Monday 16 November 2015

ಎಂ.ಎನ್. ಕಿರಣ್     ಮೈಸೂರು
ಟಿಪ್ಪು ಜಯಂತಿ ವಿರೋಧಿಸಿದವರು  ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿ ವಿರೋಧಿಸುತ್ತಾರೆ?
 ಮೈಸೂರು,ನ.14- ಇಂದು ಟಿಪ್ಪು ಜಯಂತಿ ವಿರೋಧಿಸುವವರು ನಾಳೆ ದಿನ ಅಂಬೇಡ್ಕರ್ ಜಯಂತಿಯನ್ನು ವಿರೋಧಿಸುವುದಿಲ್ಲ ಎಂಬುದಕ್ಕೆ ಯಾವ ಆಧಾರಗಳಿವೆ. ಅಂಬೇಡ್ಕರ್ ಅವರು ಕೂಡ, ಪುರೋಹಿತಶಾಷಿ ಪ್ರಾಬಲ್ಯದ ಹಿಂದುತ್ವವನ್ನು ವಿರೋಧಿಸಿದವರಾಗಿದ್ದು, ಶೋಷಿತ ಸªಮುದಾಯಗಳಿಗೆ ಸಮಾನತೆ ಸಿಗದಿದ್ದಾಗ, ಅನಿವಾರ್ಯವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮ್ಮೊಂದಿಗೆ ಲಕ್ಷಾಂತರ ಮಂದಿ ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿ ಮುಕ್ತಿ ಮಾರ್ಗ ಕಲ್ಪಿಸಿದರು. ಇಂತಹಾ ನಡವಳಿಕೆಯ ವಿರುದ್ಧ ತೀರ್ವ ವಿರೋಧ ವ್ಯಕ್ತಪಡಿಸಿದ್ದ ಪುರೋಹಿತಶಾಹಿಗಳು, ಹಿಂದುಪರ ಸಂಘಟನೆಗಳನ್ನು ಅಂಬೇಡ್ಕರ್ ಅವರನ್ನು ಮತಾಂದ ಎಂದು ಹೇಳುವರೇ…? ಅವರ ಜಯಂತಿ ಆಚರಣೆಯನ್ನು ವಿರೋಧಿಸುತ್ತಾರೆಯೇ…?
ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ ಹಿಂದು ಪರ ಸಂಘಟನೆಗಳು ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನರ ಜಯಂತಿ ಆಚರಣೆÉಗೆ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಶಾಂತಿ ಭಂಗ ಉಂಟುಮಾಡುತತಿದ್ದಾರೆ.
 ಟಿಪ್ಪುಸುಲ್ತಾನ್ ಒಬ್ಬ ಈ ನಾಡುಕಂಡ ಅಪ್ರತಿಮ ವೀರ, ಕಾವೇರಿಯಿಂದ ಗೋದಾವರಿ ವರೆಗೆ ರಾಜ್ಯವನ್ನು ವಿಸ್ತರಿಸಿ ವಿಶಾಲ ಕರ್ನಾಟಕವನ್ನಾಗಿ ಮಾಡಿದ ಏಕೈಕ ದೊರೆ, ವ್ಯಾಪಾರಕ್ಕಾಗಿ ನಮ್ಮದೇಶಕ್ಕೆ ಬಂದ ಬ್ರಿಟೀಷರು ಹಂತ ಹಂತವಾಗಿ ನಮ್ಮ ದೇಶವನ್ನು ತಮ್ಮ ಸ್ವಾಧೀನಕ್ಕೆ ವಶಪಡಿಸಿಕೊಳ್ಳುತ್ತಾ ಇಡೀ ದೇಶವನ್ನೇ  ಅತಿಕ್ರಮಿಸಿಕೊಳ್ಳುತ್ತಿದ್ದಾಗ ಆಗ ಇದ್ದಂತಹ ರಾಜ ಮಹಾರಾಜರುಗಳು ಅದನ್ನು ತಡೆಯಲು ಮುಂದಾಗಲಿಲ್ಲ,
ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ರಾಜ್ಯ ಉಳಿಸಿಕೊಳ್ಳುವ ಸಾಹಸ ಮಾಡಲಿಲ್ಲ, ಯಾವೊಬ್ಬ ಮಹಾರಾಜರಾಗಲೀ, ಸಾಮಂತ ರಾಜರುಗಳಾಗಲೀ ಬ್ರಿಟೀಷರನ್ನು ಎದುರಿಸಿ ಹೋರಾಡಲು ಮುಂದೆ ಬರಲಿಲ್ಲ, ಆದರೆ ದೇಶಾಭಿಮಾನಿ ಮೈಸೂರಿನ ಹುಲಿ ಎಂದೇ ಖ್ಯಾತಿಯಾಗಿರುವ ಟಿಪ್ಪುಸುಲ್ತಾನ್ ಕೆಚ್ಚೆದೆಯಿಂದ ತಾನು ಕಟ್ಟಿದ ನಾಡನ್ನು ಉಳಿಸಿಕೊಳ್ಳುವ ಮುಖ್ಯವಾಗಿ ದೇಶವನ್ನು ಬ್ರಿಟೀಷರಿಗೆ ಬಿಟ್ಟುಕೊಡಬಾರದೆಂದು ತನ್ನ ಸೈನ್ಯ ಕಟ್ಟಿಕೊಂಡು  ಏಕಾಂಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ನಿಂತ ಮೊದಲ ವೀರದೊರೆ ಎನಿಸಿಕೊಂಡಿರುವುದು ಚರಿತ್ರೆಯಲ್ಲಿ ರುಜುವಾತಾಗಿದೆ. ಹಲವಾರು ಭಾರಿ  ಯುದ್ಧಮಾಡಿ ಬ್ರಿಟೀಷÀರನ್ನು ಎದುರಿಸಿ ಅವರಿಗೆ ಸಿಂಹಸ್ವಪ್ನವಾಗಿದ್ದ, ಬ್ರಿಟೀಷರೂ ಕೂಡ ಯಾವುದೇ ರಾಜರುಗಳಿಗೆ ಹೆದರದೇ ಇದ್ದರೂ, ಟಿಪ್ಪುವಿಗೆ ಮಾತ್ರ ಹೆದರುತ್ತಿದ್ದರು, ಅಂದ ಮೇಲೆ ಟಿಪ್ಪುವಿನಿಂದ ಅವರಿಗೆ ಭಯ ಇತ್ತು, ಆದ್ದರಿಂದಲೇ ಬ್ರಿಟೀಷರು ಟಿಪ್ಪುವನ್ನು ಸ್ವತಃ ಎದುರಿಸಲಾಗದೇ,  ಸಾಮಂತ ರಾಜರುಗಳೊಂದಿಗೆ ಒಳಸಂಚು ನಡೆಸಿ ಅವರನ್ನು ಎತ್ತಿಕಟ್ಟಿ ಟಿಪ್ಪುವಿನ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಯುದ್ಧ ಮಡಿಸುತ್ತಿದ್ದರು. ಸಾಮಂತ ರಾಜರುಗಳ ಸಹಕಾರೊಂದಿಗೆ ಟಿಪ್ಪು ಸೈನ್ಯದ ಜೊತೆ ಯುದ್ಧಮಾಡಿ ಶ್ರೀರಂಗಪಟ್ಟಣದ ಯುದ್ಧ ಭೂಮಿಯಲ್ಲಿ ಕೊಲ್ಲಿಸುವ ಮೂಲಕ ಟಿಪ್ಪು ವೀರಮರಣ ಹೊಂದುವಂತೆ ಮಾಡಿದರು. ಇಲ್ಲಿ ತಿಳಿದು ತಿಳಿದುಕೊಳ್ಳಬೇಕಾದ ಒಂದು ವಿಷಯವಿದೆ ಟಿಪ್ಪು ಸತ್ತಿದ್ದು ಬ್ರಿಟೀಷರ ಬಂದೂಕಿನಿಂದಲೋ ಅಥವಾ ಅವರ ಕತ್ತಿಯಿಂದಲೋ ಅಲ್ಲ, ಟಿಪ್ಪುವಿನ ಆತ್ಮೀಯನೂ ರಾಜ ತಾಂತ್ರಿಕನೂ ಆಗಿದ್ದ, ಟಿಪ್ಪುವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದ್ದ ಆತನ ಹಿಂಬಾಲಕ ಮೀರ್‍ಸಾಕ್ ಎಂಬ ಕುಚೋದ್ಯನಿಂದ ಟಿಪ್ಪು ಸಾಯಬೇಕಾಯಿತು.
