Friday 25 July 2014

ಕೆ.ಆರ್.ಪೇಟೆ.ಪ್ರಮುಖ ಸುದ್ದಿಗಳು.

ಕೆ.ಆರ್.ಪೇಟೆ,ಜು.25,ಕಳೆದ ಒಂದು ವರ್ಷದ ಹಿಂದೆ ಅಸ್ಸಾಂ ಗಡಿಯಲ್ಲಿ ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ವೀರ ಮರಣವನ್ನಪ್ಪಿದ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಬಿ.ಎಸ್.ಎಫ್.ವೀರಯೋಧ ಎ.ಜೆ.ಜಯರಾಮೇಗೌಡ ಅವರ ಸ್ಮಾರಕ ಸೇವಾ ಸಮಿತಿ ವತಿಯಿಂದ ಯೋಧನ  ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್‍ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಬೀಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿರಾಯನಹಳ್ಳಿ ಸಿ.ಆರ್.ಸಿ.ಕೇಂದ್ರ ಸಂಪನ್ಮೂಲ ಅಧಿಕಾರಿ ಎ.ಎಂ.ಯೋಗೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಬಿ.ಕುಮಾರ್, ಅಭಿವೃದ್ಧಿ ಅಧಿಕಾರಿ ದೇವೇಗೌಡ, ಯೋಧನ ಸಹೋದರರಾದ ಎ.ಜೆ.ಧನೇಂದ್ರೇಗೌಡ, ಕೆಂಪೇಗೌಡ, ಲೋಕೇಶ್,  ಪುತ್ರಿ ಎ.ಜೆ.ಲಕ್ಷ್ಮೀ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ, ಮುಖಂಡರಾದ ಎಸ್.ಡಿ.ಎಂ.ಸಿ.ಸದಸ್ಯರಾದ ಎ.ಎಸ್.ಶ್ರೀನಿವಾಸ್, ಪರಮೇಶ್, ಬಿ.ವಿ.ಭಗೀರಥ, ನಂಜುಂಡೇಗೌಡ, ಹರೀಶ್, ತೇಜ, ಶಿಕ್ಷಕರಾದ ಚಿಕ್ಕಸ್ವಾಮಿ, ತಮ್ಮಯ್ಯ, ರಾಮಕೃಷ್ಣ, ಚಂದ್ರಕಲಾ, ಶಾಂತಕುಮಾರಿ, ಟಿ.ಜೆ.ವಿಮಲಾ, ಕೆ.ಎಸ್.ರಾಜು, ಮೋದೂರು ಸುರೇಶ್, ರಮೇಶ್, ಪ್ರಶಾಂತ್‍ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

==========================
ಕೆ.ಆರ್.ಪೇಟೆ:ಜು.25,ಪಟ್ಟಣದಲ್ಲಿ ತೊಗಟವೀರ ಕ್ಷತ್ರಿಯ ಸಮಾಜದವರು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವವು ಇಂದು ವೈಭಯುತವಾಗಿ ನಡೆಯಿತು.
ಪಟ್ಟಣದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ತಲೆಯ ಮೇಲೆ ಹೊತ್ತು ನಡೆಮುಡಿಯಲ್ಲಿ ಸಾಗಿದರೆ ದೇವರ ಗುಡ್ಡರು ತಾಯಿ ಚಾಮುಂಡಿಯನ್ನು ಜಾನಪದ ಗಾಯನದೊಂದಿಗೆ ಕರೆ ತರಲಾಯಿತು.  ಕಾರ್ಯಕ್ರಮದಲ್ಲಿ ಜಾನಪದ ಕಲಾಪ್ರಕಾರಗಳಾದ ಪೂಜಾ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ, , ನಂದಿಧ್ವಜ ಕುಣಿತ, ಸೋಮನಕುಣಿತ, ಕೋಲಾಟ, ವೀರಗಾಸೆ ನೃತ್ಯ, ಮುಂತಾದ  ಕಲಾಪ್ರದರ್ಶನಗಳು ಹಬ್ಬಕ್ಕೆ ಮೆರಗು ನೀಡಿ ಸಾರ್ವಜನಿಕರನ್ನು ರಂಜಿಸಿದವು. ಸಿರಿಗೆರೆಯ ಬೃಹನ್ಮಠದ ಆನೆ ಗೌರಿ ತಾಯಿ ಚಾಮುಂಡೃಶ್ವರಿಯ ಉತ್ಸವದ ಮೆರವಣಿಗೆಯಲ್ಲಿ ಸಾಗಿದ್ದು ಈ ಭಾರಿಯ ಕರಗ ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು.
ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದ ಚಿಕ್ಕಬಳ್ಳಾಪುರದ ತಪಸೀಹಳ್ಳಿಯ ನೇಕಾರ ತೊಗಟವೀರ ಗುರುಪೀಠದ ಪೀಠಾಧಿಪತಿ ಜಗದ್ದುರು ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಹಬ್ಬ-ಹರಿದಿನಗಳು, ಉತ್ಸವಗಳು ನಮ್ಮ ಸಂಸ್ಕøತಿಯ ಪ್ರತಿಬಿಂಬವಾಗಿವೆ. ಆಚರಣೆಗಳು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಮೂಡಿಸುವ ಜೊತೆಗೆ ಎಲ್ಲರೂ ಒಂದಾಗಿ ಬದುಕಲು ಸಹಕಾರಿಯಾಗುತ್ತವೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತಾಯಿ ಚಾಮುಂಡಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷ ಹಂಸರಮೇಶ್ ಮತ್ತು ರಾಜಶೇಖರ್ ಕರಗ ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು. ಪ್ರಧಾನ ಅರ್ಚಕರಾದ ನಂಜುಂಡಣ್ಣ ಪೂಜಾ ವಿಧಿ-ವಿಧಾನಗಳ ನಡೆಸಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.

