Saturday 20 December 2014



                         ಕೆ.ಆರ್ ಆಸ್ಪತ್ರೆಯ ನಕಲಿ ಮೆಡಿಕಲ್ ಸರ್ಟಿಪಿಕೇಟ್ ಮಾಡಿ ಕೊಡುತ್ತಿದ್ದ ಜಾಲ ಪತ್ತೆ
                   * ಆಸ್ಪತ್ರೆಯ ನಿವೃತ್ತ ವೈದ್ಯ, ಡಿ.ಗ್ರೂಪ್ ನೌಕರ ಸೇರಿ ಐವರ ಬಂಧನ


ಮೈಸೂರು : ನಗರದ ಕೆ.ಆರ್. ಆಸ್ಪತ್ರೆಯ ನಕಲಿ ಮೆಡಿಕಲ್ ಸರ್ಟಿಪಿಕೇಟ್ ನ್ನು ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ನಗರದ ದೇವರಾಜ ಠಾಣೆಯ ಪೊಲೀಸರು 5ಮಂದಿಯನ್ನು ಬಂಧಿಸಿದ್ದಾರೆ.
ಕೆ.ಆರ್ ಆಸ್ಪತ್ರೆಯ ನಿವೃತ್ತ ವೈದ್ಯರಾದ ಮೈಸೂರಿನ ತಿಲಕ್ ನಗರದ ನಿವಾಸಿ ಡಾ..ಮುದ್ದುಕೃಷ್ಣ (69ವರ್ಷ),  ಕೆ.ಆರ್ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರನಾಗಿರುವ ಬೆಲವತ್ತ ಗ್ರಾಮದ ನಿವಾಸಿ ಸಗಾಯಿ ರಾಜ್ (48 ವರ್ಷ), ಇದೇ ಆಸ್ಪತ್ರೆಯ ನಿವೃತ್ತ ಆಂಬುಲೈನ್ಸ್ ಚಾಲಕ ಕಲ್ಯಾಣಗಿರಿಯ ನಿವಾಸಿ ಸಿ.ಪಿ.ವೇಲು (65 ವರ್ಷ), ಕೆ.ಆರ್ ಆಸ್ಪತ್ರೆಯ ರಬ್ಬರ್ ಸ್ಟಾಂಪ್ ಸೀಲು ಮಾಡಿಸಿಕೊಟ್ಟ ವಿದ್ಯಾರಣ್ಯಪುರಂನ ನಿವಾಸಿ ಕೃಷ್ಣ (45 ವರ್ಷ) ಹಾಗೂ ಗಾಯಾತ್ರಿಪುರಂನ ನಿವಾಸಿ ನಟರಾಜ್ (45 ವರ್ಷ) ಬಂಧಿತರು.  ಬಂಧಿತ ಆರೋಪಿಗಳು ನಗರದ ಕೆ.ಆರ್ ಆಸ್ಪತ್ರೆಯ ರಬ್ಬರ್ ಸ್ಟಾಂಫ್ ಸೀಲು ಮಾಡಿಸಿಕೊಂಡು ಮೆಡಿಕಲ್ ಸರ್ಟಿಪಿಕೇಟ್ ಮತ್ತು ಮೆಡಿಕಲ್ ಫಿಟ್‍ನೆಸ್ ಸರ್ಟಿಪಿಕೇಟ್‍ಗಳನ್ನು ಮಾಡಿಕೊಟ್ಟು ವಂಚಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಸಂಬಂಧಿಸಿದ ನಕಲಿ ರಬ್ಬರ್ ಸ್ಟಾಂಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ
         ಈ ಕಾರ್ಯಚರಣೆಯನ್ನು ಮೈಸೂರು ನಗರದ ಉಪ-ಪೊಲೀಸ್ ಆಯುಕ್ತ ರಾಜಣ್ಣ ಮತ್ತು ಎಂ.ಎಂ. ಮಹದೇವಯ್ಯ ಹಾಗು ದೇವರಾಜ ವಿಭಾಗದ ಎಸಿಪಿ ಜಯ ಮಾರುತಿ ರವರ ಮಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹೆಚ್.ಎಂ. ಕಾಂತರಾಜು, ಉಪ ನಿರೀಕ್ಷಕರಾದ ಬಾಲಕೃಷ್ನ, ಲೇಪಾಕ್ಷ.ಕೆ. ಮತ್ತು ಸಿಬ್ಬಂದಿಗಳು  ನಡೆಸಿದರು . ಈ ಪತ್ತೆ ಕಾರ್ಯವನ್ನು  ನಗರ  ಮಾನ್ಯ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಶ್ಲಾಘಿಸಿದ್ದಾರೆ.  ವಿಜಯನಗರ ಪೊಲೀಸರಿಂದ ಬೈಕ್ ಕಳ್ಳರ ಬಂಧನ
ರೂಃ 2,20,000 ಬೆಲೆ ಬಾಳುವ 3 ದ್ವಿಚಕ್ರ ವಾಹನಗಳ ವಶ.

      ವಿಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು  ವಿಜಯನಗರ 1ನೇ ಹಂತದ ಕೆ.ಡಿ. ರಸ್ತೆಯಲ್ಲಿ ಬರುತ್ತಿದ್ದಾಗ ಒಬ್ಬ ಆಸಾಮಿಯು ಅನುಮಾನಾಸ್ಪದವಾಗಿ ನಂಬರ್ ಪ್ಲೇಟ್ ಇಲ್ಲದ ಒಂದು ಹೀರೋ ಹೊಂಡಾ ಸ್ಲ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದೊಂದಿಗೆ ಇದ್ದು ಇದನ್ನು ಕಂಡು  ಪೊಲೀಸರು ಆತನನ್ನು ವಾಹನದ ಬಗ್ಗೆ ದಾಖಲಾತಿಗಳನ್ನು ಕೇಳಿದಾಗ ಸರಿಯಾದ ಉತ್ತರವನ್ನು ನೀಡದೆ ಇದ್ದಾಗ ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಸದರಿ ದ್ವಿಚಕ್ರ ವಾಹನವನ್ನು ತನ್ನ ಸ್ನೇಹಿತ ರೋಹಿತ್ ಎಂಬುವನ ಜೊತೆ ಸೇರಿ ಈಗ್ಗೆ ಎರಡು ತಿಂಗಳ ಹಿಂದೆ ಮೈಸೂರಿನ ಕೂರ್ಗಳ್ಳಿಯ ಮನೆಯ ಮುಂದೆ ಬೀಗ ಹಾಕಿ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಈತನನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಇದೇ ರೀತಿ ಬೆಂಗಳೂರಿನಲ್ಲಿ 2 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಚನ್ನಪಟ್ಟಣದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ಚೇತನ್ 22 ವರ್ಷ, ಕಾರ್ ಡ್ರೈವರ್ ಕೆಲಸ, ಯರಗನಹಳ್ಳಿ, ಮೈಸೂರು.
ವಿ.ರೋಹಿತ್ 22 ವರ್ಷ, ಬಾಲಾಜಿನಗರ, ಬಾಲ್ಲಿ ಟೌನ್ ಬೀದರ್ ಜಿಲ್ಲೆ.

