ಸೆ.6 ಮತ್ತು 7 ರಂದು ಗಗನಚುಕ್ಕಿ ಜಲಪಾತೋತ್ಸವ
ಮಂಡ್ಯ,ಸೆ.3- ಇದೆ ತಿಂಗಳ 6 ಮತ್ತು 7 ರಂದು ಗಗನಚುಕ್ಕಿ ಜಲಪಾತೋತ್ಸವವು ನಡೆಯಲಿದ್ದು ಇದನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಗಾಗಿದೆ ಎಂದು ಮಳವಳ್ಳಿ ಶಾಸಕ ಎಂ.ಪಿ.ನರೇಂದ್ರ ಸ್ವಾಮಿ ತಿಳಿಸಿದರು.
ಶಿಂಷಾದ ಮಯೂರ ಪ್ರವಾಸಿ ಮಂದಿರದಲ್ಲಿಂದು ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಲಪಾತೋತ್ಸವನ್ನು ಬಹಳ ವಿಜ್ರುಂಬಣೆಯಲಿಂದ ಆಚರಿಸಲು ಹಲವು ಯೋಜನೆಗಳನ್ನು ರೂಪಸಿಕೊಂಡಿದ್ದು, ಜಲಪಾತೋತ್ಸವ ನೋಡಲು ಬರುವಂತಹ ಪ್ರವಾಸಿಗರಿಗೆ ಯಾವುದೇ ರೀತಿಯಾದ ಅಡ್ಡಿ ಆತಂಕಗಳು ಆಗದಂತೆ ಎಲ್ಲಾ ಸಿದ್ದತೆಯ ಕಾರ್ಯಗಳು ನಡೆದಿವೆ.
ಪ್ರವಾಸಿಗರಿಗೆ ಮಧ್ಯಾಹ್ನ ಮತ್ತು ರಾತ್ರಿವೇಳೆಯಲ್ಲಿ ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ತಾತ್ಕಾಲಿಕವಾಗಿ ಅಲ್ಲಲ್ಲಿ ಶುದ್ಧಕುಡಿಯುವ ನೀರಿನ ಕೇಂದ್ರಗಳ ಆಯೋಜನೆ ಮಾಡಲಾಗಿದೆ, ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಜಿಲ್ಲಾಡಳಿತವು ಕಳೆದಬಾರಿಗಿಂತಲೂ ಹೆಚ್ಚಿನ ಕಾಳಜಿ ವಹಿಸಿ ಸಿದ್ದತೆಯನ್ನು ರೂಪಸಿಕೊಂಡಿದೆ ಎಂದು ಹೇಳಿದರು.
ಗಗನ ಚುಕ್ಕಿ ಜಲಪಾತೋತ್ಸವಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 40 ಲಕ್ಷ ಕನ್ನಡ ಮತ್ತುಸಂಸ್ಕøತಿ ಇಲಾಖೆಯ ವತಿಯಿಂದ 40 ಲಕ್ಷ ಸೇರಿ 80 ಲಕ್ಷ ದೊರೆಯಲಿದ್ದು, ಇನ್ನೂ ಪ್ರವಾಸೋದ್ಯಮ ಇಲಾಖೆಯಿಂದ ಸಿಗಬೇಕಾದ ಅನುದಾನ ನಾಳೆಯ ವೇಳೆಗೆ ಕೈಸೇರಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮೊದಲನೆ ದಿನದಂದು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಅಂಬರೀಶ್‍ರವರು ಉದ್ಘಾಟಿಸಲಿದ್ದು,ಶಾಸಕ ನರೇಂದ್ರ ಸ್ವಾಮಿ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಸದ ಪುಟ್ಟರಾಜು, ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಉಪಸ್ಥಿತರಾಗಲಿದ್ದು, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಕಾನೂನು ಹಾಗೂ ಸಂವಿದಾನ ಸಚಿವ ಬಿ.ಟಿ ಜಯಚಂದ್ರ, ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ, ಸಹಕಾರಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡ, ಜಿ.