ಸೆಪ್ಟೆಂಬರ್ 30 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.29.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಸೆಪ್ಟೆಂಬರ್ 30 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಹೊಯ್ಸಳ ಅಂಡ್ ಚಾಲುಕ್ಯನ್ ಆರ್ಕಿಟೆಕ್ಚರ್ ಆಫ್ ಕರ್ನಾಟಕ, ಬೆಳಿಗ್ಗೆ 11 ಗಂಟೆಗೆ ಕಬ್ಬಡಿ, ಮಧ್ಯಾಹ್ನ 2-30 ಗಂಟೆಗೆ ಡಿ.ದೇವರಾಜ ಅರಸ್, ಮಧ್ಯಾಹ್ನ 3 ಗಂಟೆಗೆ ಕಳವು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಭಗತ್ ಸಿಂಗ್, ಬೆಳಗ್ಗೆ 11 ಗಂಟೆಗೆ ಅಸ್ತು, ಮಧ್ಯಾಹ್ನ 2-30 ಗಂಟೆಗೆ ದೇ. ಜವರೇಗೌಡ ಹಾಗೂ ಮಧ್ಯಾಹ್ನ 3 ಗಂಟೆಗೆ ಮಂಜಾಡಿಕುರು ಚಲನಚಿತ್ರ ಪ್ರದರ್ಶಿಸಲಾಗುವುದು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಲೋಲಾ, ಮಧ್ಯಾಹ್ನ 1-30 ಗಂಟೆಗೆ ಚಂಗ್ ಕಿಂಗ್ ಎಕ್ಸ್‍ಪ್ರೆಸ್, ಮಧ್ಯಾಹ್ನ 3 ಗಂಟೆಗೆ ಪಿಕ್ ಪಾಕೆಟ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
ಲಕ್ಷ್ಮೀ-ಲೂಸಿಯಾ, ತಿಬ್ಬಾದೇವಿ-ಕ್ವೀನ್ (ಹಿಂದಿ), ಒಲಂಪಿಯಾ-ಬೃಂದಾವನ, ಡಿ.ಆರ್.ಸಿ-ವಿಕ್ಟರಿ, ಸತ್ಯಂ- ಬುಲ್‍ಬುಲ್ ಚಲನಚಿತ್ರಗಳು ಪ್ರದರ್ಶಿಸಲಾಗುವುದು.
ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ 15 ರೂ. ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
ಕೆ.ಆರ್.ನಗರದ ಶ್ರೀವೆಂಕಟೇಶ್ವರ-ಬೃಂದಾವನ, ನಂಜನಗೂಡಿನ ಲಲಿತ-ಎದೆಗಾರಿಕೆ, ಟಿ.ನರಸೀಪುರದ ಮುರುಗನ್-ಲೂಸಿಯಾ, ಪಿರಿಯಾಪಟ್ಟಣದ ಮಹದೇಶ್ವರ-ವಿಕ್ಟರಿ, ಹುಣಸೂರಿನ ಲೀಲಾ- ಬುಲ್‍ಬುಲ್ ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ- ಅದ್ಧೂರಿ.
ಪ್ರದರ್ಶನದ ಸಮಯ ಪ್ರತಿದಿನ ಸಂಜೆ 4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.
ಸೆಪ್ಟೆಂಬರ್ 30 ರ ದಸರಾ ಮಹೋತ್ಸವದ ಕಾರ್ಯಕ್ರಮಗಳು
ಮೈಸೂರು,ಸೆ.29.ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗಾಳಿಪಟ ಸ್ಪರ್ಧೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎಸ್.ಆರ್. ಪಾಟೀಲ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಹಾಗೂ ಮೈಸೂರು ಮಹಾನಗರಪಾಲಿಕೆ ಮಹಾಪೌರರಾದ ಎನ್.ಎಂ.ರಾಜೇಶ್ವರಿ ಸೋಮು ಅವರುಗಳು ಚಾಲನೆ ನೀಡುವರು.
ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಸೆಪ್ಟೆಂಬರ್ 30 ರಂದು ಸಂಜೆ 5-30 ರಿಂದ 6 ಗಂಟೆಯವರೆಗೆ ನಂಜನಗೂಡಿನ ಗಾನಸುಧಾ ಅವರಿಂದ ಸುಗಮ ಸಂಗೀತ, ಸಂಜೆ 6 ರಿಂದ 7-30 ಗಂಟೆಯವರೆಗೆ ಅಪ್ಪಗೆರೆ ತಿಮ್ಮರಾಜು, ಜನಾರ್ಧನ್, ಜೋಗಿಲ ಸಿದ್ದರಾಜು, ಸವಿತಾ ಗಣೇಶ್‍ಪ್ರಸಾದ್, ಶಾಂತ ಕುಲಕರ್ಣಿ, ಕೋಲಾರ ರಾಜಪ್ಪ, ರತ್ನ ವಿನುತ ಬೂದಿಹಾಳ ರಾಮಕೃಷ್ಣ ಪೂಜಾರ, ಪಿಚ್ಚಳ್ಳಿ ಶ್ರೀನಿವಾಸ್ ಅವರುಗಳಿಂದ ಜಾನಪದ ಝೇಂಕಾರ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಕದ್ರಿ ಗೋಪಾಲನಾಥ್ ಮತ್ತು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರಿಂದ ಜುಗಲ್‍ಬಂದಿ.
ಕಲಾಮಂದಿರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ದಾವಣಗೆರೆ ಎಲಿನಪ್ಪ ಜಾನಪದ ತಂಡದ ಶೈಲಜಾ ಬಾಯಿ ಅವರಿಂದ ಲಂಬಾಣಿ ನೃತ್ಯ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಅನುರಾಧ ಮಧುಸೂದನ್ ಅವರಿಂದ ವೀಣೆ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಕೊಪ್ಪಳ ಚೇತನ್ ಸಾಂಸ್ಕøತಿಕ ಕಲಾಸಂಸ್ಥೆಯಿಂದ ಗೀತ ರೂಪಕ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಚಿಕ್ಕಮರಿಯಪ್ಪ ತಂಡದಿಂದ ಬೀಸುಕಂಸಾಳೆ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಚೈತನ್ಯ ಕುಮಾರ ಅವರಿಂದ ಕೊಳಲು ವಾದನ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಮೈಸೂರಿನ ರಾಜೇಶ್ ಪಡಿಯಾರ್ ಅವರಿಂದ ಸುಗಮ ಸಂಗೀತ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಳ್ಳಾರಿ ಕೆ. ಹೊನ್ನೂರ ಸ್ವಾಮಿ ಅವರಿಂದ ತೊಗಲುಗೊಂಬೆ, ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಬೈಲಹೊಂಗಲ ಮಲ್ಲವ್ವ ಮ್ಯಾಗೇರಿ ಅವರಿಂದ ಕೃಷ್ಣ ಪಾರಿಜಾತ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಮೈಸೂರಿನ ಪರಿವರ್ತನ ತಂಡದಿಂದ ರಾವಿ ನದಿದಂಡೆ ಮೇಲೆ ನಾಟಕ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಬನಹಟ್ಟಿ ಜಯದೇವ ಮಹದೇವ ಬಣಕಾರ್ ಅವರಿಂದ ಝಾಂಜ್ ಪಥಕ್, ಸಂಜೆ 6 ರಿಂದ 7-30 ಗಂಟೆಯವರೆಗೆ ಧಾರವಾಡದ ಶಿವಕುಮಾರ್ ಪಾಟೀಲ್ ಅವರಿಂದ ವಚನ ಗಾಯನ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಬೆಂಗಳೂರಿನ ವಿದುಷಿ ಶಿಲ್ಪಾ ಅರವಿಂದ ಅವರಿಂದ ಕೂಚುಪುಡಿ ನೃತ್ಯ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ತ್ರಿಪುರ-ಸಂಗ್ರೀಮೋಫ್, ಸಂಜೆ 6 ರಿಂದ 6-30 ಗಂಟೆಯವರೆಗೆ ಮುಧೋಳ್ ವಿಠಲ ಬಲವಂತರಾವ್ ಸಿಂಧೆ ಹಾಗೂ ಸಂಜೆ 6-30 ರಿಂದ 7 ಗಂಟೆಯವರೆಗೆ ಟಿ.ನರಸೀಪುರದ ಸಾಯಿನಾಥ ಸಾಂಸ್ಕøತಿಕ ಸಂಸ್ಥೆಯಿಂದ ಕೋಲಾಟ ಕಾರ್ಯಕ್ರಮ ನಡೆಯಲಿವೆ.
ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸೆ. 30 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪಾಕಶಾಲೆಯಲ್ಲಿ ಸ್ಟಾರ್ ಹೊಟೇಲ್ ವಿಭಾಗದಲ್ಲಿ ಚಿಕನ್ ಬಿರಿಯಾನಿ ಹಾಗೂ ಕೇಟರರ್/ಚಿಕ್ಕ ಹೊಟೇಲ್ ವಿಭಾಗದಲ್ಲಿ ಅಕ್ಕಿ ಶ್ಯಾವಿಗೆ ಮತ್ತು ನಾಟಿ ಕೋಳಿ ಸಾರು ಏರ್ಪಡಿಸಲಾಗಿದೆ. ಮಧ್ಯಾಹ್ನ 3 ರಿಂದ 5-30 ಗಂಟೆಯವರೆಗೆ ಮಂಡ್ಯ ಬೂತನಹೊಸಹಳ್ಳಿಯ ಸತೀಶ್ ಅವರಿಂದ ಸೋಮನಕುಣಿತ, ಮೈಸೂರಿನ ವಿದ್ವಾನ್ ಹನುಮಂತರಾಜು ಮತ್ತು ವೃಂದದವರಿಂದ ಲಯನಾದ ತರಂಗ, ಮೈಸೂರಿನ ಸುಮಂಗಲಾ ಜಂಗಮಶೆಟ್ಟಿ ಅವರಿಂದ ಸುಗಮ ಸಂಗೀತ ಸಂಜೆ 5-30 ರಿಂದ 6 ಗಂಟೆಯವರೆಗೆ ಕೆ.ಆರ್.ನಗರ ತಾಲ್ಲೂಕಿನ ಅನ್ನಭಾಗ್ಯ ಯಾತ್ರೆ ಕಾರ್ಯಕ್ರಮ, ಸಂಜೆ 6 ರಿಂದ 7 ಗಂಟೆಗೆ ಮೇಲುಕೋಟೆ ರತ್ನಂ ಮತ್ತು ಸಂಗಡಿಗರು ಸ್ಯಾಕ್ಸೊಪೋನ್ ವಾದನ ರಾತ್ರಿ 7 ರಿಂದ 7-30 ಗಂಟೆಗೆ ಯುವ ಸಂಭ್ರಮದಲ್ಲಿ ವಿಜೇತ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 7-30 ರಿಂದ 8-30 ಗಂಟೆಗೆ ಮೈಸೂರಿನ ಗೋಕುಲಂ ಪ್ರಮೋದ್ ಶೆಟ್ಟಿ, ನಿರಂತರ ನೃತ್ಯ ಕಾರ್ಟೂನ್ ವಿಶೇಷ ಕಾರ್ಯಕ್ರಮ ಸಮಕಾಲಿನ ನೃತ್ಯ.
ಮಹಿಳಾ ದಸರಾ:- ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ವಿಶೇಷ ಮಕ್ಕಳು ಹಾಗೂ ವಿಕಲಚೇತನರಿಗಾಗಿ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಸ್ತ್ರೀಸೇವಾ ನಿಕೇತನ (ರಾಜ್ಯ ಮಹಿಳಾ ನಿಲಯ) ಮೈಸೂರು ಸಂಸ್ಥೆಯ ನಿವಾಸಿಗಳಿಂದ ಮಹಿಳಾ ದೌರ್ಜನ್ಯ ತಡೆ ಕುರಿತು ರೂಪಕ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ. ಸ್ಥಳ: ಜೆ.ಕೆ.ಗ್ರೌಂಡ್ಸ್
ಮಕ್ಕಳ ದಸರಾ:- ಸೆ. 30 ರಂದು ಬೆಳಿಗ್ಗೆ 9 ರಿಂದ 9-30 ಗಂಟೆಯವರೆಗೆ ಮೈಸೂರಿನ ಶಾಂಭವಿ ಸಂಗೀತ ಶಾಲಾ ಮಕ್ಕಳಿಂದ ಸುಗಮ ಸಂಗೀತ, ಬೆಳಿಗ್ಗೆ 9-30 ರಿಂದ 10-30 ಗಂಟೆಯವರೆಗೆ ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಂದ ಡಾ| ಚಂದ್ರಶೇಖರ ಕಂಬಾರ ವಿರಚಿತ ನಾಟಕ ಪುಷ್ಪರಾಣಿ, ಬೆಳಿಗ್ಗೆ 10-30 ರಿಂದ 1-30 ಗಂಟೆಯವರೆಗೆ ಬೆಂಗಳೂರಿನ ಗೋಪಿಮಾಧವ್ ಕ್ವಿಜ್ ಮಾಸ್ಟರ್ ಅವರಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ 8 ರಿಂದ 10 ತರಗತಿ ಮಕ್ಕಳಿಗೆ, ಮಧ್ಯಾಹ್ನ 2 ರಿಂದ 3-30 ಗಂಟೆಯವರೆಗೆ ಮೈಸೂರು ತಾಲ್ಲೂಕಿನ ಡಿ.