Monday 8 December 2014

ಮಂಡ್ಯ ಸುದ್ದಿಗಳು

ಮಂಡ್ಯ: ತಾಲೂಕಿನ ದುದ್ದ ಹೋಬಳಿ, ಕನ್ನಟ್ಟಿ ಗ್ರಾಮದಲ್ಲಿ ಮುಜರಾಯಿ ಬಸವೇಶ್ವರ ದೇವಾಲಯದ ಇನಾಮ್ ಜಮೀನು ನಾಲ್ಕು ಮಂದಿಯಿಂದ 4.18 ಎಕರೆ ಜಮೀನನ್ನು ಒತ್ತುವರಿ ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಉಪ ತಹಸೀಲ್ದಾರ್ ವಿ. ನಟರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಒಪ್ಪಿಸಿತು.
ಗ್ರಾಮದ ನಾಲ್ಕು ಮಂದಿ ಪ್ರಭಾವಿ ವ್ಯಕ್ತಿಗಳು ದೇವಸ್ಥಾನದ ಇನಾಮ್ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸುವಂತೆ ಸಾಕಷ್ಟು ಬಾರಿ ನೋಟೀಸ್ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣಕ್ಕಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಉಪ ತಹಸೀಲ್ದಾರ್ ಮತ್ತು ಅಧಿಕಾರಿಗಳ ದಾಳಿ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿತು.
ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 200 ತೆಂಗಿನ ಮರಗಳನ್ನೂ ಸಹ ಸರ್ಕಾರದ ವಶಕ್ಕೆ ಪಡೆದ ಅಧಿಕಾರಿಗಳು, ಪ್ರತಿ ತೆಂಗಿನ ಮರಕ್ಕೆ ಸಂಖ್ಯೆಯನ್ನು ಗುರುತು ಮಾಡುವ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಒಪ್ಪಿಸಿತು.
ಮುಂದೆ ಜಮೀನು ಮತ್ತು ಮರಗಳ ಸಂರಕ್ಷಣೆಯನ್ನು ಗ್ರಾಮ ಸಹಾಯಕರು ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಯಿತು.
ರಾಜಸ್ವನಿರೀಕ್ಷಕ ತಿಮ್ಮರಾಯಶೆಟ್ಟಿ, ಗ್ರಾಮ ಲೆಕ್ಕಿಗ ಮುಕುಂದಸ್ವಾಮಿ, ತಾಲೂಕು ಸರ್ವೆಯರ್ ಕೃಷ್ಣೇಗೌಡ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.

ಮಂಡ್ಯ: ಕಾಂಗ್ರೆಸ್ ಕಟ್ಟುವಲ್ಲಿ ಸೇವಾದಳ ಕಾಂಗ್ರೆಸ್ ಅತಿ ಮುಖ್ಯ. ಇದರಿಂದಾಗಿ ಸೇವಾದಳ ಕಾಂಗ್ರೆಸ್ ಬಲಿಷ್ಠವಾದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯತಿರಾಜ್ ತಿಳಿಸಿದರು.
ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಸೇವಾದಳ ಮುಖ್ಯ ಸಂಘಟಕರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಸೇವಾದಳದ ಸಂಘಟಕ ರುದ್ರಪ್ಪ ಮಾತನಾಡಿ, 40 ವರ್ಷಗಳಿಂದ ದೇಶದೆಲ್ಲೆಡೆ ಕಾಂಗ್ರೆಸ್ ಪ್ರಚಲಿತವಾಗಿ ಕಾರ್ಯಕರ್ತರಿಗೆ ಹಲವಾರು ಖಾತೆಗಳನ್ನು ನೀಡಿ ರೈತ ಪರ ಚಿಂತನೆಯಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯುವ ನಾಯಕ ರಾಹುಲ್‍ಗಾಂಧಿ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಸೇವಾದಳ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಒಗ್ಗಟ್ಟಿನಿಂದ ಎಲ್ಲರೂ ಕೆಲಸಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸೇವಾದಳ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಳೇನಹಳ್ಳಿ ರಮೇಶ್ ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಮಲಾ ರಾಜು, ಪೆÇೀತೇರ ಮಹದೇವು, ಜೆ. ಕೃಷ್ಣ, ಕೆಂಪರಾಜು, ಪದ್ಮ, ಹೆಮ್ಮಿಗೆ ಶಂಕರ್ ಇತರರು ಇದ್ದರು.

ಕೃಷ್ಣರಾಜಪೇಟೆ. ಡಿಸೆಂಬರ್ 9ರ ಮಂಗಳವಾರ(ಇಂದು) ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮೂದಾಯ ಭವನದ ಆವರಣದಲ್ಲಿ ತಾಲೂಕಿನ ಪ್ರಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರೇನಹಳ್ಳಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ತಾಲೂಕಿನ ಪ್ರಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಸಾಹಿತಿಗಳಾದ ಶಿ.ಕುಮಾರಸ್ವಾಮಿ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಪಟ್ಟಣದ ಚನ್ನಬಸವೇಶ್ವರ ದೇವಾಲಯದ ಆವರಣದಿಂದ ಆರಂಭವಾಗುವ ಅದ್ದೂರಿ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯ ಮೂಲಕ ಸಮ್ಮೇಳನಾಧ್ಯಕ್ಷರನ್ನು ಮೈಸೂರು ರಸ್ತೆಯಲ್ಲಿರುವ ಜಯಮ್ಮ ಶಿವಲಿಂಗೇಗೌಡ ಸಮೂದಾಯ ಭವನದ ಆವರಣದಲ್ಲಿ ನಿರ್ಮಿಸಿರುವ ಶರಣ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಕರೆ ತರಲಾಗುವುದು. ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಹೆಚ್.ಎಲ್.ಶಿವರಾಮು ಅವರು ಆರೋಹಣ ಮಾಡಿದರೆ, ಪುರಸಭೆ ಅಧ್ಯಕ್ಷ ಕೆ. ಗೌಸ್‍ಖಾನ್ ಅವರು ಪರಿಷತ್ ಧ್ವಜವನ್ನು ಆರೋಹಣ ಮಾಡುವರು.
