Thursday, 25 September 2014

ದಸರಾ ಮಹೋತ್ಸವದ ಅಂಗವಾಗಿ ಪ್ರಾಚ್ಯವಸ್ತುಪ್ರದರ್ಶನ .


ಮೈಸೂರು,ಸೆ.26-2014ನೇ ಸಾಲಿನ ದಸರಾ ಮಹೋತ್ಸವ ಅಂಗವಾಗಿ ವಸ್ತು ಪ್ರದರ್ಶನದ ಪ್ರಾಧಿಕಾರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಏರ್ಪಡಿಸಿದ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಸಚಿವೆ ಶ್ರೀಮತಿ ಉಮಾಶ್ರೀಯವರು  ಉದ್ಘಾಟಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
 ಈ ಪ್ರದರ್ಶನದಲ್ಲಿ  ಮೌರ್ಯರು, ಸಾತವಾಹನರು, ಕದಂಬರು, ಅಳುಪರು ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಕಲಚೂರಿಗಳು ಹೋಯ್ಸಳರು ಹಾಗೂ ಮೈಸೂರು ಒಡೆಯರ ತನಕ ಕರ್ನಾಟಕವನ್ನು ಆಳಿದ ರಾಜ ಮನೆತನೆಗಳ ಸಮಗ್ರ ಚಿತ್ರಣವನ್ನು ಹಾಗೂ ರಾಜ್ಯದ ಪ್ರಾಚೀನ ಸಾಮ್ರಾಜ್ಯಗಳ  ರಾಜಧಾನಿಗಳು ಹಾಗೂ ಪಾರಂಪರಿಕ ಪ್ರದೇಶಗಳ ಬಗ್ಗೆ ಛಾಯಚಿತ್ರಗಳನ್ನೊಳಗೊಂಡ  ಸಮಗ್ರ ಮಾಹಿತಿ ನೀಡಲಾಗಿದೆ, ಇದಲ್ಲದೆ ಇಲಾಖೆಯ ವತಿಯಿಂದ ನಡೆದ ಉತ್ಖನನದಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು  ಕೂಡ ಪ್ರದರ್ಶಿಸಲಾಗಿದೆ  ಪಾರಂಪರಿಕ ಕಲಾಕೃತಿಗಳು, ಸ್ಮಾರಕಗಳನ್ನು ರಕ್ಷಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಾಚ್ಯ ಪ್ರಜ್ಞೆ ಕುರಿತಾದ ರೇಖಾ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
 ಪರಂಪರೆ ಕುರಿತ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಿದ್ದು ಇದು ಪ್ರತಿ ದಿನ ಸಂಜೆ 5.00, 6.00 ಮತ್ತು 7.00 ಗಂಟೆಗೆ ಪ್ರದರ್ಶನವು ಸಾರ್ವಜನಿಕರಿಗೆ ಉಚಿತವಾಗಿ ಪ್ರದರ್ಶಿಸಲಾಗುವುದು.
 ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನ ರಜನೀಶ್‍ರವರು,  ಆಯುಕ್ತರಾದ ಡಾ.ಸಿ.ಜಿ.ಬೆಟಸೂರಮಠ ಹಾಗೂ  ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

No comments:

Post a Comment