Monday 28 July 2014

ಮಂಡ್ಯ-5 ಎಕರೆ ಕಬ್ಬು ಭಸ್ಮ.

ಮಂಡ್ಯ, ಜು.28- ಅತಿ ಹೆಚ್ಚಿನ ವೊಲ್ಟೇಜ್ ನಿಂದಾಗಿ ಟ್ರಾನ್ಸ್‍ಫಾರ್ಮರ್‍ನಿಂದ ಕಿಡಿಗಳು ಹಾರಿದ ಪರಿಣಾಮ ಸುಮಾರು 5 ಎಕರೆ ಕಬ್ಬು ಭಸ್ಮವಾಗಿರುವ ಘಟನೆ ಇಂದು ಜರುಗಿದೆ.
ತಾಲ್ಲೂಕಿನ ಹೊನಗಳ್ಳಿ ಮಠ ಗ್ರಾಮದಲ್ಲಿ ಇಂದು ಬೆಳಿಗ್ಗೆ 8ರ ಸುಮಾರಿಗೆ ಈ ಘಟನೆ ಜರುಗಿದೆ. ಕಾಂಗ್ರೆಸ್ ಕಾರ್ಯ ಕರ್ತ ಮಹೇಶ್‍ರವರಿಗೆ ಸೇರಿದ 1.20ಗುಂಟೆ, ಹೊನಗಳ್ಳಿಮಠ ಗ್ರಾಮದ ವಕೀಲ ಸದಾಶಿವ ಎಂಬುವರಿಗೆ ಸೇರಿದ 2 ಎಕರೆ, ಮಹದೇವಪ್ಪರವರಿಗೆ ಸೇರಿದ 1.20 ಎಕರೆ ಜಮೀನಿಗೆ ಬೆಂಕಿ ತಗುಲಿ ಸುಮಾರು 5 ಎಕರೆ ಜಮೀನಿನಷ್ಟು ಕಬ್ಬು ಸಂಪೂರ್ಣ ಭಸ್ಮವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಹೆಚ್.ಪಿ.ಮಹೇಶ್‍ರವರಿಗೆ ಸೇರಿದ ಕಬ್ಬಿನ ಗದ್ದೆಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದು, ಇಂದು ಅತೀ ಹೆಚ್ಚು ವಿದ್ಯುತ್ ಪ್ರಸಾರವಾದಾಗ ಟ್ರಾನ್ಸ್‍ಫಾರ್ಮರ್ ನಲ್ಲಿದ್ದ ಅನಿಲ ಹೊರಚೆಲ್ಲಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ನೀರಿಲ್ಲದೆ ಕಬ್ಬುಗಳು ಒಣಗಿ ನಿಂತಿದ್ದರಿಂದ ಬೆಂಕಿ ಬಹು ಬೇಗ ವ್ಯಾಪಿಸಿ 5ಎಕರೆ ಕಬ್ಬಿನ ಗದ್ದೆ ಸುಟ್ಟು ಹೋಗಿದೆ.
ಹೆಚ್.ಪಿ.ಮಹೇಶ್ ಮಾತ ನಾಡಿ, ನಮ್ಮ ಗದ್ದೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸುವ ಮೊದಲೆ ಚೆಸ್ಕಾಂ ಇಲಾಖೆಗೆ ಎಚ್ಚರಿಕೆ ನೀಡಿದ್ದು ಈ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಕಬ್ಬು ಬೆಳೆಯುತ್ತೇವೆ ದಯ ಮಾಡಿ ಇಲ್ಲಿ ಟ್ರನ್ಸ್ ಫಾರ್ಮರ್ ಅಳವಡಿ ಸಬೇಡಿ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದಲ್ಲ ಎಂದು ಹೇಳಿದರೂ ಅವರು ನಮ್ಮ ಗದ್ದೆಯಲ್ಲೇ ಅಳವಡಿಸಿ ದ್ದಾರೆ. ಈ ಘಟನೆಗೆ ಕೆಇಬಿ ಯವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು.
ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ
ಹಳ್ಳಿಗಳಿಗೆ ಚೆಸ್ಕಾಂ ಅಧಿಕಾರಿ ಗಳು ಸರಿಯಾಗಿ ಭೇಟಿ ನೀಡದೆ ಇದ್ದುದ್ದರಿಂದೇ ಈ ರೀತಿ ಅವಘಡಗಳು ಸಂಭವಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯುತ್ ತಂತಿಗಳ ಮೇಲೆ ತೆಂಗಿನ ಗರಿಗಳು, ಮರದ ಕೊಂಬೆಗಳು ಜೋತು ಬಿದ್ದಿದ್ದರೂ ಸಹ ಯಾವುದೇ ಚೆಸ್ಕಾಂ ಅಧಿಕಾರಿ ಗಳು ಅವುಗಳನ್ನ ತೆರುವು ಗೊಳಿಸಲು ಆಗಲಿ ಬರುವುದಿಲ್ಲ.