ಸಮ್ಮೇಳನಾಧ್ಯಕ್ಷ ಮೆರವಣಿಗೆಯನ್ನು ತಾಲೂಕಿನ ಹಿರಿಯ ಸಾಹಿತಿಗಳಾದ ವಿರೂಪಾಕ್ಷರಾಜಯೋಗಿ ಸಂಗಯ್ಯಹಿರೇಮಠ ಅವರು ಉದ್ಘಾಟಿಸಿ ಚಾಲನೆ ನೀಡುವರು. ಮೆರವಣಿಗೆಯಲ್ಲಿ ಸುತ್ತೂರು ವೀರಸಿಂಹಾಸನಾಧೀಶ್ವರ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಕೆ.ಆರ್.ನಗರದ ಕನಕಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳು, ಬೇಬಿಬೆಟ್ಟದ ಶ್ರೀ ಸದಾಶಿವ ಸ್ವಾಮೀಜಿಗಳು, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿಗಳು ಭಾಗವಹಿಸುವರು. ನಾಡಿನ ಖ್ಯಾತ ಸಾಹಿತಿಗಳಾದ ಮಲೆಯೂರು ಗುರುಸ್ವಾಮಿ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಾಸಕ ನಾರಾಯಣಗೌಡ, ಮಾಜಿಶಾಸಕರಾದ ಕೃಷ್ಣ, ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಎಂ.ಪುಟ್ಟಸ್ವಾಮಿಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷೆ ರಾಧಶ್ರೀ, ಸ್ಥಾಯಿ ಸಮಿತಿಯ ಅಧ್ಯಕ್ಷ ಮಹದೇವೇಗೌಡ, ಪುರಸಭೆಯ ಉಪಾಧ್ಯಕ್ಷ ಅಶೋಕ್, ಜಿಲ್ಲಾಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬನ್ನಂಗಾಡಿ ಸಿದ್ಧಲಿಂಗಯ್ಯ ಸೇರಿದಂತೆ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಾಧಕರಿಗೆ ಅಭಿನಂದನೆ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಸಾಧಕರಾದ ಸಮಾಜಸೇವಕ ಬೂಕಹಳ್ಳಿ ಮಂಜು, ರಂಗಭೂಮಿ ನಟ ಕಟ್ಟಹಳ್ಳಿ ಲಿಂಗಪ್ಪ, ನಿವೃತ್ತ ಉಪತಹಶೀಲ್ದಾರ್ ರಾಮಪ್ಪ, ಜಾನಪದ ಹಾಡುಗಾರ್ತಿ ಸಣ್ಣನಿಂಗಮ್ಮ ಮತ್ತು ಖ್ಯಾತ ವೀರಭದ್ರ ನೃತ್ಯಪಟು ಕುಂದೂರು ಜಗಧೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಸುಬ್ರಹ್ಮಣ್ಯ ಸಾಹಿತಿಗಳಾದ ಡಾ.ಸೀ.ಚಾ.ಯತೀಶ್ವರ ಅವರು ಜನಪದದಲ್ಲಿ ಶಿವಶರಣರು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು.
ಮಧ್ಯಾಹ್ನ ನಡೆಯಲಿರುವ ವಿವಿಧ ಗೋಷ್ಠಿಗಳಲ್ಲಿ ಡಾ.ಕುಮಾರ್ ಬೆಳಲೆ, ಡಾ.ಉಷಾರಾಣಿ ಮತ್ತು ಡಾ.ಹೆಚ್.ಡಿ.ಉಮಾಶಂಕರ್  ವಿವಿಧ ವಿಷಯಗಳನ್ನು ಕುರಿತು ವಿಚಾರ ಮಂಡಿಸಲಿದ್ದಾರೆ. ಆದ್ಧರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ತಾಶಲೂಕಿನ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಸುಬ್ರಹ್ಮಣ್ಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿಗಳು, ಜಿಲ್ಲಾಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬನ್ನಂಗಾಡಿ ಸಿದ್ಧಲಿಂಗಯ್ಯ ವೀರಶೈವ ಸಮಾಜದ ಮುಖಂಡರಾದ ತೋಟಪ್ಪಶೆಟ್ಟಿ, ಕೆ.ಎಸ್.ರಾಜೇಶ್, ಬ್ಯಾಂಕ್ ಪರಮೇಶ್ವರ್, ಸಾಸಲು ಈರಪ್ಪ, ಕೃಷ್ಣರಾಜ ಪದಬಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.
ಮಂಡ್ಯ: ಜಗತ್ತಿನ 84 ಲಕ್ಷ ಜೀವರಾಶಿಯಲ್ಲಿ ಮಾನವ ಮೊದಲಿಗ. ತದನಂತರ ಪ್ರಾಣಿಗಳು ಭೂಮಿಯ ಮೇಲೆ ಅನೇಕ ಪ್ರಾಣಿಗಳು ಇವೆ. ಮಾನವ ಜನ್ಮಕ್ಕೆ ಭಗವಂತ ದೊಡ್ಡ ಉಡುಗೊರೆ ನೀಡಿದ್ದಾನೆ ಎಂದು ಆದಿಚುಂಚನಗಿರಿ ಶಾಖಾ ಮಠ ವಿಶ್ವಮಾನವ ವಿದ್ಯಾಸಂಸ್ಥೆಗಳ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.