 ಟಿಪ್ಪುವಿನ ಮುಂದಾಳತ್ವದಲ್ಲಿ ಸಾವಿರಾರು ಮಂದಿ ಸೈನಿಕರು ಯುದ್ಧ ಮಾಡುತ್ತಿದ್ದಾಗ ದೊರೆ ಟಿಪ್ಪು ತನ್ನ ಖಡ್ಗ ಹಿಡಿದು ವೀರಾವೇಶದಿಂದ ಬ್ರಿಟೀಷ್ ಸೈನಿಕರ ರುಂಡ ಚೆಂಡಾಡುತ್ತಿದ್ದಾಗ ಟಿಪ್ಪುವಿನ  ಅಂಗರಕ್ಷಕನಾಗಿದ್ದ ಮೀರ್‍ಸಾದಿಕ್ ಬ್ರಿಟೀಷರ ಕುತಂತ್ರದ ಮಾತಿಗೆ ಮರುಳಾಗಿ ಹಿಂಬದಿಯಿಂದ ವೀರಯೋಧ ಟಿಪ್ಪುಸುಲ್ತಾನರನ್ನು ಕೊಂದನು. ಬ್ರಟೀಷರಿಂದಲೂ ಟಿಪ್ಪುವನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆಗ ಟಿಪ್ಪು ತನ್ನರಾಜ್ಯದ ಪ್ರಜೆಯಿಂದಲೇ ಹತರಾದರೇ ಹೊರತು ಬ್ರಿಟೀಷರಿಂದಲ್ಲ ಸಾಯುವ ಮುನ್ನ ಇದನ್ನರಿತ ಟಿಪ್ಪು ಸಂತೋಷದಿಂದಲೇ ಪ್ರಾಣಬಿಟ್ಟಿದ್ದಾರೆ ಎನ್ನುವುದು ಸತ್ಯ.
 ಟಿಪ್ಪು ತನ್ನ ನಾಡಿಗಾಗಿ, ಕನ್ನಡ ಮಣ್ಣಿಗಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಹಿಂದು, ಕ್ರೈಸ್ತ, ಪಾರ್ಶಿ, ಮುಂತಾದ ಧರ್ಮಗಳ ಉದ್ದಾರಕ್ಕಾಗಿ ಪ್ರಶಸ್ಯ್ತ ನೀಡಿದ್ದಾರೆ, ಹಿಂದು ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಹಲವಾರು ದೇವಸ್ಥಾನಗಳಿಗೆ ಚಿನ್ನ, ವಜ್ರಾಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ದೇಶದ ಉಳಿವಿಗಾಗಿ  ತನ್ನ ಇಬ್ಬರು ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಟ್ಟ ಮಹಾನ್ ದೊರೆಯಾಗಿದ್ದಾರೆ, ಇವರ ಅಮರ ದೇಶಪ್ರೇಮವನ್ನು ಬ್ರಿಟಿಷರೇ ಒಮ್ಮೆ ಹೊಗಳಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ.
