Monday 9 November 2015

 ನವೆಂಬರ್ 11 ರಂದು ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ
    ಮೈಸೂರು,ನ.9.ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ವೀರ ಯೋಧ ಮೈಸೂರು ಹುಲಿ ಹಜûರತ್ ಟಿಪ್ಪು ಸುಲ್ತಾನ್ ಅವರ 266ನೇ ಜನ್ಮ ದಿನಾಚರಣೆ ನವೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಸರ್ ಖಾಜಿ ಮೌಲಾನ ಮೊಹಮ್ಮದ್ ಉಸ್ಮಾನ್ ಷರೀಫ್, ಮಿಲ್ಲಿ ಕೌನ್ಸಿಲ್ ಅಧ್ಯಕ್ಷ ಮೌಲಾನ ಜಕಾವುಲ್ಲಾ, ಬಸವಧಾನ್ಯ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಅವರಗಳು ದಿವ್ಯಸಾನಿಧ್ಯ ವಹಿಸುವರು.
     ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ,  ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಮೈಸೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆ ರಾಣಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಆರಿಫ್ ಅಹ್ಮದ್ ಮೇಕ್ರಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
    ಅಂದು ಬೆಳಿಗ್ಗೆ 9 ಗಂಟೆಗೆ ಟಿಪ್ಪು ಸುಲ್ತಾನ್ ಅವರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು ಕೆ.ಆರ್.ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಮೆಟ್ರೋಪೋಲ್ ವೃತ್ತದ ಮೂಲಕ ಕಲಾಮಂದಿರ ತಲುಪಲಿದೆ.
ದೀಪಾವಳಿ ಹಬ್ಬದ ಶುಭಾಶಯಗಳು
     ಮೈಸೂರು,ನ.9.ಪಟಾಕಿ ಬಿಟ್ಟಾಕಿ, ಪರಿಸರ ಹುಟ್ಟಾಕಿ ,ಪುಟ್ಟ ಮಕ್ಕಳನ್ನು ಪಟಾಕಿಯಿಂದ ದೂರವಿರಿಸಿ, ಮೈಸೂರು ನಗರವನ್ನು ವಿಶ್ವಮೋಹಕ ನಗರವನ್ನಾಗಿ ರೂಪಿಸಲು ಮೈಸೂರು ನಗರಪಾಲಿಕೆಯೊಂದಿಗೆ ಸಹಕರಿಸಿ ಎಂದು ಕೋರುತ್ತಾ , ಬೆಳಕಿನ ಹಬ್ಬ ದೀಪಾವಳಿ ಸಮಸ್ತ ಜನತೆಗೆ ಸುಖ-ಶಾಂತಿ ನೆಮ್ಮದಿ ನೀಡಲಿ ಹಾಗೂ ಎಲ್ಲರೂ ಬಾವೈಕತೆಯಿಂದ ಸಹಬಾಳ್ವೆಯಿಂದ ಸಾಗಲಿ ಎಂದು ಮೈಸೂರು ಮಹಾನಗರಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ ಶುಭ ಹಾರೈಸಿದ್ದಾರೆ.
ನ. 10 ರಂದು ಪ್ರದರ್ಶನ ಮಳಿಗೆ ಉದ್ಘಾಟನೆ
      ಮೈಸೂರು,ನ.9. ಮೈಸೂರು ದಸರ ವಸ್ತು ಪ್ರದರ್ಶನ ಆವರಣದಲ್ಲಿ ಜಿಲ್ಲೆಯ ಸರ್ಕಾರದ ಜನಪರ ಕಾರ್ಯಕ್ರಮ -ಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಚಾಮರಾಜನಗರ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲಾಗಿರುವ ಮಳಿಗೆಯನ್ನು   ದಿನಾಂಕ:10-11-2015 ರಂದು  ಸಂಜೆ 6.00ಗಂಟೆಗೆ ಸಹಕಾರ ಮತ್ತು ಸಕ್ಕರೆ ಸಚಿವ ಹಾಗೂ  ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ  ಹೆಚ್.ಎಸ್.ಮಹದೇವಪ್ರಸಾದ್ ಅವರು ಉದ್ಘಾಟಿಸಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನಕ್ಕೆ  ಅರ್ಜಿ ಆಹ್ವಾನ
     ಮೈಸೂರು,ನ.9. ವಿದ್ಯಾರ್ಥಿವೇತನ ಕೋರಿ 2015-16ನೇ ಸಾಲಿನಲ್ಲಿ ಆನ್‍ಲೈನ್‍ನಲ್ಲಿ ಇದುವರೆವಿಗೂ ನೋಂದಣಿಯಾಗದ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಸಮಾಜ ಕಲ್ಯಾಣ ಇಲಾಖಾ ವೆಬ್‍ಸೈಟ್ sತಿ.ಞಚಿಡಿ.ಟಿiಛಿ.iಟಿ ನಲ್ಲಿ ಮ್ಯಾನ್ಯುಯಲ್ಲಿ ಅರ್ಜಿ ಡೌನ್‍ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 15 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು  # 446, ಸರಸ್ವತಿ ನಿಲಯ, ಕೆಂಪನಂಜಾಂಬ ಅಗ್ರಹಾರ, ಮೈಸೂರು ಇಲ್ಲಿಗೆ ಸಲ್ಲಿಸುವಂತೆ ಮೈಸೂರು ತಾಲ್ಲೂಕು ಸಮಾಜ ಕಲ್ಯಾಣಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯವೇತನ: ಅರ್ಜಿ ಆಹ್ವಾನ
ಮೈಸೂರು,ನ.9.ಮೈಸೂರು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರು  ನಗರ ಮತ್ತು ತಾಲ್ಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಐಟಿಐ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 1 ಲಕ್ಷದೊಳಗಿರಬೇಕು. ಅರ್ಜಿಯನ್ನು ಆಯಾ ಕಾಲೇಜು ಮುಖ್ಯಸ್ಥರು ಅಥವಾ ಪ್ರಾಂಶುಪಾಲರ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 30 ರೊಳಗಾಗಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು (ತಾಲ್ಲೂಕು ಪಂಚಾಯಿತಿ ಕಚೇರಿ) ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2445447 ನ್ನು ಸಂಪರ್ಕಿಸುವುದು.
ಸರಿತಾ ಕೆ. ಅವರಿಗೆ ಪಿಎಚ್.ಡಿ. ಪದವಿ

Y   ಮೈಸೂರು,ನ.9.ಮೈಸೂರು ವಿಶ್ವವಿದ್ಯಾಲಯವು ಸರಿತಾ ಕೆ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಚಂದ್ರಶೇಖರ್ ಬಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ ಖegioಟಿಚಿಟ Pಚಿಣಣeಡಿಟಿs oಜಿ Poಠಿuಟಚಿಣioಟಿ ಂgeiಟಿg ಚಿಟಿಜ ಕಿuಚಿಟiಣಥಿ oಜಿ ಐiಜಿe oಜಿ ಇಟಜeಡಿಟಥಿ iಟಿ ಏಚಿಡಿಟಿಚಿಣಚಿಞಚಿ” ಕುರಿತು ಸಾದರಪಡಿಸಿದ ಭೂಗೋಳಶಾಸ್ತ್ರ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸರಿತಾ ಕೆ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಬಾಲ ದಿವಸ ಆಚರಣೆ

ಮೈಸೂರು,ನ.9. ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಸಿದ್ದಾರ್ಥನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ಬಾಲ ದಿವಸ್ ಆಚರಿಸಲಾಯಿತು.
    ಕಾರ್ಯಕ್ರಮವನ್ನು ಡಿ.ಎಫ್.ಆರ್.ಎಲ್ ನಿರ್ದೇಶಕ ಡಾ. ಹರ್ಷವರ್ಧನ್ ಬಾಟ್ರ ಅವರು ಉದ್ಘಾಟಿಸಿದರು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಕುಮಾರಿ, ಉಪಪ್ರಾಂಶುಪಾಲರಾದ ರೂಬಿ ಹುರಿಯಾ ಹಾಗೂ ಮುಖ್ಯೋಪಾಧ್ಯಾಯರಾದ ಸುಶ್ಮಿತಾ ಉಪಸ್ಥಿತರಿದ್ದರು.
    ಬಾಲ ದಿವಸ್ ಅಂಗವಾಗಿ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಕಲೆ, ಸಂಗೀತ, ನೃತ್ಯ, ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪತ್ರಿಕೋದ್ಯಮ ವೃತ್ತಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
      ಮೈಸೂರು,ನ.9.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2015-16ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವೃತ್ತಿ ಕೌಶಲ್ಯ ತರಬೇತಿ ನೀಡಲಿದೆ.
     ಪತ್ರಿಕೋದ್ಯಮ/ವಿದ್ಯುನ್ಮಾನ ಮಾಧ್ಯಮ/ಸಮೂಹ ಸಂವಹನ ವಿಷಯಗಳಲ್ಲಿ ಪದವಿ/ಸ್ನಾತಕ ಪದವಿ/ಪಿಜಿ ಡಿಪ್ಲೋಮ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಯಾವುದೇ ಇಲಾಖೆಯಿಂದ ಪ್ರಸ್ತುತ ಸಾಲಿನಲ್ಲಿ ಇದೇ ಸ್ವರೂಪದ ತರಬೇತಿ ಪಡೆದಿರಬಾರದು.