ಮಂಡ್ಯ ತಾಲೂಕು ಕೀಲಾರ ಗ್ರಾಮದಲ್ಲಿ ಶ್ರೀ ಕಂಚಿನ ಮಾರಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ಮತ್ತು ನೂತನ ದೇವಾಲಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಾತಿನಿಂದ ಜಗತ್ತಿನಲ್ಲಿ ಎಲ್ಲರನ್ನೂ ಗೆಲ್ಲುತ್ತಿದ್ದೇವೆ. ಅದೇ ರೀತಿ ಗೋವುಗಳಿಗೆ ಮಾತು ಬಂದಿದ್ದರೆ ಮನುಷ್ಯನನ್ನು ಕೊಂದು ಬಿಡುತ್ತಿದ್ದವು. ಭಗವಂತ ಮನುಷ್ಯನಿಗೆ ಶಕ್ತಿ ಕೊಟ್ಟಿದ್ದಾನೆ. ಭಗವಂತನ ಸೇವೆಯನ್ನು ಮಾನವ ಮಾಡಬೇಕು ಎಂದು ಹೇಳಿದರು.
ವೇದಬ್ರಹ್ಮ ಡಾ. ಬಾನುಪ್ರಕಾಶ್ ಶರ್ಮಾ ಮಾತನಾಡಿ, ಕಂಚಿನ ಮಾರಮ್ಮ ದೇವಿಗೆ ಶಕ್ತಿ ಇದೆ. ಮಾರಮ್ಮನ ಪೂಜೆಯನ್ನು ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ಗ್ರಾಮಸ್ಥರು ಮಾಡಬೇಕು. 48 ದಿನಗಳ ಕಾಲ ಗ್ರಾಮಸ್ಥರು ಪೂಜೆ ಸಲ್ಲಿಸಬೇಕು. ಹಳೇ ವಿಗ್ರಹವನ್ನು ತೆಗೆದು ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಮುಂದಿನ ಪೀಳಿಗೆಗೂ ದೇವಿ ಆಶೀರ್ವಾದ ಮಾಡುವಂತಾಗಲು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ಕಲೆಯ ತವರೂರು ಮಂಡ್ಯ ಜಿಲ್ಲೆಗೆ ಕೀರ್ತಿ ಹೆಚ್ಚಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಕಲಾವಿದರು ಭಾಗವಹಿಸಿ ಬಹುಮಾನವಿಲ್ಲದೆ ವಾಪಸ್ಸು ಬರುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಕೆ.ಎಂ. ಗಾಯಿತ್ರಿ ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಚೈತನ್ಯ ಬಳಗದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕøತಿಕ ಮತ್ತು ಕಲಾತ್ಮಕವಾಗಿಯೂ ಜಿಲ್ಲೆ ಸಹಕಾರಿಯಾಗಿದೆ. ಸಂಸ್ಥೆಯನ್ನು ಹುಟ್ಟುಹಾಕಿ, ಮುನ್ನಡೆಸುವುದು ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಯುವ ಪ್ರತಿಭೆಗಳನ್ನು ಪೆÇ್ರೀ ಚೈತನ್ಯ ಬಳಗದ ಕಾರ್ಯವನ್ನು ಶ್ಲಾಘಿಸಿದರು.
ಸಮಯವಿಲ್ಲದೆ ವೇಗವಾಗಿ ಬದುಕು, ಕಾಲ ಸಾಗುತ್ತಿದೆ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಜನತೆ ಭಾಗವಹಿಸುವ ಮೂಲಕ ಸಾಂಸ್ಕøತಿಕ ಸೊಗಡನ್ನು ಸವಿಯಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಕೆ.ಎಸ್. ಅಶೋಕ್, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಟಿ.ಆರ್. ಜ್ಯೋತಿ, ಕತೆಗಾರ ಕೇಶವರೆಡ್ಡಿ ಹಂದ್ರಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಚೈತನ್ಯ ಬಳಗದ ಅಧ್ಯಕ್ಷ ಕೆ.ಎನ್. ನಾಗರಾಜು, ಮಾನಸಿಕ ರೋಗ ತಜ್ಞ ಡಾ. ಸತ್ಯನಾರಾಯಣರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಇತರರು ಇದ್ದರು.