==============================
ಕೆ.ಆರ್.ಪೇಟೆ:ಜು.25,ತಾಲೂಕು ಕೃಷಿ ಇಲಾಖೆ ಹಾಗೂ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಶೀಳನೆರೆ ಹೋಬಳಿಯ ಮಲ್ಕೋನಹಳ್ಳಿ ಹಾಗೂ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ರೈತರಿಗೆ ಸಾವಯವ ಕೃಷಿ ಪದ್ದತಿಯಲ್ಲಿ ಎರೆಹುಳು ಹಾಗೂ ಹಸಿರೆಲೆ ಗೊಬ್ಬರ ತಯಾರಿಕೆ ಕುರಿತ ಪ್ರಾತ್ಯಕ್ಷಿತೆ ಕಾರ್ಯಕ್ರಮ ನಡೆಯಿತು.
ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ತೆಂಡೇಕೆರೆ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಹಾಲೇಶ್ ಭಾಗವಹಿಸಿ ಮಾತನಾಡಿ ಪ್ರಗತಿಪರ ರೈತರು ಕೃಷಿ ಅಭಿವೃದ್ದಿಗಾಗಿ ಸಂಘಟಿತರಾಗಿ ರೈತಕೂಟಗಳನ್ನು ರಚಿಸಿಕೊಳ್ಳಬೇಕೆಂದು ಕರೆ ನೀಡಿದರು. ರೈತಕೂಟಗಳ ರಚನೆಯಾದರೆ ಬ್ಯಾಂಕಿನ ಮೂಲಕ ರೈತರಿಗೆ ಹತ್ತು ಹಲವು ನೆರವು ನೀಡಲು ಹೆಚ್ಚು ಸಹಕಾರಿಯಾಗುತ್ತದೆ ಎಂದ ಹಾಲೇಶ್ ಕೃಷಿ ಪದ್ದತಿಯಲ್ಲಿ ಸಮಗ್ರ ಬದಲಾವಣೆಯಾಗಬೇಕು. ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತರು ಹೊರಬಂದು ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಲಾಭ ಪಡೆದು ಆರ್ಥಿಕ ಪ್ರಗತಿ ಹೊಂದಬೇಕೆಂದರು.
ಎರೆಗೊಬ್ಬರದಿಂದ ಸಿಗುವ ಪೋಷಕಾಂಶಗಳು, ಎರೆ ಗೊಬ್ಬರ ತಯಾರಿಕಾ ಘಟಕಗಳ ನಿರ್ವಹಣೆ ಮತ್ತು ದೇಶಿಯ ತಳಿಗಳ ಬೆಳೆಗಳ ಬಗ್ಗೆ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತಲ್ಲದೆ ಎರಹುಳು ಗೊಬ್ಬರ ತಯಾರಿಕೆ ಮತ್ತು ಸುಧಾರಿತ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ರೈತರಿಗೆ ತರಬೇತಿ ನೀಡಲಾಯಿತು.
ವಿಕಸನ ಸಂಸ್ಥೆಯ ತಾಲೂಕು ಕ್ಷೇತ್ರಾಧಿಕಾರಿ ಎಸ್.ಸುನಿತ ಮಾತನಾಡಿ ಗ್ರಾಮದ ಸರ್ವರೂ ಯೋಜನೆಯ ಲಾಭ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳನ್ನು ಸಂಪೂರ್ಣ ಸಾವಯವ ಗ್ರಾಮವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸಾವಯವ ಗೊಬ್ಬರದ ಬಳಕೆಯಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡಯಬಹುದಲ್ಲದೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಆರೋಗ್ಯಕರ ಉತ್ಪನ್ನವನ್ನು ನಾಡಿನ ಜನರಿಗೆ ನೀಡಬಹುದೆಂದರು.
ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರಸನ್ನ ಆಂಜನೇಯ ಸಾವಯುವ ಕೃಷಿಕರ ಸಂಘದ ಅಧ್ಯಕ್ಷ ಶ್ರೀಕಂಠ ವಹಿಸಿದ್ದರು. ಪ್ರಗತಿಪರ ರೈತ ಶಿವಳ್ಳಿ ಬೋರೇಗೌಡ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಮತ್ತೀಕೆರೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೀಕೆರೆಯ ಶ್ರೀ ಲಕ್ಷ್ಮಿದೇವಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ನಾಗೇಗೌಡ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರೈತ ಸುಬ್ಬೇಗೌಡ ಹಾಗೂ ವಿಕಸನ ಸಂಸ್ಥೆಯ ಕ್ಷೇತ್ರ ಸಹಾಯಕ ಚನ್ನಕೃಷ್ಣ ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.
