Friday 25 July 2014

ನಿಗಧಿತ ದರದಲ್ಲೇ ಸಿಲಿಂಡರ್ ಪೂರೈಸಿ- ಕೆ.ರಾಮೇಶ್ವರಪ್ಪ

ನಿಗಧಿತ ದರದಲ್ಲೇ ಸಿಲಿಂಡರ್ ಪೂರೈಸಿ ಕೆ.ರಾಮೇಶ್ವರಪ್ಪ
    ಮೈಸೂರು,ಜು.25.ಜಿಲ್ಲೆಯಲ್ಲಿನ ಎಲ್.ಪಿ.ಜಿ. ಡೀಲರ್‍ಗಳು ಸಬ್ ಏಜೆನ್ಸಿಗಳನ್ನು ಹೊಂದಿದಲ್ಲಿ ಕೂಡಲೇ ಅವುಗಳನ್ನು ಕೊನೆಗೊಳಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಡಾ| ಕೆ.ರಾಮೇಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಎಲ್.ಪಿ.ಜಿ. ಡೀಲರ್‍ಗಳ ಸಭೆ ನಡೆಸಿದ ಅವರು ಕೆಲವು ಏಜೆನ್ಸಿಗಳು ಸಬ್ ಏಜೆನ್ಸಿ ನೇಮಿಸಿಕೊಂಡು ಅವರ ಮೂಲಕವೂ ವ್ಯವಹಾರ ನಡೆಸುತ್ತಿರುವ ದೂರುಗಳು ಇವೆ. ಇಂತಹ ಪ್ರಕರಣ ಪತ್ತೆಯಾದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
   ಕಾನೂನು ಬದ್ದವಾಗಿ ಅನುಮತಿ ಪಡೆದ ಸ್ಥಳದಿಂದಲೇ ವ್ಯವಹಾರ ನಡೆಸಬೇಕು. ಅನಧಿಕೃತವಾಗಿ ವ್ಯವಹಾರ ನಡೆಸುವುದನ್ನು ನಿಲ್ಲಿಸಿ ಎಂದು ಡಾ. ರಾಮೇಶ್ವರಪ್ಪ ಹೇಳಿದರು.
   ಏಜೆನ್ಸಿಗಳು ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಸಿಲಿಂಡರ್‍ಗಳನ್ನು ಪೂರೈಸಬೇಕು ಹಾಗೂ ನಿಗಧಿಪಡಿಸಿದ ದರವನ್ನೇ ಪಡೆಯಬೇಕು. 5 ಕಿ.ಮೀ.ಗಿಂತ ಹೆಚ್ಚಿನ ದೂರವಿದ್ದಲ್ಲಿ, ಪ್ರತಿ ಕಿ.ಮೀ. ದರವನ್ನು ನಿಗಧಿಪಡಿಸಿದ್ದು ಅದರಂತೆಯೇ ಹಣ ಪಡೆಯಬೇಕು ಎಂದು ಅವರು ಸೂಚನೆ ನೀಡಿದರು.
   ಈ ಬಗ್ಗೆ ಪ್ರತಿಕ್ರಿಯಿಸಿದ ಎಲ್.ಪಿ.ಜಿ. ಏಜೆಂಟರೊಬ್ಬರು, ಇಲಾಖೆಯಿಂದ ಈ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಗ್ರಾಹಕರು ನಿಗಧಿಗಿಂತ ಹೆಚ್ಚಿನ ಹಣ ನೀಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
   ಎಲ್ಲಾ ಎಲ್.ಪಿ.ಜಿ. ಏಜೆಂಟರು ತಮ್ಮ ಅಧಿಕೃತ  ಸಂಗ್ರಹಾಗಾರಗಳು ಎಲ್ಲಿವೆ ಎಂಬುದರ ಮಾಹಿತಿ ನೀಡಬೇಕು ಹಾಗೂ ಅಂತಹ ಸ್ಥಳಗಳಿಂದಲೇ ಕಾರ್ಯಾಚರಣೆ ನಡೆಸಬೇಕು ಎಂದು ರಾಮೇಶ್ವರಪ್ಪ ಸೂಚಿಸಿದರು.
   ಬಿಲ್‍ಗಳಲ್ಲಿ ಎಸ್.ಆರ್. ಸಂಖ್ಯೆ ಕಡ್ಡಾಯವಾಗಿ ಇರಬೇಕು. ಏಜೆನ್ಸಿಗಳ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನಿಗಧಿತ ಸಮಯದಲ್ಲಿ ಸಲ್ಲಿಸಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
   ಎಲ್.ಪಿ.ಜಿ ಹೊಸ ಸಂಪರ್ಕವನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಹೆಚ್ಚುವರಿ ಸಿಲೆಂಡರ್ ಸರಬರಜು ಕುರಿತಂತೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಏಜೆನ್ಸಿಯವರು ಸಭೆಗೆ ಮಾಹಿತಿ ನೀಡಿದರು.
 ಹೆಚ್.ಪಿ.ಸಿ.ಎಲ್. ಸೇಲ್ಸ್ ಮಾನ್ಯೇಜರ್ ಮಂಜುನಾಥ, ಐ.ಓ.ಸಿ. ಸೇಲ್ಸ್ ಮಾನ್ಯೇಜರ್ ಬೇಬಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ರಾಮು ಸೇರಿದಂತೆ ವಿವಿಧ ಡೀಲರ್‍ಗಳು ಸಭೆಯಲ್ಲಿ ಭಾಗವಹಿಸಿದ್ದರು.
                                                               
