Monday 23 November 2015


 ಚಿತ್ತಾರದಲಿ ಜನಸಾಮಾನ್ಯರಿಗೆ  ಮಾಹಿತಿ ನೀಡಿದ ಲೇಸರ್ ಶೋ
       ಮೈಸೂರು,ನ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾನುವಾರ ವಿನೂತನವಾಗಿ ಬಣ್ಣ, ಬಣ್ಣದ ಬೆಳಕಿನಲ್ಲಿ ಜನಸಮಾನ್ಯರ ಮನಸೆಳೆಯುವ  ಲೇಸರ್ ಶೋವನ್ನು  ಮೈಸೂರಿನ ಕೋಟೆ ಅಂಜುನೇಯ ಸ್ವಾಮಿ ದೇವಸ್ಥಾನ ಆವರಣ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆವರಣ, ಹುಣಸೂರು ಪುರಸಭೆ ಮೈದಾನ ಹಾಗೂ ಕೆ.ಆರ್.ನಗರ ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ಆಯೋಜಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು.
       ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನ,ವಿದ್ಯಾಸಿರಿ ಸೇರಿದಂತೆ ಹಲವಾರು ಯೋಜನೆಗಳ ವಿವರವು ಬಣ್ಣ, ಬಣ್ಣದ ಗೆರೆಗಳಲ್ಲಿ ಮೂಡಿ ನೋಡುಗರನ್ನು ಮನರಂಜಿಸುವುದರ ಜೊತೆಗೆ ಮಾಹಿತಿಯನ್ನು ಸಹ ಲೇಸರ್ ಶೋ ನೀಡಿತು.
     ಸರ್ಕಾರದ ಸಾಧಿಸಿದ ಪ್ರಗತಿಯ ವಿವಿರ ಸೇರಿದಂತೆ ಬಾರಿಸು ಕನ್ನಡ ಡಿಂಡಿಮವಾ ಹಾಡಿನ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕವಿ ಹಾಗೂ ಸಾಹಿತಿಗಳನ್ನು ಸಹ ಬೆಳಕಿನ ಗೆರೆಗಳಲ್ಲಿ ಮೂಡಿ ಬಂದವು.ಬಾರಿಸು ಕನ್ನಡ ಡಿಂಡಿಮವಾ, ಈ ಸರ್ಕಾರ ನಮ್ಮ ಸರ್ಕಾರ ಹಾಗೂ ಪುಣ್ಯಕೋಟಿ ವಿಷಯಗಳಡಿ ಲೇಸರ್ ಶೋ ಆಯೋಜಿಸಲಾಗಿತ್ತು.
ಲಘುವಾಹನ ಚಾಲನಾ ತರಬೇತಿ
    ಮೈಸೂರು,ನ.23.ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ಪರಿಶಿಷ್ಟವರ್ಗದ ನಿರುದ್ಯೋಗಿ ಯುವಕ ಯುವತಿಯರಿಗೆ ಲಘುವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
    ಆಸಕ್ತರು ವೋಟರ್ ಐಡಿ, ವಯಸ್ಸಿನ ಬಗ್ಗೆ ದಾಖಲೆ, ವಿದ್ಯಾರ್ಹತೆ, ಜಾತಿ ಪ್ರಮಾಣಪತ್ರ,  ವರಮಾನ ಪ್ರಮಾಣ ಪತ್ರದೊಂದಿಗೆ ಸಂಬಂದಿಸಿದ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ / ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:20-12-2015ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಮೈಸೂರು ದೂರವಾಣಿ ಸಂಖ್ಯೆ 0821-2427140)ನ್ನು ಸಂಪರ್ಕಿಸಲು ಕೋರಲಾಗಿದೆ.

No comments:

Post a Comment