Thursday 11 December 2014

                             ಆರಾಧ್ಯ ಜನಾಂಗದಿಂದ ಡಿ.13 ರಂದು ಕುರುಕ್ಷೇತ್ರ ನಾಟಕ
ಮಂಡ್ಯ,ಡಿ.11-ಪೌರೋಹಿತ್ಯ ಶಾಸ್ತ್ರ, ಆಯುರ್ವೇದ ಪದ್ಧತಿಯನ್ನು ಕಸುಬಾಗಿ ಅವಲಂಬಿಸಿರುವ ಆರಾಧ್ಯ ಜನಾಂಗದ ವತಿಯಿಂದ ಡಿಸೆಂಬರ್ 13 ರಂದು  ಬೆಳಿಗ್ಗೆ 10.30ಕ್ಕೆ ನಗರದ ಕಾಲಾಮಂದಿರದಲ್ಲಿ ಕುರುಕ್ಷೇತ್ರ ಅಥವಾ ಧರ್ಮಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆರಾಧ್ಯ ಯುವಜನ ಸಮಿತಿ ಕಾರ್ಯದರ್ಶಿ ಭಾಸ್ಕರ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರುಕ್ಮಿಣಿ, ಕುಂತಿ, ದ್ರೌಪತಿ, ಸುಭದ್ರ ಇತ್ಯಾದಿ ಸ್ತ್ರೀ ಪಾತ್ರಧಾರಿಗಳು ನಾಟಕದಲ್ಲಿನ ಇತರ ಪಾತ್ರಧಾರಿಗಳೂ ಆರಾಧ್ಯ ಜನಾಂಗದ ಹತ್ತಿರದ ಸಂಬಂಧಿಗಳಾಗಿರುವುದು ವಿಶೇಷವಾಗಿದೆ.
ಸಾಹಳ್ಳಿ ಗುರುಮಠದ ಎಸ್.ಬಿ.ಬಸವಾರಾಧ್ಯರು ದುರ್ಯೋಧನನಾಗಿ ಪಾತ್ರ ನಿರ್ವಹಿಸುತ್ತಿದ್ದು, ಅವರ ಕುಟುಂಬದ ಸದಸ್ಯರು ಸಹ ನಾಟಕದ ಪಾತ್ರಧಾರಿಗಳಾಗಿದ್ದಾರೆ.ಕೊತ್ತತ್ತಿ ಗುರುಮಠದ ಕುಮಾರಾರಾಧ್ಯ ದ್ರೋಣನಾಗಿ, ಮಂಗಲ ಗುರು ಮಠದ ಪುಟ್ಟರೇಣುಕಾರಾಧ್ಯ ಶಕುನಿಯಾಗಿ, ಇವರ ತಮ್ಮ ವಾಗೀಶಆರಾಧ್ಯ ಅಭಿಮನ್ಯು ಪಾತ್ರದಲ್ಲಿ ನಟಿಸಲಿದ್ದಾರೆ ಎಂದರು.
ಬೆಕ್ಕಳಲೆ ಗುರುಮಠದವರು ಕೃಷ್ಣನ ಪಾತ್ರದಾರಿ ಆರಾಧ್ಯ ವಾಗೀಶ್ ಚಂದ್ರಗುರು ಸೇರಿದಂತೆ ಧರ್ಮರಾಯ, ಭೀಮ, ಅರ್ಜುನ ಇವರುಗಳನ್ನೊಳಗೊಂಡಂತೆ ಪರಸ್ಪರ ಬಂಧು-ಬಾಂಧವರುಗಳು ನಾಟಕಗಳಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಟಿ.ಆರ್.ಅಶೋಕ್, ಜಯಶಂಕರ ಆರಾಧ್ಯ, ಶಶಿಕಲಾ ಜಯಶಂಕರ ಆರಾಧ್ಯ. ಹಾಗೂ ಸಿ. ಜಯಶಂಕರ ಆರಾಧ್ಯ ಇದ್ದರು.


ಡಿ.14 ರಂದು ಗುರು ಅಭಿವಂದನಾ ಕಾರ್ಯಕ್ರಮ
ಮಂಡ್ಯ,ಡಿ.11- ತಾಲ್ಲೂಕಿನ ಗೊರವಾಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನಿವೃತ್ತ ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವಿಸಿ ಸನ್ಮಾನಿಸುವ ಸಲುವಾಗಿ ಶಾಲೆಯ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ ಸದಸ್ಯರ ಪ್ರಕಟಣೆ ತಿಳಿಸಿದೆ.
ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಗ್ರಾಮದ ಸುತ್ತಮುತ್ತಲ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ನೌಕರಿ ಮಾಡುತ್ತಿರುವ, ಬೇರೆಡೆ ಮಧುವೆಗಾಗಿ ವಾಸುತ್ತಿರುವ ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿದೆ.
4 ಗ್ರಾ.ಪಂ. ಅಧ್ಯಕ್ಷರಿಗೆ ಸುವರ್ಣ ಸೌಧದಲ್ಲಿ ಉಪಹಾರ ಕೂಟಕ್ಕೆ ಸಚಿವರಿಂದ ಆಹ್ವಾನ
ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ ಮಂಡ್ಯ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಸುವರ್ಣ ಸೌಧದಲ್ಲಿ ಶುಕ್ರವಾರ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಟಿ. ಮಂಜುಳ ಪರಮೇಶ್ ಅವರು ಉಪಹಾರ ಕೂಟಕ್ಕೆ ಬೆಳಗಾವಿಗೆ ತೆರಳಿದ ಈ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಗುರುವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಯ ಹರಿರಾಯನಹಳ್ಳಿ, ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕದಲೀಪುರ, ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಗಣಗನೂರು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮ ಪಂಚಾಯಿತಿಯ ತರೀಪುರ ಗ್ರಾಮಗಳು ಶೇ.100 ರಷ್ಟು ಸಾಧನೆ ಮಾಡಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.
ಹರಿರಾಯನಪುರದಲ್ಲಿ 112 ಕುಟುಂಬಗಳಿದ್ದು ಯಾವೊಂದು ಕುಟುಂಬದಲ್ಲೂ ಶೌಚಾಲಯ ಇರಲಿಲ್ಲ. ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಆಂದೋಲನ ಪ್ರಾರಂಭವಾದ ನಂತರ ಪಿಡಿಒಗಳು ಆಯಾ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರ ಸಹಕಾರದೊಂದಿಗೆ ಇಡೀ ಗ್ರಾಮವನ್ನು ‘ಬಯಲು ಶೌಚ ಮುಕ್ತ’ ಗ್ರಾಮವನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಾಲಿನ ಆರಂಭದಲ್ಲಿ ಕದಲೀಪುರದಲ್ಲಿ 63 ಕುಟುಂಬಗಳಿದ್ದು, ಕೇವಲ 8 ಶೌಚಾಲಯಗಳಿದ್ದವು. ಗಣಗನೂರು ಗ್ರಾಮದಲ್ಲಿ 55 ಕುಟುಂಬಗಳ ಪೈಕಿ 7 ಶೌಚಾಲಯಗಳಿದ್ದವು. ತರೀಪುರದಲ್ಲಿ 174 ಕುಟುಂಬಗಳ ಪೈಕಿ 44 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈ ಎಲ್ಲಾ ಗ್ರಾಮಗಳು ಈಗ ಶೇ. 100 ರಷ್ಟು ಸಾಧನೆ ಮಾಡಿವೆ ಎಂದು ಅವರು ತಿಳಿಸಿದರು.
