Wednesday 18 November 2015

19 ನೇ ನವೆಂಬರ್ 2015
ಅದ್ದೂರಿ ಕನಕದಾಸ ಜಯಂತಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ
    ಮೈಸೂರು, ನವೆಂಬರ್ 19. ಮೈಸೂರು ಜಿಲ್ಲಾಡಳಿತ ಹಾಗೂ ಕನಕ ಜಯಂತೋತ್ಸವ ಸಮಿತಿ ಸಹಯೋಗದೊಂದಿಗೆ ಕನಕದಾಸ ಜಯಂತಿಯನ್ನು ನವೆಂಬರ್ 28 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
    ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
      ನವೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದಿಂದ ಕನಕದಾಸರ ಭಾವಚಿತ್ರ ಹಾಗೂ ವಿವಿಧ ಸ್ತಬ್ಥಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ಹಾಗೂ 11:30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ತಜ್ಞರನ್ನು ಆಹ್ವಾನಿಸಲಾಗುವುದು.  ಮೆರವಣಿಗೆ ಹಾಗೂ ವೇದಿಕೆ  ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
   ಕಾರ್ಯಕ್ರಮಕ್ಕೆ ಅವಶ್ಯವಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡÀಲಾಗುತ್ತದೆ. ಸಮಾರಂಭದ ಯಶಸ್ವಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಕನಕದಾಸರ ಜನ್ಮ ಜಯಂತಿ ಕೇವಲ ಒಂದು ವರ್ಗದ ಆಚರಣೆಯಾಗಬಾರದು. ಎಲ್ಲ ವರ್ಗದ ಜನತೆಯ ಸಹಕಾರ ಪಡೆದು ಒಗ್ಗೂಡಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಒಟ್ಟಾರೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
    ಪೊಲೀಸ್ ಉಪ ಆಯುಕ್ತ ಶೇಖರ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘಟನೆಗಳ ಮುಖಂಡರುಳಾದ ಎಂ.ಶಿವಣ್ಣ, ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜೆ.ಮಹದೇವಪ್ಪ, ರೇವಣ್ಣ,  ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಛಾಯಾಚಿತ್ರ ಲಗ್ತತಿಸಿದೆ)
ನ. 19 ರಿಂದ ಕಲಾಮಂದಿರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಛಾಯಾಚಿತ್ರ ಪ್ರದರ್ಶನ
ಮೈಸೂರು, ನವೆಂಬರ್ 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ನವೆಂಬರ್ 19 ರಿಂದ 24ರ ವರೆಗೆ ಕನ್ನಡ ನಾಡು-ನುಡಿ ಸಂಬಂಧಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.
   ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, 1956 ರ ನವೆಂಬರ್ 01 ರಂದು ಕನ್ನಡ ನಾಡು ಒಂದಾಗಿದ್ದು, ನಂತರ 1973 ರ ನವೆಂಬರ್ 01 ರಂದು ಕರ್ನಾಟಕ ರಾಜ್ಯದ ನಾಮಕರಣ, ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
  ವಿಶೇಷ ಛಾಯಾಚಿತ್ರ ಫಲಕಗಳು ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ 5:30 ಗಂಟೆಯ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment