Friday, 12 September 2014

ಸ್ಥಬ್ದಚಿತ್ರ ಮೆರವಣಿಗೆ -ಶಿಸ್ತು ಇರಲಿ
    ಮೈಸೂರು,ಸೆ.12.ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಗಳು ಹಾಗೂ  ಸಾಂಸ್ಕøತಿಕ ತಂಡಗಳ ಪ್ರಮುಖ ಆಕರ್ಷಣೆಯಾಗಿದ್ದು, ಮೆರವಣಿಗೆಯಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು ಎಂದು ಎಲ್ಲ ಜಿಲ್ಲೆಗಳ ಸ್ಥಬ್ಧಚಿತ್ರ ನೋಡಲ್ ಅಧಿಕಾರಿಗಳಿಗೆ ಸ್ಥಬ್ಧಚಿತ್ರ ಉಪಸಮಿತಿ ಅಧ್ಯಕ್ಷ ಸಿದ್ದರಾಜು ತಿಳಿಸಿದರು.


    ಸ್ಥಬ್ಧಚಿತ್ರಗಳ ಮಾದರಿ ಪರಿಶೀಲನಾ ಸಭೆಯಲ್ಲಿಂದು ಸ್ಥಬ್ಧಚಿತ್ರಗಳನ್ನು ಸಿದ್ದಪಡಿಸಲು ಸಮಿತಿ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ವಿವಿಧ ಜಿಲ್ಲಾ ಪಂಚಾಯತ್‍ಗಳು ಹಾಗೂ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಜಿಲ್ಲೆಯ ಸ್ಥಬ್ಧಚಿತ್ರಗಳ ವಿಷಯ ಹಾಗೂ ವಿನ್ಯಾಸದ ಮಾಹಿತಿ ನೀಡಿದರು.
    ಸ್ಥಬ್ಧಚಿತ್ರಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಕಾರ್ಯಾಧ್ಯಕ್ಷ ಎ.ಪಿ.ಶಂಕರರಾಜು ತಿಳಿಸಿದರು. ಸ್ಥಬ್ಧಚಿತ್ರಗಳಲ್ಲಿ ಜೀವಂತ ಮಾದರಿಗಳಿಗೆ ಅವಕಾಶ ಇರುವುದಿಲ್ಲ. ಕೇವಲ ಸ್ಥಬ್ಧ ಮಾದರಿಗಳನ್ನು ಮಾತ್ರ ಪ್ರದರ್ಶಿಸಬೇಕು ಹಾಗೂ ಬಳಕೆ ಮಾಡಬೇಕು ಎಂದು ಸೂಚಿಸಿದರು.
   ವಾರ್ತಾ ಇಲಾಖೆಯ ಕೃಷಿ ಭಾಗ್ಯ, ಮಧ್ಯಪಾನ ಸಂಯಮ ಮಂಡಳಿಯ ವ್ಯಸನ ಮುಕ್ತ ಸಮಾಜದೆಡೆಗೆ, ಯಾದಗಿರಿಯ ಮಲಗಿರುವ ಬುದ್ದನ ಬೆಟ್ಟ, ವನಸಿರಿಗಳ ನಾಡು ಶಿವಮೊಗ್ಗ, ಚಾಮರಾಜನಗರ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಜಿಲ್ಲಾ ಪಂಚಾಯತ್‍ಗಳು ತಮ್ಮ ಮಾದರಿಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.
    ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಈರಣ್ಣ, ಮುದ್ದೇಗೌಡ, ಸದಸ್ಯ ಕಾರ್ಯದರ್ಶಿ ಜನಾರ್ಧನ್ ಮತ್ತಿತರರು ಭಾಗವಹಿಸಿದ್ದರು. 

No comments:

Post a Comment