     ಇವರು  ಕಳ್ಳತನ ಮಾಡಿ ಮಾರಾಟ ಮಾಡಿದ್ದ (1) ಹೀರೋ ಹೊಂಡಾ ನಂಃ ಕೆಎ 05 ಇಜಡ್ 2527 (2)ಬಜಾಜ್ ಪಲ್ಸರ್  ನಂಃ ಕೆಎ 46 ಹೆಚ್ 6070 ಅನ್ನು ವಶಪಡಿಸಿಕೊಂಡಿರುತ್ತೆ. ಮೇಲ್ಕಂಡ ಮೂರು ಬೈಕ್‍ಗಳ ಒಟ್ಟು ಬೆಲೆ. ರೂಃ 2,20,000/- ಗಳಾಗಿರುತ್ತದೆ.  
          ಈ ಪತ್ತೆ ಕಾರ್ಯವನ್ನು ಉಪಪೊಲೀಸ್ ಆಯುಕ್ತರಾದ ಶ್ರೀಎಂ.ಎಂ. ಮಹದೇವಯ್ಯ ಮತ್ತು ಎ.ಸಿ.ಪಿ. ಎ.ಕೆ. ಸುರೇಶ್‍ರವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ ಸಬ್‍ಇನ್ಸ್‍ಪೆಕ್ಟರ್ ಎನ್. ರಘುಪ್ರಸಾದ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರ ನೇತೃತ್ವದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾಃಎಂ.ಎ. ಸಲೀಂ, ಐ.ಪಿ.ಎಸ್. ರವರು ಶ್ಲಾಫಿಸಿರುತ್ತಾರೆ.

                   ಪ್ರಧಾನ ಮಂತ್ರಿ ಮೋದಿ ಯವರ ಜಾಗತಿಕ ಜನಪ್ರಿಯತೆ  - ಹಾರ್ವರ್ಡ್ ವರದಿ

ಲೋಕ ಸಭೆ ಯ ೨೦೧೪ ರ ಚುನಾವಣೆಯ ಚಾರಿತ್ರಿಕ ವಿಜಯದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜಾಗತಿಕ ಜನಪ್ರಿಯತೆ ವಿಶಾಲವಾಗಿ ವ್ಯಾಪಿಸಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ  ವರದಿ ಯೊಂದು ತಿಳಿಸಿದೆ.' ಅಂತಾ ರಾಷ್ಟ್ರೀಯ ನಾಯಕರು ಮತ್ತು ಜಾಗತಿಕ ಶಕ್ತಿಗಳು - ಸಮೀಕ್ಷೆ ' ಯಲ್ಲಿ ಈ ವಿಷಯ ಬಹಿರಂಗ ಗೊಂಡಿದೆ. ವರದಿಯು ೩೦ ದೇಶಗಳ ನಾಗರಿಕ ರನ್ನು  ವಿಶ್ವದ ೧೦ ಪ್ರಭಾವ ಶಾಲಿ ನಾಯಕರನ್ನು ಸೂಚಿಸಲು ಕೇಳಿತ್ತು. ಮೋದಿ ಯವರು ಮೊದಲ ಸ್ಥಾನ ದಲ್ಲಿ   ಇದ್ದರು . ೮೭.೮೮%  ಜನರು ಮೋದಿ ನೀತಿ ಗಳ ಪರವಾಗಿದ್ದರು.

ಉಳಿದಂತೆ ಅದ್ಯಕ್ಷ ಒಬಾಮ ಅವರು ೨೦ ನೆ ,ಕೆಮೊರೂನ್ ಅವರು ೧೫ ನೆ ಹಾಗೂ ಪ್ರಧಾನಿ ಶಿನ್ಶೊ ಅಬೆ ಅವರು ೨೬ ನೆ ಸ್ತಾನ ದಲ್ಲಿದ್ದರು . ಮೋದಿ ಯವರ 'ಸಬ್ ಕಾ ಸಾಥ್ ,ಸಬ್ ಕಾ ವಿಕಾಸ್ ' ಗುರಿಗೆ ದೊರೆತ ಮನ್ನಣೆ ಇದಾಗಿದೆ.  