ಕೃಷ್ಣರಾಜಪೇಟೆ. ಪುಷ್ಪೋಧ್ಯಮವು ಇಂದಿನ ಮಾರುಕಟ್ಟೆಯಲ್ಲಿ ಅತ್ಯಂತ ವಿಸ್ತಾರವಾಗಿದ್ದು ತಾಲೂಕಿನ ಮುಳುಗಡೆ ಪ್ರದೇಶದ ರೈತರು ಕಷ್ಠಪಟ್ಟು ಬೆಳೆಯುವ ಸೇವಂತಿಗೆ ಹೂವಿನ ಬೇಸಾಯವು ಆರ್ಥಿಕ ಸ್ವಾವಲಂಭನೆಗೆ ಸಾಕಾರವಾಗಿ ಬಡಜನರ ಭಾಗ್ಯದ ಬಾಗಿಲನ್ನು ತೆರೆದು ಕೈಹಿಡಿದು ಮುನ್ನಡೆಸುತ್ತಿದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಅವರು ತಾಲೂಕಿನ ಪೂವನಹಳ್ಳಿ ಕೊಪ್ಪಲು ಗ್ರಾಮದ ನಾಗರಾಜು ಅವರ ಸೇವಂತಿಗೆ ಹೂವಿನ ತೋಟದಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ ಸೇವಂತಿಗೆ ಹೂವಿನ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ಅದರಲ್ಲಿಯೂ ಕೃಷ್ಣರಾಜಸಾಗರದ ಹಿನ್ನೀರಿನ ಪಕ್ಕದಲ್ಲಿನ ಮುಳುಗಡೆ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಸೇವಂತಿಗೆ ಹೂವಿನ ಬೇಸಾಯವನ್ನು ಮಾಡುತ್ತಿದ್ದು ನಮ್ಮ ರಾಜ್ಯದ ಮೈಸೂರು, ಬೆಂಗಳೂರು, ಮಂಗಳೂರು ನಗರಗಳಲ್ಲಿಯೇ ಅಲ್ಲದೇ ನೆರೆಯ ರಾಜ್ಯದ ಗುರುವಾಯೂರು, ಮಧುರೈ, ಸೋಲಾಪುರ, ಮುಂಬೈ, ಹೈದರಾಬಾದ್, ತಿರುಪತಿ, ಸೇರಿದಂತೆ ವಿವಿಧ ನಗರಗಳಿಗೆ ಸೇವಂತಿಗೆ ಹೂವನ್ನು ಮಾರಾಟ ಮಾಡುತ್ತಾ ಆರ್ಥಿಕ ಸ್ವಾವಲಂಭನೆ ಸಾಧಿಸಿ ಮುನ್ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಸೇವಂತಿಗೆ ಹೂವಿನ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆದರೂ ಸುಸಜ್ಜಿತವಾದ ಮಾರುಕಟ್ಟೆಯನ್ನು ನಿರ್ಮಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಬಲ್ಲೇನಹಳ್ಳಿಯಲ್ಲಿ ಕೃಷಿ ಉತ್ಪನ್ನ ಮಾರಾಟ ಸಮಿತಿಯು ನಿರ್ಮಿಸಿ ಅರ್ಧಂಬರ್ಧಕ್ಕೇ ನಿಲ್ಲಿಸಿರುವ ಸೇವಂತಿಗೆ ಹೂವಿನ ಮಾರುಕಟ್ಟೆಯ ಯಾರ್ಡನ್ನು ಸಂಪೂರ್ಣಗೊಳಿಸಿ ಹೂವಿನ ವ್ಯಾಪಾರಿಗಳು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಕೃಷಿ ಮಾರುಕಟ್ಟೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಸಧ್ಯದಲ್ಲಿಯೇ ಮಾರುಕಟ್ಟೆಯ ನವೀಕರಣ ಕಾಮಗಾರಿಯು ಆರಂಭವಾಗಲಿದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಬೂಕನಕೆರೆ ಹೋಬಳಿಯ ಗಂಜಿಗೆರೆ ಭಾಗದ ಪ್ರಮುಖ ಯಾತ್ರಾಸ್ಥಳವಾಗಿರುವ ವರಹನಾಥಕಲ್ಲಹಳ್ಳಿ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ ಬಳಿಯ ತ್ರಿವೇಣಿ ಸಂಗಮವನ್ನು ಸಮಗ್ರವಾಗಿ ಅಭಿವೃಧ್ಧಿ ಪಡಿಸಿ ಪ್ರವಾಸಿಗರು ಹಾಗೂ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದು ಚರ್ಚೆ ನಡೆಸಿದ್ಧೇನೆ. ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ನನ್ನ ಕನಸನ್ನು ನನಸು ಮಾಡಲು ತಾಲೂಕಿನ ಜನತೆಯ ಸೇವಕನಂತೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಶಾಸಕ ನಾರಾಯಣಗೌಡ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಚೆನ್ನಯ್ಯ, ಪ್ರಗತಿಪರ ಕೃಷಿಕರಾದ ವಿಠಲಾಪುರ ಸುಬ್ಬೇಗೌಡ, ಜಿ.ಪಂ ಮಾಜಿ ಸದಸ್ಯ ವಿ.ಸಿ.ಚೆಲುವೇಗೌಡ, ಎಪಿಎಂಸಿ ನಿರ್ದೇಶಕ ರಾಮಸ್ವಾಮಿ, ತಾ.ಪಂ ಸದಸ್ಯ ಚೆಲುವಯ್ಯ, ತಾಲೂಕು ನಾಯಕ ಜನಾಂಗದ ಮುಖಂಡ ಆರ್.ಜಗಧೀಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಗತಿಪರ ರೈತರಾದ ಪಿ.ಪಿ.ನಾಗರಾಜು ಸ್ವಾಗತಿಸಿದರು, ಗಂಜಿಗೆರೆ ವಿಜಯಕುಮಾರ್ ವಂದಿಸಿದರು. ತೋಟಗಾರಿಕೆ ಅಧಿಕಾರಿ ಜಯರಾಮು ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶೀರ್ಷಿಕೆ: 07-ಏಖPಇಖಿಇ-03  ಕೆ.ಆರ್.ಪೇಟೆ ತಾಲೂಕಿನ ಪೂವನಹಳ್ಳಿ ಕೊಪ್ಪಲು ಗ್ರಾಮದ ಪ್ರಗತಿಪರ ರೈತರಾದ ನಾಗರಾಜು ಅವರ ಸೇವಂತಿಗೆ ಹೂವಿನ ತೋಟದಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ ಸೇವಂತಿಗೆ ಹೂವಿನ ಕ್ಷೇತ್ರೋತ್ಸವದಲ್ಲಿ ಶಾಸಕ ನಾರಾಯಣಗೌಡ ಭಾಗವಹಿಸಿದ್ದರು.


ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಸಮಗ್ರವಾದ ಅಭಿವೃಧ್ಧಿಯಾಗದೇ ಈ ದೇಶದ ಪ್ರಗತಿ ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು, ರಸ್ತೆಗಳು ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ. ಈ ದಿಕ್ಕಿನಲ್ಲಿ ಕ್ರಿಯಾಶೀಳವಾಗಿರುವ ನಾನು 6ಕೋಟಿ ರೂ ವಿಶೇಷ ಅನುದಾನವನ್ನು ತಂದು ತಾಲೂಕಿನ ಪರಿಶಿಷ್ಠ ಜಾತಿ ಮತ್ತು ವರ್ಗಗಳ ಜನರು ವಾಸಮಾಡುತ್ತಿರುವ ಕೇರಿಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಅವರು ತಾಲೂಕಿನ ಮುದುಗೆರೆ, ಪೂವನಹಳ್ಳಿ, ಪೂವನಹಳ್ಳಿಕೊಪ್ಪಲು, ವರಹನಾಥಕಲ್ಲಹಳ್ಳಿ, ಬಸವನಹಳ್ಳಿ, ಅಂಬಿಗರಹಳ್ಳಿ, ಜೈನಹಳ್ಳಿ, ಆಲಂಬಾಡಿ, ಗಂಜಿಗೆರೆಕೊಪ್ಪಲು ಗ್ರಾಮಗಳ ಹರಿಜನ ಕೇರಿಯ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಇಂದಿಗೂ ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ತಲುಪಿಲ್ಲ. ಬಡವರು, ಧೀನದಲಿತರು ಹಾಗೂ ಹಿಂದುಳಿದವರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸವಲತ್ತುಗಳು ರಾಜಕೀಯ ಪುಢಾರಿಗಳು ಮತ್ತು ಉಳ್ಳವರ ಪಾಲಾಗುತ್ತಿವೆ. ಗ್ರಾಮೀಣ ಜನರು ಅಜ್ಞಾನ ಹಾಗೂ ಮೌಢ್ಯದಿಂದ ಹೊರಬಂದು ಜಾಗೃತರಾಗಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು ಎಂದು ಕಿವಿಮಾತು ಹೇಳಿದ ಶಾಸಕ ನಾರಾಯಣಗೌಡ ಶೇ.22ರ ಅನುಧಾನದ ಹಣವನ್ನು ಹರಿಜನ ಕೇರಿಗಳ ಅಭಿವೃಧ್ಧಿಗೆ ಹಾಗೂ ದಲಿತ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಕಡ್ಡಾಯವಾಗಿ ಬಳಕೆ ಮಾಡಬೇಕು, ಈ ದಿಕ್ಕಿನಲ್ಲಿ ರಾಜಕಾರಣ ಮಾಡದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಗೌರಮ್ಮಶ್ರೀನಿವಾಸ್, ಎಪಿಎಂಸಿ ನಿರ್ದೇಶಕ ರಾಮಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ರಂಗನಾಥ್, ಸಹಾಯಕ ಎಂಜಿನಿಯರ್‍ಗಳಾದ ಕಿಜರ್‍ಅಹಮದ್, ವೆಂಕಟೇಶ್, ಮುಖಂಡರಾದ ಪಿ.ಪಿ.ನಾಗರಾಜು, ರಾಮಕೃಷ್ಣೇಗೌಡ, ಅಕ್ಕಿಹೆಬ್ಬಾಳು ರಘು, ಪ್ರಥಮದರ್ಜೆ ಗುತ್ತಿಗೆದಾರ ಕುಭೇರ, ರಾಜೇನಹಳ್ಳಿ ಕುಮಾರಸ್ವಾಮಿ, ಕಿಕ್ಕೇರಿಕುಮಾರ್, ಕರ್ತೇನಹಳ್ಳಿ ಸುರೇಶ್ ಮತ್ತಿತರರು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 07-ಏಖPಇಖಿಇ-02  ಕೆ.ಆರ್.ಪೇಟೆ ತಾಲೂಕಿನ ಮುದುಗೆರೆ, ಪೂವನಹಳ್ಳಿ, ಪೂವನಹಳ್ಳಿಕೊಪ್ಪಲು, ವರಹನಾಥಕಲ್ಲಹಳ್ಳಿ, ಬಸವನಹಳ್ಳಿ, ಅಂಬಿಗರಹಳ್ಳಿ, ಜೈನಹಳ್ಳಿ, ಆಲಂಬಾಡಿ, ಗಂಜಿಗೆರೆಕೊಪ್ಪಲು ಗ್ರಾಮಗಳ ಹರಿಜನ ಕೇರಿಯ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾರಾಯಣಗೌಡ ಭೂಮಿ ಪೂಜೆಯನ್ನು ನೆರವೇರಿಸಿದರು.

ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಬಡಜನರ ಮಕ್ಕಳಿಗೆ ಉತ್ತಮವಾದ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಆರೋಗ್ಯವಂತ6 ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದು ಎಂಬ ಸತ್ಯವನ್ನು ಅರಿತಿರುವ ನಾನು ತಾಲೂಕಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ರಾಂತಿ ಮಾಡಲು ಮುಂದಾಗಿದ್ದೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಅವರು ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದ ಸಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಬಿಸಿಯೂಟ ತಯಾರಿಕಾ ಅಡುಗೆ ಮನೆಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆಯುತ್ತಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣವೆಂಬುದು ಮರೀಚಿಕೆಯಾಗಿಯೇ ಉಳಿದಿದೆ. ಸಮಾನ ಶಿಕ್ಷಣ ನೀತಿಯು ಸಂಪೂರ್ಣವಾಗಿ ಜಾರಿಯಾಗದಿರುವುದರಿಂದ ಶ್ರೀಮಂತರ ಮಕ್ಕಳು ಪಡೆಯುತ್ತಿರುವ ಗುಣಮಟ್ಟದ ಶಿಕ್ಷಣವು ಬಡ ಜನರ ಮಕ್ಕಳಿಗೆ ದೊರೆಯುತ್ತಿಲ್ಲವಾದರೂ ಪ್ರತಿಭಾವಂತರಾಗಿರುವ ಗ್ರಾಮೀಣ ಪ್ರದೇಶದ ಮಕ್ಕಳು ಶ್ರೀಮಂತರ ಮಕ್ಕಳನ್ನು ಹಿಂದಿಕ್ಕಿ ಶ್ರೇಷ್ಠ ಸಾಧನೆ ಮಾಡಿ ಮುನ್ನಡೆಯುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಶಾಸಕ ನಾರಾಯಣಗೌಡ ಪ್ರಸಕ್ತ ಶೈಕ್ಷಣಿಕ ವರ್ಷವು ಇನ್ನು ಮೂರು ತಿಂಗಳಲ್ಲಿ ಮುಗಿಯುತ್ತಾ ಬರುತ್ತಿದ್ದರೂ ಸರ್ಕಾರವು ಇನ್ನೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್‍ಗಳನ್ನು ವಿತರಿಸಲು ಮುಂದಾಗಿಲ್ಲ, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರ ಗಮನ ಸೆಳೆಯುತ್ತೇನೆ ಎಂದರು.
ನಿರಂತರ ಜ್ಯೋತಿ ವಿದ್ಯುತ್ ಯೋಜನೆಯು ರೈತರಿಗೆ ವರವಾಗುವ ಬದಲಿಗೆ ಶಾಫವಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ ವಿದ್ಯುತ್ತನ್ನು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದರಿಂದ ಪಂಪ್‍ಸೆಟ್’ಗಳು ಸಮರ್ಪಪವಾಗಿ ಕಾರ್ಯನಿರ್ವಹಿಸದೇ ರೈತನು ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಕೆ.ಆರ್.ಪೇಟೆ ತಾಲೂಕಿಗೆ ಒಂದು ಪ್ರತ್ಯೇಕವಾದ ವಿದ್ಯುತ್ ವಿಭಾಗ ಕಛೇರಿಯನ್ನು ಇಂಧನ ಸಚಿವರು ಮಂಜೂರು ಮಾಡಿಕೊಟ್ಟಿದ್ದು ಕೆಪಿಟಿಸಿಎಲ್ ಬೋರ್ಡಿನಲ್ಲಿ ಕಛೇರಿ ಆರಂಭಕ್ಕೆ ಹಸಿರು ನಿಶಾನೆಯು ದೊರೆತಿದೆ. 2015 ಜನವರಿ ತಿಂಗಳಲ್ಲಿ ವಿದ್ಯುತ್ ವಿಭಾಗ ಕಛೇರಿಯು ಆರಂಭವಾಗುವುದರಿಂದ ರೈತರು ವಿದ್ಯುತ್ ಪರಿವರ್ತಕಗಳು, ಕಂಬಗಳು ಮತ್ತು ವಿದ್ಯುತ್ ಸಾಮಗ್ರಿಗಳನ್ನು ತರಲು ಪಾಂಡವಪುರಕ್ಕೆ ಹೋಗುವುದು ತಪ್ಪುತ್ತದೆ. ಈ ಕಛೇರಿಯ ಆರಂಭಕ್ಕೆ ಕೆಲವು ಕಾಣದ ಕೈಗಳು ಅಡ್ಡಿಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಅಭಿವೃದ್ಧಿ ವಿರೋಧಿಗಳಿಗೆ ತಾಲೂಕಿನ ಜನರಿಂದಲೇ ತಕ್ಕ ಪಾಠ ಕಲಿಸುತ್ತೇನೆ. ನನಗೆ ರಾಜಕೀಯ ಬೇಕಾಗಿಲ್ಲ, ರೈತರು ಮೊಗದಲ್ಲಿ ಮಂದಹಾಸವು ಮೂಡಿ ರೈತರು ನೆಮ್ಮದಿಯ ಜೀವನ ನಡೆಸುವಂತಾದರೆ ಸಾಕು ನನ್ನ ಹೋರಾಟಕ್ಕೆ ಗೌರವ ಬಂದಂತಾಗುತ್ತದೆ ಎಂದು ಹೇಳಿದ ಶಾಸಕ ನಾರಾಯಣಗೌಡ ಗ್ರಾಮೀಣ ಪ್ರದೇಶದ ಜನರು ಕಾನ್ವೆಂಟ್ ವ್ಯಾಮೋಹವನ್ನು ಬದಿಗಿಟ್ಟು ವಿದ್ಯಾರ್ಥಿಗಳ ಸಮಗ್ರವಾದ ಶೈಕ್ಷಣಿಕ ವಿಕಾಸಕ್ಕಾಗಿಯೇ ದುಡಿಯುತ್ತಿರುವ, ಅತ್ಯುತ್ತಮವಾದ ಅಧ್ಯಾಪಕರನ್ನು ಹೊಂದಿರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಬೇಕು, ಕನ್ನಡ ಭಾಷೆಯು ಹೃದಯದ ಭಾಷೆಯಾಗಿರುವುದರಿಂದ ಕನ್ನಡ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಇಂಗ್ಲೀಷ್, ಹಿಂದಿ ಸೇದಂತೆ ಉಳಿದ ಯಾವುದೇ ಭಾಷೆಯನ್ನು ಸುಲಭವಾಹಿ ಕಲಿಯಬಹುದಾಗಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಜನರ ಭಾಷಾಭಿಮಾನವನ್ನು ಕಂಡು ಕನ್ನಡಿಗರಾದ ನಾವು ಇನ್ನು ಮುಂದಾದರೂ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ, ಸಂತೇಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಚಂದ್ರಶೇಖರ್, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ, ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜು, ಉಪನ್ಯಾಸಕರಾದ ದಾಸೇಗೌಡ ಮುಖಂಡರಾದ ಬಿ.ನಂಜಪ್ಪ, ಕುಮಾರಸ್ವಾಮಿ, ಮಂಜೇಗೌಡ, ಮರೀಗೌಡ, ನಾಯಕನಹಳ್ಳಿ ಭೀಮಣ್ಣ, ಜಯಕರ್ನಾಟಕ ಸಂಘಟನೆಯ ಮೋಹನ್‍ಗೌಡ, ಶಿಕ್ಷಕ ರಂಗಸ್ವಾಮಿ, ವೈದ್ಯಾಧಿಕಾರಿ ಡಾ.ಮಧುಸೂಧನ್, ಗೆಳೆಯರ ಬಳಗದ ಜಯಕುಮಾರಗೌಡ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ನಾಯಕನಹಳ್ಳಿ ಮೊಗಣ್ಣಗೌಡ ಸ್ವಾಗತಿಸಿದರು, ರಂಗಸ್ವಾಮಿ ವಂದಿಸಿದರು, ಎಸ್.ಬಿ.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶೀರ್ಷಿಕೆ: 07-ಏಖPಇಖಿಇ-01  ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಪ್ರೌಢಶಾಲೆಯ ಆವರಣದಲ್ಲಿ ಜಿ.ಪಂ ಸದಸ್ಯರ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಿಸಿಯೂಟ ತಯಾರಿಕಾ ಅಡುಗೆ ಮನೆ ಕಾಮಗಾರಿಗೆ ಶಾಸಕ ನಾರಾಯಣಗೌಢ ಭೂಮಿಪೂಜೆ ನೆರವೇರಿಸಿದರು. ಜಿ.ಪಂ ಸದಸ್ಯ ವಿ.ಮಂಜೇಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಜವರೇಗೌಡ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ಮತ್ತಿತರರು ಚಿತ್ರದಲ್ಲಿದ್ದಾರೆ.


ಮಂಡ್ಯ: ಎಲ್ಲರೂ ಹಣ ಸಂಗ್ರಹಣೆಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಆರೋಗ್ಯವನ್ನು ಮರೆಯುತ್ತಿದ್ದಾರೆ. ಮೊದಲು ಆರೋಗ್ಯದತ್ತ ಗಮನ ಹರಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಸಾಹಿತ್ಯ ಲಯನ್ಸ್ ಸಂಸ್ಥೆ, ವಿಮ್ಸ್ ಆಸ್ಪತ್ರ್ಸೆ, ಭಗವಾನ್ ಮಹಾವೀರ ದರ್ಶನ ಕಣ್ಣಿನ ಆಸ್ಪತ್ರೆ ವತಿಯಿಂದ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಉಚಿತ ಹೃದಯ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಇಂದು ಆಧುನೀಕತೆಗೆ ಮಾರುಹೋಗಿ ಒತ್ತಡದ ಬದುಕಿಗೆ ಒಗ್ಗಿಕೊಂಡು ಹಣ ಸಂಪಾದಿಸುವದನ್ನಷ್ಟೇ ಮಾಡುತ್ತಿದ್ದಾರೆ. ಇದರಿಂದಾಗಿ ಆತ ಆರೋಗ್ಯದ ಕಡೆಗೆ ಗಮನ ನೀಡುವುದನ್ನೇ ಮರೆತಿದ್ದಾನೆ ಎಂದು ವಿಷಾದಿಸಿದರು.
ಯಾರೂ ಬೇಕಾದರೂ ಹಣ ಸಂಪಾದನೆ ಮಾಡಬಹುದು. ಆದರೆ ಆರೋಗ್ಯವನ್ನು ಸಂಪಾದಿಸುವುದು ಬಹಳ ಕಷ್ಟ. ಒತ್ತಡದ ಬದುಕಿನಲ್ಲಿ ಹಣ ಸಂಪಾದನೆಗೆ ನೀಡುವ ಆದ್ಯತೆಯನ್ನು ಸ್ವಲ್ಪ ಮಟ್ಟಿಗಾದರೂ ಆರೋಗ್ಯದ ಕಡೆಗೆ ನೀಡಬೇಕು ಎಂದು ಸಲಹೆ ನೀಡಿದರು.
ಹಣ ಸಂಪಾದನೆ ಮಾಡಿದ ಮೇಲೆ ಆರೋಗ್ಯವೇ ಇಲ್ಲ ಎಂದಾದರೆ ಎಷ್ಟೇ ಹಣವಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಗ್ರಾಮೀಣ ಪ್ರೇದಶದ ಜನತೆ ದಿನನಿತ್ಯದ ಜಂಜಡಗಳಲ್ಲಿ ತೊಡಗಿಕೊಂಡು ಆರೋಗ್ಯ ಸಮಸ್ಯೆಯಲ್ಲೇ ಬದುಕುತ್ತಿದ್ದಾರೆ. ಗಂಭೀರವಾಗಿ ಆನಾರೋಗ್ಯಕ್ಕೀಡಾದಾಗ ಮಾತ್ರ ಆಸ್ಪತ್ರೆಯತ್ತ ದಾವಿಸುತ್ತಾರೆ. ಇದರಿಂದಾಗಿ ರೋಗಗಳನ್ನು ಗುಣಪಡಿಸುವುದು ತುಸು ತ್ರಾಸದಾಯಕವಾಗುತ್ತದೆ ಎಂದು ಹೇಳಿದರು.
