Wednesday 8 July 2015

 ಅಳವಡಿಸಿಕೊಂಡರೆ ಬದುಕು ಸುಂದರ-ಮಹೇಶಚಂದ್ರ
ಮಂಡ್ಯ: ದೇಶದ ಸಂಸ್ಕøತಿ ಉಳಿವಿಗೆ ಅನೇಕ ಜನರ ಅವಿರತ ಶ್ರಮ ಕಾರಣವಾಗಿದೆ.ಅವರು ಅಳವಡಿಸಿಕೊಂಡಿದ್ದ ಜೀವನ ಮೌಲ್ಯಗಳು ದೇಶದ ಹಿರಿಮೆಯನ್ನು ಹೆಚ್ಚಿಸಿದುವು.ಇಂತಹ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ವಿಕಸನ ಸಂಸ್ಥೆಯ ನಿರ್ದೇಶಕರಾದ ಮಹೇಶಚಂದ್ರಗುರು ಅಭಿಪ್ರಾಯಪಟ್ಟರು.
    ಅವರು ತಾಲೂಕಿನ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಮಂಡ್ಯ,ಅನನ್ಯ ಹಾರ್ಟ ಟ್ರಸ್ಟ್ ,ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಹಾಗೂ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಪಂಡಿತ್ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
      ಶ್ಯಾಮ್ ಸುಂದರ್ ಮುಖರ್ಜಿಯವರು ತಮ್ಮ ತನುಮನಧನಗಳನ್ನು ದೇಶಕ್ಕಾಗಿ ಮೀಸಲಿಟ್ಟವರು.ಜನರಲ್ಲಿ ರಾಜಕೀಯ ಮುಖಂಡರಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಜನಸಂಘವನ್ನು ಹುಟ್ಟುಹಾಕಿ ದೇಶದ ಸಂಸ್ಕøತಿ ಉಳಿಸಲು ಶ್ರಮಿಸಿದರು.ದೇಶ ಒಂದೇ ಸಂವಿಧಾನ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿ ಹೋರಾಟ ಹಮ್ಮಿಕೊಂಡವರು.ಮುಖರ್ಜಿಯವರಂತಹವರ ತ್ಯಾಗಮಯ ಕೊಡುಗೆಯಿಂದ ದೇಶ ಇಂದು ಉನ್ನತ ಸ್ಥಾನದಲ್ಲಿದೆ.ಇಂತಹವರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಮಹಾತ್ಮರ ಕನಸನ್ನು ಸಾಕಾರಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
   ಮುಖ್ಯ ಅತಿಥಿಗಳಾಗಿದ್ದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಎಸ್.ಸಿದ್ದರಾಮಪ್ಪ ಮಾತನಾಡಿ ಕಾಲ ಮುಂದುವರೆದಂತೆ ನಮ್ಮ ಮನಸ್ಥಿತಿ ಬದಲಾಗುತ್ತಿದೆ,ಮೌಲ್ಯಗಳು ನಶಿಸುತ್ತಿವೆ.ಮುಖರ್ಜಿಯಂತವರ ವಿಚಾರಗಳನ್ನು ಅರಿತು ದೇಶಪ್ರೇಮ ಬೆಳೆಸಿಕೊಳ್ಳಬೇಕು.ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ,ಯಾವುದೂ ಅಸಾಧ್ಯ ಎಂಬುದಿಲ್ಲ.ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
     ಕಾಲೇಜನ ಪ್ರಭಾರಿ ಪ್ರಾಂಶುಪಾಲರಾದ ಕೆ.ಎನ್.ಮಲ್ಲೇಗೌಡ ಮಾತನಾಡಿ ಹಿರಿಯರ ತ್ಯಾಗ ಬಲಿದಾನಗಳನ್ನು ಅರಿತು ದೇಶದ ಬಗ್ಗೆ ಅಭಿಮಾನ,ಪ್ರೀತಿ ಬೆಳೆಸಿಕೊಳ್ಳಬೇಕು.ಆಗಾಗ್ಗೆ ಇಂತಹ ಹಿರಿಯರ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು ಇದು ನಿಮಗೆ ಮಾರ್ಗದರ್ಶಕವಾಗುತ್ತದೆ ಎಂದರು.ಸಮಾರಂಭವನ್ನು  ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಂಕರನಾರಾಯಣಶಾಸ್ತ್ರಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
    ಸಮಾರಂಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ಬಿ.ಎಸ್.ಅನುಪಮ,ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಜಿಎನ್.ಮನುಕುಮಾರ್, ಉಪನ್ಯಾಸಕರಾದ ಎಚ್.ಪುಟ್ಟಸ್ವಾಮಿ,ಹೊಳಲು ಶ್ರೀಧರ್,ಮಂಜುನಾಥ್,ಓ.ನಾಗರಾಜು ಉಪಸ್ಥಿತರಿದ್ದರು
                                                                     .                                                                            

No comments:

Post a Comment