Wednesday 3 December 2014

ಅಕ್ರಮವಾಗಿ ಹುಲಿಯ ಚರ್ಮವನ್ನು ಮಾರಾಟ ಮಾಡಲು ಹೊಂಚು -ಆರೋಪಿ ಬಂಧನ.

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಅಕ್ರಮವಾಗಿ ಹುಲಿಯ ಚರ್ಮವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಯನ್ನು ವೃತ್ತನಿರೀಕ್ಷಕ ಕೆ.ರಾಜೇಂದ್ರ ಮತ್ತು ಸಿಬ್ಬಂಧಿಗಳು 8ಲಕ್ಷರೂ ಮೌಲ್ಯದ ಹುಲಿಯ ಚರ್ಮದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಕಿಕ್ಕೇರಿ ಪಟ್ಟಣದ ನಿವಾಸಿ ಸತ್ಯನಾರಾಯಣ ಅವರ ಮಗನಾದ ರಂಗನಾಥ(45)ನು ಅಕ್ರಮವಾಗಿ ಹುಲಿಯ ಚರ್ಮವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು ಮಾರಾಟ ಮಾಡಲು ಸೂಕ್ತವಾದ ಗ್ರಾಹರನ್ನು ಹುಡುಕುತ್ತಿದ್ದಾನೆ ಎಂಬ ಖಚಿತವಾದ ವರ್ತಮಾನದ ಮೇರೆಗೆ ರಂಗನಾಥನ ಮನೆಯ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಿದಾಗ ಮನೆಯ ಬೀರುವಿನಲ್ಲಿ ಅಕ್ರಮವಾಗಿ ಹುಲಿಯ ಚರ್ಮವನ್ನು ಇಟ್ಟುಕೊಂಡಿರುವುದು ಪತ್ತೆಯಾಯಿತು.
ನಾಗಮಂಗಲ ಡಿವೈಎಸ್‍ಪಿ ಸವಿತ ಪಿ.ಹೂಗಾರ್ ಅವರ ನಿರ್ದೇಶನದ ಮೇರೆಗೆ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಅವರು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂಧಿಗಳಾದ ಕೃಷ್ಣೇಗೌಡ, ಅಣ್ಣಯ್ಯ ಮತ್ತು ಹಾಫೀಜ್‍ಪಾಶ ಅವರು ಗ್ರಾಹಕರ ಸೋಗಿನಲ್ಲಿ ಮನೆಯ ಮೇಲೆ ದಾಲಿ ನಡೆಸಿ ಹುಲಿಯ ಚರ್ಮವನ್ನು ಆರೋಪಿಯ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿ 8ಲಕ್ಷರೂ ಬೆಲೆ ಬಾಳುವ ಹುಲಿಯ ಚರ್ಮವನ್ನು ವಶಪಡಿಸಿಕೊಂಡು ಕೆ.ಆರ್.ಪೇಟೆ ಪೋಲಿಸರ ಸಾಹಸವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಲಾಬ್‍ಭೂಷಣ್ ಬೊರಸೆ ಅಭಿನಂಧಿಸಿದ್ದಾರೆ.
ಅಕ್ರಮ ಹುಲಿಯ ಚರ್ಮ ಮಾರಾಟದ ಬಗ್ಗೆ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಆರೋಪಿ ರಂಗನಾಥನ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


No comments:

Post a Comment