ಹಲವಾರು ಸಂಘ ಸಂಸ್ಥೆಗಳು ಆರೋಗ್ಯ ಶಿಬಿರಗಳನ್ನು ನಡೆಸುತ್ತಿವೆ. ಇಂತಹ ಆರೋಗ್ಯ ಶಿಬಿರಗಳು ಗ್ರಾಮೀಣ ಜನತೆಗೆ  ವರದಾನವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಮರಿಲಿಂಗನದೊಡ್ಡಿ ಗುರುಸಿದ್ದಲಿಂಗೇಶ್ವೇರ ಆಶ್ರಮ ಟ್ರಸ್ಟ್‍ನ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಮಂಡ್ಯ ಸಾಹಿತ್ಯ ಲಯನ್ಸ್ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ. ಶ್ರೀನಿವಾಸ್, ಜಿಲ್ಲಾ ರಾಜ್ಯಪಾಲ ಪಿ. ಸತ್ಯಪ್ರಕಾಶ್ ಉಪಾಧ್ಯಾಯ, ಕೆರಗೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಲ್. ಕೃಷ್ಣ, ಜಿ.ಪಂ.ಸದಸ್ಯ ಕೆ.ಎಸ್. ವಿಜಯಾನಂದ, ಲಯನ್ಸ್ ಸಂಸ್ಥೆಯ ಪಂಚಲಿಂಗಯ್ಯ, ಎಚ್.ಎನ್. ಯೋಗೇಶ್, ವೈ.ಎಚ್. ಕರೀಗೌಡ,  ಜಿ.ವಿ. ರಮೇಶ್, ಶಿವಲಿಂಗಯ್ಯ, ಹರೀಶ್, ಕೃಷ್ಣೇಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಕೆರಗೋಡು ಸುತ್ತಮುತ್ತಲ ಗ್ರಾಮಸ್ಥರು ತಪಾಸಣೆಗೆ ಒಳಗಾದರು. 80ಕ್ಕೂ ಹೆಚ್ಚು ಮಂದಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರು ಮತ್ತು ಮೈಸೂರಿಗೆ ಕರೆದೊಯ್ಯಲಾಯಿತು.

ಮಂಡ್ಯ: ತಾಲೂಕಿನ ಕೆರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾ.ಪಂ. ಸದಸ್ಯ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಕ್ಷೀರ ಭಾಗ್ಯ, ಉಚಿತ ಸೈಕಲ್ ವಿತರಣೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರೇತರ ಶಾಲೆಗಳಿಗಿಂತ ಹೆಚ್ಚು ಸಾಧನೆಯತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣಿ, ಮುಖ್ಯ ಶಿಕ್ಷಕ ಶಿವಣ್ಣ, ಶಾಲೆಯ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ತಾಲೂಕಿನ ದುದ್ದ ಹೋಬಳಿ, ಕನ್ನಟ್ಟಿ ಗ್ರಾಮದಲ್ಲಿ ಮುಜರಾಯಿ ಬಸವೇಶ್ವರ ದೇವಾಲಯದ ಇನಾಮ್ ಜಮೀನು ನಾಲ್ಕು ಮಂದಿಯಿಂದ 4.18 ಎಕರೆ ಜಮೀನನ್ನು ಒತ್ತುವರಿ ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಉಪ ತಹಸೀಲ್ದಾರ್ ವಿ. ನಟರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಒಪ್ಪಿಸಿತು.
ಗ್ರಾಮದ ನಾಲ್ಕು ಮಂದಿ ಪ್ರಭಾವಿ ವ್ಯಕ್ತಿಗಳು ದೇವಸ್ಥಾನದ ಇನಾಮ್ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸುವಂತೆ ಸಾಕಷ್ಟು ಬಾರಿ ನೋಟೀಸ್ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣಕ್ಕಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಉಪ ತಹಸೀಲ್ದಾರ್ ಮತ್ತು ಅಧಿಕಾರಿಗಳ ದಾಳಿ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿತು.
ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 200 ತೆಂಗಿನ ಮರಗಳನ್ನೂ ಸಹ ಸರ್ಕಾರದ ವಶಕ್ಕೆ ಪಡೆದ ಅಧಿಕಾರಿಗಳು, ಪ್ರತಿ ತೆಂಗಿನ ಮರಕ್ಕೆ ಸಂಖ್ಯೆಯನ್ನು ಗುರುತು ಮಾಡುವ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಒಪ್ಪಿಸಿತು.
ಮುಂದೆ ಜಮೀನು ಮತ್ತು ಮರಗಳ ಸಂರಕ್ಷಣೆಯನ್ನು ಗ್ರಾಮ ಸಹಾಯಕರು ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಯಿತು.
ರಾಜಸ್ವನಿರೀಕ್ಷಕ ತಿಮ್ಮರಾಯಶೆಟ್ಟಿ, ಗ್ರಾಮ ಲೆಕ್ಕಿಗ ಮುಕುಂದಸ್ವಾಮಿ, ತಾಲೂಕು ಸರ್ವೆಯರ್ ಕೃಷ್ಣೇಗೌಡ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.































No comments:

Post a Comment