ಭಾರತ ನಿರ್ಮಾಣ ಸ್ವಯಂ ಸೇವಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು, ಸಾಕ್ಷರ ಪ್ರೇರಕರು, ಯುವಕ ಹಾಗೂ ಯುವತಿ ಮಂಡಳಿಗಳು, ಸ್ವಚ್ಛತಾ ಧೂತರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ನೌಕರರ ನೆರವಿನಿಂದ ಈ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಕುಟುಂಬದಲ್ಲೂ ಶೌಚಾಲಯ ನಿರ್ಮಿಸಬೇಕು ಎಂದು ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ|| ಅಂಬರೀಷ್ ಅವರ ಧ್ವನಿ ಮುದ್ರಣವನ್ನು ಆಟೋಗಳ ಪ್ರಚಾರ ಮಾಡಲಾಗಿದೆ.
ಅಗ್ರಹಾರಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಮ್ಮ, ಪಿಡಿಒ ಕೆ.ದೇವೇಗೌಡ, ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಪಿಡಿಒ ಬೇಬಿ ಶ್ವೇತಾ, ರಾಗಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ, ಪಿಡಿಒ ಪ್ರಶಾಂತ ಬಾಬು, ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಕೆ.ರಾಜೇಶ್ವರ ಅವರು ಸಚಿವರ ಉಪಹಾರ ಕೂಟಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಎನ್.ಡಿ.ಪ್ರಕಾಶ್ ಹಾಗೂ ಗೋಪಾಲ್ ಅವರು ಉಪಸ್ಥಿತರಿದ್ದರು.
                                    ಡಿ.16 ರಂದು ಜಿ.ಪಂ ಕೆ.ಡಿ.ಪಿ ಸಭೆ
      ಮಂಡ್ಯ ಡಿ.11- ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) 2014-15ನೇ ಸಾಲಿನ ನವೆಂಬರ್ 2014ರ ಅಂತ್ಯದವರೆಗಿನ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಡಿಸೆಂಬರ್ 16 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
              ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಕಾ ಘಟಕ ಸ್ಥಾಪನೆ : ಅರ್ಜಿ ಆಹ್ವಾನ.
    ಸ್ತ್ರೀಶಕ್ತಿ ಗುಂಪು/ಒಕ್ಕೂಟಗಳ ಮೂಲಕ ಜಿಲ್ಲೆ/ತಾಲ್ಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರವು ಉದ್ದೇಶಿಸಿದ್ದು, ಯೋಜನೆಯಡಿ ಘಟಕ ಪ್ರಾರಂಭಿಸಲು ಬಯಸುವ ಸ್ತ್ರೀಶಕ್ತಿ ಗುಂಪುಗಳು/ಒಕ್ಕೂಟಗಳು ಯಂತ್ರೋಪಕರಣಗಳ ಖರೀದಿಗೆ ಅವಶ್ಯವಿರುವ ಅಂದಾಜು ರೂ.3.00 ದಿಂದ 3.50 ಲಕ್ಷ ಬಂಡವಾಳ ಹೂಡಲು ಶಕ್ತರಿರಬೇಕು. ಹಾಗೂ ಘಟಕ ಸ್ಥಾಪಿಸಲು ನೀರು, ವಿದ್ಯುಚ್ಛಕ್ತಿ ಸೌಲಭ್ಯದೊಂದಿಗೆ ಕನಿಷ್ಠ 3 ರಿಂದ 4 ಕೊಠಡಿಗಳುಳ್ಳ ಸ್ಥಳಾವಕಾಶ ಹೊಂದಿರಬೇಕು. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಮೇಲಿನ ಅರ್ಹತೆ ಹೊಂದಿರುವ ಸ್ತ್ರೀಶಕ್ತಿ ಗುಂಪು/ಒಕ್ಕೂಟಗಳು ನಿಗದಿತ ಅರ್ಜಿಯನ್ನು ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಥವಾ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 18 ರಂದು ಸಂಜೆ 5.30ರೊಳಗೆ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸುವುದು ಎಂದು ಶ್ರೀರಂಗಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯುಕ್ತಿಕ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಆಯ್ಕೆ: ಸಾರ್ವಜನಿಕರಿಂದ ಆಕ್ಷೇಪಣೆಗಳು ಆಹ್ವಾನ