ದೇಶಿಯ ಹಾಗೂ ಅಂತಾ ರಾಷ್ಟ್ರೀಯ ವ್ಯವಹಾರ ಗಳನ್ನೂ ಪರಿಣಾಮ ಕಾರಿಯಾಗಿ ನಿರ್ವಹಿಸುವ ವಿಶ್ವ ನಾಯಕರ ಪೈಕಿ ಮೊದಿಯವರದು ೩  ನೆ ಸ್ತಾನ . ಮೊದಲ ಇಬ್ಬರೆಂದರೆ ಜರ್ಮನಿಯ ಚಾನ್ಸಲರ್ ಮೆರ್ಕೆಲ್ ಹಾಗೂ ಚೀನಾ ಅಧ್ಯಕ್ಷ  ಕ್ಷಿ ಜಿನ್ಪಿಂಗ್  ಅವರು. ಜನಪ್ರಿಯತೆ ಯಲ್ಲಿ ಮೋದಿ ಯವರು ಚೀನಾದ ಅಧ್ಯಕ್ಷ ರೀ ಗಿಂತಲೂ ಮುಂದಿದ್ದಾರ 
                                               
  ಕಾಡುಪ್ರಾಣಿಗಳಿಂದ  ಜೀವ ಹಾನಿ : ಹೆಚ್ಚಿನ ಪರಿಹಾರ ನೀಡುವಂತೆ ಮನವಿ
ನವದೆಹಲಿ. ಡಿ. 20  ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಕಾಡು ಪ್ರಾಣಿಗಳು ಹಳ್ಳಿಗಳಿಗೆ ಬಂದು ಸಾರ್ವಜನಿಕರ ಜೀವಹಾನಿಗೈದು,  ತೊಂದರೆ ಮಾಡುತ್ತಿವೆ.    ಕೇಂದ್ರ ಸರ್ಕಾರವು ಅರಣ್ಯ ಸಂರಕ್ಷಣೆ ಮಾಡಿ   ಹಾನಿಯೊಳಗಾದವರ   ಅವಲಂಭಿತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಮುದ್ದಹನುಮೇಗೌಡ ತಿಳಿಸಿದರು.
ಲೋಕಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಅರಣ್ಯ ನಾಶದಿಂದ ಕಾಡು  ಪ್ರಾಣಿಗಳು ಗ್ರಾಮಗಳಿಗೆ ಬಂದು ಜನತೆಯ ಜೀವ ಹಾನಿ ಹಾಗು ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ.  ಒಣ ಭೂ ಪ್ರದೇಶವಾದ ತುಮಕೂರು ಜಿಲ್ಲೆಯಲ್ಲಿ  ಇತ್ತೀಚೆಗೆ ಡಜನ್ ಗಿಂತ ಹೆಚ್ಚು ಆನೆಗಳು ಹಾಗು ಕೆಲವು ಚಿರತೆಗಳು ಬೀಡುಬಿಟ್ಟು ಜೀವ ಹಾನಿ ಮತ್ತು ತೀವ್ರವಾಗಿ ಗಾಯಗೊಳಿಸಿವೆ. ಮಧುಗಿರಿ ತಾಲೂಕಿನ ಗ್ರಾಮವೊಂದರಲ್ಲಿ ಕರಡಿಯು ಯುವಕನೊಬ್ಬನನ್ನು ಕೊಂದಿದೆ. ಗ್ರಾಮಸ್ಥರೇ ಮೊಬೈಲ್ಗಳಲ್ಲಿ ಚಿತ್ರೀಕರಿಸಿದ್ದಾರೆ. ಕಾಡುಪ್ರಾಣಿಗಳು ಹಳ್ಳಿಗಳನ್ನು ಪ್ರವೇಶಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಸರ್ಕಾರವು ಕಾಡನ್ನು ಸಂರಕ್ಷಿಸಬೇಕು. ಕಾಡು ಪ್ರಾಣಿಗಳು ಹಳ್ಳಿಗಳ ಕಡೆ ಬರದಂತೆ ಕ್ರಮಕೈಗೊಳ್ಳಬೇಕು. ಹಾನಿಗೊಳಗಾದವರ ಅವಲಂಭಿತರಿಗೆ ಹಾಗು ತೀವ್ರವಾಗಿ ಗಾಯಗೊಂಡವರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಸ್ವೀಕರ್ ಅವರಿಗೆ ಸಂಸದರು ಮನವಿ ಮಾಡಿದರು. 

