Saturday 28 November 2015

ಬೆಂಗಳೂರು, ನ.28- ನಾವು ಯಾವ ಪಕ್ಷದ ಏಜೆಂಟರಲ್ಲ, ಯಾರಿಗೂ ಏಜೆಂಟರೂ ಅಲ್ಲ ನಮಗೆ ಸ್ವಃತ ದುಡಿಮೆ ಮಾಡಿ ಬದುಕು ಶಕ್ತಿ ಇದೆ. ನಮ್ಮ ಬಗ್ಗೆ  ಜಾ.ದಳ ರಾಜ್ಯಾ ಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲಘುವಾಗಿ ಮಾತನಾಡ ಬಾರದು ಎಂದು ನಾಗಮಂಗಲ ಶಾಸಕ ಎನ್.ಚಲುವರಾಯ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ವಿಚಾರವಾಗಿ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಜಮೀರ್ ಅಹಮದ್‍ಖಾನ್ ಚರ್ಚಿಸಿದ್ದರು. ಈ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ  ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದರು. ಇದರಿಂದ ಸಾಕಷ್ಟು ಬೇಸರಗೊಂಡಿರುವ ಚಲುವರಾ ಯಸ್ವಾಮಿ ಎಚ್.ಡಿ.ಕುಮಾರ ಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ನಮ್ಮನ್ನು ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದಾರೆ. ಕುಮಾರಸ್ವಾಮಿಯವರು ನಾಯಕರಂತೆ ವರ್ತಿಸಬೇಕು. ಲಘುವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿ ಗೊಂದಲ ಸøಷ್ಠಿಸಬಾರದು. ಮೈತ್ರಿ ವಿಚಾg Àವಾಗಿ ಕಾಂಗ್ರೆಸ್ ಪಕ್ಷದ ಜೊತೆ ಚರ್ಚಿಸಲು ದೇವೇಗೌಡರೇ ತಿಳಿಸಿದ್ದರು.
 ಆದರೆ ದಿಗ್ವಿಜಯ ಸಿಂಗ್‍ರವರೊಂದಿಗೆ ಚರ್ಚಿ ನಡೆಸಿದ ನಂತರ ಮಾರನೆ ದಿನ ನಾನು ಹೇಳಿಲ್ಲ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದರು. ಯಾಕೆ ಹೀಗೆ ಮಾಡಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಕುಮಾರ ಸ್ವಾಮಿಯವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಳಿ ಕ್ಷಮೆಯಾಚನೆ
ಕಾಂಗ್ರೆಸ್ ಜೊತೆ ಮೈತ್ರಿ ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಇಂದು ಚಲುವರಾಯಸ್ವಾಮಿ, ಜಮೀರ್ ಅಹಮದ್‍ಖಾನ್, ಅಖಂಡ ಶ್ರೀನಿವಾಸಮೂರ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದಾರೆ. ಮೈತ್ರಿ ವಿಚಾರ ಮುಗಿದ ಅಧ್ಯಾಯ ಎಂದು ಇದೇ ವೇಳೆ ಜಮೀರ್ ಅಹಮದ್‍ಖಾನ್ ಸ್ಪಷ್ಟಪಡಿಸಿದ್ದಾರೆ.

No comments:

Post a Comment