ಗ್ರಾಮದ ಒಳಗಡೆ ಯಾ ವುದೇ ರೀತಿಯ ಟ್ರಾನ್ಸ್‍ಫಾ ರ್ಮರ್ ಅಳವಡಿಸಬಾರದು ಎಂಬುದು ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಮಧ್ಯ ಭಾಗದಲ್ಲಿರುವ ಪತ್ರಕರ್ತ ರವಿಯವರ ಮನೆ ಮುಂದೆ ಯೇ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದೆ. ಇಂದು ಕಬ್ಬಿನಗದ್ದೆಯಲ್ಲಿ ಸ್ಫೋಟಗೊಂಡ ಟ್ರಾನ್ಸ್‍ಫಾರ್ಮರ್‍ನಿಂದ ಕಬ್ಬು ಭಸ್ಮವಾಗಿರುವುದು ಆತಂಕ ತಂದಿದೆ. ಈ ರೀತಿ ನಾಳೆ ಗ್ರಾಮದ ಮಧ್ಯದಲ್ಲಿರುವ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡರೆ  ಜನ ಜಾನುವಾರುಗಳ ಗತಿ ಏನು ಎಂದು ಗ್ರಾಮಸ್ಥರ ಭಯದಿಂದ ಮಾತನಾ ಡುತ್ತಿದ್ದು ಕಂಡು ಬಂತು.
ಕೆಲವು ತಿಂಗಳು ಹಿಂದೆ ಯಷ್ಟೇ ಕಬ್ಬಿನ ಗದ್ದೆಗೆ ಹುಲ್ಲು ಕುಯ್ಯಲು ಎಂದು ಹೋಗಿದ್ದ ರೇಣುಕಾ ಎಂಬುವರು ಅಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನ ಪ್ಪಿದ್ದರು. ಇದೇ ಅಲ್ಲದೆ ಅದೇ ಗ್ರಾಮದ ಕಾಲುವೆ ಏರಿಯ ಮೇಲೆ ಗುಡಿಸಲು ನಿರ್ಮಿ ಸಿಕೊಂಡು ಜೀವನ ಸಾಗಿ ಸುತ್ತಿದ್ದ ಸಾಕಮ್ಮ ಎಂಬುವರ ಮನೆಯ ಮೇಲೆ ಹರಿದು ಹೋಗಿದ್ದ ವಿದ್ಯುತ್ ತಂತಿ ಯಿಂದ ಕಿಡಿ ಬಿದ್ದು ಗುಡಿಸಿಲಿನ ಜೊತೆಗೆ ಆಕೆಯೂ ಸಹ ಸಂಪೂರ್ಣ ಭಸ್ಮವಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದೆ.
ಈ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ತಂತಿಯ ಮೇಲೆ ಮರದ ಕೊಂಬೆಗಳು ಜೋತು ಬಿದ್ದಿದ್ದರೂ ಸಹ ಚೆಸ್ಕಾಂನ ಯಾವ  ಅಧಿಕಾರಿಗಳು  ಬಂದು ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇದ್ದರೂ ಸಹ ಹೊನಗಳ್ಳಿ ಮಠ ಗ್ರಾಮಕ್ಕೆ ಮಾತ್ರ ವಿದ್ಯುತ್ ನೀಡುವುದಿಲ್ಲ.  ತೆಂಗಿನ ಗರಿಗಳು ಕಡಿದಿಲ್ಲ. ಸರಿಯಾಗಿ ವಿದ್ಯುತ್ ನೀಡಿದರೆ ಅಲ್ಲಿ ಯಾವುದಾದರೂ ಶಾರ್ಟ್ ಸಕ್ರ್ಯೂಟ್ ಆದರೆ ಯಾರು ಅಲ್ಲಿಯವರೆಗೂ ಹೋಗುವರು ಎಂಬುದನ್ನು ಮನಗಂಡು ಚೆಸ್ಕಾಂ ಅಧಿಕಾರಿಗಳು ನಮಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ದೂರಿದರು.

No comments:

Post a Comment