Saturday, 20 September 2014

ಹೆಚ್ಚು ರಪ್ತು ವಹಿವಾಟುಗಳಿಂದ ದೇಶದ ಅಭಿವೃದ್ಧಿ ಸಾಧ್ಯ
ಮಂಡ್ಯ ಸೆ.20-ದೇಶದ ಅಭಿವೃದ್ಧಿಯಲ್ಲಿ ಸಾಗಲು ನಮ್ಮಲ್ಲಿರುವ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದರಿಂದ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಮಂಜುಳ ಪರಮೇಶ್ ಅವರು ತಿಳಿಸಿದರು.
ಅವರು  ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಡ್ಯ, ಸಣ್ಣ ಕೈಗಾರಿಕೆಗಳ ಸಂಘ, ಸೋಮನಹಳ್ಳಿ ಮತ್ತು ತೂಬಿನಕೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹರಿಪ್ರಿಯಾ ಹೋಟೆಲ್‍ನಲ್ಲಿ ನಡೆದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಪ್ತುದಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ವಹಿವಾಟುವಿನಲ್ಲಿ ತೊಂದರೆಗಳ ನಿವಾರಣಾ ಹಾಗೂ ರಪ್ತು ಅವಕಾಶಗಳ ಬಗ್ಗೆ  ಶಿಬಿರಗಳಲ್ಲಿ ಅರಿವು ಮೂಡಿಸಬೇಕು ಹಾಗೂ ಉದ್ಯಮಗಳಲ್ಲಿ ಯಶಸ್ವಿಯಾಗಲು ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಫ್.ಕೆ.ಸಿ.ಸಿ.ಐ. ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸುಧಾಕರ ಎಸ್. ಶೆಟ್ಟಿಯವರು ಮಾತನಾಡಿ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಹಾಗೂ ಕೆಲವು ನಿಯಮಗಳನ್ನು ಪಾಲಿಸಬೇಕು. ಇದರಿಂದ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಹೇಳಿದ ಅವರು ವ್ಯಾಪಾÀರಸ್ಥರಿಗೆ ಸರ್ಕಾರದಿಂದ ಬೇಕಾಗುವ ಎಲ್ಲಾ ನೆರವು ಹಾಗೂ ಪೂರಕವಾದ ವಾತಾವರಣ ನೀಡಲಿದೆ ಎಂದು ತಿಳಿಸಿದರು.
 ಜಿಲ್ಲಾಧಿಕಾರಿಗಳಾದ ಡಾ|| ಅಜಯ್‍ನಾಗಭೂಷಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ರಫ್ತಿ ವಹಿವಾಟಿನಲ್ಲಿ ತೊಂದರೆಗಳ ನಿವಾರಣೆ ಹಾಗೂ ಪರಿಹಾರದ ಬಗ್ಗೆ ಅರಿವು ಅಗತ್ಯವಾಗಿದ್ದು, ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹಿಸಿ ಅವರಿಗೆ ಆಗಬೇಕಾದಂತಹ ಕೆಲಸಗಳನ್ನು ಅಧಿಕಾರಿಗಳು ಮಾಡಲು ಕ್ರಮ ವಹಿಸಲು ಮುಂದಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎ. ಆನಂದ್, ಮಂಡ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಮಹೇಂದ್ರ ಬಾಬು, ಜಿಲ್ಲಾ ಕೈಗಾರಿಕಾ ಕೇಂದ್ರದ ಲಕ್ಷ್ಮೀನಾರಾಯಣ್, ವಿ.ಟಿ.ಪಿ.ಸಿ. ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ಹಾಗೂ ಇತರರು ಉಪಸ್ಥಿತರಿದ್ದರು.
ಡಿ. ದೇವರಾಜ ಅರಸು ರವರ 99ನೇ ಜನ್ಮ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವತಿಯಿಂದ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರವರ 99ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು.
ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಎಂ.ಹೆಚ್. ಅಂಬರೀಷ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಂಜುಳ ಪರಮೇಶ್ ಅವರು ಜ್ಯೋತಿ ಬೆಳಗಿಸಲಿದ್ದು, ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ಸವಲತ್ತುಗಳ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಿಕ್ಷಣಾರ್ಥಿಗಳ ಮದ್ದು ಗುಂಡು ಗುರಿ ಇಡುವ ಪರೀಕ್ಷೆ
 ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಫೈರಿಂಗ್ ರೇಂಜ್ ಇಲ್ಲಿ ಮದ್ದು ಗುಂಡು ಗುರಿ ಇಡುವ ಪರೀಕ್ಷೆಯನ್ನು ಸೆಪ್ಟೆಂಬರ್ 22 ಹಾಗೂ 23 ರಂದು ಬೆಳಿಗ್ಗೆ 5.30 ರಿಂದ 11.30 ರವರೆಗೆ ನಡೆಸುತ್ತಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಸಂಚಾರ ಮಾಡಬಾರದೆಂದು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಕಂಪ್ಯೂಟರ್ ಡಿ.ಟಿ.ಪಿ, ಬ್ಯೂಟಿಪಾರ್ಲರ್, ವಸ್ತ್ರ ವಿನ್ಯಾಸ ತರಬೇತಿ
       ಮಂಡ್ಯ ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕಾರಸವಾಡಿ ರಸ್ತೆ, ಹೊಸಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ಆದರ್ಶ ಶಾಲೆ ಹತ್ತಿರ, ಮಂಡ್ಯ ವತಿಯಿಂದ ಕಂಪ್ಯೂಟರ್ ಡಿ.ಟಿ.ಪಿ.  ವಸ್ತ್ರವಿನ್ಯಾಸ (ಟೈಲರಿಂಗ್) ಬ್ಯೂಟಿಪಾರ್ಲರ್ ತರಬೇತಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗುತ್ತಿದ್ದು ತರಬೇತಿ ಹೊಂದಲು  ಇಚ್ಛೆಯುಳ್ಳ  ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರುವಂತಹ 18 ರಿಂದ 45 ವರ್ಷದೊಳಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.  7. ಅಥವಾ 8. 9. ಎಸ್.ಎಸ್.ಎಲ್.ಸಿ. ಇವುಗಳಲ್ಲಿ ಯಾವುದಾದರೂ ಅಂಕಪಟ್ಟಿ, ಮತ್ತು ರೇಷನ್ ಕಾರ್ಡ್ eóÉರಾಕ್ಸ್‍ನೊಂದಿಗೆ ಸೆಪ್ಟೆಂಬರ್ 30 ರ ಸಂಜೆ 5.00 ಗಂಟೆಯೊಳಗೆ ತರಬೇತಿ ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸುವುದು. ತರಬೇತಿಯು ಉಚಿತವಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ 231497 / 231293 ಮೂಲಕ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.
         ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನಾ ಸಮಾರಂಭ
ಸೆಪ್ಟೆಂಬರ್ 21ರಂದು ಬೆಳಿಗ್ಗೆ 11 ಗಂಟೆಗೆ ಕೊಮ್ಮೇರಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಯುವಕರ ಸಂಘ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿಕಲಚೇತನರ ಶಾಲೆಗೆ ಶ್ರಮಿಸುತ್ತಿರುವ ಎನ್.ಜಿ.ಓ ಸಂಸ್ಥೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
  ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಿಕಲಚೇತನರ ಶಾಲೆ ಅಥವಾ ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗೆ( ಎನ್.ಜಿ.ಓ) ಸಹಾಯಧನವನ್ನು ನೀಡಲು 2013-14ನೇ ಹಾಗೂ 2014-15ನೇ ಸಾಲಿನ ಎಸ್.ಎಫ್.ಸಿ. ನಿಧಿಯಲ್ಲಿ ತಲಾ ರೂ 15000/-ಗಳನ್ನು ಮೀಸಲಿರಿಸಲಾಗಿರುತ್ತದೆ. ವಿಕಲಚೇತನರಿಗೆ ಶಾಲೆ ನಡೆಸುತ್ತಿರುವವರು ಅಥವಾ ಅವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯವರು ತಮ್ಮ ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ, ಬೈಲಾ 2013-14ರ ಆಡಿಟ್ ವರದಿ,ವಾರ್ಷಿಕ ವರದಿಗಳ ಪ್ರತಿಯನ್ನು ಸ್ವಯಂ ದೃಡೀಕರಿಸಿ ಹಾಗೂ ವಿಕಲಚೇತನರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಛಾಯಾ ಚಿತ್ರಗಳನ್ನು ಲಗತ್ತಿಸಿ ಸೆಪ್ಟೆಂಬರ್ 30 ಪುರಸಭಾ ಕಚೇರಿಗೆ ಮನವಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಾರ್ಯಾಲಯದ ಬಡತನ ನಿರ್ಮೂಲನಾ ಕೋಶವನನ್ನು ಸಂಪರ್ಕಿಸಲು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment