ಮುಖ್ಯ ಪ್ರಾಧ್ಯಾಪಕರಿಂದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ
ಪಾಂಡವಪುರ,ಸೆ.30- ತಾಲ್ಲೂಕಿನ ವೀರಶೆಟ್ಟಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಪ್ರಾಧ್ಯಾಪಕ ರಾಮಕೃಷ್ಣೇಗೌಡ ಎಂಬಾತ ತಮ್ಮ ಶಾಲೆಯಲ್ಲಿನ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡಿದಂತಹ ಘಟನೆ ಜರುಗಿದೆ.
ಸುಮಾರು 12 ವರ್ಷದ ಅಪ್ರಾಪ್ತ ಬಾಲಕಿಯು ಮುಸ್ಲಿಂ ಸಮುದಾಯದ ಹುಡುಗಿಯಾಗಿದ್ದು, ಬಾಲಕಿಯ ಪೋಷಕರು ಇದೇ ಗ್ರಾಮದಲ್ಲಿನ ಎನ್.ಎಂ ರಸ್ತೆಯಲ್ಲಿನ ನಿವಾಸಿಗಳಾಗಿದ್ದು, ವಿಷಯ ತಿಳಿದ ಪೋಷಕರು ಹಾಗೂ ಸಮುದಾಯದ ಜನರು ಇದಕ್ಕೆ ತೀವ್ರ ಆಕ್ರೋಷ ವ್ಯಕ್ತಪಡಿಸಿದರು.
ಬಾಲಕಿಯ ಹೇಳಿಕೆಯಂತೆ ಬಾಲಕಿಗೆ ರಾಮಕೃಷ್ಣೇಗೌಡ ಎಂಬಾತನು ದೈಹಿಕವಾಗಿ ವಿನಾಃ ಕಾರಣ ಹಿಂಸೆ ನೀಡುತ್ತಿದ್ದು, ಬಾಲಕಿಯ ಕೆಲವು ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡುತ್ತಲಿದ್ದನಂಬ ವಿಷಯ ತಿಳಿದ ಪೋಷಕರು ಸಮುದಾಯದವರು ಠಾಣೆಯ ಎದುರು ಜಮಾಯಿಸಿ ರಾಮಕೃಷ್ಣೇಗೌಡ ಎಂಬಾತನಿಗೆ ಕಾನೂನು ಕ್ರಮಗ ಜರುಗಿಸಿ ಶಿಕ್ಷೆನೀಡುವಂತೆ ಒತ್ತಾಯಿಸಿದರು.
ಶಾಲೆಯ ಮುಖ್ಯಸ್ಥರು ಹಾಗೂ ಗ್ರಾಮದ ಕೆಲ ಮುಖಂಡರು ಬಾಲಕಿಯ ಕುಟುಂಬಕ್ಕೆ 2 ಲಕ್ಷ ಪರಿಹಾರ ಕೊಡಿಸಿ, ಕೇಸು ದಾಖಲಿಸದಂತೆ ಪ್ರಯತ್ನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯನ್ನು ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಿಂದ ರಿಪೋರ್ಟ್ ಬಂದನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

No comments:
Post a Comment