Wednesday 3 December 2014

ಮಂಡ್ಯ: ಮಂಡ್ಯ ತಾಲೂಕು ಹೊಳಲು ಗ್ರಾಮದ ಎಚ್.ಡಿ. ಚೌಡಯ್ಯ ಬಡಾವಣೆಯಲ್ಲಿ ಎಸ್‍ಇಪಿ ಯೋಜನೆಯಲ್ಲಿ ಬಾಕ್ಸ್ ಚರಂಡಿ ಮತ್ತು ಕಾಂಕ್ರೀಟ್ ರಸ್ತೆಯನ್ನು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, ಗ್ರಾಮಸ್ಥರಿಗೆ ಹಕ್ಕುಪತ್ರ, ಮನೆ ಈ ದೇಶದ ಸಂವಿಧಾನಬದ್ಧ ಹಕ್ಕಾಗಿದೆ. ಕಳೆದ 18 ವರ್ಷದಿಂದ ಆಗದ ಚರಂಡಿ ಹಾಗೂ ರಸ್ತೆ ಕಾಮಗಾರಿ ಮಾಡಲಾಗಿದೆ. ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.ಲ್ಲಿನ ವ್ಯವಸ್ಥೆಯೇ ಹೀಗೆ, ತಡವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ಆಗಿದೆ. ಬೇರೆ ರಾಷ್ಟ್ರಗಳಲ್ಲಿ ಇಷ್ಟು ವರ್ಷಗಳ ಕಾಲ ತಡ ಮಾಡಿದ್ದರೆ ಅಂತಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು. ನಮ್ಮ ದೇಶದ ವ್ಯವಸ್ಥೆಯೇ ಹೀಗಿರುವಾಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ ತಡವಾದರೂ ಅಭಿವೃದ್ಧಿ ಆಗಿದೆ ಎಂಬುದೇ ಸಮಧಾನ ತಂದಿದೆ ಎಂದು ತಿಳಿಸಿದರು.ನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರುಗಳು ಯಜಮಾನರಲ್ಲ, ಅವರೆಲ್ಲರೂ ಜನರ ಸೇವಕರು, ಗ್ರಾಮಗಳಲ್ಲಿ ಇಂತಹ ಕೆಲಸ ಕಾರ್ಯಗಳು ನಡೆಯುವಂತಾಗಬೇಕು ಎಂಬುದನ್ನು ಗಮನ ಸೆಳೆಯಬೇಕು. ಇದರಿಂದ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.
ಹೊಳಲು ಗ್ರಾಮವನ್ನು ಒಂದು ವರ್ಷದೊಳಗೆ ಅಭಿವೃದ್ಧಿಪಡಿಸಲಾಗುವುದು. 25 ಮಂದಿ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸಲಾಗಿದ್ದು, ಸರ್ಕಾರದ ಅನುದಾನದಲ್ಲಿ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.Á್ರಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಮತ್ತು ನೌಕರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಪ್ರದೀಪ್‍ಕುಮಾರ್, ಉಪಾಧ್ಯಕ್ಷೆ ಜಯಲಕ್ಷ್ಮಿ ಶಿವಣ್ಣ, ಮಾಜಿ ಅಧ್ಯಕ್ಷ ಬುಲೆಟ್ ಶಿವು, ಪಿಡಿಓ ಭಾಗ್ಯ, ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ಪಟೇಲ್ ರಾಮು, ಶಿವಣ್ಣ, ಮಾಜಿ ಉಪಾಧ್ಯಕ್ಷ ಶಂಕರ್, ಕೋಮಲ ಶಿವಲಿಂಗಯ್ಯ, ರಾಜೇಶ್, ಕುಳ್ಳಮ್ಮ, ಯೋಗೇಶ್, ಚೇತನ್, ಆನಂದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವನಂಜು, ಗುತ್ತಿಗೆದಾರ ಕುಮಾರ, ನವೀನ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Post a Comment