     2014-15ನೇ ಸಾಲಿನಲ್ಲಿ ಎಸ್.ಎಫ್.ಸಿ ಹಾಗೂ ಪುರಸಭಾ ನಿಧಿಯಲ್ಲಿ ಶೇ22.75, ಶೇ7.25 ಹಾಗೂ ಶೇ3 ರ ಕಾರ್ಯಕ್ರಮಗಳಲ್ಲಿ ಬರುವ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಬರುವ ವೈಯುಕ್ತಿಕ ಕಾರ್ಯಕ್ರಮಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ದಿನಾಂಕ;06-11-2014ರಂದು ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಿ ಕಚೇರಿಯ ನಾಮಫಲಕದಲ್ಲಿ ತಾತ್ಕಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸುವವರು ರುಜುವಾತು ಪಡಿಸುವ ದಾಖಲೆಗಳೊಂದಿಗೆ ಡಿಸೆಂಬರ್ 20 ರ ಸಂಜೆ 5-30 ಗಂಟೆಗೆ ಸಲ್ಲಿಸಲು ಕೋರಿದೆ. ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ : ಡಿ.12 ಬೆಳೆ ವಿಮೆ
 ನೊಂದಾಣಿಗೆ ಕಡೆಯ ದಿನ

ರಾಜ್ಯ ಸರ್ಕಾರದ ಆದೇಶದಂತೆ ದಿನಾಂಕ: 19-11-2014ರ ಅನ್ವಯ 2014-15ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮದಡಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ. ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ  ಎಂ.ಎನ್.ರಾಜಸುಲೋಚನರವರು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟ: ಹಿಂಗಾರು ಹಂಗಾಮಿಗೆ ಸದರಿ ಯೋಜನೆಯಡಿ ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ (ಮಳೆಯಾಶ್ರಿತ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಸದರಿ ಯೋಜನೆಯಡಿ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.
ಹೋಬಳಿಮಟ್ಟ: ಹಿಂಗಾರು ಹಂಗಾಮಿಗೆ ಸದರಿ ಯೋಜನೆಯಡಿ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಸದರಿ ಯೋಜನೆಯಡಿ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.

ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆಯು ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ನೊಂದಾಯಿಸಲು ದಿನಾಂಕ 31.12.2014 ಕಡೆಯ ದಿನವಾಗಿರುತ್ತದೆ ಹಾಗೂ ಬೇಸಿಗೆ ಹಂಗಾಮಿಗೆ ನೊಂದಾಯಿಸಲು ದಿನಾಂಕ 28.02.2015 ಕಡೆಯ ದಿನವಾಗಿರುತ್ತದೆ.
ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ  ಗಂಡಸಿನ ಪತ್ತೆಗೆ ಸಹಕರಿಸಲು ಮನವಿ
ಬೆಟ್ಟಾಚಾರ್ ಎಂಬುವರು ಸುಮಾರು 14 ವರ್ಷಗಳ ಹಿಂದೆ ತಿರುಪತಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೋದವರು ಇದೂವರೆವಿಗೂ ಬಂದಿರುವುದಿಲ್ಲ ಎಂದು  ಪೊಲೀಸ್ ಸಬ್‍ಇನ್ಸ್‍ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ, ಮಂಡ್ಯ ಇವರಿಗೆ ದೂರು ಸಲ್ಲಿಸಿರುತ್ತಾರೆ. 
