Wednesday 3 December 2014

‘ಪಹಣಿ ತಿದ್ದುಪಡಿ ಮುಕ್ತ’ಉಪವಿಭಾಗಾಧಿಕಾರಿ ಜಗದೀಶ್ .

            ‘ಪಹಣಿ ತಿದ್ದುಪಡಿ ಮುಕ್ತ’ಉಪವಿಭಾಗಾಧಿಕಾರಿ ಜಗದೀಶ್ .
ಭೇರ್ಯ,ಡಿ,02- ಕೆ.ಆರ್.ನಗರ ತಾಲ್ಲೂಕನ್ನು ‘ಪಹಣಿ ತಿದ್ದುಪಡಿ ಮುಕ್ತ’ ತಾಲ್ಲೂಕನ್ನಾಗಿ ಅತಿಶೀಘ್ರದಲ್ಲಿ ಕಂದಾಯ ಸಚಿವರು ಘೋಷಿಸಲಿದ್ದಾರೆ ಎಂದು ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್ ತಿಳಿಸಿದರು. ಅವರು ಹೊಸಅಗ್ರಹಾರ ಹೋಬಳಿಯ ಮುಂಜನಹಳ್ಳಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ‘ಬೃಹತ್ ಕಂದಾಯ ಅದಾಲತ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆಯ ಅನೇಕ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರು ನಾಡಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೂ ಅಲೆಯುತ್ತಿದ್ದ ಕನಿಷ್ಠ ಎರಡು ತಿಂಗಳಾದರೂ ಬೇಕಾಗುತ್ತದೆ, ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದ ಹಿನ್ನಲೆಯಲ್ಲಿ ಸರ್ಕಾರ ಕ್ರಮವಹಿಸಿ ಕಂದಾಯ ಇಲಾಖೆಯೆ ನಿಮ್ಮ ಮನೆ ಬಾಗಿಲಿಗೆ ಬಂದು ಪಹಣಿ ತಿದ್ದುಪಡಿ, ಪೋಡಿ, ವಿವಿದ ವೇತನಗಳ ಮಾಶಾಸನ ಮಂಜೂರಾತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದಾಲತ್‍ನಲ್ಲಿಯೇ ಆದೇಶ ಮಾಡುವುದಾಗಿ ತಿಳಿಸಿದರು.
ದರಖಾಸು ಜಮೀನು ಹೊಂದಿರುವವರಿಗೆ ಸಾಗುವಳಿ ಪತ್ರ ಬಿಟ್ಟರೆ ಬೇರೆ ಯಾವುದೇ ದಾಖಲಾತಿ ಇಲ್ಲದಿರುವುದು ಮತ್ತು ಪಹಣಿಯಲ್ಲಿ 25ಕ್ಕೂ ಹೆಚ್ಚು ರೈತರ ಹೆಸರು ಇದ್ದು ಅನೇಕ ಸಮಸ್ಯೆಗಳು ರೈತರಿಗೆ ಎದುರಾಗಿತ್ತಿದ್ದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಅದಾಲತ್ ನಡೆಸುತ್ತಿರುವುದು ಎಂದ ಅವರು ತಾಲ್ಲೂಕಿನಲ್ಲಿ ಈಗಾಗಲೇ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ 5-6 ಅದಾಲತ್ ನಡೆಸಲಾಗಿದ್ದು, ‘ಅಂದಾಜು 80 ಸಾವಿರ ರೈತರ’ ಪಹಣಿಯನ್ನು ತಿದ್ದುಪಡಿ ಮಾಡಲಾಗಿದೆ ಬಾಕಿ ಉಳಿದ 400 ಪಹಣಿಗಳನ್ನು ಅತಿಶೀಘ್ರದಲ್ಲಿ ತಿದ್ದುಪಡಿ ಮಾಡು ಈಡೀ ತಾಲ್ಲೂಕನ್ನು ಪಹಣಿಯ ತಿದ್ದುಪಡಿ ಮಕ್ತವನ್ನಾಗಿ ಮಾಡುತ್ತೇವೆ ಎಂದರು.
ಪಹಣಿ ತಿದ್ದುಪಡಿ ಮುಕ್ತವನ್ನಾಗಿ ಮಾಡಲು ತಹಸೀಲ್ದಾರ್, ಉಪತಹಸೀಲ್ದಾರ್ ಹಾಗೂ ಸಿಬ್ಬಂದಿ ವರ್ಗ ಬಹಳಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸರ್ಕಾರದ ಆದೇಶದಂತೆ ಮುಂದಿನ ವರ್ಷ ಮಾರ್ಚಿ 30ರೊಳಗೆ ಪಹಣಿ ತಿದ್ದಪಡಿ ಅದಾಲತ್ ಮುಕ್ತಾಯಗೊಳ್ಳುತ್ತದೆ ಎಂದರು.
