Wednesday, 3 September 2014

ಮಂಡ್ಯ: ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಜಾತ್ಯಾತೀತ ಮನೋಭಾವನೆ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪರಮೇಶ್ ತಿಳಿಸಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದಕ್ಷಿಣ ವಲಯ, ಸರ್ಕಾರಿ ಪ್ರೌಢಶಾಲೆ ಕಲ್ಲಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಡ್ಯ ನಗರ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸುಪ್ತ ಪ್ರತಿಭೆಗಳು ಅಡಗಿರುತ್ತವೆ. ಅಂತಹ ಪ್ರತಿಭೆಯನ್ನು ಗುರುತಿಸಿ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಪೆÇ್ರೀ ನೀಡಬೇಕು ಎಂದು ದೈಹಿಕ ಶಿಕ್ಷಕರಿಗೆ ಕರೆ ನೀಡಿದರು.
ವಿದ್ಯಾರ್ಥಿಗಳು ಪಠ್ಯದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು. ಪಠ್ಯ ಮಾನಸಿಕ ಬೆಳವಣಿಗೆಗೆ ಸಹಕಾರಿಯಾದರೆ, ಕ್ರೀಡೆ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿ.ಪಂ. ಸದಸ್ಯೆ ಚಂದ್ರಕಲಾ ನಂಜುಂಡಾಚಾರ್, ತಾ.ಪಂ. ಅಧ್ಯಕ್ಷ ಟಿ.ಸಿ.ಶಂಕರೇಗೌಡ, ನಗರಸಭಾ ಸದಸ್ಯೆ ಶಿವರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಶಿವರುದ್ರಪ್ಪ, ಎಂ. ಶಿವಲಿಂಗಯ್ಯ, ವೀರೇಶ್ ಲಿಂಬಿಕಾಯಿ, ಹನುಮಶೆಟ್ಟಿ, ನಾರಾಯಣಗೌಡ ಇತರರಿದ್ದರು.
ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಸರ್ಕಾರಿ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜಿ.ಪಂ.ಸದಸ್ಯ ಸತೀಶ್ ಉಚಿತ ತಟ್ಟೆ,ಲೋಟಗಳನ್ನು ವಿತರಿಸಿದರು. ಗ್ರಾಪಂ ಸದಸ್ಯ ರಾಜು, ಮುಖ್ಯಶಿಕ್ಷಕ ಪವಾಡಿ, ಎಸ್‍ಡಿಎಂಸಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

----------------------------------------


ಕಗ್ಗಲಿಪುರ ಕೆ.ವಿ.ಸೋಮಣ್ಣ(40) ನಿಧನ
ಮಳವಳ್ಳಿ: ತಾಲ್ಲೂಕಿನ ಕಗ್ಗಲಿಪುರ ನಿವಾಸಿ ವೀರಪ್ಪ ಅವರ ಪುತ್ರ ಕೆ.ವಿ.ಸೋಮಣ್ಣ(40) ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಸೆಸ್ಕ್‍ನಲ್ಲಿ ಮೀಟರ್ ರೀಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ನಾಗಲಾಂಬಿಕಾ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಕಗ್ಗಲಿಪುರ ಗ್ರಾಮದಲ್ಲಿ ನೆರವೇರಿತು.
---------------------------------------------

ಮಳವಳ್ಳಿ: ಚಾಲನೆಯಲ್ಲಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೋಸೆಗೌಡನದೊಡ್ಡಿ ಗ್ರಾಮದ ಬಳಿ ಬುಧವಾರ ನಡೆದಿದೆ.
ತಾಲ್ಲೂಕಿನ ಶಿವನಸಮುದ್ರಂ ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹರೀಶ್(38) ಎಂಬ ವ್ಯಕ್ತಿಯೆ ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಕರ್ತವ್ಯ ನಿರ್ವಹಿಸಿ ಮಂಡ್ಯಕ್ಕೆ ತೆರಳುವಾಗ ಬೈಕ್ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್‍ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
----------------------------------------------------------

ಮಳವಳ್ಳಿ: ರಾಜ್ಯ ಸರ್ಕಾರದ ಆಡಳಿತ ಕುಸಿದಿದ್ದು ಶೀಘ್ರವೇ ಎಚ್ಚೆತ್ತು ಕನಿಷ್ಟ ಒಂದು ತಿಂಗಳ ಒಳಗೆ ಸರಿಪಡಿಸಿಕೊಳ್ಳದಿದ್ದರೆ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದರೂ ಸಹ ನಮ್ಮ ತಾಲ್ಲೂಕಿನ ಕೆರೆ ಕಟ್ಟೆಗಳು ನೀರು ತುಂಬಿಲ್ಲ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಜಲಪಾತೋತ್ಸವ ನಡೆಸಲು ಉದ್ದೇಶಿಸಿರುವುದು ಸರಿಯಲ್ಲ, ಇದು ಮೋಜಿನ ಉತ್ಸವವಾಗಿದ್ದು ಇದನ್ನು ಜಿಲ್ಲಾಡಳಿತ ನಡೆಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ನಮ್ಮ ಕಾಲದಲ್ಲಿ ಬಗರ್‍ಹುಕುಂ ಸಾಗುವಳಿ ರಚನೆಯಾಗಿದ್ದು ಇದುವರೆಗೂ ಯಾವುದೇ ಕ್ರಮಕೈಗೊಳ್ಳದೆ ಇರುವುದು ಶೋಚನೀಯ ಎಂದರು. ಈ ಜಲಪಾತೋತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಗುರುತಿಸದೆ ಹೊರಗಿನ ಕಲಾವಿದರನ್ನು ಕರೆತಂದು ಸಮಾರಂಭ ಮಾಡುತ್ತಿರುವುದು ಸ್ಥಳೀಯ ಕಲಾವಿದರಿಗೆ ಅವಮಾನ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷರಾದ ಹೆಚ್.ಆರ್. ಅಶೋಕ್‍ಕುಮಾರ್, ಡಾ.ಕಪನಿಗೌಡ, ಕಾರ್ಯದರ್ಶಿಗಳಾದ ನಾಗೇಗೌಡ, ಮುದ್ದುಮಲ್ಲು, ಕುಮಾರಸ್ವಾಮಿ, ಇತರರು ಇದ್ದರು.

No comments:

Post a Comment