            ಆನ್ ಲೈನ್ ಪಾವತಿ : ಜಾಗೃತಿ ಮೂಡಿಸಲು  ಸಂಸದ ಶ್ರೀ ಚಂದ್ರಪ್ಪ ಮನವಿ
ನವದೆಹಲಿ. ಡಿ.20 ಸಾಮಾಜಿಕ ಭದ್ರತೆ ಸೇರಿದಂತೆ   ಸಮಾಜ ಕಲ್ಯಾಣ  ಕಾರ್ಯಕ್ರಮಗಳಡಿ   ಫಲಾನುಭವಿಗಳಿಗೆ  ಕೇಂದ್ರ ಸರ್ಕಾರವು   ಆನ್ ಲೈನ್ ಮೂಲಕ ಪಾವತಿ ಮಾಡಲು ಉದ್ದೇಶಿಸಿದ್ದು,   ಆನ್ ಲೈನ್ ಪದ್ದತಿ ಕುರಿತು ಫಲಾನುಭವಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಚಂದ್ರಪ್ಪ ತಿಳಿಸಿದರು.
ಲೋಕಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿಂದು ಮಾತನಾಡಿದ ಅವರು, ಈ ಫಲಾನುಭವಿಗಳು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅವಿದ್ಯಾವಂತರ ಪ್ರಮಾಣ ಹೆಚ್ಚಾಗಿದ್ದಾರೆ. ಹಿಂದುಳಿದ, ಪರಿಶಿಷ್ಟ  ಜನಾಂಗದವರಿಗೆ ಆನ್ಲೈನ್ ಪದ್ದತಿ ಜಾಗೃತಿ  ಇರುವುದಿಲ್ಲ.   ಇವರಿಗೆ ಆನ್ ಲೈನ್ ಪದ್ದತಿ ಕುರಿತು ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು. ಕೇಂದ್ರ ಹಾಗು ರಾಜ್ಯ ಪುರಸ್ಕøತ ಯೋಜನೆಗಳನ್ನು ವಿಲೀನಗೊಳಿಸಿ ಫಲಾನುಭವಿಗಳಿಗೆ  ಆನ್ ಲೈನ್ ಮೂಲಕ ಪಾವತಿ ಮಾಡುವ ಚಿಂತನೆಯನ್ನು ಸ್ಥಗಿತಗೊಳಿಸಿ,   ಫಲಾನುಭಿಗಳಿಗೆ  ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವವರಿಗೆ  ಪ್ರಸ್ತುತವಾಗಿರುವ ಪದ್ದತಿಯನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಲೋಕಸಭೆಯ ಸ್ವೀಕರ್ ಅವರಿಗೆ ಸಂಸದರು ತಿಳಿಸಿದರು. 

                  ಅನಿಲ ಗ್ರಾಹಕರು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ವಿವರವನ್ನು ಎಲ್‍ಪಿಜಿ
                                              ವಿತರಕರಿಗೆ ನೀಡಲು ಮನವಿ

     ಮಂಡ್ಯ.ಡಿ.20-ಮಂಡ್ಯ ಜಿಲ್ಲೆಯಲ್ಲಿರುವ ಅಡುಗೆ ಅನಿಲ ಗ್ರಾಹಕರಿಗೆ ಪಹಲ್ (ಡಿ.ಬಿ.ಪಿ.ಎಲ್) ಯೋಜನೆ – ಅಂದರೆ ನೇರ ನಗದು ವರ್ಗಾವಣೆ ಯೋಜನೆ ಜನವರಿ 1, 2015ಕ್ಕೆ ಅನುಷ್ಟಾನಕ್ಕೆ ಬರಲಿದ್ದು, ಅನಿಲ ಗ್ರಾಹಕರು ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೇರವಾಗಿ ನಿಮ್ಮ ಎಲ್.ಪಿ.ಜಿ. ವಿತರಕರಿಗೆ ನೀಡುವುದು ಅಥವಾ ಸಿಲಿಂಡರ್ ವಿತರಣೆ ಮಾಡುವ ಹುಡುಗರ ಮೂಲಕ ತಲುಪಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್ ಅವರು ಮನವಿ ಮಾಡಿದ್ದಾರೆ.
    ಸಾರ್ವಜನಿಕರ ಅನುಕೂಲಕ್ಕಾಗಿ ಕೇವಲ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ಸಂಗ್ರಹಿಸಲು ಜಿಲ್ಲೆಯ ಎಲ್ಲಾ ಅನಿಲ ಏಜೆನ್ಸಿಗಳು ಭಾನುವಾರ ಮತ್ತು ರಜಾ ದಿನಗಳಂದು ಸಹ ತೆರೆದಿರುತ್ತದೆ. ಆಧಾರ್ ಸಂಖ್ಯೆ ಹೊಂದಿಲ್ಲದೇ ಇರುವ ಗ್ರಾಹಕರು ಸಧ್ಯಕ್ಕೆ ಬ್ಯಾಂಕ್ ಖಾತೆ ವಿವರಗಳನ್ನು ಅನಿಲ ಏಜೆನ್ಸಿಗಳಿಗೆ ಸಲ್ಲಿಸುವುದು.
    ಜಿಲ್ಲೆಯಾದ್ಯಂತ 19 ಕೇಂದ್ರಗಳಲ್ಲಿ ಆಧಾರ್ ಸಂಖ್ಯೆ ನೋಂದಣಿ ಮಾಡುವ ಕಾರ್ಯ ನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಕೊಳ್ಳಲು ಕೋರಿದ್ದು, ಬ್ಯಾಂಕ್ ಖಾತೆ ಹೊಂದಿಲ್ಲದ ಅನಿಲ ಗ್ರಾಹಕರು ಪ್ರಧಾನ ಮಂತ್ರಿ ಜನ-ಧನ ಯೋಜನೆ ಮೂಲಕ ಬ್ಯಾಂಕ್ ಖಾತೆ ತೆರೆಯಲು ಕೋರಲಾಗಿದೆ.
    ಗ್ರಾಹಕರು ಇದರ ಸದುಪಯೋಗ ಪಡೆದು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅನಿಲ ಏಜೆನ್ಸಿಗಳನ್ನು ಸಂಪರ್ಕಿಸುವುದು ಹಾಗೂ ಶುಲ್ಕ ರಹಿತ ದೂರವಾಣಿ ಸಂಖ್ಯೆ 1800-2333-555 ಗೆ ಕರೆ ಮಾಡಬಹುದು. ವೆಬ್‍ಸೈಟ್ ವಿಳಾಸ ತಿತಿತಿ.mಥಿಟಠಿg.iಟಿ     ನಲ್ಲಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

      ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳ  ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ


  ವಿ.ಸಿ.ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶುಕ್ರವಾರ ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ‘ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳ  ಪ್ರಾತ್ಯಕ್ಷಿಕೆಯ’ ಕ್ಷೇತ್ರೋತ್ಸವವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ (ಮಣ್ಣು ವಿಜ್ಞಾನ) ಡಾ. ಭಾಗ್ಯಲಕ್ಷ್ಮಿ, ಟಿ. ಇವರು ಭತ್ತದಲ್ಲಿ ವಿವಿಧ ಲವಣ ಸಹಿಷ್ಣುತ ತಳಿಗಳಾದ ವಿಕಾಸ್, ಐ.ಆರ್-30864 ಮತ್ತು ಗಂಗಾವತಿ ಸೋನಾ ತಳಿಗಳ ಪರಿಚಯ ಮತ್ತು ಬೇಸಾಯ ಕ್ರಮದ ಬಗ್ಗೆ ರ್ಯೆತರಿಗೆ ಮಾಹಿತಿ ನೀಡಿದರು. 
  ಚೌಳು ಮತ್ತು ಕರ್ಲು ಮಣ್ಣುಗಳ ಸಮಸ್ಯೆ ಹಾಗೂ ಸುಧಾರಣೆಯ ಬಗ್ಗೆ ವಿವರವಾಗಿ  ತಿಳಿಸುತ್ತಾ ಸಮಸ್ಯಾತ್ಮಕ ಮಣ್ಣುಗಳಲ್ಲಿ ಹಸಿರೆಲೆ ಗೊಬ್ಬರ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ಜಿಪ್ಸಂ, ರಸಗೊಬ್ಬರಗಳ ಬಳಕೆ ಮತ್ತು ಲವಣ ಸಹಿಷ್ಣುತ ಭತ್ತದ ತಳಿಗಳನ್ನು ಬಳಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು. 

ಈ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡಂತಹ ರೈತ ಎಂ.ಜಿ.ಪ್ರತಾಪ್‍ರವರು ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. 
ಕಾರ್ಯಕ್ರಮದಲ್ಲಿ ಹೊಳಲು, ಮಲ್ಲನಾಯಕನಕಟ್ಟೆ ಹಾಗೂ ಮೊಡಚಾಕನಹಳ್ಳಿ ಗ್ರಾಮಸ್ಥರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಕುಮಾರಿ ಅಪೂರ್ವ,ಕೆ.ಬಿ., ತರಬೇತಿ ಸಹಾಯಕರು ಮತ್ತು ಶ್ರೀಮತಿ ರತ್ನಮ್ಮ ಉಪಸ್ಥಿತರಿದ್ದರು. (ಭಾವಚಿತ್ರ ಲಗತ್ತಿಸಿದೆ)

ಡಿ.21 ರಂದು ಸಾಂಸ್ಕøತಿಕ ಸಂಜೆ ಯೋಜನೆಯಲ್ಲಿ ಸ್ಯಾಕ್ಸೋಪೋನ್ ಕಾರ್ಯಕ್ರಮ
ಜಿಲ್ಲಾಡಳಿತ  ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಂಡ್ಯ ಇವರ ಸಹಯೋಗದಲ್ಲಿ ಡಿಸೆಂಬರ್ 21 ರಂದು ಸಂಜೆ 6.30 ಗಂಟೆಯಿಂದ 8.00 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಕಾವೇರಿ ವನದಲ್ಲಿ “ಸಾಂಸ್ಕøತಿಕ ಸಂಜೆ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸ್ಯಾಕ್ಸೋಪೋನ್ (ಶ್ರೀ ಪದ್ಮನಾಭ ಮತ್ತು ತಂಡ, ಮೇಲುಕೋಟೆರವರಿಂದ)  ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಇನ್ನು ಮುಂದೆ ಪ್ರತಿ ಭಾನುವಾರ ನಡೆಸಲಾಗುವುದು. ಸಾರ್ವಜನಿಕರು / ಕಲಾವಿದರು ವೀಕ್ಷಿಸಬಹುದು, ಮತ್ತು ಭಾಗವಹಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಎನ್. ಅಣ್ಣೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.24 ರಂದು ಶ್ರೀರಂಗಪಟ್ಟಣದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 24 ರಂದು ಬೆಳಿಗ್ಗೆ 10.30ಕ್ಕೆ ಶ್ರೀರಂಗಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಏರ್ಪಡಿಸಲಾಗಿದೆ.  ಶ್ರೀರಂಗಪಟ್ಟಣ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲಾ ಗ್ರಾಹಕ  ವೇದಿಕೆಯ ಅಧ್ಯಕ್ಷರಾದ ವಿ.ಎಂ.ಆರಾಧ್ಯ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


No comments:

Post a Comment