Tuesday, 16 September 2014

ಪಡಿತರ ಚೀಟಿಯಲ್ಲಿನ ಗೊಂದಲ ನಿವಾರಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು: ಪಡಿತರ ಚೀಟಿಯಲ್ಲಿ ಗೊಂದಲವನ್ನು ಸರ್ಕಾರ ತಕ್ಷಣವೇ ನಿವಾರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ರಾಜ್ಯ ದ್ರಾವಿಡ ಮಹಾ ಸಭಾದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಆಹಾರ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಡಿತರ ಚೀಟಿ ವಿತರಣೆಯಲ್ಲಿನ ಗೊಂದಲದಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನ್ಯ ನಿತ್ಯ ಪಡಿತರ ಚೀಟಿಗಾಗಿ ಸಂಬಂಧಿಸಿದ ಇಲಾಖೆಯ ಕಚೇರಿಗೆ ಅಲೆಯುವಂತಾಗಿದೆ ಎಂದು ದೂರಿದರು.
ಎಪಿಎಲ್ ನೀಡಿರುವ ಕಡು ಬಡವರಿಗೆ ಕೂಡಲೇ ಬಿಪಿಎಲ್ ಕಾಡ್ ್ ನೀಡಬೇಕು, ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವವರಿಗೆ ನಿಯಾಮನುಸಾರ ಸಮೀಕ್ಷೆ ನಡೆಸಿ ಕೂಡಲೇ ಪಡಿತರ ಚೀಟಿ ವಿತರಿಸಬೇಕು, ಅನಿಲ ಇಂಧನ ಬಳಸುವ ಪ್ರತಿ ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಸೀಮೆ ಎಣ್ಣೆ ನೀಡಬೇಕು ಎಂಬುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು, ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ವಿನಾಯಕ, ಕಾರ್ಯದರ್ಶಿ ಶಾಂತಿ, ಜಿಲ್ಲಾಧ್ಯಕ್ಷ ಸೈಯದ್ ಸಲೀಂ ಮತ್ತಿತರರು ವಹಿಸಿದ್ದರು. ನೂರಾರು ಮಂದಿ ಭಾಗವಹಿಸಿದ್ದರು.

     ಸರ್ಕಾರ ನಮ್ಮನ್ನು ಸಾಮೂಹಿಕ ಹತ್ಯೆ ಮಾಡಲಿ; ಗಿರಿಜನರ ಅಳಲು
ಮೈಸೂರು, ಸೆ. 16- ನಮ್ಮನ್ನಾಳುವ  ಸರ್ಕಾರ  ನಮ್ಮ ಸಮಸ್ಯೆಗಳನ್ನು  ಬಗೆಹರಿಸಲು ಸಾಧ್ಯವಾಗದೇ ಇದ್ದಲ್ಲಿ ನಮ್ಮನ್ನು  ಸಾಮೂಹಿಕ ಹತ್ಯೆ ಮಾಡಲಿ, ಅಥವಾ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ  ವಲಸೆ ಹಾಗಲು  ಅವಕಾಸ ನೀಡಲಿ ಎಂದು  ಹೆಚ್.ಡಿ.ಕೋಟೆ ತಲ್ಲೂಕಿನ ಡಿಬಿ ಕುಪ್ಪೆ ಗ್ರಾಮಪಂಚಾಯಿತಿಗೆ ಒಲಪಡುವ ಹಾಡಿವಾಸಿಗಳ ಅರಣ್ಯ ಹಕ್ಕು ಸಮಿತಿ ಒಕ್ಕೂಟ  ಸರ್ಕಾರವನ್ನು ಒತ್ತಾಯಿಸಿತು.
  ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನೊಮದ ಅರಣ್ಯವಾಸಿ ಮುಖಂಡರುಗಳಾದ ಚೋಮವ್ವ, ಸುರೇಶ್, ರಾಮು, ರಾಜು, ಮಾಸ್ತಿ  ರವರುಗಳು ಸುದ್ಧಿಘೋಷ್ಟಿಯಲ್ಲಿ ಮಾತನಾಡುತ್ತಾ  ಅಳಲನ್ನು ತೋಡಿಕೊಂಡರು,  ಗಿರಿಜನರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ಹಲವಾರು ಯೋಜನೆಗಳನ್ನು  ಜಾರಿಗೆ ತಂದಿದೆ, ಎನ್.ಜಿ.ಓ ಗಳ ಉಪಟಳದಿಂದಾಗಿ ಅವುಗಳಾವುವೂ ನಮಗೆ ತಲುಪುತ್ತಿಲ್ಲ,  ಹಾಡಿಗಳಿಗೆ ಕುಡಿಯುವ ನೀರು, ವಿದ್ಯುದೀಪ, ಸೂರು,  ಮುಂತಾದ ಮೂಲಭೂತ  ಸೌಲಭ್ಯಗಳಿಂದ  ವಂಚಿತರಾಗಿದ್ದಾರೆ, ಈಬಗ್ಗೆ  ಜಿಲ್ಲಾ ಉಸ್ತುವಾರಿ ಸಚಿವರು, ಗಿರಿಜನ ಅಭಿವೃದ್ಧಿ ಮಂಡಲಿ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ  ಪ್ರಯೋಜನವಾಗಲಿಲ್ಲ ಜೊತೆಗೆ ಅರಣ್ಯದಲ್ಲೇ ವಾಸಿಸಲು  ಅರಣ್ಯ ಹಕ್ಕುಕಾಯ್ದೆಯಡಿ ಕೇಂದ್ರ ಹಾಗು  ಸರ್ಕಾರದಿಂದ ಹಕ್ಕು ಪತ್ರ ದೊರೆತಿದ್ದರೂ ಕೂಡ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸುವ  ಕೆಲಸ ನಡೆಯುತ್ತಿದೆ    ಆದ್ದರಿಂದ  ನಾಯಿ ನರಿಗಳಿಗಿಂತ  ಕಡೆಯಾಗಿ  ಬದುಕುತ್ತಿರುವ ನಮ್ಮನ್ನು  ಸರ್ಕಾರವೇ   ಸಾಮೂಹಿಕ ಹತ್ಯೆ ಮಾಡಲಿ ಎಂದು  ನೊಂದು ನುಡಿದರು.
  ಅರಣ್ಯ ಉತ್ಪನ್ನ ಸಂಗ್ರಹಿಸಲು  ನಮ್ಮನ್ನು ಕಾಡಿನೊಳಗೆ  ಹೋಗಲು  ಮತ್ತು ಮುಕ್ತವಾಗಿ  ಮಾರಾಟ ಮಾಡಲು ಬಿಡುತ್ತಿಲ,್ಲ ನಿಮ್ಮಿಂದ ಕಾಡು ಪ್ರಾಣಿಗಳಿಗೆ  ತೊಂದರೆ ಆಗುತ್ತದೆ  ಎಂದು  ತಡೆಯೊಡ್ಡುತ್ತಿದ್ದಾರೆ ಆದರೆ  ಅಲ್ಲಿನ ರೆಸಾರ್ಟ್ ಮತ್ತು ಬಂಗಲೆ ನಿರ್ಮಿಸಿ ಓಡಾಡುವವರಿಗೆ  ಲೈಟು, ಕುಡಿಯುವ ನೀರು,  ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು  ಅರಣ್ಯ ಇಲಾಖೆ ಅಧಿಕಾರಿಗಳು ಒದಗಿಸಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
  ಅರಣ್ಯ ವಾಸಿಗಳನ್ನು  ಅಭಿವೃದ್ಧಿಯೆಡೆಗೆ  ಕೊಂಡೊಯ್ಯುತ್ತೇವೆ ಎಂದು ಹೇಳಿ ಬರುವ ಅನುದಾನಗಳನ್ನೆಲ್ಲಾ  ತಮ್ಮ ಸ್ವಾರ್ತಕ್ಕೆ  ಬಳಸಿಕೊಂಡು  ತಾವು ಬಂಗಲೆ ಕಟ್ಟಿಕೊಂಡು ತಮ್ಮ ಮಕ್ಕಳನ್ನು  ವಿದೇಶಗಳಲ್ಲಿ  ವ್ಯಾಸಂಗ ಮಾಡಿಸುತ್ತಿರುವ   ಎನ್.ಜಿ.ಓಸ್ ಗಳೇ ಆದಿವಾಸಿಗಳ ಮೊದಲ ಶತೃಗಳಾಗಿದ್ದಾರೆ ಗಿರಿಜನರ ಹೆಸರಿನಲ್ಲಿ ಅವರುಗಳು ಶ್ರೀಮಂತರಾಗಿದ್ದಾರೆ. ಆದ್ದರಿಂದ ಮೊದಲು ಈ ಎನ್.ಜಿ.ಓ ಸಂಘಟನೆಗಳನ್ನು
ನಿಷೇಧಿಸಬೇಕು ಎಂದು  ಒತ್ತಾಯಿಸಿದರು.
ನಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ  ಇದೇತಿಂಗಳ 25 ರಂದು  ಭಾರತ ಸರ್ಕಾರದ ಹಾಡಿ ಅರಣ್ಯ ಹಕ್ಕು ಸಮಿತಿ ಒಕ್ಕೂಟದ ವತಿಯಿಂದ  ಜಿಲ್ಲಾಧಿಕಾರಿ ಕಚೇರಿ ಮುಂದೆ 300ಕ್ಕೂ ಹೆಚ್ಚುಮಂದಿ  ಅರಣ್ಯವಾಸಿಗಳಿಂದ ಧರಣೀ ಸತ್ತಯಾಗ್ರಹ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.

ಯುವಸಂಭ್ರಮ ಪೋಸ್ಟರ್  ಬಿಡುಗಡೆ
ಮೈಸೂರು, ಸೆ.16-ದಸರಾ ಮಹೋತ್ಸವದ ಅಂಗವಾಗಿ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಲ್ಲಿ  ಸಾಂಸ್ಕøತಿಕ ಕಲೆಗಳ ಬಗ್ಗೆ ಹೆಚ್ಚು ಆಶಕ್ತಿ ಮೂಡಿಸುವ ಸಲುವಾಗಿ ನಾಳೆಯಿಂದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ  ಆಯೋಜಿಸಿದೆ, ಇದರ ಅಂಗವಾಗಿ  ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಯುವ ಸಂಭ್ರಮ  ಪೋಸ್ಟರ್ ಅನ್ನು ಬಿಡುಗಡೆಮಾಡಲಾಯಿತು. 

No comments:

Post a Comment