Friday 25 July 2014

sp mandya-ಬಸ್ ಗಳಲ್ಲಿ ಮಹಿಳೆಯರಿಗೆ ಹತ್ತಲು ಇಳಿಯಲು ಮುಂಬಾಗಿಲು-ಎಸ್.ಪಿ.ಭೂಷಣ್ ಜಿ ಬೋರಸೆ.

ಮಹಿಳೆಯರಿಗೆ ಮುಂಬಾಗಿಲು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ
    ಸಾರ್ವಜನಿಕ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು ಎರಡು ಬಾಗಿಲು ಇರುವ ಬಸ್‍ಗಳಲ್ಲಿ ಮುಂದಿನ ಬಾಗಿಲ ಮೂಲಕ ಮಹಿಳಾ ಪ್ರಯಾಣಿಕರು ಹತ್ತಲು ಹಾಗೂ ಇಳಿಯಲು ಅವಕಾಶ ಕಲ್ಪಿಸಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಭೂಷಣ್ ಜಿ. ಬೊರಸೆ ಅವರು ಮನವಿ ಮಾಡಿದರು.
    ಶುಕ್ರವಾರ ಮಂಡ್ಯ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಾಗಿಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸ್‍ಗಳಲ್ಲಿ ನೂಕು ನುಗ್ಗಲು ಸಂದರ್ಭದಲ್ಲಿ ಆಗುವ ಅನಾನುಕೂಲದ ಪರಿಣಾಮವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹಿಂಜರಿಯುತ್ತಾರೆ ಎಂದು ಹೇಳಿದರು.
    ಮಹಿಳೆಯರ ಸುರಕ್ಷತೆ ಎಲ್ಲರ ಕರ್ತವ್ಯ. ಮಹಿಳೆಯರು, ಹೆಣ್ಣು ಮಕ್ಕಳು ಸುಖಕರವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಮುಂದಿನ ಬಾಗಿಲು ಮಹಿಳೆಯರಿಗೆ ಮೀಸಲು ಇರುವುದರ ಬಗ್ಗೆ ಅರಿವು ಮೂಡಿಸಲು ಎಲ್ಲಾ ಬಸ್‍ಗಳಲ್ಲಿ ಸ್ಟಿಕ್ಕರ್ ಅಂಟಿಸಲಾಯಿತು.
    ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ರಮೇಶ್, ಪೊಲೀಸ್ ಉಪ ಅಧೀಕ್ಷಕರಾದ ಉದೇಶ್ ಅವರು ಉಪಸ್ಥಿತರಿದ್ದರು.

No comments:

Post a Comment