Monday 2 March 2015



 ಸೋಂಕು ರಹಿತ ಮಗು ಹುಟ್ಟುವುದಕ್ಕಾಗಿ ಜನರಲ್ಲಿ ಜಾಗೃತಿ ಅವಶ್ಯಕ
ಮಂಡ್ಯ ಮಾ.2(ಕರ್ನಾಟಕ ವಾರ್ತೆ) ತಂದೆ ತಾಯಿಗೆ ಸೋಂಕು ತಗುಲಿದ್ದರೂ ಹುಟ್ಟುವ ಮಗು ಸೋಂಕು ರಹಿತವಾಗಿ ಹುಟ್ಟುವುದಾಕ್ಕಾಗಿ ಜನರಲ್ಲಿ ಜಾಗೃತಿ ಅವಶ್ಯಕ ಎಂದು ಆರೋಗ್ಯ ಸಚಿವ ಯೂ.ಟಿ.ಖಾದರ್ ಅವರು ತಿಳಿಸಿದರು.     ಅವರು ಸೋಮವಾರ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ “ಸಮಗ್ರ ಜನ ಜಾಗೃತಿ ಅಭಿಯಾನ” ಮನೆ ಮನೆ ಮಾಹಿತಿ ಆಂದೋಲನ ಮೂಲಕ ಹೆಚ್.ಐ.ವಿ/ ಏಡ್ಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ಎಚ್‍ಐವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಶೂನ್ಯಕ್ಕೆ ತರಬೇಕು, ಅದಕ್ಕೆ ತಂದು ನಿಲ್ಲುವಲ್ಲಿ ರಾಜ್ಯ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ತಿಳಿಸಿದ ಸಚಿವರು ಸೋಂಕು ರಹಿತ ಮಗುವನ್ನು ರೂಪಿಸುವಲ್ಲಿ ಜವಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಈ ನಿಟ್ಟಿನಲ್ಲಿ ಜನ ಸಾಮಾನ್ಯರೂ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಮುಂದಿನ ದಿನಗಳಲ್ಲಿ ಸೋಂಕು ರಹಿತ ರಾಜ್ಯವಾಗಿ ಮಾಡಲು ಮುಂದಾಗಬೇಕು ಎಂದು ಅವರು ತಿಳಿಸಿದರು.
   ಸಮಸ್ಯೆಗಳು ಮನುಷ್ಯನಿಗೆ ಬರುವುದು ಸಹಜ ಅದನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕು. ಅಲ್ಲದೆ ಸಾರ್ವಜನಿಕರು ಕೂಡ ಎಚ್‍ಐವಿ ಸೋಂಕು ತಗುಲಿದ ವ್ಯಕ್ತಿಯನ್ನು ಸ್ನೇಹಿತರಂತೆ ಕಾಣಬೇಕು ಎಂದು ಸಚಿವರು ತಿಳಿಸಿದರು.
    ಏಡ್ಸ್ ರೋಗಕ್ಕೆ ಇಂದು ಯುವ ಜನತೆ ಹೆಚ್ಚು ಬಲಿಯಾಗುತ್ತಿದ್ದು, ಅದರಲ್ಲಿಯೂ ಹಳ್ಳಿಗಳಲ್ಲಿ ಎಚ್‍ಐವಿ ಪೀಡಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬೆಳವಣಿಗೆ ದೇಶದ ಭವಿಷ್ಯಕ್ಕೆ ಮಾರಕವಾಗುತ್ತಿದ್ದು, ಯುವ ಜನತೆಗೆÉ ಏಡ್ಸ್ ಬಗ್ಗೆ ಅರಿವು ಹಾಗೂ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲಲಿತಾ ಪ್ರಕಾಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಕಲಾ ನಂಜುಂಡಚಾರ್, ರಾಜ್ಯ ಏಡ್ಸ್ ಪಿವೆನ್ಷನ್ ಸೊಸೈಟಿ ನಿರ್ದೇಶಕರಾದ ಎಸ್.ಜಿ. ವಿಜಯಾ, ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಚೇಗೌಡ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಶಶಿಧರ್ ಬಸವರಾಜು ಹಾಗೂ ಇತರರು ಉಪಸ್ಥಿತರಿದ್ದರು.

                ಮಾ. 10 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
      ಮಾರ್ಚ್ 10, 2015 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲಲಿತಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಮಾಹಿತಿ ತಂತ್ರಜ್ಞಾನ ಕನ್ಸ್‍ಲ್ಡ್‍ಂಟ್ (ಜೂನಿಯರ್ ಪ್ರೊಗ್ರಾಮರ್) ಹುದ್ದೆಗೆ ಅರ್ಜಿ ಆಹ್ವಾನ
   ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯಾದ ನಾಗಮಂಗಲ ಪಟ್ಟಣ ಪಂಚಾಯಿತಿ ಕಚೇರಿಗೆ, ಮಾಹಿತಿ ತಂತ್ರಜ್ಞಾನ ಕನ್ಸ್‍ಲ್ಡ್‍ಂಟ್ (ಜೂನಿಯರ್ ಪ್ರೊಗ್ರಾಮರ್) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ದಿನಾಂಕ 27-2-2015ರಲ್ಲಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-3-2015 ಆಗಿದ್ದು, ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಗಳನ್ನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಮಂಡ್ಯ ಜಿಲ್ಲೆ ಮಂಡ್ಯರವರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment