Saturday 28 November 2015

  ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟಿವಟಿಕೆಗೂ ಗಮನಕೊಡಿ-ಪುಟ್ಟಲಿಂಗಯ್ಯ

ಮಂಡ್ಯ:ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಕೇವಲ ಪಠ್ಯ ವಿಷಯವನ್ನಷ್ಟೇ ಕಲಿಯಲು ಆದ್ಯತೆ ನೀಡದೆ ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಿಗೂ ಗಮನಕೊಡಬೇಕು ಎಂದು ಅರ್ಕೇಶ್ವರ ನಗರ ಬಾಲಕಿಯರ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಲಿಂಗಯ್ಯ ತಿಳಿಸಿದರು.
     ಅವರು ನಗರದ ಬಾಲಕಿಯರ ಸ.ಪ.ಪೂ.ಕಾಲೇಜು(ಕಲ್ಲು ಕಟ್ಟಡ)ಇಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯ ತಾಲೂಕು ಪದವಿ ಪೂರ್ವ ಕಾಲೇಜುಗಳ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕøತಿಕ ಚಟುವಟಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
      ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಹಲವು ಅವಕಾಶಗಳಿವೆ.ಆದರೆ ಪದವಿ ಪೂರ್ವ ಹಂತದಲ್ಲಿ ಹೆಚ್ಚಿನ ಅವಕಾಶಗಳಿಲ್ಲ.ವರ್ಷಕ್ಕೊಮ್ಮೆ ಏರ್ಪಡಿಸುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬರಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮಾನಸಿಕ ಶಕ್ತಿ ಬೇರೆಬೇರೆಯಾಗಿದ್ದರೂ ನಿಮಗೆ ಆಸಕ್ತಿಯುತವಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿಂಜರಿಕೆ ಬೇಡ ಎಂದರು.ಕ್ರೀಡೆಯು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದರೆ ಸಾಂಸ್ಕøತಿಕ ಚಟುವಟಿಕೆಗಳು ಮಾನಸಿಕ ಬೆಳವಣಿಗೆಗೆ,ಮನಸ್ಸಿನ ಉಲ್ಲಾಸಕ್ಕೆ ಕಾರಣವಾಗುತ್ತವೆ ಎಂದರಲ್ಲದೇ ಇಲ್ಲಿ ವಿಜೇತರಾದವರು ಮುಂದಿನ ಹಂತಗಳಲ್ಲೂ ಯಶಸ್ಸು ಗಳಿಸಿ ಎಂದು ಆಶಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಕೆ.ಸಿದ್ದಲಿಂಗು ಮಾತನಾಡಿ ವಿದ್ಯಾರ್ಥಿಗಳು ಸೋಲು ಗೆಲುವುಗಳಿಗೆ ಮಾನ್ಯತೆ ನೀಡದೆ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
     ಮಂಡ್ಯ ತಾಲೂಕಿನ ವಿವಿಧ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರಸಪ್ರಶ್ನೆ,ಭಾವಗೀತೆ,ಜನಪದಗೀತೆ,ಪ್ರಬಂಧಸ್ಪರ್ಧೆ,ಚರ್ಚಾಸ್ಪರ್ಧೆ,ಏಕಪಾತ್ರಾಭಿನಯ,ವಿಜ್ಞಾನ ಉಪನ್ಯಾಸ,ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆರಿಸಲಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ಕೃಷ್ಣೇಗೌಡ,ಹೊಳಲು ಶ್ರೀಧರ್,ನಾಗೇಶ್,ಶ್ರೀನಿವಾಸ್ ಬಹುಮಾನ ವಿತರಿಸಿದರು.
    ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಪ್ರಭು ಆಲ್ಸೋನ್,ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ.ಕೃಷ್ಣ,ಪ್ರಾಂಶುಪಾಲರುಗಳಾದ ಶಿವರಾಮು,ಶ್ರೀನಿವಾಸ್, ಲೋಕಪ್ರಕಾಶ್ ನಾರಾಯಣ್,ಉಪನ್ಯಾಸಕರುಗಳಾದ ಕೆ.ಎಲ್.ರಮೇಶ್,ನಾಗೇಶ್,ಸಾಂಸ್ಕøತಿಕ ಕಾರ್ಯದರ್ಶಿ ಬಸವೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟಕ್ಕೆ ಬಸರಾಳು ವಿದ್ಯಾರ್ಥಿಗಳು: ಪ್ರಥಮ ಪಿಯುಸಿ ವಿಭಾಗದಿಂದ ಪೂರ್ಣಶ್ರೀ(ವಿಜ್ಞಾನ ಉಪನ್ಯಾಸ),ತೇಜಸ್ವಿನಿ.ಬಿ.ಎಲ್(ಚರ್ಚಾಸ್ಪರ್ಧೆ),ದ್ವಿತೀಯ ಪಿಯುಸಿ ವಿಭಾಗದಿಂದ ಸಿಂಚನ.ಎಚ್.ಎಂ. (ವಿಜ್ಞಾನ ಉಪನ್ಯಾಸ),ಕವನ ಹೆಚ್.ಬಿ(ಪ್ರಬಂಧ ಸ್ಪರ್ಧೆ),ಸುಷ್ಮಿತ.ಹೆಚ್.ಎಸ್.(ಏಕಪಾತ್ರಾಭಿನಯ)ಆಯ್ಕೆಯಾಗಿದ್ದಾರೆ.

No comments:

Post a Comment