  
ಮಹಿಳೆಯರ ಉಳಿತಾಯ 103 ಕೋಟಿ ರೂ
       ಮೈಸೂರು,ಜು.25.ಮೈಸೂರು ಜಿಲ್ಲೆಯ ಸ್ತ್ರೀ ಶಕ್ತಿ  ಸಂಘಗಳ ಸದಸ್ಯರ ಉಳಿತಾಯದ ಹಣ 103 ಕೋಟಿ ರೂ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎನ್.ಆರ್ ವಿಜಯ್ ಅವರು ಸ್ತ್ರೀಶಕ್ತಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ನೀಡಿದ ಮಾಹಿತಿ ಇದು. ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೊಪಾಲ್.
     ಜಿಲ್ಲೆಯಲ್ಲಿ 6602 ಗುಂಪುಗಳು ರಚನೆಯಾಗಿದ್ದು, 1,03,000 ಸದಸ್ಯರಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕು ಒಕ್ಕೂಟ ರಚನೆಯಾಗಿದೆ ಎಂದು ವಿಜಯ್ ಹೇಳಿದರು.
ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸದಸ್ಯರ ಉಳಿತಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೊಪಾಲ್ ಅವರು ಸ್ತ್ರಿ ಶಕ್ತಿ ಸಂಘಗಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಧಾರಿತ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆರೇಪಣೆ ನೀಡಬೇಕು ಎಂದರು.
     ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ 688 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 53.33 ಲಕ್ಷ ರೂ ಕೆ.ಆರ್.ನಗರ ತಾಲ್ಲೂಕಿನಲ್ಲಿ 994 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 9.67 ಲಕ್ಷ ರೂ ನಂಜನಗೂಡು ತಾಲ್ಲೂಕಿನಲ್ಲಿ 637 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 4.93 ಲಕ್ಷ ರೂ ಹುಣಸೂರು ತಾಲ್ಲೂಕಿನಲ್ಲಿ 895 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 8.17 ಲಕ್ಷ ರೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 725 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 4.99 ಲಕ್ಷ ರೂ ತಿ.ನರಸಿಪುರ ತಾಲ್ಲೂಕಿನಲ್ಲಿ 943 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 6.16 ಲಕ್ಷ ರೂ ಮೈಸೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ 967 ಗುಂಪುಗಳು ರಚನೆಯಾಗಿದ್ದು 10.70 ಲಕ್ಷ ರೂ ಹಾಗೂ  ಬಿಳಿಕೆರೆ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ 753 ಗುಂಪುಗಳು ರಚನೆಯಾಗಿದ್ದು 5.49 ಲಕ್ಷ ರೂ ಉಳಿತಾಯ ಮಾಡುತ್ತಾರೆ ಎಂದು ವಿಜಯ್ ಅವರು ಸಭೆಗೆ ಮಾಹಿತಿ ನೀಡಿದರು. 
ಸೇನಾ ನೇಮಕಾತಿ ರ್ಯಾಲಿ
 ಮೈಸೂರು,ಜು.25-ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಸದೃಢ ಯುವಕ ಅಭ್ಯರ್ಥಿಗಳಿಗೆ ಮಂಗಳೂರು ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ  ಅಳ್ವಾಸ್ ಏಜುಕೇಷನ್ ಫೌಂಡೇಶನ್ ಗ್ರೌಂಡ್ಸ್ ಇಲ್ಲಿ ದಿನಾಂಕ  05-08-2014 ರಿಂದ 12-08-2014ರವರೆಗೆ ನೇಮಕಾತಿ ರ್ಯಾಲಿ ನಡೆಸಲಿದೆ.
ದಿನಾಂಕ 04-08-2014ರಂದು ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ, 09-08-2014ರಂದು ಸೋಲ್ಜರ್ ಟ್ರೇಡ್ಸ್‍ಮನ್ ಹುದ್ದೆಗೆ ಹಾಗೂ 11-08-2014ರಂದು ಸೋಲ್ಜರ್ ಜಿ.ಡಿ., ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ ಮಧ್ಯಾಹ್ನ 1 ಗಂಟೆಯಿಂದ  ಟೋಕನ್‍ಗಳನ್ನು ನೀಡಲಾಗುತ್ತದೆ.
ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ: 17ಳಿ ರಿಂದ 23 ವರ್ಷದೊಳಗಿನ (05-08-1991 ರಿಂದ 05-02-1997ರೊಳಗೆ ಜನಿಸಿರಬೇಕು) ದ್ವಿತೀಯ ಪಿಯುಸಿಯಲ್ಲಿ ಶೇ. 50 ಅಂಕಗಳಿಸಿ ಉತ್ತೀರ್ಣರಾಗಿರಬೇಕು ಹಾಗೂ  ಪಿಯುಸಿ/ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಶೇ. 40 ಅಂಕಗಳಿಸಿ ಪಾಸಾದ ಅಭ್ಯರ್ಥಿಗಳು.