ಚಿತ್ರಶೀರ್ಷಿಕೆ25ಞಡಿಠಿeಣ-02  ಕೆ.ಆರ್.ಪೇಟೆ: ತಾಲ್ಲೂಕಿನ ಮತ್ತೀಕೆರೆ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ   ರೈತರಿಗೆ ಸಾವಯವ ಕೃಷಿ ನಡೆದ ಸಾವಯವ ಭಾಗ್ಯ ಯೋಜನೆಯ ಕುರಿತು ವಿಕಸನ ಸಂಸ್ಥೆಯ ತಾಲೂಕು ಕ್ಷೇತ್ರಾಧಿಕಾರಿ ಎಸ್.ಸುನಿತ ಮಾತನಾಡಿದರು.
========================
ಕೆ.ಆರ್.ಪೇಟೆ:ಜು.25,ಕಳೆದ 1ವರ್ಷದ ಅವಧಿಯಲ್ಲಿ ಸುಮಾರು 6ಮಂದಿ ತಹಸೀಲ್ದಾರರು ಹೀಗೆ ಬಂದು ಹಾಗೆ ಹೋಗಿದ್ದಾರೆ ಇದಕ್ಕೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.  ಆದ್ದರಿಂದ ತಾಲೂಕಿಗೆ ಖಾಯಂ ತಹಸೀಲ್ದಾರರನ್ನು ನೇಮಕ ಮಾಡುವಂತೆ ಒತ್ತಾಯಿಸಲು ನಾಳೆ(ಜು.26) ತಾಲೂಕಿನ ದಲಿತ ಸಂಘಟನೆಗಳು ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಥೂ ಛೀ ಯಾಗ ಮಾಡುವುದಾಗಿ ದಲಿತ ಸಂಘಟನೆಗಳ ನೇತಾರ ಮಾಜಿ ಜಿ.ಪಂ ಸದಸ್ಯ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಮಾಹಿತಿ ನೀಡಿರುವ ಅವರು ಕಳೆದ ಒಂದು ವರ್ಷದಿಂದ ಕೆ.ಆರ್.ಪೇಟೆಯಲ್ಲಿ ಖಾಯಂ ತಹಸೀಲ್ದಾರರಿಲ್ಲದೆ ಸಾರ್ವಜನಿಕ ಕೆಲಸಗಳಿಗೆ ಹಿನ್ನೆಡೆಯಾಗಿದೆ. ಬಹುತೇಕ ತಹಸೀಲ್ದಾರರು ಹಾಗೆ ಬಂದು ಹೀಗೆ ಹೋಗುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ 6 ಜನ ತಹಸೀಲ್ದಾರರಾಗಿ ಅಧಿಕಾರ ಸ್ವೀಕರಿಸಿ ವರ್ಗಾವಣೆಗೊಂಡಿದ್ದಾರೆ. ರೈತ ಸಮುದಾಯದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದೆ ತಹಸೀಲ್ದಾರರನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವ ರಾಜ್ಯ ಸರ್ಕರದ ಆಡಳಿತ ನೀತಿಯನ್ನು ಖಂಡಿಸಲು ವಿಶೇಷ ಯಾಗ ಮಾಡಿ ಸರ್ಕರಕ್ಕೆ ಛೀಮಾರಿ ಹಾಕುವುದು ಈ ಯಾಗದ ಉದ್ದೇಶ ಎಂದು ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ. ಇಂದು (ಜು25) ತಾಲೂಕಿನ ನೂತನ ತಹಸೀಲ್ದಾರರಾಗಿ ಶ್ರೀಧರಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ. ಇವರಾದರೂ ಕನಿಷ್ಠ 3 ವರ್ಷ ಇಲ್ಲಿ ಉಳಿದು ಜನಪರ ಕೆಲಸ ಮಾಡಬೇಕು. ಇವರನ್ನೂ ವರ್ಗಾವಣೆ ಮಡಿ ಮತ್ತೆ ಜನರಿಗೆ ತೊಂದರೆ ಕೊಡಬಾರದೆಂಬ ಉದ್ದೇಶದಿಮದ ನೂತನ ತಹಸೀಲ್ದಾರರು ಅಧಿಕಾರ ಸ್ವೀಕರಿಸಿದ್ದರೂ ಈಗಾಗಲೇ ಸಿದ್ದತೆಯಾಗಿರುವ ಥೂ ಛೀ ಯಾಗವನ್ನು ಕೈ ಬಿಡದೆ ಸರ್ಕಾರವನ್ನು ಜಾಗೃತಿಗೊಳಿಸುವುದಾಗಿ ಮಾಜಿ ಜಿ.ಪಂ ಸದಸ್ಯ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.

No comments:

Post a Comment