Thursday 25 December 2014

ಕೃಷ್ಣರಾಜಪೇಟೆ.ರೈತ ಬಂಧುಗಳು ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ ಎಚ್ಚರಿಕೆಯಿಂದ ಪಾಲನೆ-ಪೋಷಣೆ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಕರೆ

 ಕೃಷ್ಣರಾಜಪೇಟೆ. ರೈತನ ಅಭಿವೃಧ್ಧಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿ ದುಡಿಯುತ್ತಿರುವ ಜಾನುವಾರುಗಳು ದೇಶದ ರಾಷ್ಟ್ರೀಯ ಸಂಪತ್ತಾಗಿದೆ. ರೈತ ಬಂಧುಗಳು ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ ಎಚ್ಚರಿಕೆಯಿಂದ ಪಾಲನೆ-ಪೋಷಣೆ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಅವರು ಇಂದು ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ 11ಲಕ್ಷರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ರೈತನ ಬೇಸಾಯ ಚಟುವಟಿಕೆಗಳಿಗೆ ಪೂರಕವಾಗಿ ದುಡಿಯುತ್ತಿರುವ ರಾಸುಗಳು ಈ ರಾಷ್ಟ್ರದ ಸಂಪತ್ತು. ಆದ್ದರಿಂದ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿರುವ ಪಶು ಚಿಕಿತ್ಸಾಲಯಗಳಿಗೆ ವೈಧ್ಯರು ಹಾಗೂ ಸಿಬ್ಬಂಧಿಯನ್ನು ನೇಮಕ ಮಾಡಿಕೊಡಬೇಕು ಎಂದು ಪಶು ಸಂಗೋಪನಾ ಸಚಿವರಲ್ಲಿ ಮನವಿ ಮಾಡಿದ್ದೇನೆ. ಕೃಷ್ಣರಾಜಪೇಟೆ ತಾಲೂಕು ಕೇಂದ್ರದ ಪಶು ಆಸ್ಪತ್ರೆಗೆ ಪಾಲಿಕ್ಲಿನಿಕ್ ಸೇರಿದಂತೆ ಉನ್ನತವಾದ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು ಜಾನುವಾರುಗಳ ಸಂರಕ್ಷಣೆಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇಂದು ಗ್ರಾಮೀಣ ಪ್ರದೇಶದ ಜನರು ಬೇಸಾಯದ ಜೊತೆಗೆ ಪಶು ಸಂಗೋಪನೆಯನ್ನು ಮುಖ್ಯ ಉಪ ಕಸುಬನ್ನಾಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮುನ್ನಡೆಯುತ್ತಿದ್ದಾರೆ. ಹೈನುಗಾರಿಕೆಯು ಗ್ರಾಮೀಣ ಜನರ ಜೀವನಾಡಿಯಾಗಿದ್ದು ರೈತರ ಪ್ರಗತಿಗೆ ಮುಖ್ಯ ಕಸುಬಾಗಿ ಆಸರೆಯಾಗಿದೆ. ಗ್ರಾಮೀಣ ಜನರು ಎಚ್ಚರಿಕೆಯಿಂದ ಜಾನುವಾರುಗಳ ಪಾಲನೆ-ಪೋಷಣೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಬೇಸಾಯಕ್ಕೆ ರಾಸುಗಳ ಗೊಬ್ಬರ ಹಾಗೂ ಗಂಜಲದಿಂದ ತಯಾರಿಸಿದ ಜೀವಾಮೃತವನ್ನು ಬಳಸಿಕೊಂಡು ನಾಟಿ ಹಸುಗಳ ತಳಿಯ ಉಳಿವಿಗೆ ಮುಂದಾಗಬೇಕು ಎಂದು ನಾರಾಯಣಗೌಡ ಸಲಹೆ ನೀಡಿದರು.
ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುದ್ಲಾಪುರದ ಪದ್ಮಮ್ಮ ಬೀರೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯೆ ರೇಣುಕಾಕಿಟ್ಟು, ಮುಖಂಡರಾದ ಎ.ಆರ್,ರಘು, ರಾಮಕೃಷ್ಣೇಗೌಡ, ಶ್ರೀನಿವಾಸ್, ಲಕ್ಷ್ಮೀಪುರ ಜಗಧೀಶ್, ಹೊಸೂರು ಸ್ವಾಮೀಗೌಡ, ಅಂಬಿಗರಹಳ್ಳಿ ಚಂದ್ರೇಗೌಡ, ಮಹಮದ್ ರಫೀ, ತಾಲೂಕು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ, ಪಶುವೈದ್ಯರಾದ ನಾರಾಯಣ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಾಣಿ ಮತ್ತಿತರರು ಭಾಗವಹಿಸಿದ್ದರು.
ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಸ್ವಾಗತಿಸಿದರು, ಪಶುವೈದ್ಯರಾದ ನಾರಾಯಣ ವಂದಿಸಿದರು. ಭೂಸೇನೆಯ ಸಹಾಯಕ ಎಂಜಿನಿಯರ್ ಅಣ್ಣಪ್ಪಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಕೃಷ್ಣರಾಜಪೇಟೆ. ಬ್ರಾಹ್ಮಣ ಸಮುದಾಯದವರು ಅನಾಧಿಕಾಲದಿಂದಲೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು ಅವರ ಸೇವೆ ನಿಸ್ವಾರ್ಥವಾಗಿದ್ದು  ಅದನ್ನು ಸಮಾಜ ಮರೆಯಬಾರದೆಂದು ಶಾಸಕ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು
ಅವರು ಪಟ್ಟಣದ ಬ್ರಾಹ್ಮಣರ ಶ್ರೀರಾಮಮಂದಿರದಲ್ಲಿ  ತಾಲೂಕು ಬ್ರಾಹಣರ ಸಂಘವು ಎರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ  ಮಾvನಾಡುತಿದ್ದರು .
ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರದಿರುವ ಬ್ರಾಹ್ಮಣರು ಆರ್ಥಿಕವಾಗಿ ಹಿಂದುಳಿದಿರುವದನ್ನು ನಾನು ವಯಕ್ತಿಕವಾಗಿ ಕಂಡದ್ದೇನೆ. ಅವರು ಸರ್ಕಾರದ ಬಹುತೇಕ ಸವಲತ್ತಗಳಿಂದ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹಣರು ಸರ್ಕಾರಿ ಸಬಲತ್ತುಗಳನ್ನು ಪಡೆಯಲಾಗುತ್ತಿಲ್ಲ ಆದ್ದರಿಂದ ಸರ್ಕಾರ  ಈ ಜನಾಂಗದಲ್ಲಿರು ಬಡವರಿಗೆ ಸವಲತ್ತುಗಳು ಸಿಗುವಂತೆ ಮಾಡಬೇಕೆಂದರು.
ಪ್ರತಿಭೆ ಇಂದು ಯಾವೊಂದು ಜನಾಂಗದ ಸ್ವತ್ತಾಗಿ ಉಳಿದಿಲ್ಲ. ಅದು ಎಲ್ಲಾ ಜನಾಂಗಕ್ಕೂ ಹರಡಿದೆ.ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಬ್ರಾಹ್ಮಣರು ಮುಂದುವರಿಸಬೇಕು ಎಂದರು. .ತಮ್ಮ ಕುಂದುಕೊರತೆಯ ನಡುವೆಯೂ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಮಾದರಿ ಜನಾಂಗವಾಗಬೇಕೆಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ವಲಯ ಅರಣ್ಯಾಧಿಕಾರಿ ಎಂ.ಎನ್.ಅನಂತಸ್ವಾಮಿ ಮಾತನಾಡಿ ಬ್ರಾಹ್ಮಣ ಜನಾಂಗದಲ್ಲಿ ಪ್ರತಭೆಗಳಿಗೆ ಕೊರತೆಯಿಲ್ಲ. ಅವರಿಗೆ ಸೂಕ್ತವಾದ ಪ್ರೋತ್ಸಾಹ ಸರ್ಕಾರದ ವತಿಯಿಂದ ಸಿಗಬೇಕಿದೆ. ಮೀಸಲಾತಿ ಇಲ್ಲದೆ ಬದುಕುತ್ತಿರುವ ಜನಾಂಗವೆಂದರೆ ಬ್ರಾಹಣರಾಗಿದ್ದಾರೆ. ಇದರಿಂದ ಪ್ರತಿಭೆಗಳೂ ಗರಿಷ್ಟ ಪ್ರತಿಭೆ ಪ್ರದರ್ಶಿಸಿದರೂ ಸರ್ಕಾರಿ ಸೌಲಭ್ಯದಿಂದ ವಂಚಿತವಾಗುವಂತಾಗಿದೆ ಇದು ನಿವಾರಣೆಯಾಗಬೇಕೆಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರಿಕ್ಷೆಗಳಲ್ಲಿ ಅತ್ಯಧಿಕ ಅಂಕ ತೆಗೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿದ ಸಾಹಿತಿ ಬಲ್ಲೇನಹಳ್ಳಿ  ಮಂಜುನಾಥ್  ಮಾತನಾಡಿ  ಇಂದಿನ ಸ್ಪರ್ಧಾಯುಗದಲ್ಲಿ ಬ್ರಾಹ್ಮಣ ಪ್ರತಿಭೆಗಳು ಉತ್ತಮ ಅಂಕಗಳನ್ನು ಪರಿಕ್ಷೆಯಲ್ಲಿ ಗಳಿಸಲೇಬೇಕು. ಇಲ್ಲದಿದ್ದರೆ  ಮುಂದಿನ ಜನಾಂಗಕ್ಕೆ  ಸರ್ಕಾರಿ ಕೆಲಸಗಳು ಗಗನ ಕುಸುಮವಾಗುತ್ತವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್, ಉಪಾದ್ಯಕ್ಷೆ ರಾಜೇಶ್ವರಿ,  ಅಕ್ಕಿಹೆಬ್ಬಾಳು ರಾಮಕೃಷ್ಣಯ್ಯ ಹಾಗೂ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಬ್ರಾಹ್ಮಣ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

No comments:

Post a Comment