ಎಂ.ಜಿ.ಹಳ್ಳಿಯ ನವೋದಯ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3-30 ರಿಂದ 4-30 ಗಂಟೆಯವರೆಗೆ 2013-14ನೇ ಸಾಲಿನಲ್ಲಿ ರಾಜ್ಯ/ರಾಷ್ಟ್ರಮಟ್ಟದಲ್ಲಿ ಇನ್‍ಸ್ಪೈರ್/ಎನ್.ಟಿ.ಎಸ್.ಇ/ಪ್ರತಿಭಾ ಕಾರಂಜಿ/ಎನ್.ಸಿ.ಸಿ./ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ವಿಜೇತ ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಭಿನಂದನೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಬಗ್ಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಸಮಾರೋಪ ಸಮಾರಂಭ, ಸ್ಥಳ: ಜಗನ್ಮೋಹನ ಅರಮನೆ.
ಕವಿಗೋಷ್ಠಿ: ಸೆಪ್ಟೆಂಬರ್ 30 ರಂದು ಬೆಳಿಗ್ಗೆ 11-30 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ|| ಬಂಜಗೆರೆ ಜಯಪ್ರಕಾಶ, ಮುಖ್ಯ ಅತಿಥಿ ಡಾ|| ಎಚ್.ಎಲ್. ಪುಷ್ಪ ಪ್ರಸಿದ್ಧ ಕವಿಗಳು, ಭಾಗವಹಿಸುವ ಕವಿಗಳು ಚಂದ್ರು ತುರುವಿನಹಾಳ, ಚ.ಹ.ರಘುನಾಥ, ಸಂಗಮೇಶ್ ಕೋಟೆ, ಹನಸೋಗೆ ಸೋಮಶೇಖರ್, ಮರಿಯಪ್ಪ ನಾಟೇಕರ್, ರವಿಕುಮಾರ್ ನೀಹ, ಮಹೇಶ್ ಬಳ್ಳಾರಿ, ಅಲ್ಲಾ ಗಿರಿರಾಜ್, ಸಿ.ವಿ.ಶೇಷಾದ್ರಿ ಹೊಳವನಹಳ್ಳಿ, ಎಂ.ಡಿ.ಗೋಗೇರಿ, ಕೆ.ಪಿ. ವೀರಲಿಂಗನಗೌಡ, ಸೋಸಲೆ ಗಂಗಾಧರ, ನಿಜಲಿಂಗಪ್ಪ ಮಟ್ಟಿಹಾಳ, ನೆಲ್ಲಿಕಟ್ಟೆ ಸಿದ್ದೇಶ್, ಎಸ್. ಮಂಜುನಾಥ್, ಪ್ರವರ ಕೊಟ್ಟೂರು, ಬಸವರಾಜ ಸೂಳಿಬಾವಿ, ಸರ್ಜಾಶಂಕರ ಹರಳೀಮಠ, ಮಂಜುನಾಥ ಅದ್ದೆ, ಶಿವರಾಜ ಬೆಟ್ಟದೂರು, ಸೈಫ್ ಜಾನ್ಸೆ, ಅರ್ಥ ಪೆರ್ಲ, ಕೈದಾಳ ಕೃಷ್ನಮೂರ್ತಿ, ಮಿತಾ ದೇವನೂರು, ರವಿ ಅಜ್ಜೀಪುರ, ಮಲ್ಲು ಸಿ. ಕೂತ್ನೂರು, ಅಶೋಕ ನರೋಡೆ, ವೆಂಕಟೇಶ್ ಇಂದ್ವಾಡಿ, ವಿಠಲ್ ಆರ್. ಜಾಂಬಾಳ, ರೇಷ್ಮಾ ಶೇಖ್, ಸತ್ಯಮಂಗಲ ಮಹಾದೇವ, ಲೋಕೇಶ್ ಎಸ್., ಸುರೇಶ್ ಕಾಂತರಾಜಪುರ.
