Monday 1 December 2014

 ಕೃಷ್ಣರಾಜಪೇಟೆ: ಪಟ್ಟಣದ ಬಸವೇಶ್ವರ ನಗರದ ಹಳೇ ಕಿಕ್ಕೇರಿ ರಸ್ತೆಯಲ್ಲಿ ವಾಸವಾಗಿದ್ದ ಉಧ್ಯಮಿ ಕೆಜೆಬಿ ಚಿತ್ರ ಮಂದಿರದ ಮಾಲೀಕ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಪ್ರಕಾಶ್(ಗುಂಡ) ಅವರ ಮನೆಯ ಬಾಗಿಲನ್ನು ಇಂದು ಮುಂಜಾನೆ ಮುರಿದು ಒಳನುಗ್ಗಿರುವ ಚಾಲಾಕಿ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆಯು ನಡೆದಿದೆ.
ತಮ್ಮ ಸಂಬಂಧಿಗಳ ಮದುವೆ ಕಾರ್ಯಕ್ಕೆ ಕೆ.ಬಿ.ಪ್ರಕಾಶ್ ತಮ್ಮ ಪತ್ನಿ ಪಂಕಜ ಅವರೊಂದಿಗೆ ಚನ್ನಪಟ್ಟಣಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಚಾಲಾಕಿ ಕಳ್ಳರು ಇಂದು ಮುಂಜಾನೆ 3ಗಂಟೆಯ ಸಮಯದಲ್ಲಿ ಮನೆಯ ಮುಂಭಾಗಿಲನ್ನು ಹಾರೆಯಿಂದ ಮೀಟಿ ತೆಗೆದು ಮನೆಯ ಬೀರುವಿನೊಳಗಿದ್ದ ಚಿನ್ನದ ಸರಗಳು, ಓಲೆಗಳು, ನೆಕ್ಲೇಸ್, ಬೆಳ್ಳಿಯ ವಸ್ತುಗಳು ಸೇರಿದಂತೆ ಅರ್ಧ ಕೆ.ಜಿಯಷ್ಟು ಚಿನ್ನ ಹಾಗೂ ಐದಾರು ಕೆ.ಜಿ.ಯಷ್ಟು ತೂಕದ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಇಂದು ಬೆಳಿಗ್ಗೆ ಮನೆಗೆ ಆಗಮಿಸಿದ ಕೆ.ಬಿ.ಪ್ರಕಾಶ್(ಗುಂಡ) ಅವರು ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಅನುಮಾನಗೊಂಡು ಮನೆಯ ಹತ್ತಿರ ಹೋಗಿ ನೋಡಿದಾಗ ಮನೆಯ ಬೀರುವಿನೊಳಗಿದ್ದ ಆಭರಣಗಳ ಕವರ್‍ಗಳನ್ನು ಬಿಸಾಡಿ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು ದೋಚಿರುವುದು ಖಚಿತವಾಯಿತು.
ವಿಷಯ ತಿಳಿದ ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಿ.ಎನ್.ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ನಾಗಮಂಗಲ ಡಿವೈಎಸ್‍ಪಿ ಸವಿತ ಪಿ.ಹೂಗಾರ್, ವೃತ್ತ ನಿರೀಕ್ಷಕ ಕೆ.ರಾಜೇಂದ್ರ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಸಿ.ಎನ್.ವಿನಯ್, ಪುನೀತ್, ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಚಿತ್ರಶೀರ್ಷಿಕೆ: 01-ಏಖPಇಖಿಇ-02 ಕೆ.ಆರ್.ಪೇಟೆ ಬಸವೇಶ್ವರ ನಗರದ ಹಳೇ ಕಿಕ್ಕೇರಿ ರಸ್ತೆಯಲ್ಲಿ ವಾಸವಾಗಿದ್ದ ಉಧ್ಯಮಿ ಕೆಜೆಬಿ ಚಿತ್ರ ಮಂದಿರದ ಮಾಲೀಕ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಪ್ರಕಾಶ್(ಗುಂಡ) ಅವರ ಮನೆಯ ಬಾಗಿಲನ್ನು ಇಂದು ಮುಂಜಾನೆ ಮುರಿದು ಒಳನುಗ್ಗಿರುವ ಚಾಲಾಕಿ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆಯು ನಡೆದಿದೆ. ಘಟನೆಯ ಬಗ್ಗೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.


No comments:

Post a Comment