ಪಂ. ಅಧ್ಯಕ್ಷೆ ಮಂಜುಳಾ ಪರಮೇಶ್, ಸೇರಿದಂತೆ ಜಿ.ಪಂ.ಸದಸ್ಯರು ಹಾಗೂ ತಾ.ಪಂ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲೆಯಲ್ಲಿನ ವಿವಿಧ ಶಾಲೆಗಳಿಂದ ಅತ್ಯುತ್ತಮವಾಗಿ ನೃತ್ಯ ಪ್ರದರ್ಶನ ನೀಡಿದಂತಹ ಶಾಲಾ ಮಕ್ಕಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇತರೆ ಸಾಂಸ್ಕøತಕ ಕಾರ್ಯಕ್ರಮಗಳ ನಂತರ ಸಂಜೆ 7 ರಿಂದ 10ರ ವರೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಸೆ.7 ರಂದು ಸುಗಮ ಸಂಗೀತದೊಂದಿಗೆ ಪ್ರಾರಂಭಗೊಳ್ಳಲಿದ್ದು, ಜಾನಪದ, ಭರತನಾಟ್ಯ, ಭಾವಗೀತೆ, ವಿಭಿನ್ನವಾಗಿ ಸಾಂಗ್ ಪ್ಯೂಷನ್, ಚಲನಚಿತ್ರ ಹಾಸ್ಯ ಚಿಕ್ಕಣ್ಣ ರಿಂದ ಹಾಸ್ಯ ಚಟಾಕಿ, ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7 ಗಂಟೆ ನಂತರ ಸಂಗೀತ ಸಂಜೆ ಮುಂದುವರೆಯಲಿದೆ. ಸಂಗೀತ ಸಂಜೆಯಾದೊಡನೆ ವೇದಿಕೆ ಸಮಾರೋಪ ಸಮಾರಂಭಪ್ರಾರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸುವರು, ಇವರೊಂದಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್, ವಾರ್ತಾಸಚಿವ ರೋಷನ್‍ಬೇಗ್, ಸಣ್ಣ ನೀರಾವರಿ ಸಚಿವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಾಗಲಿದ್ದಾರೆ ಎಂದು ಕಾರ್ಯಕ್ರಮಗಳ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಇವರೊಂದಿಗೆ ಉಪವಿಭಾಗಾಧಿಕಾರಿ ಅರುಳ್‍ಕುಮಾರ್, ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆಯ ಅಣ್ಣೇಗೌಡ, ತಾಹಸಿಲ್ದಾರ್ ಬಸವರಾಜು, ಇಓ ವೆಂಕಟೇಶ್, ತಾ.ಪಂ ಸದಸ್ಯ ಸಿದ್ದಲಿಂಗಯ್ಯ ಇದ್ದರು.
ಉತ್ಸವಕ್ಕೆ ಬರಲು ಜಿಲ್ಲಾ ಕೇಂದ್ರ ಮಂಡ್ಯದಿಂದ ವಿಶೇಷ ಬಸ್ ವ್ಯವಸ್ಥೆ ಮತ್ತು ಮಳವಳ್ಳಿಯ ಪ್ರತಿ ಹೋಬಳಿಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆಯಿಂದಾಗಿ ಭರಚುಕ್ಕಿ ಜಲಪಾತೋತ್ಸವ ರದ್ದಾದ ಹಿನ್ನಲೆಯಲ್ಲಿ ಈ ಬಾರಿ ಸಂಪೂರ್ಣ ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, 20 ಸಾವಿರ ಜನಕ್ಕೆ ಆಸಿನ ವ್ಯವಸ್ಥೇ ಕಲ್ಪಿಸಲಾಗಿದೆ. 40-40 ಚ.ಅಡಿಯಲ್ಲಿ ವೇದಿಕೆ ತೆರೆಯಲಾಗಿದೆ ಎಂದು ತಿಳಿಸಿದರು.

No comments:
Post a Comment