ಮೈಸೂರು-ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ.
ಮೈಸೂರು, ಸೆಪ್ಟೆಂಬರ್ 20.ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾದ ವಾಲ್ಮೀಕಿ ಜಯಂತಿ ಅಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ತಾಲೂಕು ಕೇಂದ್ರಗಳಲ್ಲಿ ಆಚರಿಸಲು ಅನುದಾನ ನಿಗಧಿಯಾಗಿದ್ದು, ಆಯಾ ತಾಲೂಕುಗಳ ತಹಶೀಲ್ದಾರ್‍ಗಳು ಶಾಸಕರುಗಳ ಸಮ್ಮುಖದಲ್ಲಿ ಸÀಭೆಯನ್ನು ಕರೆದು ಜಯಂತಿ ಆಚರಣೆ ಸಂಬಂಧ ಕ್ರಮವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ ಈ ಬಾರಿಯೂ ವೇದಿಕೆ ಸಮಾರಂಭಕ್ಕೂ ಮೊದಲು ನಗರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ವಿವಿಧ ಕಲಾ ತಂಡಗಳೊಂದಿಗೆ ಅಲಂಕಾರÀಗೊಂಡ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುವುದು ಹಾಗೂ ವೇದಿಕೆ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ನಡೆಸಲಾಗುವುದು. ಅಲ್ಲದೇ ಗಣ್ಯರು, ಅತಿಥಿಗಳು ಹಾಗೂ ಮುಖಂಡರನ್ನು ಶಿಷ್ಠಾಚಾರದಂತೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯಿಂದ ಕಾರ್ಯಕ್ರಮದಂದು ನಗರದ ಸ್ವಚ್ಚತೆಗೆ ವಿಶೇಷ ಆಸಕ್ತಿ ವಹಿಸಲಾಗುವುದು. ಮೆರಗಣಿಗೆ ಸಾಗುವ ಮಾರ್ಗಗಳು, ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಲಾಗವುದು. ಮಹರ್ಷಿ ವಾಲ್ಮೀಕಿ ಅವರ ಜೀವನ ವಿಚಾರಧಾರೆ ಹಾಗೂ ಆದರ್ಶಗಳ ಬಗ್ಗೆ ತಿಳಿಸಿಕೊಡಲು ಮುಖ್ಯ ಭಾಷಣಕಾರರನ್ನು ಆಹ್ವಾನಿಸಲಾಗುವುದು. ಸಮಾರಂಭದ ಆಹ್ವಾನಪತ್ರಿಕೆಗಳನ್ನು ಗಣ್ಯರು, ಮುಖಂಡರಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮಾದು ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ನಿಗಧಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಬೆಳಿಗ್ಗೆ 10:30 ಗಂಟೆಗೆ ಸರಿಯಾಗಿ ಮೆರವಣಿಗೆ ಆರಂಭಗೊಂಡು ಮಧ್ಯಾಹ್ನ 2 ಗಂಟೆಯೊಳಗಾಗಿ ಶಿಷ್ಠಾಚಾರದ ಪ್ರಕಾರ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ವೇದಿಕೆ ಕಾರ್ಯಕ್ರಮವು ಮುಕ್ತಾಯಗೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತÀ ಬೆಟ್‍ಸೂರಮಠ, ಅಪರ ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಾಧಿಕಾರಿ ಸಯಿದ ಅಯಿಷ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಭಾರತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಸಭೆಯಲ್ಲಿ ಹಾಜರಿದ್ದರು.
ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ತರಬೇತಿ ಯೋಜನೆಯಡಿ 18-35 ವರ್ಷ ವಯೋಮಿತಿಯೊಳಗಿನ ಪಿ.ಯು.ಸಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ತಿ. ನರಸೀಪುರ ತಾಲ್ಲೂಕಿನ ನಿರುದ್ಯೋಗಿ ಮಹಿಳೆಯರಿಗೆ ಉಚಿತವಾಗಿ ಕಂಪ್ಯೂಟರ್ ಪ್ರೋಗ್ರಾಮರ್, ಅಕೌಂಟಿಂಗ್ ಮತ್ತು ಕಂಪ್ಯೂಟರ್, ಡೆಸ್ಕ್ ಟಾಪ್ ಪಬ್ಲಿಷಿಂಗ್ ವಿಥ್ ಕನ್ನಡ ನುಡಿ ಹಾಗೂ ವೆಬ್ ಡಿಸೈನಿಂಗ್ ಕಂಪ್ಯೂಟರ್ ತರಬೇತಿ ಯನ್ನು ನೀಡಲು ಅರ್ಜಿ ಆಹ್ವಾನಿಸಿದೆ.
ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸ್ವವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ದಿನಾಂಕ:25-09-2014ರ ರ ಸಂಜೆ 5-30 ಗಂಟೆಯೊಳಗಾಗಿ ಶಿಶು ಅಭಿವೃದ್ಧಿ ಯೋಜನೆ, ಹಳೇ ಕುರುಬರಬೀದಿ, ತಿ. ನರಸೀಪುರ ಇಲ್ಲಿಗೆ ಸಲ್ಲಿಸುವುದು.. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08227-261267 ಸಂಪರ್ಕಿಸಬಹುದಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ತಿ. ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 05 ಅಂಗನವಾಡಿ ಕಾರ್ಯಕರ್ತೆ ಹಾಗೂ 05 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ದಿನಾಂಕ:20-10-2014 ರ ಸಂಜೆ 5-30 ಗಂಟೆಯೊಳಗೆ ಸಲ್ಲಿಸಬೇಕಿದ್ದು, ನಿಗಧಿತ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನೆ, ಹಳೇ ಕುರುಬರಬೀದಿ, ತಿ. ನರಸೀಪುರ ದೂರವಾಣಿ ಸಂಖ್ಯೆ : 08227-261267 ಸಂಪರ್ಕಿಸಬಹುದಾಗಿದೆ.
ಏರ್‍ಮನ್ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ಭಾರತೀಯ ವಾಯು ದಳದಲ್ಲಿ ಏರ್‍ಮನ್ ‘ಎಕ್ಸ್' ಗ್ರೂಪ್ ತಾಂತ್ರಿಕ ಮತ್ತು ‘ವೈ ‘ ಗ್ರೂಪ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ತಾಂತ್ರಿಕ ‘ಎಕ್ಸ್' ಗ್ರೂಪ್ ಹುದ್ದೆಗಳಿಗೆ ಪಿ.ಯು.ಸಿ ಯನ್ನು ಭೌತಶಾಸ್ರ್ತ & ಗಣಿತ ವಿಷಯಗಳಲ್ಲಿ ಸರಾಸರಿ ಶೇ.50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು ಹಾಗೂ ಇಂಗ್ಲೀಷ್ ನಲ್ಲಿ ಶೇಕಡ 50 ಅಂಕ ಪಡೆದಿರಬೇಕು ಅಥವಾ ಮೂರು ವರ್ಷದ ತಾಂತ್ರಿಕ ಡಿಪ್ಲೋಮ ಇಂಜಿನಿಯರಿಂಗ್ ನಲ್ಲಿ ಶೇಕಡ ಸರಾಸರಿ 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
‘ವೈ ‘ ಗ್ರೂಪ್ ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ ಪಿ.ಯು.ಸಿ.,ಯಲ್ಲಿ ಸರಾಸರಿ ಶೇ. 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು & ಇಂಗ್ಲೀಷ್‍ನಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸರಬೇಕು.
1-8-1995 ರಿಂದ 30-11-1998ರೊಳಗೆ ಜನಿಸಿರಬೇಕು ಹಾಗೂ ಎತ್ತರ:- 152.5 ಸೆಂ.ಮೀ. ಎತ್ತರ ಇರಬೇಕು.
ತಿತಿತಿ.iಟಿಜiಚಿಟಿಚಿiಡಿಜಿoಡಿಛಿe.ಟಿiಛಿ.iಟಿ ನಲ್ಲಿ ದೊರೆಯುವ ಅರ್ಜಿ ನಮೂನೆ ಮುದ್ರಿಸಿಕೊಂಡು ಭÀರ್ತಿಮಾಡಿದ ಅರ್ಜಿಯನ್ನು ದಿನಾಂಕ:22-9-2014ರೊಳಗೆ ಸಾಮಾನ್ಯ ಅಂಚೆ ಮೂಲಕ
ನವದೆಹಲಿಯ ಏರ್‍ಮನ್ ಕೇಂದ್ರ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪಮುಖ್ಯಸ್ಥರು,ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ದೂರವಾಣಿ ಸಂಖ್ಯೆ : 0821-2516844 ಇವರನ್ನು ಸಂಪರ್ಕಿಸುವುದು.
ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು, ಸೆಪ್ಟೆಂಬರ್ 20-ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕಾ ವಿಭಾಗದಿಂದ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5 ರವರಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ರವರೆಗೆ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. ಸೆಪ್ಟೆಂಬರ್ 25 ರಂದು ಸಂಜೆ 5 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|| ಕೆ.ಎಸ್ ರಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಪ್ರದರ್ಶನದಲ್ಲಿ ವಿವಿಧ ಪುಷ್ಪಗಳು, ಮಾದರಿ ಎಲೆ ಗಿಡಗಳು ಹಾಗೂ ವೈವಿಧ್ಯಮಯ ತರಕಾರಿ ಗಿಡಗಳನ್ನು ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆಮುಜಾವರ್ ಕೋರಿದ್ದಾರೆ.
ಮೈಸೂರು ದಸರಾ ಪುಸ್ತಕ ಮೇಳ
ಮೈಸೂರು, ಸೆಪ್ಟೆಂಬರ್ 20- ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 24 ರಿಂದ ಅಕ್ಟೋಬರ್ 3ರವರೆಗೆ ಮೈಸೂರಿನ ಕಾಡಾ ಮೈದಾನದಲ್ಲಿ ದಸರಾ ಕನ್ನಡ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ.
ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಕನ್ನಡ ಪುಸ್ತಕ ಪ್ರಕಾಶಕರು ಅರ್ಜಿನಮೂನೆಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣhಚಿಞಚಿಠಿಡಿಚಿಜhiಞಚಿಡಿಚಿ.ಛಿom ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ಕಛೇರಿ, ಜೆ ಸಿ ರಸ್ತೆ ಬೆಂಗಳೂರಿನಲ್ಲಿ ದಿನಾಂಕ : 22-09-2014ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಡಳೀತಾಧಿಕಾರಿಗಳು , ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು – 560002 ದೂರವಾಣಿ ಸಂಖ್ಯೆ : 080-22484516, 22107704 ಅನ್ನು ಸಂಪರ್ಕಿಸಬಹುದಾಗಿದೆ.
ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಕೌನ್ಸಿಲಿಂಗ್
ಮೈಸೂರು, ಸೆಪ್ಟೆಂಬರ್ 20- ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ದಿನಾಂಕ: 23.09.2014 ರಂದು ಪೂರ್ವಾಹ್ನ 09.00 ಗಂಟೆಯಿಂದ ಎನ್.ಟಿ.ಎಂ.ಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ದಿನಾಂಕ: 19.09.2014 ರಂದು ಅಂತಿಮ ಸೇವಾ ಜೇಷ್ಠತಾ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಲೆರಹಿತ ಅಡುಗೆ ಸ್ಪರ್ಧೆ
ಮೈಸೂರು, ಸೆಪ್ಟೆಂಬರ್ 20- ಮಹಿಳಾ ದಸರಾ 2014 ಅಂಗವಾಗಿ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಒಲೆರಹಿತ ಅಡುಗೆ ಸೆಪ್ಟೆಂಬರ್ 27 ರಂದು ಬೆ:11.30 ರಿಂದ ಮ:1.30ಗಂಟೆ ಸ್ಪರ್ಧೆಯನ್ನು ಜೆ.ಕೆ.ಮೈದಾನದಲ್ಲಿ ಏರ್ಪಡಿಸಿದ್ದು, ಆಸಕ್ತ ಮಹಿಳೆಯರು ದಿನಾಂಕ:27.09.2014 ರೊಳಗಾಗಿ ಹೆಸರು ನೊಂದಾಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ- 0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742 ಹಾಗೂ ಟಿ.ನರಸೀಪುರ-08227-261267 ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು 0821-2495432, 0821-2498031 ನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸರಿಪಡಿಸಿ ಸಲ್ಲಿಸಿ
ಮೈಸೂರು, ಸೆಪ್ಟೆಂಬರ್ 20 - 2013-14ನೇ ಸಾಲಿನ ಎಸ್.ಸಿ./ಎಸ್.ಟಿ. ವಿದ್ಯಾರ್ಥಿ ವೇತನ ಕೋರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿರುವ 176 ತಾಲ್ಲೂಕಿನ ವಿದ್ಯಾರ್ಥಿಗಳ ಅರ್ಜಿಯನ್ನು ಆಯಾಯಾ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಕಳುಹಿಸಲಾಗಿದೆ.
ತಪ್ಪಾದ ಔಟಿಟiಟಿe ಓumbeಡಿ ನೀಡಿದ, ಭಾವಚಿತ್ರವನ್ನು ನೀಡದ, ಖಿhumb Imಠಿಡಿessioಟಿ ನೀಡದ ಮತ್ತು ಸರಿಯಾದ ಮಾಹಿತಿ ನೀಡದ ವಿದ್ಯಾರ್ಥಿಗಳ ಅರ್ಜಿಗಳನ್ನು ಆಯಾಯಾ ವಿದ್ಯಾರ್ಥಿಗಳ ವಿಳಾಸಕ್ಕೆ ವಾಪಸ್ಸು ಕಳುಹಿಸಲಾಗಿದೆ. ವಿದ್ಯಾರ್ಥಿಗಳು ತಪ್ಪುಗಳನ್ನು ಸರಿಪಡಿಸಿ, ಸರಿಯಾದ ಮಾಹಿತಿಯೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕ್ರಮವಹಿಸುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಶಿಬಿರ ಶುಭಹಾರೈಕೆ
ಮೈಸೂರು, ಸೆಪ್ಟೆಂಬರ್ 20-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರದ ಶುಭಹಾರೈಕೆ ಮತ್ತು ಅಧ್ಯಯನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಅಧ್ಯಯನ ಪುಸ್ತಕ ಬಿಡುಗಡೆ ಮಾಡಲಿದ್ದು ಕರಾಮುವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಣಿ ಮಿತ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ಕೇಂದ್ರ ಸರ್ಕಾರದ ಅನಿಮಲ್ ವೆಲಫೇರ್ ಬೋರ್ಡ್ ನವರು ಪ್ರಾಣಿಗಳ ರಕ್ಷಣೆಗೋಸ್ಕರ ಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಪ್ರಾಣಿ ಮಿತ್ರ ಪ್ರಶಸ್ತಿ ಹಾಗೂ ಜೀವ ದಯಾ ಪುರಸ್ಕಾರ ನೀಡಲು ಪ್ರಾಣಿ ಕಲ್ಯಾಣಕ್ಕಾಗಿ ಆಸಾಧಾರಣ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಉಪ ನಿರ್ದೇಶಕರವರ ಕಛೇರಿ, ಪಶುಪಾಲನಾ ಇಲಾಖೆ, ಮೈಸೂರು ಇವರಿಗೆ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 0821-2420606, ಅನ್ನು ಸಂಪರ್ಕಿಸುವುದು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಆಟೋಟ ಸ್ಫರ್ಧೆಗಳು
ಮೈಸೂರು, ಸೆಪ್ಟೆಂಬರ್ 20-ಮಹಿಳಾ ದಸರಾ-2014 ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯತರಿಗೆ ಹಾಗೂ ಹಿರಿಯ ನಾಗರೀಕರಿಗೆ ಜೆ.ಕೆ. ಮೈದಾನ, ರೈಲ್ವೆ ನಿಲ್ದಾಣದ ಎದುರು, ಮೈಸೂರು ಇಲ್ಲಿ ವಿವಿಧ ಸ್ಫರ್ಧೆಯನ್ನು ಆಯೋಜಿಸಿದೆ.
