Saturday 14 November 2015


ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀಮತಿ ಡಾ|| ಪುಷ್ಪ ಅಮರ್‍ನಾಥ್‍ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಯ್ಯ, , ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜವರೇಗೌಡರವರು, ಸದಸ್ಯರಾದ ಸಿದ್ದೇಗೌಡರು, ಜವರಯ್ಯ, ಪ್ರಭಾರಿ ಸಿಇಒ ರವರಾದ ಶ್ರೀ ಶಂಕರ್‍ರಾಜ್, ಜಿಲ್ಲಾ ಪಂಚಾಯತ್, ಯೋಜನಾ ಅಧಿಕಾರಿಯಾದ ಶ್ರೀ ಪ್ರಭುಸ್ವಾಮಿ, ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್.ಆರ್.ಬಸಪ್ಪರವರು, ವಿದ್ಯಾಧಿಕಾರಿಗಳು, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು( ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ)ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಮಹದೇವಯ್ಯ, ಕಾರ್ಯದರ್ಶಿ ಮಂಗಳ ಮುದ್ದುಮಾದಪ್ಪ, ಪ್ರೌಢಶಾಲಾ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀ ಸೋಮಶೇಖರ್, ವಿಷಯ ಪರಿವೀಕ್ಷಕರು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು, ಜಿಲ್ಲೆಯ ಆಯ್ದ ಶಾಲೆಯ 120 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಮಾಧ್ಯಮ ಸ್ನೇಹಿತರು ಭಾಗವಹಿಸಿದ್ದರು.
    ಈ ದಿನದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ನಿಕಟಪೂರ್ವ ಸಾಮಾಜಿಕ ಸಂಪರ್ಕ ಅಧಿಕಾರಿ ಶ್ರೀಯುತ ಕೆ. ಜಯಪ್ರಕಾಶ್‍ರಾವರು ಭಾಗವಹಿಸಿದ್ದರು.
     ಮೊದಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ, ಮೇಟಗಳ್ಳಿ ಮಕ್ಕಳು ನಾಡಗೀತೆ ಹಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಆ ನಂತರ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತ ಭಾಷಣ ಮಾಡಿದ ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್ ಆರ್ ಬಸಪ್ಪರವರು ಮಾತನಾಡಿ ಮಕ್ಕಳಿಗೆಲ್ಲಾ ಶುಭಾಶಯಗಳನ್ನು ಕೋರಿದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಕಳೆದ ಬಾರಿ 10 ನೇ ಸ್ಥಾನದಲ್ಲಿದ್ದು ಈ ಬಾರಿ 5ನೇ ಸ್ಥಾನದೊಳಗೆ ತರಬೇಕೆನ್ನುವ ಆಶಯದೊಂದಿಗೆ ಇಂದು “ಮೈಸೂರು –ಗುರಿ ನೂರು” ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳಿಗೂ ಸ್ವಾಗತವನ್ನು ಕೋರಿದರು.
   ಡಾ|| ಪುಷ್ಪ ಅಮರ್‍ನಾಥ್, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಮೈಸೂರು ಹಾಗೂ ಇತರೆ ಗಣ್ಯವ್ಯಕ್ತಿಗಳು ಕಾರ್ಯಕ್ರಮವನ್ನು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ನೆರವೇರಿಸಿದರು. ಆ ನಂತರ “ ಮೈಸೂರು-ಗುರಿ ನೂರು” ಕಾರ್ಯಕ್ರಮವನ್ನು ಭಿತ್ತಿಚಿತ್ರದ ಉದ್ಘಾಟನೆಯೊಂದಿಗೆ ಹಾಗೂ ಇ-ಬಟನ್ ಒತ್ತುವುದರೊಂದಿಗೆ  ವಿನೂತನವಾಗಿ ನೆರವೇರಿಸಿದರು. ಆ ನಂತರ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಒಡನಾಟದಲ್ಲಿದ್ದ ಅವರ ಸಾಮಾಜಿಕ ಸಂಪರ್ಕ ಅಧಿಕಾರಿಯಾಗಿದ್ದ ಶ್ರೀಯುತ ಜಯಪ್ರಕಾಶ್. ಕೆ ರವರು ಕನ್ನಡಕ್ಕೆ ಅನುವಾದಿಸಿದ್ದ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಬಿಡುಗಡೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿದರು.
