Wednesday 11 March 2015

ಮಾ.15 ರಂದು ವಿಎನ್.ಭಾತಖಂಡೆ ಸಂಗ್ರಹಿತ ಸಂಗೀತ ರಚನೆಗಳ ಧ್ವನಿ ಮುದ್ರಿಕೆ ಬಿಡುಗಡೆ
ಮೈಸೂರು:  ಸ್ವರಸಂಕುಲ ಸಭಾ ವತಿಯಿಂದ ಮಾ.15 ರಂದು ಪಂಡಿತ್ ವಿ.ಎನ್.ಭಾತಖಂಡೆಯವರಿಂದ ಸಂಗ್ರಹಿತ ಸಂಗೀತ ರಚನೆಗಳ ಧ್ವನಿ ಮುದ್ರಿಕೆಗಳ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಭಾದ ಅಧ್ಯಕ್ಷ ಡಾ.ಎಂ.ಎಸ್. ಭಾಸ್ಕರ್ ತಿಳಿಸಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಡಿತ್ ವಿಷ್ಣು ನಾರಾಯಣ ಭಾತಖಂಡೆಯವರು ಕಳೆದ ಶತಮಾನದಲ್ಲಿ ಅಂದಿನ ಪ್ರಸಿದ್ಧ ವಿದ್ವಾಂಸರನ್ನು ಸಂದರ್ಶಿಸಿ ಪ್ರಕಟಿಸಿದ ಹೊತ್ತಿಗೆಯಲ್ಲಿ ಖಯಾಲ್, ದ್ರುಪದ್, ಧಮಾರ್, ಲಕ್ಷಣ ಗೀತೆ, ಸರಗಮ್, ತರಾನಾ, ಠುಮ್ರಿ ಇತ್ಯಾಧಿಗಳು ಸೇರಿ ಒಟ್ಟು 1896 ರಚನೆಗಳಿವೆ. ಈ ಧ್ವನಿ ಮುದ್ರಣ ಕಾರ್ಯವು 6 ವರ್ಷಗಳ ಕಾಲ ನಡೆದು ಇದೀಗ ಪೂರ್ಣಗೊಂಡಿದೆ. ಅತ್ಯಂತ ಮಹತ್ವದ ಈ ಕೈಂಕಾರ್ಯದಲ್ಲಿ ಹಲವಾರು ಮಂದಿ ಕೈಜೋಡಿಸಿದ್ದಾರೆ. ಮುಖ್ಯವಾಗಿ ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗಾಯಕ, ಆಗ್ರಾ ಘರಾಣೆಯ ಹಿರಿಯ ವಿದ್ವಾಂಸ ಪಂಡಿತ್ ಇಂದೂಧರ ನಿರೋಡಿಯವರು ಈ ಎಲ್ಲಾ ರಚನೆಗಳನ್ನು ಅಭ್ಯಸಿಸಿ ಹಾಡಿದ್ದರೆ. ಪಂ.ಭಾತ ಖಂಡೆಯವರ ಪರಂಪರೆಯಲ್ಲಿ ಬಂದಿರುವ ಸಂಗೀತಾಗಾರರು ಇವರು ಎಂದು ಹೇಳಿದರು.
ಈ ಧ್ವನಿ ಮುದ್ರಿಕೆಯ ಲೋಕಾರ್ಪಣೆ ಮಾ.15 ರಂದು ಸಂಜೆ 5.30ಕ್ಕೆ ಮೈಸೂರಿನಲ್ಲಿರುವ ವಾಸುದೇವಚಾರ್ಯ ಭವನದಲ್ಲಿ ಏರ್ಪಡಿಸಲಾಗಿದೆ. ಅದೇ ಸಂದರ್ಭದಲ್ಲಿ ನಮ್ಮ ಜಾಲ ತಾಣವನ್ನು ಅನಾವರಣಗೊಳ್ಳಲಿದೆ. ಪ್ರಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಹಾಗೂ ಗಾಯಕರಾದ ಮುದ್ದುಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

No comments:

Post a Comment