ಇದನ್ನರಿಯದ ಕೆಲವರು ಟಿಪ್ಪು ಒಬ್ಬ ಮತಾಂದ, ಹಿಂದು ವಿರೋಧಿ, ಸಾವೀರಾರು ಜನರ ಹತ್ಯೆ ಮಾಡಿಸಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
 ಟಿಪ್ಪು ಯಾರನ್ನು ಕೊಲ್ಲಿಸಿದ್ದ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಟಿಪ್ಪುವಿನ ಆಸ್ತಾನದಲ್ಲಿ ಇದ್ದುಕೊಂಡು ಟಿಪ್ಪುವಿನ ಚಲನವಲನಗಳ ಬಗ್ಗೆ ಬ್ರಿಟೀಷರಿಗೆ  ಮಾಹಿತಿ ನೀಡುತ್ತಾ ಉಂಡಮನೆಗೆ ಎರಡು ಬಗೆಯುತ್ತಿದ್ದ ದೇಶದ್ರೋಹಿಗಳನ್ನು ಕೊಲ್ಲಿಸುತ್ತಿದ್ದ, ಇದನ್ನು ಎಲ್ಲಾ ರಾಜರುಗಳು ಮಾಡುತ್ತಿದ್ದರು, ಮತಾಂತರ ವಿಷಯಕ್ಕೆ ಬಂದರೆ ತನ್ನ ರಾಜ್ಯದಲ್ಲೇ ಇದ್ದುಕೊಂಡು ತನ್ನ ವಿರುದ್ಧವೇ ಸಂಚು ರೂಪಿಸುತ್ತಿದ್ದವರನ್ನು ಕೊಲ್ಲುವುದು ಬೇಡ ಎಂದು ಅವರನ್ನು ಮತಾಂತರ ಮಾಡಿ ಜೀವಧಾನ ನಿಡುತ್ತಿದ್ದ, ಟಿಪ್ಪು ಎಲ್ಲಾ ಧರ್ಮವÀನ್ನು  ಪ್ರೀತಿಸುತ್ತಾ ಸಮನಾಗಿ ಕಾಣುತ್ತಿದ್ದ ಎಂದು ದಾಕಲಾತಿಗಳು ಹೇಳುತ್ತವೆ.
 ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಹಿಂದುಪರ ಸಂಘಟನೆಗಳು ಮುಂದೊದು ದಿನ ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಜಯಂತಿನ್ನು ವಿರೋಧಿಸು ಎಂಬುದರಲ್ಲಿ ಯಾವುದೇ ಶಂಸಯವಿಲ್ಲ, ಟಿಪ್ಪುವಿನ ಚರಿತ್ರೆಯನ್ನೇ ತಿರುಚಿ ಇಲ್ಲ ಸಲ್ಲದನ್ನು ಹೇಳುತ್ತಿರುವ  ಇವರು ಮುಂದಿನ ಪೀಳಿಗೆಗೆ ಅಂಬೇಡ್ಕರ್‍ರವರ ಚರಿತ್ರೆಯನ್ನು ತಿರುಚಿ ಹೇಳುವುದಿಲ್ಲ ಎಂಬುರಲ್ಲಿ ಯಾವ ಅನುಮಾನವೂ ಇಲ್ಲ,
ಹಿಂದು ವಿರೋಧಿ ಎಂದು ಟಿಪ್ಪುವನ್ನು ಧೂಶಿಸುವವರು ನಾಳೆ ಅಂಬೇಡ್ಕರ್‍ರನ್ನು ಧೂಶಿಸುತ್ತಾರೆ, ಕಾರಣ ಅಂಬೆಡ್ಕರ್‍ರವರೂ ಹಿಂದುತ್ವವನ್ನು ವಿರೋಧಿಸುತ್ತಿದ್ದರು, ದೇವರ ಪೂಜೆ, ಮೂರ್ತಿ ಪೂಜೆಗಳನ್ನು ಸಹಿಸುತ್ತಿರಲಿಲ್ಲ, ಅಂಬೇಡ್ಕರ್ ತಾವು ಬೌದ್ಧಧರ್ಮಕ್ಕೆ ಮಂತಾರ ಗೊಂಡಾಗ ತಮ್ಮೊಂದಿಗೆ ಲಕ್ಷಾಂತರ ಮಂದಿಯನ್ನು ಮತಾಂತರಗೊಳಿಸಿದ್ದಾರೆ, ಹಾಗೆ ನೋಡುವುದಾದರೇ ಅಂಬೇಡ್ಕರ್ ಮತಾಂದರು ಎಂಬ ಪ್ರಶ್ನೆ  ಅವರಲ್ಲಿ ಮೂಡದೇ ಇರದು, ಹಿಂದುಪರ ಸಂಘನೆಗಳು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಮುಂದಿನ ಪೀಳಿಗೆಯ ಮನಸನ್ನು ಕೆಡಿಸಿ ಅವರುಗಳಿಂದಲೇ ಅಂಬೇಡ್ಕರ್ ಜಯಂತಿ ಆಚರಣೆ ವಿರೋಧಿಸುವಂತೆ ಮಾಡಿಸದೇ ಇರಲಾರರು. ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.
