Sunday 5 July 2015

ಮೈಸೂರು ನಗರದ ಉದ್ದಿಮೆದಾರರು ಹಾಗೂ ವ್ಯಾಪಾರಿಗಳಿಗೆ ನಗರ ಸ್ವಚ್ಛವಾಗಿಡಲು ಆಯುಕ್ತ ರ ಸೂಚನೆ.

 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ , ಸಾರ್ವಜನಿಕರ ಅನುಕೂಲಕ್ಕಾಗಿ ಮಳೆ ನೀರು ಚರಂಡಿ ಹಾಗೂ ಪಾದಚಾರಿ ರಸ್ತೆ ಕಾಮಗಾರಿ ಒಳಗೊಂಡಂತೆ ರಾಜ ಮಾರ್ಗ ಕಾಮಗಾರಿಯನ್ನು ಪಾಲಿಕೆ ವತಿಯಿಂದ ಕೈಗೆತ್ತಿಕೊಂಡು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಆದರೆ ಕಾಮಗಾರಿ ನಡೆಯುತ್ತಿರುವ ರಾಜ ಮಾರ್ಗದ ಉದ್ದಕ್ಕೂ ಇರುವ ಹೋಟೆಲ್ , ಬೇಕರಿ ವಿವಿಧ ಉದ್ದಿಮೆದಾರರು, ಹಾಗೂ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ,  ತೆರೆದ ಚರಂಡಿಗಳಲ್ಲಿ ಬಿಸಾಡದಂತೆ ಅನೇಕ ಬಾರಿ ಮೌಖಿಕವಾಗಿ ತಳಿಸಿದರೂ ಸಹಾ ಪಾಲಿಕೆಯೊಂದಿಗೆ ಸಹಕರಿಸುತ್ತಿಲ್ಲ.
ಸಯ್ಯಾಜಿರಾವ್ ರಸ್ತೆಯ ಬದಿ ರಾಜಮಾರ್ಗ ಕಾಮಗಾರಿ ಕುರಿತು ನಿರ್ಮಿಸಲಾಗಿರುವ ಚರಂಡಿಯಲ್ಲಿ ಪ್ರತೀ ನಿತ್ಯ ಕಸವನ್ನು ಹಾಗೂ ತ್ಯಾಜ್ಯವನ್ನು ಅಂಗಡಿಕಾರರು ಹಾಗೂ ಸಾರ್ವಜನಿಕರು ಹಾಕುತ್ತಿದ್ದಾರೆ.ಇದರಿಂದ ಕಾಮಗಾರಿಯ ಪ್ರಗತಿಯೂ ಕುಠಿತಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚರಂಡಿ ಮೇಲೆ ಸ್ಲಾಬ್ ಹಾಕಲಾಗುವುದು. ಕಾರಣ ತ್ಯಾಜ್ಯವನ್ನು ಚರಂಡಿಯಲ್ಲಿ ಹಾಕದಂತೆ ವನಂತಿಸಲಾಗಿದೆ. ತಪ್ಪಿದಲ್ಲಿ ದಂಡವನ್ನು ವಿಧಿಸಿ ಕಾನೂನು ಜರುಗಿಸಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ತಮ್ಮಲ್ಲಿ ಪ್ರತೀದಿನ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ತೆರದ ಚರಂಡಿಗಳಲ್ಲಿ ಬಿಸಾಡದೆ ಪ್ರತ್ಯೇಕ ಬಿನ್ಸಗಳಲ್ಲಿ ಸಂಗ್ರಹಿಸಿ ಪಾಲಿಕೆ ವಾಹನಗಳಿಗೆ ನೀಡಿ ಪರಿಸರ ಸಂರಕ್ಷಿಸಲು ಪಾಲಿಕೆಯೊಂದಿಗೆ ಕೈ ಜೋಡಿಸಿ ಜವಾಬ್ದಾರಿಯುತ ನಾಗರೀಕರ /ಉದ್ದಿಮೆದಾರರ  ಕರ್ತವ್ಯವನ್ನು ನಿರ್ವಹಿಸಬೇಕಾಗಿ ಈ ಮೂಲಕ ಕೋರಿದೆ.
                                                                             

No comments:

Post a Comment