ಮಧ್ಯಾಹ್ನ 2-30 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಕಾವ್ಯ ಸುಧೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ|| ಹಿ.ಚಿ. ಬೋರಲಿಂಗಯ್ಯ ಅವರಿಂದ ಕಾವ್ಯ ಸುಧೆಗೆ ಚಾಲನೆ ನೀಡುವರು. ಅಧ್ಯಕ್ಷತೆ ಮೈಸೂರಿನ ಪ್ರಸಿದ್ಧ ಸಂಗೀತಗಾರರಾದ ಪಂಡಿತ್ ಇಂದೂಧರ ನಿರೋಡಿ, ಮುಖ್ಯ ಅತಿಥಿ ಪ್ರೊ|| ಆರ್. ರಾಮಕೃಷ್ಣ, ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಮತ್ತು ತಂಡದಿಂದ ವಚನ ಗಾಯನ, ಮೈಸೂರಿನ ಪಿ. ಸುರಭಿ ಮತ್ತು ತಂಡದಿಂದ ಕೀರ್ತನೆ ಗಾಯನ, ಮಂಡ್ಯ ಹುರಗಲವಾಡಿ ರಾಮಯ್ಯ ಮತ್ತು ತಂಡದಿಂದ ತತ್ವಪದ ಗಾಯನ, ಮೈಸೂರಿನ ನಿತಿನ್ ರಾಜಾರಾಮಶಾಸ್ತ್ರಿ ಮತ್ತು ತಂಡದಿಂದ ಭಾವಗೀತೆ ಗಾಯನ ಹಾಗೂ ಮೈಸೂರಿನ ಜಯಶಂಕರ ಮೇಸ್ತ್ರಿ ಮತ್ತು ತಂಡ ಹಾಗೂ ರಾಮಚಂದ್ರ ತಂಡದಿಂದ ಜನಪದ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ.
ಕುಸ್ತಿ:- ಸೆ. 30 ರಂದು ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಗಳನ್ನು ಮತ್ತು ದಿನಾಂಕ 01-10-2014 ರಂದು ರಾಜ್ಯ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಅಂತಿಮ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಸೆ.29.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಮಧ್ಯಾಹ್ನ 1-35 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 3 ಗಂಟೆಗೆ ಹೆಚ್.ಡಿ.ಕೋಟೆಯ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಂಜೆ 6 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.
ಏರೋ ಮಾಡೆಲಿಂಗ್ ಪ್ರದರ್ಶನಕ್ಕೆ ಚಾಲನೆ
ಮೈಸೂರು,ಸೆ.29.ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಮೈಸೂರು ಫ್ಲಲಿಂಗ್ ಅಸೋಸಿಯೇಷನ್ ವತಿಯಿಂದ ನಗರದ ಬನ್ನಿಮಂಟದ ಕವಾಯತು ಮೈದಾನದಲ್ಲಿ ಏರ್ಪಡಿಸಲಾದ ಏರೋ ಮಾಡೆಲಿಂಗ್ ಕಾಯಕ್ರಮಕ್ಕೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ರಿಮೋಟ್ ಕಂಟ್ರೋಲ್ ಒತ್ತುವ ಮೂಲಕ ಇಂದು ಚಾಲನೆ ನೀಡಿದರು.
ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ಸುತ್ತಮುತ್ತÀಲ್ಲಿನ ವೃತ್ತಿಪರ ರಿಮೋಟ್ ನಿಯಂತ್ರಣ ವಿಮಾನ ಫ್ಲೈಯರ್‍ಗಳು ಏರೋ ಮಾಡೆಲಿಂಗ್ ಕಾಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಒಟ್ಟು 15 ರಿಮೋಟ್ ನಿಯಂತ್ರಣ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ವೀಕ್ಷಿಸಲು ಆಗಮಿಸಿದ ಜನರ ಮನ ಸೂರೆಗೊಳಿಸಿತು.
40ಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿರುವ ಭಾರತದಲ್ಲೇ ಅತಿ ಕಿರಿಯ ರೇಡಿಯೋ ನಿಯಂತ್ರಣ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆಂಗಳೂರಿನ ಏಳು ವರ್ಷದ ಆದಿತ್ಯ ಆರ್ ಪವಾರ್ ಅವರು ಕಾಯಕ್ರಮದ ಮುಖ್ಯ ಆಕರ್ಷಕÀರಾಗಿದ್ದರು.