 ಕಾಣೆಯಾದ ಗಂಡಸಿನ ಚಹರೆ ಇಂತಿದೆ.  ವಯಸ್ಸು 79 ವರ್ಷ, 165 ಸೆಂ.ಮೀ. ಎತ್ತರ, ಗೋದಿ ಮೈಬಣ್ಣ, ಕೋಲು ಮುಖ ಇರುತ್ತದೆ.  ಕಾಣೆಯಾದ ಸಂದರ್ಭದಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್‍ನ್ನು ಧರಿಸಿದ್ದು, ಕನ್ನಡ ಮಾತನಾಡುತ್ತಾರೆ. ಈ ಚಹರೆ ಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಕೂಡಲೇ  ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: 08232-224500 ಹಾಗೂ ಗ್ರಾಮಾಂತರ  ಪೊಲೀಸ್ ಠಾಣೆ 08232-221107 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. (ಭಾವಚಿತ್ರ ಲಗತ್ತಿಸಿದೆ)
ಮಹಿಳಾ ಮಂಡಳಿಗಳು ಮತ್ತು ಸ್ವಸಹಾಯ ಸಂಘಗಳಿಗೆ ಧನಸಹಾಯ
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹವನ್ನು ನೀಡಲು ಜಿಲ್ಲೆಗಳಲ್ಲಿರುವ ಮಹಿಳಾ ಮಂಡಳಿಗಳು ಮತ್ತು ಸ್ವ ಸಹಾಯ ಸಂಘಗಳಿಗೆ ನಿಯಮಾನುಸಾರ ಧನಸಹಾಯ ನೀಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉದ್ದೇಶಿಸಿದೆ. ಮಹಿಳಾ ಮಂಡಳಿಗಳು ಮತ್ತು ಸ್ವಸಹಾಯ ಸಂಘಗಳು ನೋಂದಣಿಯಾಗಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿದ್ದಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೆ ಧನಸಹಾಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
ನೋಂದಣಿಯಾದ ವೃದ್ಧಾಶ್ರಮಗಳಲ್ಲಿ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ
ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 50 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರುಗಳು ನೋಂದಣಿಯಾದ ವೃದ್ಧಾಶ್ರಮಗಳಲ್ಲಿ ತಮ್ಮಲ್ಲಿರುವ ಕಲಾ ಪ್ರತಿಭೆಗಳಾದ ಕಾವ್ಯ-ವಾಚನ, ಗಮಕ, ಹರಿಕಥೆ, ಶಾಸ್ತ್ರೀಯ ಸಂಗೀತ ಮತ್ತು ಜಾನಪದ ರಂಗರೂಪಕ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಅವಕಾಶವಿದ್ದು, ಆಯಾ ಜಿಲ್ಲೆಗಳಲ್ಲಿರುವ ವೃದ್ಧಾಶ್ರಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಅವಕಾಶವಿರುತ್ತದೆ. ಈ ರೀತಿ ನಡೆಸಿಕೊಡುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪ್ರಾಯೋಜಿಸುವ ಯೋಜನೆಯನ್ನು ಇಲಾಖೆ ರೂಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
ಗ್ರಾಮೀಣ ಭಾಗದ ಅಸಂಘಟಿತ ಕಲಾಸಕ್ತರ ನಾಟಕಗಳಿಗೆ ಅವಕಾಶ
ಗ್ರಾಮೀಣ ಭಾಗದ ಅಸಂಘಟಿತ ಕಲಾಸಕ್ತರು ಸಂದರ್ಭಾನುಸಾರ ಗ್ರಾಮ ಮಟ್ಟದಲ್ಲಿ ಸುತ್ತಮುತ್ತಲಿನ ಗ್ರಾಮ ಕಲಾವಿದರು ಒಟ್ಟುಗೂಡಿ ಏರ್ಪಡಿಸುವಂತಹ ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಿಗೆ ಪ್ರಾಯೋಜನೆ ನೀಡುವ ಯೋಜನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಾರಿಗೊಳಿಸುತ್ತಿದೆ. ತಮ್ಮ ಗ್ರಾಮ ವ್ಯಾಪ್ತಿಗಳಲ್ಲಿ ಅಸಂಘಟಿತ ಕಲಾಸಕ್ತರು ಒಟ್ಟುಗೂಡಿ ನಾಟಕಗಳನ್ನು ಪ್ರದರ್ಶಿಸಿದ್ದಲ್ಲಿ, ಆ ನಾಟಕಗಳ ಪ್ರದರ್ಶಿತ ವೆಚ್ಚಗಳನ್ನು ಇಲಾಖೆಯ ನಿಯಮಾನುಸಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದೆ.