ಸೋಲ್ಜರ್ ಟ್ರೇಡ್ಸ್‍ಮನ್ ಹುದ್ದೆಗೆ ವಯೋಮಿತಿ 17ಳಿ ರಿಂದ 23 (05-08-1991 ರಿಂದ 05-02-1997) ವರ್ಷದೊಳಗಿರಬೇಕು ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ/ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದರೆ ಸಾಕು.

ಸೋಲ್ಜರ್ ಟೆಕ್ನಿಕಲ್  ಹುದ್ದೆಗೆ ವಯೋಮಿತಿ 17ಳಿ ರಿಂದ 23 (03-08-1991 ರಿಂದ 03-02-1997) ವರ್ಷದೊಳಗಿನ, ಪಿಯುಸಿಯ ವಿe್ಞÁನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಅಭ್ಯಾಸ ಮಾಡಿ ಪಾಸಾಗಿರಬೇಕು.

 ಸೋಲ್ಜರ್ ಜಿ ಹುದ್ದೆಗೆ ವಯೋಮಿತಿ 17ಳಿ ರಿಂದ 21 (05-08-1993 ರಿಂದ 05-02-1997) ವರ್ಷದೊಳಗಿನ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 45 ಅಂಕದೊಂದಿಗೆ ಕನಿಷ್ಟ 33% ಪ್ರತಿ ವಿಷಯದಲ್ಲಿ ಪಾಸಾದ ಅಭ್ಯರ್ಥಿಗಳು ರ್ಯಾಲಿಗೆ ಹಾಜರಾಗಬಹುದು.
ಮೂಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಮೇಲ್ಪಟ್ಟ ತರಗತಿಗಳ ಅಂಕಪಟ್ಟಿ, ತಮ್ಮ ಇತ್ತೀಚಿನ 15 ಬಣ್ಣದ ಭಾವಚಿತ್ರಗಳು, ತಹಸೀಲ್ದಾರ್/ಜಿಲ್ಲಾಧಿಕಾರಿಗಳಿಂದ ದೃಢೀಕರಿಸಿದ ಹತ್ತು ವರ್ಷದಿಂದ ಮೂಲ ನಿವಾಸಿಯಾಗಿರುವ ಬಗ್ಗೆ ಮತ್ತು ಜಾತಿ ಪ್ರಮಾಣ ಪತ್ರ, ಪೊಲೀಸ್ ಅಧಿಕಾರಿಯಿಂದ 6 ತಿಂಗಳೊಳಗೆ ಪಡೆದ ನಡೆವಳಿಕೆ ಪ್ರಮಾಣ ಪತ್ರ, ಮಾಜಿ ಸೈನಿಕ/ಸೈನಿಕ/ಯುದ್ಧ ವಿಧವೆಯರ ಮಕ್ಕಳು ರೆಕಾಡ್ರ್ಸ್‍ನಿಂದ ಪಡೆದ ಅವರ ಸಂಬಂಧ ಧೃಢೀಕರಿಸುವ ಪ್ರಮಾಣ ಪತ್ರ ಹಾಗೂ ಮೂಲ ಎನ್‍ಸಿಸಿ ಪ್ರಮಾಣ ಪತ್ರಗಳು.ಎಲ್ಲಾ ದಾಖಲಾತಿಗಳ ಎರಡು ಸೆಟ್ ನೆರಳಚ್ಚು ಪ್ರತಿಗಳನ್ನು ದೈಡಿಕರಿಸಿರಬೇಕು. ರ್ಯಾಲಿಗೆ ಹಾಜರಾದ ಸಂದರ್ಭದಲ್ಲಿ ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ದೂರವಾಣಿ ಸಂಖ್ಯೆ: 0821-2425240 ಇವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

No comments:

Post a Comment