Tuesday 21 July 2015

ಮಂಡ್ಯ: ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಸರ್ವೆ ನಂ. 157ರಲ್ಲಿ 78.30 ಎಕರೆ ಜಮೀನಿದ್ದು, 22.30 ಎಕರೆ ಜಮೀನು ತೆರವು ಮಾಡಲಾಯಿತು. ಸುಂಡಹಳ್ಳಿ ಗ್ರಾಮದಲ್ಲಿ ಸರ್ವೆ ನಂ. 126ರಲ್ಲಿ 43.20 ಎಕರೆ ಜಮೀನಿದ್ದು, 7.30 ಎಕರೆ ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮಾರ್ಗದರ್ಶನದಲ್ಲಿ ಉಪ ತಹಸೀಲ್ದಾರ್ ಕೆ.ಎಂ. ಸ್ವಾಮಿಗೌಡ ಮತ್ತು ತಂಡ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಕಂದಾಯ ನಿರೀಕ್ಷಕ ಎಸ್.ಕೆ. ರಾಜು, ಗ್ರಾಮ ಲೆಕ್ಕಾಧಿಕಾರಿ ಸಿ. ಪ್ರಭು, ಸರ್ವೆಯರ್ ಶಿವಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.


ಮಂಡ್ಯ: ನಗರಸಭೆ ವ್ಯಾಪ್ತಿಯಲ್ಲಿ 13ನೇ ಹಣಕಾಸು ಯೋಜನೆಯಡಿ ಅನುಮೋದನೆಯಾಗಿರುವ ವಾರ್ಡ್ ನಂ. 19ರ ಅಶೋಕನಗರದ ಬಾಲಭವನದಲ್ಲಿ ಬೋರ್ ಕೊರೆದು ವಿದ್ಯುತ್ ಪಂಪ್ ಅಳವಡಿಸುವ ಕಾಮಗಾರಿಗೆ ನಗರಸಭಾಧ್ಯಕ್ಷ ಲೋಕೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 2014-15ನೇ ಸಾಲಿನಲ್ಲಿ ನಗರದ ವಾರ್ಡುಗಳಿಗೆ 13ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಚಾಲನೆಗೊಳಿಸಲಾಯಿತು. 19ನೇ ವಾರ್ಡಿನ ಬಾಲಭವನದ ಆವರಣದಲ್ಲಿ ವಾಯುವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರಣದಿಂದಾಗಿ ಕುಡಿಯುವ ನೀರಿನ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಎಸ್.ಕೆ. ಶಿವಪ್ರಕಾಶ್‍ಬಾಬು, ಚಂದ್ರಕುಮಾರ್, ಮಧುಸೂದನ್, ವಾರ್ಡ್‍ನ ನಿವಾಸಿಗಳಾದ ಜಿ.ವಿ. ನಾಗರಾಜು, ಕೆ. ರವೀಂದ್ರ, ಜಲಮಂಡಳಿ ಸಹಾಯಕ ಅಭಿಯಂತರ ಶಿವಕುಮಾರ್ ಇತರರಿದ್ದರು.

No comments:

Post a Comment