   ಉದ್ಘಾಟನಾ ಭಾಷದಲ್ಲಿ ಡಾ|| ಪುಷ್ಪ ಅಮರ್‍ನಾಥ್ ಮಾತನಾಡುತ್ತಾ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮಕ್ಕಳು ಉತ್ತಮ ಗುರಿಗಳೊಂದಿಗೆ ತಮ್ಮ ಜೀವನದಲ್ಲಿ ಮುಂದೆ ಬರಬೇಕೆಂದು ಹಾರೈಸಿದರು. ಈ ದಿನದ ಮುಖ್ಯ ಕಾರ್ಯಕ್ರಮದ ಗುರಿ “ ಮೈಸೂರು-ಗುರಿ ನೂರು” ಕಾರ್ಯಕ್ರಮದ ಉದ್ದೇಶ ಗುರಿಗಳನ್ನು ತಿಳಿಸಿದರು. ಆ ನಂತರ ಪೋಸ್ಟರ್ ಬಗ್ಗೆ ವಿವರವಾಗಿ ತಿಳಿಸಿದರು. ಪೋಸ್ಟರ್‍ನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ವಪಲ್ಲಿ ಡಾ|| ರಾಧಾಕೃಷ್ಣನ್‍ರವರು, ಪ್ರೀತಿಯ ಚಾಚಾ ನೆಹರುರವರು ಹಾಗೂ ಮಕ್ಕಳ ವಿಜ್ಞಾನಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಚಿತ್ರಗಳನ್ನು ಹಾಕಿರುವುದರ ವಿವರಣೆಯನ್ನು ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಉಳ್ಳವರಾಗಿದ್ದರು. ಡಾ|| ರಾಧಾಕೃಷ್ಣನ್ ರವರು ಶಿಕ್ಷಕರಿಗೆ ಮಾದರಿಯಾಗಿದ್ದರು , ಅಬ್ದುಲ್ ಕಲಾಂರವರು ಮಕ್ಕಳಿಗೆ ಪ್ರೇರಕರಾಗಿದ್ದಾರೆ. ಹಾಗಾಗಿ ಎಲ್ಲರನ್ನೂ ಒಳಗೊಂಡಂತೆ ಪೋಸ್ಟರ್ ರಚಿಸಲಾಗಿದೆ. ಇದರ ಕಾರ್ಯಸಾಧನೆಗಾಗಿ ಎಲ್ಲರೂ ಶ್ರಮಿಸೋಣ, ಜಿಲ್ಲೆಯ ಫಲಿತಾಂಶವನ್ನು 5ನೇ ಸ್ಥಾನದೊಳಗೆ ತರಲು ಪ್ರಯತ್ನಿಸೋಣ ಎಂದು ತಿಳಿಸಿದರು.
    ಆ ನಂತರ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳಾದ ಚೇತನ್  ಮತ್ತು ಸ್ಮøತಿ ರವರಿಂದ ನೆಹರೂ ಮತ್ತು ಅಬ್ದುಲ್ ಕಲಾಂರ ಬಗ್ಗೆ ತಿಳಿಸಿಕೊಟ್ಟರು.
    ಆ ನಂತರ ಶ್ರೀಯುತ ಜಯಪ್ರಕಾಶ್ ಕೆ ರವರು ಮಾತನಾಡಿ ಡಾ|| ಕಲಾಂ ಏಕೆ ಮಕ್ಕಳಿಗೆ ಪ್ರೀತಿ ಪಾತ್ರರಾಗಿದ್ದರು ? ಅವರ ಒಡನಾಟನ ಹಲವು ಘಟನೆಗಳನ್ನು ತಿಳಿಸಿಕೊಟ್ಟರು. ಮಕ್ಕಳು ಮೊದಲು ನಾನು ಏನು ಆಗಬೇಕೆಂಬ ಗುರಿ ಇಟ್ಟಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಪ್ರತಿ ಮಕ್ಕಳೂ ತಮ್ಮ ಗುರಿಯನ್ನು ಸಾಧಿಸಲು ಶ್ರಮ ವಹಿಸಬೇಕು. ಮಕ್ಕಳು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ದೇಶದ ಉತ್ತಮ ಆಸ್ತಿಯಾಗಬೇಕು ಎಂದು ತಿಳಿಸಿದರು.
   ಆ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಹಲವಾರು ಪ್ರಶ್ನೆಗಳನ್ನು ಕೇಳಿದರು. ಜೀವನದಲ್ಲಿ ಯಾರಿಂದ ಮಾರ್ಗದರ್ಶನ ಪಡೆಯಬೇಕು ? ಡಾ|| ಕಲಾಂರವರು ಏಕೆ 2020 ವಿಷನ್ ಇಟ್ಟುಕೊಂಡಿದ್ದರು? ಹೊಸದನ್ನು ಸಾಧಿಸಲು ಹೇಗೆ ಧೈರ್ಯ ಪಡೆಯಬೇಕು? ಹೇಗೆ ಪ್ರಭಾವಗೊಳ್ಳಬೇಕು ? ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ಯೋಚನಾ ಲಹರಿ ಹೇಗೆ ಹೊಂದಾವಣಿಕೆ ಮಾಡುವುದು ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
   ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಂದ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ವಿದ್ಯಾರ್ಥಿ ಮತ್ತು ಯುವ ಜನತೆಯ 10 ಶಪಥಗಳನ್ನು ಮಾಡಿಸಲಾಯಿತು.
      ಆ ನಂತರ ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಶ್ರಮವಹಿಸಿದ ಮಾನ್ಯ ಉಪನಿರ್ದೇಶಕರು, 9 ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾಧಿಕಾರಿ ಹಾಗೂ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳನ್ನು ಮಾನ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ|| ಪುಷ್ಪ ಅಮರ್‍ನಾಥ್ ಸನ್ಮಾನಿಸಿದರು. ಈ ಬಾರಿ ಈ ಫಲಿತಾಂಶವನ್ನು ಇನ್ನೂ ಹೆಚ್ಚು ಗಳಿಸುವಂತೆ ಪ್ರಯತ್ನಿಸಬೇಕು ಎಂದು ಕೋರಿದರು.
      ಆ ನಂತರ ಜವಹರ್‍ಲಾಲ್ ನೆಹರು ಮತ್ತು ಅಬ್ದುಲ್ ಕಲಾಂರವರ ಜೀವನ ಚಿತ್ರದ ಡಾಕ್ಯುಮೆಂಟರಿ ಚಿತ್ರ ಪ್ರದರ್ಶಿಸಲಾಯಿತು. ಶ್ರೀ ಎಂ ಆರ್ ಶಿವರಾಮು, ವಿದ್ಯಾಧಿಕಾರಿಗಳು, ಸಾಶಿಇ ರವರು ಎಲ್ಲರಿಗೂ ವಂದಿಸಿದರು. ನಂತರ ಜಿಲ್ಲಾ ಪಂಚಾಯತ್ ವತಿಯಿಂದ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು ಎಂದು ಹೆಚ್.ಆರ್.ಬಸಪ್ಪ ತಿಳಿಸಿದ್ದಾರೆ.

                                             
                                                                    

No comments:

Post a Comment