Friday 13 November 2015


ಮೇಲುಕೋಟೆ : ಚಿತ್ರಕಲೆಯ ಕಲಿಕೆಯಿಂದ ಮಕ್ಕಳ ಬರವಣಿಗೆ ಅಂದಗೊಳ್ಳುತ್ತದೆ ಎಂದು ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದರು ಅವರು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದ ಮೇಲುಕೋಟೆ  ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ತರಬೇತಿ ಶಿಭಿರವನ್ನು  ಅಕ್ಷರ ಚಿತ್ರಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಕ್ರಿಯಾಶೀಲತೆ ಹೆಚ್ಚುತ್ತದೆ ಜೊತೆಗೆ ಬರವಣಿಗೆಯ ಎಲ್ಲಾ ವಿಧಾನಗಳೂ ಸಹ ರೂಢಿಯಾಗುತ್ತದೆ. ಇದರಿಂದ ಮಕ್ಕಳು ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಹಕಾರಿಯಾಗುತ್ತದೆ ಹೀಗಾಗಿ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಬೇಕು  ಶಿಕ್ಷಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಪೂರಕವಾತಾವರಣ ನಿರ್ಮಿಸಬೇಕು ವಿದ್ಯಾರ್ಥಿಗಳು ಸಹ ವಿವೇಕಾನಂದರ ವಾಣಿಯಂತೆ ಗುರಿಮುಟ್ಟುವವರೆಗೂ ವಿಶ್ರಮಿಸದೆ ಸಾಧನೆ ಮಾಡಬೇಕು ಎಂದರು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್ ಶಂಕರಪ್ಪ ಮೇಲುಕೋಟೆಯಲ್ಲಿ ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದವತಿಯಿಂದ  ಮೂರುದಿನಗಳ ಕಾಲ ಚಿತ್ರಕಲಾ ಶಿಕ್ಷಕರಿಗಾಗಿ ವಿಶೇಷ ಚಿತ್ರಕಲಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಉದ್ಘಾಟನೆಯ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ  ಮಕ್ಕಳಿಗೂ ಸಹ  ಸರಳವಾಗಿ ಚಿತ್ರ ಬಿಡಿಸುವ ಒಂದು ದಿನದ ತರಬೇತಿ ನೀಡಲಾಯಿತು ಎಂದರು

ಇಂದು ಚಿತ್ರಪ್ರದರ್ಶನ :
ಮೇಲುಕೋಟೆಯಲ್ಲಿ ಚಿತ್ರಕಲಾ ಶಿಕ್ಷಕರು ಬಿಡಿಸುವ ಚಿತ್ರಗಳನ್ನು ಭಾನುವಾರ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂದೆ ಭಾನುವಾರ ಪ್ರದರ್ಶನ ಮಾಡಿ ಪ್ರವಾಸಿಗರಲ್ಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈವೇಳೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರೋಪ ಸಮಾರಂಬದಲ್ಲಿ ಭಾಗವಹಿಸಲಿದ್ದಾರೆ  ಶಾಲೆಯಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಕ್ಕಳ ದಿನಾಚರಣೆಯಂದು ಬಹುಮಾನ ನೀಡಲಾಗಿದೆ ಎಂದು  ಶಂಕರ್ ತಿಳಿಸಿದರು.

 ಪುಟಾಣಿಗಳಿಗೆ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳು ಮತ್ತು ಆಂಗ್ಲಭಾಷೆಯ ಅಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಕೇವಲ ಗೆರೆಗಳ ಸಹಾಯದಿಂದ ಚಿತ್ರರಚಿಸುವ ತರಬೇತಿ ನೀಡಲಾಯಿತು, ಅ ಅಕ್ಷರದಲ್ಲಿ ಹೂವಿನ ಕುಂಡ ಆ ಅಕ್ಷರದಲ್ಲಿ ಪಕ್ಷಿ, ಇ ಮೂಲಕ ಇಲಿ, ಆನೆ  ಹೀಗೆ ಪಕ್ಷಿಗಳು, ಪ್ರಾಣಿಗಳು, ಪರಿಸರದ ಚಿತ್ರಗಳನ್ನು ಬಿಡಿಸಿದ ಮಕ್ಕಳು ಅಂಕಿಗಳ ಮೂಲಕ ವಿವಿದ ಚಿತ್ರಗಳ ಚಿತ್ತಾರ, ಸರಳವಾಗಿ ಪರಿಸರದ ಅಪೂರ್ವ ದೃಶ್ಯಗಳ ಚಿತ್ರ ಬಿಡಿಸುವುದರ ಬಗ್ಗೆ ಹಾಗೂ ಚಿತ್ರಗಳಿಗೆ ವೈವಿಧ್ಯಮಯವಾಗಿ ಬಣ್ಣ ಬಳಸುವ ಬಗ್ಗೆಯೂ ಸಹ  ಪ್ರಾತ್ಯಕ್ಷಿಕ ತರಬೇತಿ ಪಡೆದರು

 ಇದೇ ವೇಳೆ ಮಕ್ಕಳದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಳ್ಳಿಯ ಪರಿಸರದ ಮತ್ತು ಕಾಡಿನ ಪರಿಸರದ ಚಿತ್ರಣಗಳ ಬಗ್ಗೆ ವರ್ಣಮಯ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಸಹ ನಡೆಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಡಿನಲ್ಲಿರುವ ಆನೆಗಳು, ಹಳ್ಳಿಯ ಮನೆ, ಕೆರೆ ತೋಟಗಳು, ಮೊಲ, ಹೂಗಳು ಅರಳಿದ ಹೂಗಳಿರುವ ಸುಂದರ ಪರಿಸರದ ಚಿತ್ರಬಿಡಿಸಿ ತಮ್ಮ ಕ್ರಿಯಾಶೀಲ ಚಿತ್ರಗಳನ್ನು ರಚಿಸಿದರು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ  ರಾಜ್ಯ ಚಿತ್ರಕಲಾ ಪರಿಷತ್‍ನ ಉಪಾಧ್ಯಕ್ಷೆ ಮಂಜುಳಾ,  ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಶಿಕ್ಷಕರಾದ ಪ್ರಸಾದ್, ದೈಹಿಕ ಶಿಕ್ಷಕ ಶಿವರಾಮು, ಶಿಕ್ಷಕಿ ರಶ್ಮಿ, ಮತ್ತಿತರರು ಭಾಗವಹಿಸಿದ್ದರು

No comments:

Post a Comment