 ಆದ್ದರಿಂದ ಸಾರ್ವಜನಿಕರು ಈಗಲೇ ಎಚ್ಚೆತುಕೊಂಡು ಈ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ.
 ಮಹಾನೀಯರುಗಳ ಜಯಂತಿ ಆಚರಣೆ ಈಗ ಜಾತಿಗೊಂದು ಜಯಂತಿಯಾಗಿ ಮಾರ್ಪಾಡಾಗಿದೆ, ಇದರಿಂದ ಜಾತಿ ಧರ್ಮಗಳ ನಡುವೆ ಕಂದಕಗಳು ಸುರುವಾಗಿವೆ, ಒಂದುಕಾಲದಲ್ಲಿ ಜಾತಿಯನ್ನು ಹೋಗಲಾಡಿಸಿ ಎಲ್ಲನ್ನೂ ಒಗ್ಗೂಡಿಸುವ ಪ್ರಯತ್ನಗಳು ನಡೆದವು, ಅದು ಕೆಲಮಟ್ಟಿಗೆ ಯಶಸ್ವಿಯಾಯಿತ್ತು, ಆದರೆ ಈಗ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮ್ಮ ಮಹಾನಿಯರ ಜಯಂತಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.
 ಸರ್ಕಾರವೂ ಈ ನಿಟ್ಟಿನಲ್ಲಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ, ನಮ್ಮ ರಾಜ್ಯದಲ್ಲಿ ಮಹನೀಯರ ಜಯಂತಿಗಳಿಗಾಗಿ ನೀಡಿರುವ ರಜಾದಿನಗಳು ಹೇರಳವಾಗಿದ್ದು, ಇದರಿಂದಾಗಿ ಸಾರ್ವಜನಿಕ ಹಾಗೂ ಕಚೇರಿಯ ಕೆಲಸ ಕಾರ್ಯಗಳು ನಡೆಯದೇ ಅಭಿವೃದ್ಧಿಕಾರ್ಯಗಳು ಕುಂಟಿತಗೊಳ್ಳುತ್ತಿವೆ, ಜನರೂ ಸೋಮಾರಿಗಳಾಗುತ್ತಾರೆ. ಆದ್ದರಿಂದ ಸರ್ಕಾರ ಈ ಎಲ್ಲಾ ಜಯಂತಿಯ ರಜೆಗಳನ್ನು ರದ್ದುಮಾಡಿ,  ಆಯಾ ಜಯಂತಿ ದಿನಗಳಂದು, ಎಲ್ಲಾ ಕಚೇರಿಗಳಲ್ಲೂ ಮಹಾನಿಯರುಗಳ ಭಾವÀಚಿತ್ರವಿಟ್ಟು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಬೇಕು ಮತ್ತು ಆ ಮಹನೀಯರ ಹೆಸರಿನಲ್ಲಿ ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಬೇಕು, ಆಗಮಾತ್ರ ಅವರುಗಳ ಸ್ಮರಣೆ ಮಾಡಿದಂತಾಗಿ ಅವರುಗಳ ಆತ್ಮಕ್ಕೂ ಶಾಂತಿ ಲಭಿಸುತ್ತದೆ, ಅವರುಗಳ ಜನ್ಮದಿನಾಚರಣೆ ಸಾರ್ಥಕತೆಯಾಗುತ್ತದೆ. ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಎಲ್ಲಾ ಮಹಾನಿಯರ ಜಯಂತಿ ರಜೆಗಳ ರದ್ದತಿಗೆ ಒತ್ತಾಯಿಸಿ ಸಹಕರಿಸಬೇಕಾಗಿದೆ.
                                 

No comments:

Post a Comment