Saturday, 20 September 2014

ಪಾಂಡವಪುರ: ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸುಮಾರು 1.60 ಕೋಟಿ ಅಂದಾಜು ವೆಚ್ಚದ ರಸ್ತೆ ಮತ್ತು ಸೇತುವೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.
ಪಾಂಡವಪುರ-ಚಂದ್ರೆ-ಸಂಕನಹಳ್ಳಿ-ಕೋಡಳ್ಳಿಹೊಸೂರು ಮಾರ್ಗಾವಾಗಿ ಶ್ರೀರಂಗಪಟ್ಟಣ-ಜೇವರ್ಗಿ(ಬೀದರ್) ಮುಖ್ಯ ರಸ್ತೆಗೆ ಸೇರುವ ರಸ್ತೆಯ ಸರಪಳಿ 4.70 ಕಿ.ಮೀ ನಲ್ಲಿ ಸುಮಾರು 80 ಲಕ್ಷದ ಅಂದಾಜು ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಹಾಗೂ ಪಾಂಡವಪುರದಿಂದ ಚಂದ್ರೆ-ಸಂಕನಹಳ್ಳಿ-ಕೋಡಳ್ಳಿ ಹೊಸೂರು ಮಾರ್ಗವಾಗಿ ಶ್ರೀರಂಗಪಟ್ಟಣ-ಜೇವರ್ಗಿ(ಬೀದರ್) ಮುಖ್ಯ ರಸ್ತೆಗೆ ಸೇರುವ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಶಾಸಕ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ. ಮೇಲುಕೋಟೆ ಕ್ಷೇತ್ರದಾದ್ಯಂತ ಎಲ್ಲ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ದಿ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ದಿಯನ್ನು ಮಾಡಲು ಸಂಬಂಧಿಸಿದ ಎಂಜಿನಿಯರ್‍ಗಳು ಅಂದಾಜು ವೆಚ್ಚ ತಯಾರಿಸಿದ್ದಾರೆ. ಈ ಎಲ್ಲ ರಸ್ತೆ ಅಭಿವೃದ್ದಿಗೆ ಹಣ ಬಿಡುಗಡೆಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಭೂಮಿ ಪೂಜೆ ನೆರವೇರಿಸಿರುವ ರಸ್ತೆ ಮತ್ತು ಸೇತುವೆ ಅಭಿವೃದ್ದಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಮಗಾರಿ ನಡೆಯುವ ವೇಳೆ ಎಂಜಿನಿಯರ್‍ಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ರಾಜೇಶ್ ಕ ಮುನ್ಸಿ, ಎಇ ಲೋಕೇಶ್, ಗುತ್ತಿಗೆದಾರರಾದ ಯೋಗೇಶ್, ಧನಂಜಯ, ಗ್ರಾ.ಪಂ.ಸದಸ್ಯರಾದ ಸುನಂದಮ್ಮ, ಟಿ.ಆರ್.ಲೋಕೇಶ್, ಲೋಕೇಶ್, ರೈತ ಮುಖಂಡ ಮರಿದೇವೇಗೌಡ, ಚಂದ್ರಶೇಖರ್, ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

No comments:

Post a Comment