Tuesday 17 March 2015

ಭಾರತೀಯ ಮಹಿಳಾ ಬ್ಯಾಂಕ್‍ನಿಂದ ಮೈಸೂರಿನಲ್ಲಿ ನೂತನ ಶಾಖೆ


ಭಾರತೀಯ ಮಹಿಳಾ ಬ್ಯಾಂಕ್‍ನಿಂದ ಮೈಸೂರಿನಲ್ಲಿ ನೂತನ ಶಾಖೆ ಉದ್ಘಾಟನೆ
ಮೈಸೂರು, ಮಾರ್ಚ್ 16, 2015:  ಭಾರತೀಯ ಮಹಿಳಾ ಬ್ಯಾಂಕ್ ಲಿಮಿಟೆಡ್ ದೇಶದಲ್ಲಿ ತನ್ನ 50ನೇ ಶಾಖೆಯನ್ನು ಆರಂಭಿಸಿತು. ಭಾರತೀಯ ಮಹಿಳಾ ಬ್ಯಾಂಕ್ ಲಿಮಿಟೆಡ್‍ನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತ ಸುಬ್ರಹ್ಮಣಿಯನ್ ಅವರು ಈ ಸಂದರ್ಭದಲ್ಲಿ ಬ್ಯಾಂಕ್ ದೇಶದ ಪ್ರಗತಿಗಾಗಿ ಮಹಿಳೆಯರ ಆರ್ಥಿಕ ಶಕ್ತಿಯನ್ನು ಬಳಸಿಕೊಳ್ಳಲಿದೆ ಎಂದರು. ಮಹಿಳಾ ಕೇಂದ್ರೀತ ಅನೇಕ ಉತ್ಪನ್ನಗಳು ಅಂದರೆ ಬಿಎಂಬಿ ಅನ್ನಪೂರ್ಣ ಕ್ಯಾಟರಿಂಗ್ ಸರ್ವೀಸ್ ಲೋನ್, ಬಿಎಂಬಿ ಪರ್ವರೀಶ್ –ಚೈಲ್ಡ್ ಕೇರ್ ಸೆಂಟರ್ ಲೋನ್, ಬಿಎಂಬಿ ಶೃಂಗಾರ್ -ಬ್ಯೂಟಿ ಪಾರ್ಲರ್ ಲೋನ್ ಇತ್ಯಾದಿ ಸೇವೆಗಳನ್ನು ಈಗಾಗಲೇ ಮಹಿಳೆಯರನ್ನು ಆರ್ಥಿಕ ಮುಖ್ಯ ವಾಹಿನಿಗೆ ಕರೆತರಲು ರೂಪಿಸಲಾಗಿದೆ. ಹೆಣ್ಣು ಮಗು ಕೇಂದ್ರೀತವಾದ ಠೇವಣಿ ಉತ್ಪನ್ನ ಕೋಮಲ್ ಕಲಿ ಎಂಬುದು ವಿಶೇಷ ಠೇವಣಿ ಉತ್ಪನ್ನವಾಗಿದ್ದು, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹಾಗೂ ಆಕೆ 18 ವರ್ಷ ವಯಸ್ಸು ಮೀರಿದಾಗ ಆರ್ಥಿಕÀ ಚಟುವಟಿಕೆಗಾಗಿ ನೆರವಾಗಲಿದೆ.
ಬಿಎಂಬಿ ಸ್ಮಾರ್ಟ್ ಬ್ಯಾಂಕಿಂಗ್ - ಬ್ಯಾಂಕ್‍ನ ಇಂಟರ್‍ನೆಟ್ ಬ್ಯಾಂಕಿಂಗ್ ಸೌಲಭ್ಯವಾಗಿದೆ. ಅನೇಕ ಮೌಲ್ಯಾಧಾರಿತ ಸೇವೆಯನ್ನು ಒಳಗೊಂಡಿದೆ. ಎಲ್ಲ ಆರ್ಥಿಕಕ ವಹಿವಾಟಿನ ಸ್ಪಷ್ಟ ಚಿತ್ರಣ, ತಮ್ಮ ಖಾತೆಗೆ ಗ್ರಾಹಕರೇ ಹೆಸರಿಡುವ ಅವಕಾಶ, ತ್ವರಿತವಾಗಿ ಗ್ರಾಹಕರೇ ಪಾಸ್‍ವರ್ಡ್ ಬದಲಿ ಮಾಡಬಹುದಾದು ಕೆಲ ಆಕರ್ಷಣೀಯ ಸೇವೆಗಳು. ಹೈ ಸ್ಪೀಡ್ ಎಸ್‍ಎಂಎಸ್ ಬ್ಯಾಂಕಿಂಗ್ ಮತ್ತು ಹ್ಯಾಷ್‍ಟ್ಯಾಗ್ ಬ್ಯಾಂಕಿಂಗ್ ಸೇವೆಯು ಗ್ರಾಹಕರಿಗೆ ತ್ವರಿತಗತಿಯಲ್ಲಿ ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‍ಮೆಂಟ್ ಪಡೆಯಲು ಸಹಕಾರಿಯಾಗಿದೆ. ಬ್ಯಾಂಕ್ ಹಂತ-ಹಂತವಾಗಿ ಮೊಬೈಲ್ ಅಪ್ಲಿಕೇಷನ್ ಅನ್ನು ವಿವಿಧ ಬ್ಯಾಂಕಿಂಗ್ ಸೇವೆಗಳಿಗಾಗಿ ಆರಂಭಿಸಲಿದೆ ಎಂದು ಸಿಎಂಡಿ ಪ್ರಕಟಿಸಿದರು.
ಇದಕ್ಕೂ ಮೊದಲು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಎಸ್.ಆರ್. ಸಾವಿತ್ರಿ ಅವರು ಶಾಖೆಯನ್ನು ಉದ್ಘಾಟಿಸಿದ್ದು, ಬ್ಯಾಂಕ್ ಮಹಿಳೆಯರ ಆರ್ಥಿಕ ಸಬಲೀಕರಣದ ಮಾರ್ಗದಲ್ಲಿ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು.
ಮೈಸೂರಿನ ಶಾಖೆಯು ಬ್ಯಾಂಕ್‍ನ ದೇಶದಲ್ಲಿ 50ನೇ ಶಾಖೆ. ಕರ್ನಾಟಕದಲ್ಲಿ ಮೂರನೆಯದಾಗಿದೆ. 

No comments:

Post a Comment