಾ|| ಚಿದಂಬರ ಎಚ್ಚರಿಸಿದರು.
      ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಸರಳ ನಾಯರ್ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗ್ರಾಹಕರು ವ್ಯಾಪಾರಸ್ಥರಿಂದ ಮೋಸ ಹೋಗುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಹಣವಂತರಾಗಲು ಬಹುತೇಕ ವ್ಯಾಪಾರಿಗಳು  ಗ್ರಾಹಕರನ್ನು ವಂಚಿಸಲು ಮುಂದಾಗಿದ್ದಾರೆ. ಮಾರಾಟಕ್ಕೆ ಇಟ್ಟಿರುವ ಪದಾರ್ಥಗಳ ಮೇಲೆ ಉತ್ಪಾದಕರ ಸಂಪೂರ್ಣ ವಿಳಾಸದ  ಜೊತೆಯಲ್ಲಿ ಪದಾರ್ಥದ ಹೆಸರು, ತೂಕ, ಉತ್ಪಾದನೆ ಹಾಗೂ ಬಳಕೆಯ ದಿನಾಂಕಗಳನ್ನು ಮುದ್ರಿಸಿರಬೇಕು. ಇಲ್ಲದಿದ್ದಲ್ಲಿ ಉತ್ಪಾದಕರ ಮೇಲೆ ಕ್ರಮವಹಿಸಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
     ತೂಕ ಹಾಗೂ ಅಳತೆಯಲ್ಲಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಖರೀದಿಯ ಸಮಯದಲ್ಲಿ ಒಂದು ತೂಕವಿದ್ದರೆ ಖರೀದಿಯ ನಂತರ ಒಂದು ತೂಕವಿರುತ್ತದೆ ಎಂದು ವ್ಯಾಪಾರಸ್ಥರಿಂದ ಮೋಸಹೋದ ಬಹಳಷ್ಟು ಗ್ರಾಹಕರು ದೂರು ನೀಡಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಸಿಬ್ಬಂದಿಯಿಂದ ಕೈಗೊಂಡ ದಾಳಿಯ ಸಂದರ್ಭದಲ್ಲಿಯೂ ಈ ವಿಷಯ ಗಮನಕ್ಕೆ ಬಂದಿದೆ. ತೂಕ ಹಾಗೂ ಅಳತೆ ಯಂತ್ರಗಳನ್ನು ಪರಿಶೀಲಿಸಿ ಇಲಾಖೆ ವತಿಯಿಂದ ಮುದ್ರೆಗಳನ್ನು ಹಾಕಲಾಗಿದೆ. ಗ್ರಾಹಕರಿಗೆ ಯಾವುದೇ ಕಾರಣಕ್ಕೂ ವ್ಯಾಪರಸ್ಥರು ಪದಾರ್ಥಗಳ ತೂಕ ಅಥವಾ ಅಳತೆ ಮಾಡುವುದನ್ನು ನಿರಾಕರಿಸಬಾರದು ಎಂದು ತಿಳಿಸಿದರು.
     ಗ್ರಾಹಕರು ವ್ಯಾಪರಸ್ಥರಿಂದ ಮೋಸಹೋದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ವಂಚಿತರಾದ ಗ್ರಾಹಕರು ಯಾವುದೇ ವಕೀಲರ ಸಹಾಯವಿಲ್ಲದೆಯೇ ವೇದಿಕೆಯನ್ನು ಸಂಪರ್ಕಿಸಬಹುದು. ಗ್ರಾಹಕರು ಖರೀದಿಸಿರುವ ಪದಾರ್ಥದ ರಸೀದಿಯು ವೇದಿಕೆಯಲ್ಲಿ ಮುಖ್ಯ ಪಾತ್ರವಹಿಸಲಿದೆ. ಪ್ರತಿ ಜಿಲ್ಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸ್ಥಾಪಿತಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗವನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
     ಅಪರ ಜಿಲ್ಲಾಧಿಕಾರಿ ಅರ್ಚನಾ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಾರಾಯಣ ಗೌಡ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಲತಾ, ಮೈಸೂರು ಜಿಲ್ಲಾ  ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಭಾರತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಇಲಾಖೆ ಉಪ ನಿರ್ದೇಶಕಿ ರಾಧಾ ಹಾಗೂ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
(ಛಾಯಾಚಿತ್ರ ಲಗತ್ತಿಸಿದೆ).
ಶೌಚಾಲಯ ನಿರ್ಮಾಣಕ್ಕೆ ಪ್ರೇರೆಪಿಸಲು ಜಿಲ್ಲಾ ಪಂಚಾಯತ್‍ನಿಂದ ಪತ್ರಾಂದೋಲನ
        ಮೈಸೂರು,ಮಾ.23.ಮೈಸೂರು ಜಿಲ್ಲೆಯಲ್ಲಿ ಪ್ರತಿ ಮನೆಯೂ  ಶೌಚಾಲಯ ಹೊಂದಿರಬೇಕು ಎಂಬ ಗುರಿ ಸಾಧಿಸಲು ಜಿಲ್ಲಾ ಪಂಚಾಯತ್ ಹೊಸ ಪ್ರಯೋಗ ಪ್ರಾರಂಭಿಸಿದೆ. ಅದೇ ಪತ್ರಾಂದೋಲನ.
    ಮಕ್ಕಳೇ ನಾಳಿನ ಭವಿಷ್ಯ. ಮಕ್ಕಳಿಂದ ಅವರ ಪೋಷಕರ ಮನ ಬದಲಾವಣೆ ಸಾಧ್ಯ. ಮಕ್ಕಳ ಮೂಲಕ  ಜನಸಾಮಾನ್ಯರ ಮನಮುಟ್ಟಿ ಶೌಚಾಲಯ ಇಲ್ಲದವರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗುವಂತೆ ಮಾಡಲು ಜಿಲ್ಲಾ ಪಂಚಾಯತ್ ಆಧ್ಯಕ್ಷರಾದ ಡಾ; ಬಿ. ಪುಷ್ಪಾ ಅಮರನಾಥ್ ಅವರು ಮಕ್ಕಳಿಗೆ ಪತ್ರ ಬರೆಯುತ್ತಿದ್ದಾರೆ.
    ಪತ್ರದಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಹಾಗೂ ಮಹಾತ್ಮ ಗಾಂಧೀಜಿಯವ ಸ್ವಚ್ಛ ಭಾರತ್ ಕನಸನ್ನು ವಿವರಿಸುತ್ತಾ ಅವರು ಮಕ್ಕಳಿಗೆ ಮೊಬೈಲ್‍ಗೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ನಾವು ಸರ್ಕಾರ ಶೌಚಾಲಯ ನಿರ್ಮಾಣಕ್ಕೆ  ಸಾಮಾನ್ಯ ವರ್ಗದವರಿಗೆ 12,000/- ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 15,000/- ನೀಡುತ್ತದೆ ಇದನ್ನು ಉಪಯೋಗಿಸಿಕೊಂಡು ಏಕೆ ಶೌಚಾಲಯ ನಿರ್ಮಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ.
      1ನೇ ತರಗತಿಯಿಂದ 10 ನೇ ತರಗತಿಯವರೆಗೆ 4.5 ಲಕ್ಷ ಮಕ್ಕಳಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ 61,585 ವಿದ್ಯಾರ್ಥಿಗಳು ಹಾಗೂ ಅಂಗನವಾಡಿಯಲ್ಲಿ 75,000 ಮಕ್ಕಳು ಇದ್ದಾರೆ. ಈ ಪತ್ರವನ್ನು ಮಕ್ಕಳಿಗೆ ತಲುಪಿಸುವ ಕುರಿತಂತೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಚರ್ಚಿಸಿದರು.
     ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪತ್ರ ತಲುಪಿಸುವುದು ಸ್ವಲ್ಪ ಕಷ್ಟಕರ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜೂನ್ ಮಾಹೆಯಲ್ಲಿ ಶಾಲಾ ಕಾಲೇಜು ಪ್ರಾರಂಭವಾದ ಸಂದರ್ಭದಲ್ಲಿ ಪತ್ರವನ್ನು ಮಕ್ಕಳಿಗೆ ತಲುಪಿಸಿ. ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಿ. ದಾಖಲಾತಿಗಾಗಿ ಆಗಮಿಸುವ ಮಕ್ಕಳು ಹಾಗೂ ಪೋಷಕರಿಗೆ ಶೌಚಾಲಯ ನಿರ್ಮಾಣದ ಉಪಯುಕ್ತತೆಯ ಬಗ್ಗೆ ತಪ್ಪದೇ ತಿಳಿಸಿ ಎಂದರು.
     ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸೌಲಭ್ಯ ಪಡೆದುಕೊಳ್ಳುವ ಫಲಾನುಭವಿಗಳಿಂದ ಅವರ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ಮಾಹಿತಿ ಪಡೆಯಿರಿ ಇಲ್ಲಾವಾದಲ್ಲಿ ಅವರಿಗೆ ಸರ್ಕಾರದ ಸಹಾಯಧನದ ಬಗ್ಗೆ ಮಾಹಿತಿ ನೀಡಿ ಶೌಚಾಲಯ ನಿರ್ಮಾಣದ ಅರ್ಜಿ ನೀಡುವಂತೆ ತಿಳಿಸಿದರು.
     ಸರ್ಕಾರವು ಮೈಸೂರು ಜಿಲ್ಲೆಗೆ 2014-15 ನೇ ಸಾಲಿನಲ್ಲಿ 50,948 ಶೌಚಾಲಯ ನಿರ್ಮಾಣದ ಗುರಿ ನಿಗಧಿಪಡಿಸಿತ್ತು. ಫೆಬ್ರವರಿ 2015 ರ ಅಂತ್ಯದವರೆಗೆ 45,822 ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಮಾಚ್ ್ ಅಂತ್ಯದೊಳಗಾಗಿ ಸರ್ಕಾರ ನಿಗಧಿಪಡಿಸಿರುವ ಗುರಿ ಸಾಧಿಸಲಾಗುವುದು ಎಂದರು.
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮಾದಪ್ಪ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮುಖ್ಯ ಯೋಜನಾಧಿಕಾರಿ ಮಹೇಶ್, ಡಯಟ್ ಪ್ರಾಂಶುಪಾಲ ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಪುಟ್ಟು, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆ
       ಮೈಸೂರು,ಮಾ.23.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ  ರಾಷ್ಟ್ರನಾಯಕರಾದ ಡಾ.ಬಾಬು ಜಗಜೀನವರಾಂ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್  ಅವರ ಜನ್ಮದಿನಾಚರಣೆಯ ಬಗ್ಗೆ ಚರ್ಚಿಸಲು ಮಾರ್ಚ್ 24 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಮಾ.23.(ಕ.ವಾ.)-ಮೈಸೂರು ನಗರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ದಿನಾಂಕ: 30-03-2015 ರಿಂದ 13-04-2015 ರವರೆಗೆ ನಡೆಯಲಿದೆ. ಪರೀಕ್ಷೆ ನಡೆಯುವ 54 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು  ನಿಷೇಧಿತ ಪ್ರದೇಶವೆಂದು ಘೋಷಿಸಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ|| ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
1973ರ ಸಿ.ಆರ್.ಪಿ.ಸಿ. ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಬಳಿ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಮಾ. 25 ರಂದು ದೇವರ ದಾಸಿಮಯ್ಯ ಜಯಂತಿ
ಮೈಸೂರು,ಮಾ.23.(ಕ.ವಾ.)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಮಾರ್ಚ್ 25 ರಂದು ದೇವರ ದಾಸಿಮಯ್ಯ ಜಯಂತಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಮೆರವಣಿಗೆ ನಡೆಯಲಿದ್ದು, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಹೊರಟು ಆಯುರ್ವೇದ ವೃತ್ತ, ಇರ್ವಿನ್ ರಸ್ತೆ, ಜನತಾ ಬಜಾರ್ ವೃತ್ತ ತಲುಪಿ ಅಶೋಕ ರಸ್ತೆ ಮೂಲಕ ಶ್ರೀರಂಗಾಚಾರ್ಲು ಪುರಭವನ ತಲುಪುವುದು. ಬೆಳಿಗ್ಗೆ 10-15 ಗಂಟೆಗೆ ಶ್ರೀರಂಗಾಚಾರ್ಲು ಪುರಭವನದಲ್ಲಿ ಮೈಸೂರಿನ ಉದಯ ಕಿರಣ ಹಾಗೂ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
      ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
     ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ. ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾಧು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಾಮಣಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
    ಈ ಜಯಂತಿಯಲ್ಲಿ ಮೈಸೂರು ನಗರದ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆ, ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳ ಅಧಿಕಾರಿಗಳು/ ನೌಕರರು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕೋರಿದ್ದಾರೆ.
     

***

No comments:

Post a Comment