ಮಹಿಳೆಯರಿಗೆ ದಿನಾಂಕ: 27.09.2014 ರಂದು ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ 100 ಮೀಟರ್ ಓಟ, ಬಾಲ್ ಇನ್ ದಿ ಬಕೆಟ್, ನಿಂಬೆಹಣ್ಣು ಮತ್ತು ಚಮಚ ಸ್ಪರ್ಧೆ, ದಿನಾಂಕ:28.09.2014 ರಂದು ಮಧ್ಯಾಹ್ನ 2.00 ರಿಂದ 5.30 ಗಂಟೆಯವರೆಗೆ ಮಡಿಕೆ ಒಡೆಯುವುದು, ಗುಂಡು ಎಸೆತ, ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯಲಿದೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ದಿನಾಂಕ:29.09.2014 ರಂದು ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ಬಾಲ್ ಇನ್‍ದಿ ಬಕೆಟ್, ಮಡಿಕೆ ಒಡೆಯುವುದು, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಫರ್ಧೆ ನಡೆಯಲಿದೆ.
ಹಿರಿಯ ನಾಗರೀಕರಿಗೆ ಮಡಿಕೆ ಒಡೆಯುವುದು, ಮ್ಯೂಸಿಕಲ್ ಚೇರ್, ಬಾಲ್ ಇನ್ ದಿ ಬಕೆಟ್, ಸ್ಪರ್ಧೆಗಳನ್ನು ದಿನಾಂಕ:29.09.2014 ರಂದು ಬೆಳಿಗ್ಗೆ10.00 ರಿಂದ 1.00 ಗಂಟೆಯವರೆಗೆ ಏರ್ಪಡಿಸಲಾಗಿರುತ್ತದೆ. ವಿಶೇಷ ಮಕ್ಕಳು ಹಾಗೂ ವಿಕಲಚೇತನರಿಗೆ ವಿವಿಧ ಆಟೋಟ ಸ್ಫರ್ಧೆಗಳನ್ನು ದಿನಾಂಕ:30.09.2014 ರಂದು ಬೆಳಿಗ್ಗೆ 10.00 ರಿಂದ ಮ:3.00 ಗಂಟೆಯವರೆಗೆ ಆಯೋಜಿಸಿದೆ.

ಮಹಿಳೆಯರಿಗೆ ಕರಾಟೆ ಕಲಿಕಾ ಶಿಬಿರ
ಮೈಸೂರು, ಸೆಪ್ಟೆಂಬರ್ 20-ಮಹಿಳಾ ದಸರಾ-2014 ಕಾರ್ಯಕ್ರಮದ ಪ್ರಯುಕ್ತ ದಿನಾಂಕ:26.09.2014 ರಿಂದ 30.09.2014ರವರಗೆ ಪ್ರತಿದಿನ ಸಂಜೆ 4.30 ರಿಂದ 6.00 ಗಂಟೆಯವರೆಗೆ ಮಹಿಳೆಯರಿಗೆ “ಸ್ವಯಂ ರಕ್ಷಣೆಗಾಗಿ ಕರಾಟೆ “ ಕಲಿಕಾ ಶಿಬಿರವನ್ನು ಜೆ.ಕೆ.ಮೈದಾನ, ರೈಲ್ವೆ ನಿಲ್ದಾಣದ ಎದುರು, ಮೈಸೂರು ಇಲ್ಲಿ ಏರ್ಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ- 0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742 ಹಾಗೂ ಟಿ.ನರಸೀಪುರ-08227-261267 ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು 0821-2495432, 0821-2498031 ಅನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ಶಾಲೆಯ ಶಂಕುಸ್ಥಾಪನೆ
ಮೈಸೂರು, ಸೆಪ್ಟೆಂಬರ್ 20-ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 22 ರಂದು ಬೆಳಿಗ್ಗೆ: 10 ಗಂಟೆಗೆ ಕೆ.ಎ.ಆರ್.ಪಿ.ಬಾಡಿಗಾರ್ಡ್‍ಲೈನ್
ಶಾಲಾವರಣದಲ್ಲಿ ಆದರ್ಶಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ನಡೆಯಲಿದೆ, ಶಾಸಕ ಎಂ.ಕೆ. ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಲಿದ್ದು, ಮಹಾನಗರ ಪಾಲಿಕೆ ಸದಸ್ಯೆ ವನಿತ ಪ್ರಸನ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಆರ್.ಬಸಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

No comments:
Post a Comment