ರೇಡಿಯೋ ನಿಯಂತ್ರಣ ಪೈಲೆಟ್‍ಗಳಾದ ಅಲೆಕ್ಸ್ ಪ್ರವೀಣ್, ಅಭೈಯ್ ಪವಾರ್, ಸಾಗರ್, ಸ್ಯಾಮ್ಯಯೆಲ್, ಜಯಪ್ರಕಾಶ್, ರಾಜಿ, ಶಿವಕುಮಾರ್, ರಾಕೇಶ್ ಹಾಗೂ ಶಶಿ ಕಾರ್ಯಕ್ರಮದಲ್ಲಿ ಪ್ರತಿಭೆ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಸಿ.ಶಿಖಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ, ತಹಶೀಲ್ದಾರ್ ನವೀನ್ ಜೋಸೆಫ್, ಮೈಸೂರು ಫ್ಲಲಿಂಗ್ ಅಸೋಸಿಯೇಷನ್‍ನ ಅಧ್ಯಕ್ಷೆ ಜೆರ್ರಿ ಆರೋಕ್ಯ ಮೇರಿ, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ಸಿದ್ದಲಿಂಗಯ್ಯ ಒತ್ತು
ಮೈಸೂರು,ಸೆ.29.ರಾಜ್ಯ ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಲ್ಲಿ, ಇಡೀ ವೈಚಾರಿಕ ಜಗತ್ತಿಗೆ ಗೌರವ ಸಲ್ಲಿಸಿದಂತೆ ಎಂದು ಪ್ರಸಿದ್ಧ ಕವಿ ಹಾಗೂ ಚಿಂತಕರಾದ ಡಾ. ಸಿದ್ದಲಿಂಗಯ್ಯ ಅವರು ಹೇಳಿದರು.
ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಯಕ್ತ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪರಂಪರೆ ಬಗ್ಗೆ ಗೌರವ ಇರಲಿ. ಯಾರೂ ಪರಂಪರೆ ವಿರೋಧಿಯಲ್ಲಿ. ಆದರೆ ಅದರಲ್ಲಿನ ಮೌಢ್ಯವನ್ನೂ ವಿರೋಧಿಸಬೇಕಾಗಿದೆ. ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಹೇಳಿದರು.
ಕವಿಗಳಲ್ಲಿ ಮುಗ್ಧತೆ ಕಾಣೆಯಾಗುತ್ತಿರುವ ಕಾರಣ ಜನಪದ ಸಾಹಿತ್ಯದ ಮರು ಓದು ಅಗತ್ಯವಾಗಿದೆ. ಜಾಗತೀಕರಣವನ್ನು ಜಾನಪದೀಕರಣದೊಡನೆ ಎದುರಿಸಬೇಕಾಗಿದೆ. ಇದರಿಂದ ಸಮಾಜ ಸಮಾನತೆಯತ್ತ ಸಾಗುತ್ತದೆ ಎಂದು ತಿಳಿಸಿದರು.
ಕವಿ ಅನವಶ್ಯಕ ಗೊಂದಲ, ಅಳುಕು, ಸಂಕೋಚಗಳಿಗೆ ಸಿಲುಕಿಕೊಳ್ಳಬಾರದು. ಮುಕ್ತ ಕವಿ, ವೈಚಾರಿಕ ಕವಿ ಆಗಬೇಕು. ಕಿರಿಯ ಕವಿಗಳಿಗೆ ಹಿರಿಯ ಕವಿಗಳ ಬಗ್ಗೆ ಗೌರವ ಇರಬೇಕು. ಸತತ ಕಾವ್ಯ ಕೃಷಿಯನ್ನು ಮಾಡಬೇಕು ಹಾಗೂ ಅಧ್ಯಯನ ಶೀಲರಾಗಿರÀಬೇಕು ಎಂದು ಸಲಹೆ ನೀಡಿದರು.
ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜು ಮಾತನಾಡಿ ಕವಿಗಳು ಎನ್ನುವವರು ಅರ್ಥವಾಗದಂತೆ ಗದ್ಯಗಳನ್ನು ಬರೆಯುತ್ತಿದ್ದಾರೆ. ಕವಿಯಾಗಬೇಕಾದರೆ ಸಾಮಾನ್ಯರಿಗೂ ಅರ್ಥವಾಗುವಂತೆ ಸಾಧ್ಯತೆ ಹುಡುಕಿಕೊಳ್ಳಬೇಕು. ಕವಿಯೋ, ಅಲ್ಲವೋ ಎಂಬುದನ್ನೂ ಗಟ್ಟಿಯಾಗಿ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್, ದಸರಾ ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷ ಶೇಖರ್, ಡಾ.ಸಿ. ನಾಗಣ್ಣ, ಡಾ.ಸರ್ವಮಂಗಳಾ, ಡಾ. ಲತಾ ರಾಜಶೇಖರ್, ಶ್ರೀನಿವಾಸ ಯಾದವ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಅಕ್ಟೋಬರ್ 9 ರಂದು ಪ್ರಗತಿ ಪರಿಶೀಲನೆ ಸಭೆ
ಮೈಸೂರು,ಸೆ.29.ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳು ಸೇರಿದಂತೆ) ಮಾಸಿಕ ಪ್ರಗತಿ ಪರಿಶೀಲನೆ ಸಭೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಪರೀಕ್ಷೆ: ನವೆಂಬರ್ 12 ರಿಂದ ಆರಂಭ
ಮೈಸೂರು,ಸೆ.29.ಮೈಸೂರು ವಿಶ್ವ ವಿದ್ಯಾನಿಲಯದ 1, 3 ಮತ್ತು 5ನೇ ಸೆಮಿಸ್ಟರ್‍ನ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ ಎಸ್.ಡಬ್ಲ್ಯೂ, ಬಿ.ಎಸ್ಸಿ (ಈ.ಅ.Sಛಿ), ಬಿ.ಟಿ.ಹೆಚ್, ಬಿ.ಎಸ್ಸಿ (ವಾಕ್ ಮತ್ತು ಶ್ರವಣ), ಬಿ.ಎಸ್.ಎಡ್, (ಊ&I) ಬಿ.ಎಚ್.ಎಂ, (ಐ.ಎಸ್.ಎಸ್.ಸ್ಕೀಂ), ಬಿ.ಪಿಎ, ಬಿ.ಎಫ್.ಎ, ಬಿ.ಸಿ.ಎಸ್ ಮತ್ತು ಬಿ.ಸಿ.ಎ ಪದವಿಗಳ ಪರೀಕ್ಷೆಗಳು ನವೆಂಬರ್ 12 ರಿಂದ ಆರಂಭವಾಗಲಿವೆ.
ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಅರ್ಜಿಗಳನ್ನು ಪಡೆದು, ಪರೀಕ್ಷಾ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ.
ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿಯೇ ಪರೀಕ್ಷಾ ಶುಲ್ಕವನ್ನು ಕಟ್ಟಬೇಕು ಮತ್ತು ಪರೀಕ್ಷೆಯ ಅಭ್ಯರ್ಥನಾ ಪತ್ರವನ್ನು ಸಹ ಸಲ್ಲಿಸಬೇಕು. ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದ ಮೇಲೆ ಪೂರ್ತಿ ಸಹಿ ಮಾಡಿ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ ಎಂದು ಬರೆಯಿಸಿ ಪ್ರಾಂಶುಪಾಲರಿಂದ ಸಹಿ ಮಾಡಿಸಿ ಅವರ ಪ್ರವೇಶ ಪತ್ರಿಕೆಗೆ ಅಂಟಿಸಬೇಕು ಹಾಗೂ ಪರೀಕ್ಷಾ ಅರ್ಜಿಯ ಜೊತೆಗೆ ತಾವು ತೆಗೆದುಕೊಂಡಿರುವ ಆಯಾ ಸೆಮಿಸ್ಟರ್‍ಗೆ ಸಂಬಂಧಪಟ್ಟ ಪರೀಕ್ಷೆಗಳ ಅಂಕ ಪಟ್ಟಿಗಳ ಜೆರಾಕ್ಸ್ ಪತ್ರಿಗಳನ್ನು ಮಾತ್ರ ಕಡ್ಡಾಯವಾಗಿ ಲಗತ್ತಿಸ ತಮ್ಮ ಕಾಲೇಜುಗಳಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ರಾಘವೇಂದ್ರ ಬಿ.ಎಸ್. ಅವರಿಗೆ ಡಾಕ್ಟರೇಟ್ ಪದವಿ
