Friday 27 March 2015

ಮಂಡ್ಯ : ದೇಶದ ವಿಮೋಚನಾ ಚಳುವಳಿ ಇತಿಹಾಸದಲ್ಲಿ ಮಿಂಚಂತೆ ಬಂದು ಅತ್ಯಂತ ಚಿಕ್ಕವಯಸ್ಸಿಗೆ ಚರಿತ್ರೆ ನಿಮಿಸಿದ ಸಹೀದ್ ಭಗತ್‍ಸಿಂಗ್ ಒಬ್ಬ ಅಪ್ಪಟ ದೇಶ ಪ್ರೇಮಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿಂದು ಎಸ್.ಎಫ್.ಐ ವತಿಯಿಂದ ಆಯೋಜಿಸಲಾಗಿದ್ದ ‘ಮರೆಯಲಾಗದ ಭಗತ್‍ಸಿಂಗ್’ ಕುರಿತ ವಿಚಾರ ಸಂಕಿರಣ ಮತ್ತು ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಗತ್‍ಸಿಂಗ್ ಅವರ ಹೋರಾಟದಿನಗಳ ಅವಧಿ ಕೇವಲ 10-12 ವರ್ಷ ಮಾತ್ರ. ಆದರೆ, ಈ ಅವದಿಯಲ್ಲಿ ದೇಶದಲ್ಲಿ ಅವರು ಮೂಡಿಸಿದ ಸ್ವಾತಂತ್ಯದ ಕಿಚ್ಚು ಅಸಾಧಾರಣ. ಸ್ವಾತಂತ್ರ ಹೋರಾಟದಲ್ಲಿ ಧೈರ್ಯ ಮತ್ತು ತ್ಯಾಗ ಅತ್ಯಂತ ಅಗತ್ಯ ಎಂದು ಭಾಗಿಸಿದ್ದರು.
ಭಗಸಿಂಗ್ ಮತ್ತು ಆತನ ಸಂಗಡಿಗರು ತಮ್ಮ 23ನೇ ವಯಸ್ಸಿನಲ್ಲಿ ಗಲ್ಲಿಗೇರಲು ತೋರಿದ ಧೀರೋದ್ದಾತ ಮನೋಭಾವವನ್ನು ವಿಶ್ವದ ಯಾವುದೇ ದೇಶದ ವಿಮೋಚನಾ ಚಳುವಳಿಯ ಇತಿಹಾಸದಲ್ಲಿ ಕಾಣಲಾಗದು ಎಂದರು.
ಭಗತ್‍ಸಿಂಗ್ ಸ್ವಾತಂತ್ಯವೆಂದರೆ ಬ್ರಿಟೀಷರನ್ನು ಓಡಿಸುವುದು ಮಾತ್ರವಲ್ಲ. ಪೂರ್ಣ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ದೇಶಕ್ಕೆ ಮೊಟ್ಟಮೊದಲು ನೀಡಿದವರು. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡದು ಹಾಕಿ ಹೊಸ ವ್ಯವಸ್ಥೆಯನ್ನು ತರಬಲ್ಲ ಕ್ರಾಂತಿಯಿಂದಲೇ ಭಾರತದ ಹೊಸ ಹುಟ್ಟು ಸಾಧ್ಯ ಎಂದು ನಮ್ಮಿದ್ದವರು ಎಂದು ಹೇಳಿದರು.
ವೇದಿಕೆಯಲ್ಲಿ ಎಸ್‍ಎಫ್‍ಐನ ಜಿಲ್ಲಾ ಉಪಾಧ್ಯಕ್ಷೆ ಇ.ರಂಚಿತಾ, ಎಂ.ಪುಟ್ಟಮಾದು, ಮಹೇಶ್‍ಕುಮಾರ್, ರಾಜೇಂದ್ರಶಿಂಗ್‍ಬಾಬು, ಬಿ.ಎ.ಮಧುಕುಮಾರ್, ಸುದರ್ಶನ್ ಜಿ.ಕೆ., ಜ್ಯೋತಿ ಉಪಸ್ಥಿತರಿದ್ದರು.

No comments:

Post a Comment