                    ತೋಟಗಾರಿಕೆ ವಿಭಾಗದ ಸಪೋಟ, ಮಾವು, ಹುಣಸೇ ಫಸಲುಗಳ ಹರಾಜು
ಶಿವಾರಗುಡ್ಡ ವಿದ್ಯಾಪೀಠದಲ್ಲಿರುವ ತೋಟಗಾರಿಕೆ ವಿಭಾಗದ ಸಪೋಟ, ಮಾವು, ಹುಣಸೇ ಫಸಲುಗಳನ್ನು ಡಿಸೆಂಬರ್ 30 ರಂದು ಮಧ್ಯಾಹ್ನ 12.30 ಗಂಟೆಗೆ ಶಿವಾರಗುಡ್ಡ ವಿದ್ಯಾಪೀಠ ಕಚೇರಿಯಲ್ಲಿ ಟೆಂಡರ್ ಕಂ ಹರಾಜು ಏರ್ಪಡಿಸಲಾಗಿದೆ. ಆಸಕ್ತರು ಡಿಸೆಂಬರ್ 29 ರ ಸಂಜೆ 4.00 ಗಂಟೆಯೊಳಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಶಿವಾರಗುಡ್ಡ ವಿದ್ಯಾಪೀಠ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ಹೆಸರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಶಿವಾರಗುಡ್ಡ ವಿದ್ಯಾಪೀಠ, ಮಂಡ್ಯ ಅಥವಾ ಪ್ರಾಚಾರ್ಯರು, ಶಿವಾರಗುಡ್ಡ ವಿದ್ಯಾಪೀಠ (ದೂರವಾಣಿ ಸಂಖ್ಯೆ 08232-278257/224636) ಇವರನ್ನು ಸಂಪರ್ಕಿಸುವಂತೆ ಕೋರಿದೆ.
ಕಲಾಮಂದಿರ ಆಧುನೀಕರಣ : ಸಾರ್ವಜನಿಕರು/ಸಂಘ ಸಂಸ್ಥೆಗಳು ಸಹಕರಿಸಲು ಮನವಿ
ಮಂಡ್ಯ ಜಿಲ್ಲೆಯ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ  ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು ಆಧುನೀಕರಿಸಲು ವಿದ್ಯುತ್ ದೀಪಗಳು, ಸೌಂಡ್, ಸುಣ್ಣ ಬಣ್ಣ ಬಳಿಯಲು ಕಲಾಮಂದಿರಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಿಂದ ಮುಂದಿನ ದಿನಗಳು ಕಲಾಮಂದಿರ ಪೂರ್ಣ ದುರಸ್ತಿಯಾಗುವವರೆಗೆ ಕಲಾಮಂದಿರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹಕರಿಸಬೇಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ
      ಬೆಂಗಳೂರಿನ ರಾಜ್ಯ ಸಹಕಾರ ಮಹಾ ಮಂಡಳಿ, ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 13 ರಂದು ಬೆಳಿಗ್ಗೆ 10.00 ಗಂಟೆಗೆ ಮಂಡ್ಯದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಡ್ಯ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಂಡ್ಯ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಎಂ.ಶ್ರೀಕಂಠಯ್ಯ  ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷರಾದ ಕೆ.ಜಿ.ತಮ್ಮಣ್ಣ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


No comments:

Post a Comment