Saturday 25 July 2015

ಮಂಡ್ಯ : ಆಧುನಿಕ ಜಗತ್ತಿನ ಪೈಪೋಟಿ ಎದುರಿಸಲು ಮಾನವ ಶಕ್ತನಾಗಬೇಕಾದರೆ ಹಾಗೂ ಆತನ ಮಾನಸಿಕ ಹಾಗೂ ದೈಹಿಕ ಶಕ್ತಿಯ ವಿಕಾಸ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ನಗರದ ಜನತಾ ಶಿಕ್ಷಣ ಟ್ರಸ್ಟ್‍ನ ಸುವರ್ಣ ಮಹೋತ್ಸವ ಹಾಗೂ ಸುವರ್ಣ ಸೌಧ ಕಟ್ಟಡ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಶೇ.76ರಷ್ಟು ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಗಿದೆ. ಅದನ್ನು ಶೇ.100ಕ್ಕೆ ಏರಿಸುವ ಕಾಯಕದಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಪ್ರತಿವರ್ಷ 17 ಸಾವಿರ ಕೋಟಿ ರೂ. ಹಣ ವ್ಯಯಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಪ್ರಜೆ ಸಮಾಜ ದಲ್ಲಿ ಒಳ್ಳೆಯ ಬದುಕು ಹಾಗೂ ನಾಗರೀಕತೆಯ ಬಾಳ್ವೆ ನಡೆಸಲು ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ 16 ವರ್ಷದೊಳಗಿನ ಸರ್ವರಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದೆ ಎಂದರು.
ಆಧುನಿಕ ಜಗತ್ತಿನ ಸ್ಪರ್ಧೆ ಎದುರಿಸಲು ಬೇಕಾದ ಗುಣ ಮಟ್ಟದ ಶಿಕ್ಷಣ ನೀಡಲು ಸಕಾರಿ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿ ಸಲಾಗುತ್ತಿದೆ. ಇದಕ್ಕಾಗಿ 12 ಸಾವಿರು ಸಂಖ್ಯೆಯ ವಿವಿಧ ಹಂತದ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದ್ದು, ಗ್ರಾಮಾಂತರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕಾಪಾಡಲು ಹಾಸ್ಟೆಲ್‍ಗಳ ಗುಣಮಟ್ಟ ಸುಧಾರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಪೌಷ್ಠಿಕತೆ ಯಿಂದ ಬಳಲುತ್ತಿದ್ದ ಸುಮಾರು 60 ಸಾವಿರ ವಿದ್ಯಾರ್ಥಿಗಳ ಅಪೌಷ್ಠಿಕತೆ ನಿವಾರಣೆಗೆ ಹಾಲು ವಿತರಣೆ, ಬಿಸಿಯೂಟದ ವ್ಯವಸ್ಥೆ ಕೈಗೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದ ಹಲವು ಗಣ್ಯರು ಶ್ರಮಿಸಿದ್ದು ಆ ನಿಟ್ಟಿನಲ್ಲಿ  ಕೆ.ವಿ.ಶಂಕರಗೌಡ, ಹೆಚ್.ಜಿ. ಗೋವಿಂದೇಗೌಡ, ಹೆಚ್.ಡಿ. ಚೌಡಯ್ಯರವರ ಸೇವೆ ಅಗಣಿತ ಎಂದು ಬಣ್ಣಿಸಿದರು.
ಮಂಡ್ಯ ಜಿಲ್ಲೆಯ ವಿದ್ಯಾರ್ಥಿ ಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ದೂರ ದೃಷ್ಠಿಯಿಂದ ಕೆ.ವಿ.ಶಂಕರಗೌ ಡರು ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆ 50 ವರ್ಷ ಪೂರೈಸಿರುವುದು ಶ್ಲಾಘನೀಯ. ಸಂಸ್ಥೆಯ ಅಭಿವೃದ್ಧಿಗೆ ಚೌಡಯ್ಯನವರ ಕಾಣಿಕೆಯು ಅಪಾರ ಎಂದು ಪ್ರಸಂಶಿಸಿದರು.
ಶಂಕರಗೌಡರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕುವೆಂಪು ಅವರಿಂದ ಗುಣಗಾ ನಕ್ಕೆ ಪಾತ್ರರಾಗಿದ್ದರು. ಅದೇ ರೀತಿ ಜಿಲ್ಲೆಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯರವರ ದುಡಿಮೆ ಅಪಾರ ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಿ.ಇ.ಟಿ. ಅಧ್ಯಕ್ಷ ಹೆಚ್.ಡಿ.ಚೌಡಯ್ಯ ವಹಿಸಿದ್ದರು. ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕÀ ಪಿ.ಎಂ.ನರೇಂದ್ರಸ್ವಾಮಿ, ನಗರಸಭೆ ಅಧ್ಯಕ್ಷ ಲೋಕೇಶ್, ಮಾಜಿ ಸಂಸದ ಜಿ.ಮಾದೇ ಗೌಡ, ಕೆ.ವಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ, ಜಿ.ಪಂ.ಸದಸ್ಯ ಕೆ.ಎಸ್. ವಿಜಯಾನಂದ, ಸಂಸ್ಥೆಯ ಕಾರ್ಯದರ್ಶಿ ಹೆಚ್.ಹೊನ್ನಪ್ಪ, ನಿರ್ದೇಶಕ ಡಾ.ರಾಮ ಲಿಂಗಯ್ಯ, ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಮತ್ತಿತರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

No comments:

Post a Comment