Monday 16 March 2015

ಮೈಸೂರು: ನಗರಪಾಲಿಕೆ ಸದಸ್ಯ ನಂದೀಶ್ ಪ್ರೀತಮ್ ನೀಡುತ್ತಿದ್ದ ಕಿರುಕುಳದಿಂದ ಬೇಸೆತ್ತು ಗುತ್ತಿಗೆ ಪೌರಕಾರ್ಮಿಕ ಸುರೇಶ್ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೂಡಲೇ ಜಾತಿ ನಿಂದನೆ ಮೊಕದ್ದಮೆಯಡಿ ನಂದೀಶ್ ಪ್ರೀತಮ್ ಬಂಧಿಸಲು ಆಗ್ರಹಿಸಿ ಮೈಸೂರು ನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಸದಸ್ಯರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. 
ನಗರಪಾಲಿಕೆ ಕಚೇರಿ ಮುಂಭಾಗದ ಉದ್ಯಾನವನದಲ್ಲಿ ಜಮಾಯಿಸಿದ 500 ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ನಂದೀಶ್ ಪ್ರೀತಮ್ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು. 
ಈ ವೇಳೆ ಮಾತನಾಡಿದ ಸಂಘದ ಉನ್ನತ ಸಮಿತಿಯ ಅಧ್ಯಕ್ಷ ಮಾರ, ನಂದೀಶ್ ಪ್ರೀತಮ್ ವರ್ತನೆ ಹಾಗೂ ಜಾತಿ ನಿಂದನೆಯಿಂದ ಬೇಸೆತ್ತ ಸುರೇಶ್ ವಿಷ ಸೇವಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾಡಳಿತ ಗಂಭಿರವಾಗಿ ಪರಿಗಣಿಸಬೇಕು, ಇಂತಹ ಕೆಲ ಜನಪ್ರತಿನಿಧಿಗಳಿಂದ ಒಳ್ಳೆಯ ಮನೋಭಾವವುಳ್ಳ ಜನಪ್ರತಿನಿಧಿಗಳಿಗೂ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನಲೆಯಲ್ಲಿ ಆದಷ್ಟು ಬೇಗ ನಂದೀಶ್ ಪ್ರೀತಮ್ ನನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇಂತಹ ಸದಸ್ಯರಿಂದ ಮುಂದೆ ಕೂಡ ತೊಂದರೆಯುಂಟಾಗಬಹುದು, ಆದ ಕಾರಣ ಅವರ ಪಾಲಿಕೆಯ ಸದಸ್ಯತ್ವವನ್ನು ವಜಾಗೊಳಿಸಬೇಕು. ಕೆಲ ವಾಡ್ ್ಗಳಲ್ಲಿ ನಗರಪಾಲಿಕೆ ಸದಸ್ಯರು ತಮ್ಮ ಮನೆಯ ಕೆಲಸಗಳನ್ನು ಪೌರಕಾರ್ಮಿಕರಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು. 
ವಾಡ್ ್ ನಂ 21 ರಲ್ಲಿ ಕೆಲಸ ಮಾಡುವ ಗುತ್ತಿಗೆ ಪೌರಕಾರ್ಮಿಕರಿಗೆ ಜಿಪಿಎಸ್ ವ್ಯವಸ್ಥೆಯಿರುವ ಸಿಮ್ ಕಾಡ್ ್ನ್ನು ನೀಡಿ, ಅವರುಗಳನ್ನು ಖೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ, ಇದರ ಜೊತೆಗೆ ದೂರವಾಣಿ ವೆಚ್ಚವೆಂದು 500 ರೂ ನಿಂದ ಒಂದು ಸಾವಿರ ರೂ ತನಕ ವಸೂಲಿ ಮಾಡುತ್ತಿದ್ದಾರೆ, ಇದನ್ನು ಕೂಡಲೇ ನಿಲ್ಲಿಸಬೇಕು , ಇನ್ನು ಮುಂದೆ ಈ ರೀತಿಯ ಶೋಷಣೆ ಮಾಡದಂತೆ ಕ್ರಮ ಕೈಗೊಳ್ಳಬೇಕು, ಪೌರ ಕಾರ್ಮಿಕರ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ನಗರಪಾಲಿಕೆ ಅಧಿಕಾರಿಗಳು ನಿರ್ವಹಿಸಬೇಕು, ವಿನಾಕಾರಣ ನಗರಪಾಲಿಕೆ ಸದಸ್ಯರು ಮೂಗು ತೂರಿಸುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು. 
ಈ ಪ್ರತಿಭಟನೆ ಸಾಂಕೇತಿಕವಾಗಿದ್ದು, ಆದಷ್ಟು ಶೀಘ್ರವಾಗಿ ನಂದೀಶ್ ಪ್ರೀತಮ್ ರನ್ನು ಬಂಧಿಸದಿದ್ದರೆ ಸ್ವಚ್ಚತಾ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 
ನಂತರ ಪ್ರತಿಭಟನಾ ಮೆರವಣಿಗೆ ನಗರ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಅರ್ಚನಾರಿಗೆ ಮನವಿ ಸಲ್ಲಿಸಲಾಯಿತು. 
ಸಂಘದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನಕಾರ್ಯದರ್ಶಿ ಮುರುಗೇಶ್, ಜಿಲ್ಲಾಧ್ಯಕ್ಷ ಎನ್. ನರಸಿಂಹ, ಖಜಾಂಚಿ ಜಿ.ಮಹದೇವ, ವಿಜಯ, ರಾಚಯ್ಯ, ದುರ್ಗಣ್ಣ, ದೊರೆ, ಮಹದೇವ, ಶಂಕರ, ಮಾಚಮ್ಮ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. 

No comments:

Post a Comment