Friday 25 July 2014

ಮೈಸೂರು -ಭೇರ್ಯ .ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸದಂತೆ ಜಾಗೃತಿ-ವೃತ್ತನಿರೀಕ್ಷಕ ಸಿದ್ದಯ್ಯ.

ಭೇರ್ಯ,ಜು,26- ರಸ್ತೆಯ ಬದಿಯಲ್ಲಿ ಯಾವುದೇ ಕಾರಣ್ಣಕ್ಕೂ ವಾಹನಗಳನ್ನು ನಿಲ್ಲಿಸ ಬೇಡಿ ನಾವು ತಿಳಿಸಿದ ಜಾಗದಲ್ಲಿ ಮಾತ್ರ ವಾಹನ ನಿಲ್ಲಿಸಿ ಎಂದು ವೃತ್ತನೀರಿಕ್ಷಕ ಸಿದ್ದಯ್ಯ ತಿಳಿಸಿದರು. ಅವರು ಭೇರ್ಯದ ಗ್ರಾ.ಪಂ.ಕಚೇರಿಯಲ್ಲಿ ಆಟೋ ಚಾಲಕರ, ಮಾಲೀಕರ, ವರ್ತಕರ ಮತ್ತು ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಾದಚಾರಿಗಳು ಪುಟ್‍ಬಾತ್ ಮೇಲೆ ತಿರುಗಾಡಲು ಅನವು ಮಾಡಿ ಕೊಟ್ಟು ರಸ್ತೆ ಅಪಘಾತವನ್ನು ತಪ್ಪಿಸಿ ಎಂದು ವರ್ತಕರಿಗೆ ಮನವಿ ಮಾಡಿದ ಅವರು ನಿಮ್ಮ ಮಕ್ಕಳ ಕೈಯಲ್ಲಿ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಲು ಅವಕಾಶ ಕೊಡ ಬೇಡಿ ಏಕೆಂದರೆ ದಿನೆ ದಿನೇ ವಯಸ್ಕರಲ್ಲದ ಮಕ್ಕಳು ವಾಹನ ಚಾಲನೆ ಮಾಡಿ ಹೆಚ್ಚು ಅಪಘಾತವಾಗುತ್ತಿರುವುದನ್ನು ಕಣ್ಣಾರೆ ನೀವೆ ನೋಡುತ್ತಿದ್ದೀರಿ ಎಂದು ಸಭೆಯಲ್ಲಿ ನೆರದಿದ್ದ ಜನರಿಗೆ ಮನವರಿಕೆ ಮಾಡಿದ ಅವರು ಪ್ರತಿಯೊಬ್ಬರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಪಡೆಯ ಬೇಕು, ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಪುಟ್‍ಬಾತ್ ಮೇಲೆ ವ್ಯಾಪಾರ ಮಾಡುವುದರಿಂದ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುತ್ತವೆ ಮತ್ತೆ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ ಅದಷ್ಟು ಆಟೋ ಚಾಲಕರು ನಿಮಗೆ ತಿಳಿಸಿದ ನಿಗದಿತ ಸ್ಥಳದಲ್ಲಿ ಆಟೋಗಳನ್ನು ನಿಲ್ಲಿಸಿ ಎಂದು ಹೇಳಿದ ಅವರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ವಾಹನ ಚಾಲನೆ ಮಾಡಿ ಇಲ್ಲದಿದ್ದಲ್ಲಿ ನಿಮ್ಮ ವಾಹನ ಚಾಲನಾ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಜತೆಗೆ ಭೇರ್ಯ ಗ್ರಾಮದ ನಾಲ್ಕು ಕಡೆಗಳಲ್ಲಿ ರಸ್ತೆ ವಿಭಜನೆ ಇದ್ದು ಬಸ್‍ಗಳ ಸಂಚಾರ ಹೆಚ್ಚಾಗಿರುವುದರಿಂದ ಅತ್ತಾ ಈತ್ತಾ ಗಮನಿಸಿ ವಾಹನ ಚಾಲನೆ ಮಾಡಿ ಎಂದರು. ನಂತರ ಸಿಬ್ಬಂದಿಗಳೋಡನೆ ರಸ್ತೆಯ ಬದಿ ಮತ್ತು ಪುಟ್‍ಬಾತ್ ಮೇಲೆ ಅನಧಿಕೃತವಾಗಿ ಅಡಿಕೆ ಮರಗಳು, ಸೀಮೆಂಟ್ ಶೀಟ್, ಕಡ್ಡೆಕಾಯಿ ವ್ಯಾಪಾರಿಗಳು, ಪಾನಿಪುರಿ ಮತ್ತು ತಳ್ಳುವಗಾಡಿಗಳ ಂಏಲೆ ವ್ಯಾಪಾರ ಮಾಡುವವರ ಸ್ಥಳಕ್ಕೆ ಬೇಟಿ ಕೊಟ್ಟು ಪುಟ್‍ಬಾತ್ ಮೇಲೆ ಯಾವುದೇ ಕಾರಣಕ್ಕೂ ವ್ಯಾಪಾರ ಮಾಡ ಬೇಡಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಈ ಸಂಧರ್ಭದಲ್ಲಿ ಸಾಲಿಗ್ರಾಮ ಸಬ್ ಇನ್ಸ್‍ಪೆಕ್ಟರ್ ಮಹೇಶ್, ಮುಖ್ಯಪೇದೆ ಸತ್ಯನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಪತ್ರಕರ್ತ ಭೇರ್ಯಮಹೇಶ್, ವರ್ತಕರಾದ ಬಿ.ವಿ.ನಾಗೇಂದ್ರ, ಖಾಲಿದ್‍ಪಾಷ, ಬಿ.ಎಂ.ಪ್ರಕಾಶ್, ಚಾಲಕರಾದ ಮಹೇಶ್, ಕೃಷ್ಣ, ಅಮೀನ್, ಮಂಜು, ಮತ್ತೀತರರು ಇದ್ದರು.

No comments:

Post a Comment