ಯಾವ ಗ್ರಾಮಗಳಲ್ಲಿ ಪಹಣಿ ತಿದ್ದುಪಡಿ ಹೆಚ್ಚಾಗಿದೆ ಅಂತಹ ಗ್ರಾಮಗಳಲ್ಲಿ ತುರ್ತಾಗಿ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದ ಅವರು ಹೊಸಅಗ್ರಹಾರ ಹೋಬಳಿ 28 ಗ್ರಾಮಗಳನ್ನು “ಪಹಣಿ ತಿದ್ದುಪಡಿ ಮುಕ್ತ” ಗ್ರಾಮವನ್ನಾಗಿ ಮಾಡಿದ್ದೇವೆ ಎಂದು ಈ ಸಂಧರ್ಭದಲ್ಲಿ ಘೋಷಿಸಿ ಉಳಿದ ನಾಲ್ಕು ಗ್ರಾಮಗಳನ್ನು ಅದಷ್ಟು ಬೇಗ ತಿದ್ದುಪಡಿ ಮುಕ್ತವನ್ನಾಗಿ ಮಾಡಲು ಕ್ರಮವಹಿಸುವುದಾಗಿ ತಿಳಿಸಿದ ಅವರು ಕಂದಾಯ ಆದಾಲತ್ ಸಾರ್ವಜನಿಕರಿಗೋಸ್ಕರ, ಕೆ.ಆರ್.ನಗರ ತಾಲ್ಲೂಕಿನಲ್ಲಿ  ಅದಾಲತ್ ವ್ಯಾಪಕವಾಗಿ ನಡೆಯುತ್ತಿದ್ದು ಸಾರ್ವಜನಿಕರು ಮತ್ತು ರೈತರು ಸದಪಯೋಗ ಪಡೆಯಿರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 180 ಕ್ಕೂ ಹೆಚ್ಚು ಅರ್ಜಿಗಳ ಪೈಕಿ 70 ಅರ್ಜಿಗಳನ್ನು ವಿಚಾರಣೆ ಮಾಡಿ ಸ್ಥಳದಲ್ಲಿಯೇ ಇತ್ಯರ್ಥ ಮಾಡಿದರೆ, ಪಿಂಚಣಿಗಾಗಿ ಅರ್ಜಿಸಲ್ಲಿದವರು 25 ಅದರಲ್ಲಿ ಸಂಧ್ಯಾಸುರಕ್ಷಾ ವೇತನ 13, ವಿಧವಾ ವೇತನ 5, ಅಂಗವೀಕಲರ ವೇತನ 1, ಮನಸ್ವಿನಿ ಯೋಜನೆ 1 ಈ ಎಲ್ಲಾ ಪಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವಶಂಕರಪ್ಪ, ಗ್ರಾ.ಪಂ.ಅಧ್ಯಕ್ಷೆ ಅನಿತಾ, ಮಾಜಿ ಅಧ್ಯಕ್ಷ ಅನೀಫ್‍ಗೌಡ, ಉಪತಹಸೀಲ್ದಾರ್ ಯಧುಗಿರೀಶ್, ಶಿರಸ್ತೇದಾರ್ ಗುರುಪ್ರಸಾದ್, ಸರ್ವೇ ಇಲಾಖೆಯ ಮೇಲ್ವಿಚಾರಕ ಶ್ರೀಕಂಠು, ಶರ್ಮ, ರಾಜಸ್ವನಿರೀಕ್ಷಕ ತನುರಾಜ್, ಗ್ರಾಮಲೆಕ್ಕೀಗರಾದ ಉದಯಶಂಕರ್, ರವೀಂದ್ರ, ಮಾಲೇಗೌಡ,  ತೀರ್ಥೇಗೌಡ, ಹೀನಾಕೌಸರ್, ರಶ್ಮೀ, ಸುಮಾ, ಸುರೇಶ್, ಮತ್ತೀತರರು ಇದ್ದರು.
ಕೋಟ್..
ಹಲವಾರು ವರ್ಷಗಳಿಂದ ನನ್ನ ಪಹಣಿಯಲ್ಲಿ ಹೆಸರು ತಪ್ಪಾಗಿತ್ತು ಆದರೆ ಅದು ನನಗೆ ತಿಳಿದಿರಲಿಲ್ಲ ಗ್ರಾಮಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಪಹಣಿ ತಿದ್ದುಪಡಿ ಮಾಡುತ್ತೇವೆ ನಾಳೆ ಬನ್ನಿ ಎಂದು ತಿಳಿಸಿದರು, ಪಹಣಿಯಲ್ಲಿ ನನ್ನ ಹೆಸರು ಬಂದಿದೆ ನನಗೆ ವಿವಿದ ಸವಲತ್ತು ದೊರೆಯಲಿದೆ. ಇಂತಹ ಆದಾಲತ್‍ನಿಂದಾಗಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗುತ್ತದೆ, ಆದಾಲತ್ ಹೆಚ್ಚಾಗಿ ನಡೆಯಲಿ.
                                              ವೆಂಕಟೇಶ್, ಗ್ರಾಮಸ್ಥ
ನಾನು ಪಿಂಚಣಿಗಾಗಿ ಅರ್ಜಿಯನ್ನು ನಾಡಕಚೇರಿಯಲ್ಲಿ ಸಲ್ಲಿಸಿದ್ದೆ ಕಂದಾಯ ಆದಾಲತ್ ಕಾರ್ಯಕ್ರಮದಲ್ಲಿ ನನಗೆ ಪಿಂಚಣಿಯನ್ನು ಮಂಜೂರು ಮಾಡಿ ಪ್ರಮಾಣ ಪತ್ರವನ್ನು ನೀಡಿದರು ಆದಾಲತ್‍ನಿಂದಾಗಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯಲ್ಲಿ ಹಣ ಸಂದಾಯವಾಗುವುದಿಲ್ಲ ಸರ್ಕಾರದಿಂದ ಉತ್ತಮ ಕಾರ್ಯಕ್ರಮ
                                       

No comments:

Post a Comment