    ಆಸಕ್ತರು ಅರ್ಜಿಯನ್ನು ತಿತಿತಿ.ಞಚಿಡಿಟಿಚಿಣಚಿಞಚಿvಚಿಡಿಣhe.oಡಿg ನಿಂದ ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಲಕೋಟೆಯ ಮೇಲೆ ಪತ್ರಿಕೋದ್ಯಮ ವೃತ್ತಿ ಕೌಶಲ್ಯ ತರಬೇತಿಗಾಗಿ ಅರ್ಜಿ ಎಂದು ಕಡ್ಡಾಯವಾಗಿ ನಮೂದಿಸಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 20 ರೊಳಗಾಗಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು -560001 ಇಲ್ಲಿಗೆ ಹಾಗೂ ಅರ್ಜಿ ಮತ್ತು ದಾಖಲೆಗಳ ಸ್ಕ್ಯಾನ್ ಕಾಪಿಯನ್ನು    sಛಿಠಿiಟಿಜಿoಡಿmಚಿಣioಟಿಜeಠಿಚಿಡಿಣmeಟಿಣ@gmಚಿiಟ.ಛಿom ಗೆ ಇ ಮೇಲ್ ಮುಖಾಂತರ ಸಲ್ಲಿಸುವುದು.
ಖಾಸಗಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಪ್ರಾರಂಭಿಸಲು ಅರ್ಜಿ ಆಹ್ವಾನ
ಮೈಸೂರು,ನ.9.2016-17ನೇ ಸಾಲಿನಲ್ಲಿ ಹೊಸದಾಗಿ ಖಾಸಗಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿ ಕೋರಲು ಇಚ್ಛಿಸುವ ಆಡಳಿತ ಮಂಡಳಿ/ಸಂಸ್ಥೆಯವರು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿಸಲ್ಲಿಸಲು ದಿನಾಂಕ: ದಿನಾಂಕ:20-11-2015ರಂದು ಅಂತಿಮ ದಿನವಾಗಿರುತ್ತದೆ. ಆಸಕ್ತಿಯುಳ್ಳ ಸಂಸ್ಥೆಯವರು ಸರ್ಕಾರದ ದಿನಾಂಕ:    11-11-2014 ಮತ್ತು 05-09-2015ರ ಆದೇಶ ಮತ್ತು ಸುತ್ತೋಲೆಗಳಂತೆ ಆನ್ ಲೈನ್ ನಲ್ಲಿ ನೊಂದಾಯಿಸಿಕೊಂಡು  ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಅಥವಾ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ   ಪಡೆಯಬಹುದಾಗಿದೆ.
62ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

      ಮೈಸೂರು,ನ.9.62ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ಉದ್ಯೋಗ ಮತ್ತು ನೈಪುಣ್ಯತೆಯ ಅಭಿವೃದ್ಧಿಯ ದಿನ ನವೆಂಬರ್ 14 ರಂದು  11 ಗಂಟೆಗೆ  ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
      ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜರೋಹಣ ನೆರವೇರಿಸಲಿದ್ದು, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಅವರು ವಸ್ತುಪ್ರದರ್ಶನ ಉದ್ಘಾಟಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅವರು ಹಿರಿಯ ಸಹಕಾರಿಗಳು ಹಾಗೂ ಶಾಸಕ ವಾಸು ಅವರನ್ನು ಸಹಕಾರ ಸಂಘಗಳನ್ನು ಸನ್ಮಾನಿಸುವರು.  ಕರ್ನಾಟಕ ರಾಜ್ಯ ಮಹಾಮಂಡಳಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು.
     ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
     ಅಂದು ಬೆಳಿಗ್ಗೆ 10 ಗಂಟೆಗೆ ಬೇಡನ್ ಪೊವೆಲ್ ಮೈದಾನದಿಂದ ಸಹಕಾರ ಜಾಥಾ ನಡೆಯಲಿದೆ.

No comments:

Post a Comment