ಮೈಸೂರು,ಸೆ.29.ಮೈಸೂರು ವಿಶ್ವವಿದ್ಯಾಲಯವು ರಾಘವೇಂದ್ರ ಬಿ.ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ|| ವಿ.ಎ. ವಿಜಯನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ “ ಇಜಿಜಿiಛಿಚಿಛಿಥಿ oಜಿ ಇugeಟಿiಚಿ ಎಚಿmboಟಚಿಟಿಚಿ ಐiಟಿಟಿ ಚಿಟಿಜ Soಟiಜಚಿgo ಅಚಿಟಿಚಿಜeಟಿsis ಐiಟಿಟಿ ಐeಚಿಜಿ ಇxಣಡಿಚಿಛಿಣs iಟಿ ಣhe ಐಚಿಡಿvಚಿe oಜಿ ಂeಜes ಂegಥಿಠಿಣi ಐiಟಿಟಿ ಚಿಣ ಒಥಿsoಡಿe” ಎಂಬ ಮಹಾಪ್ರಬಂಧವನ್ನು Zooಟogಥಿ ವಿಷಯದಲ್ಲಿ ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ರಾಘವೇಂದ್ರ ಬಿ.ಎಸ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಪರಾಂಪರಿಕ ನಡಿಗೆಗೆ ಉಪಮೇಯರ್ ಶೈಲೇಂದ್ರಕುಮಾರ್ ಅವರಿಂದ ಚಾಲನೆ
ಮೈಸೂರು,ಸೆ.29.ದಸರಾ ಮಹೋತ್ಸವ2014 ರ ಅಂಗವಾಗಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಮೈಸೂರಿನ ಮಹಾನಗರಪಾಲಿಕೆಯ ಸದಸ್ಯರು, ಮಹಾಜನ ಹಾಗು ಟೆರೇಷಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಹಾಗೂ ಆಡಳಿತ ತರಬೇತಿ ಸಂಸ್ಥೆಯ ತರಬೇತಿನಿರತರಿಗೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಇತಿಹಾಸ, ಕಲೆ ವಾಸ್ತುಶಿಲ್ಪ, ಪರಂಪರೆ ಮತ್ತು ಸಂಸ್ಕøತಿಗಳ ಕುರಿತು ಅರಿವು ಮೂಡಿಸಲು ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು.
ಪುರಭವನದ ಆವರಣದಲ್ಲಿ ಉಪ ಮೇಯರ್ ಶೈಲೇಂದ್ರಕುಮಾರ್ ಇವರಿಂದ ಚಾಲನೆಗೊಂಡು, ದೊಡ್ಡಗಡಿಯಾರ, ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಕೆ ಆರ್ ಸರ್ಕಲ್, ದೇವರಾಜ ಮಾರುಕಟ್ಟೆ, ಮೆಡಿಕಲ್ ಕಾಲೇಜ್, ಆಯುರ್ವೇದಿಕ್ ಆಸ್ಪತ್ರೆ, ಕಾವಾ ಕಟ್ಟಡದ ಬಳಿ ಕೊನೆಗೊಂಡಿತು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ವಿಭಾಗದ ವಿಶ್ರಾಂತ ಪ್ರಾದ್ಯಾಪಕರಾದ ಡಾ. ರಂಗರಾಜು ಮತ್ತು ಈಚನೂರ್ ಕುಮಾರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಮೈಸೂರು ಮಹಾರಾಜ ಇತಿಹಾಸ ಮತ್ತು ಪರಂಪರೆ ಕುರಿತು ಮಾಹಿತಿಯನ್ನು ತಿಳಿಸಿಕೊಟ್ಟರು.
ಈ ನಡಿಗೆ ಕಾರ್ಯಕ್ರಮದಲ್ಲಿ ಇಲಾಖೆ ಆಯುಕ್ತರಾದ ಡಾ. ಸಿ.ಜಿ. ಬೆಟಸೂರು ಮಠ, ಪೂಜ್ಯ ಮಹಾಪೌರರಾದ ರಾಜೇಶ್ವರಿ, ಉಪ ನಿರ್ದೇಶಕರಾದ ಶ್ರೀ ಗವಿಸಿದ್ದಯ್ಯ ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
No comments:
Post a Comment