ರಾಷ್ಟ್ರೀಯ ಏಕತೆಗೆ ಹಿಂದಿ ಭಾಷೆ ಸಹಕಾರಿ : ಡಾ.ನಾರಾಯಣಶೆಟ್ಟಿ
ಮೈಸೂರು,ಸೆ.30.ಭಾರತದಲ್ಲಿ ಹಿಂದಿ ಭಾಷೆಗೆ ಮಹತ್ವದ ಪಾತ್ರವಿದ್ದು, ರಾಷ್ಟ್ರೀಯ ಏಕತೆಗೆ ಹಿಂದಿ ಭಾಷೆ ಸಹಕಾರಿಯೆಂದು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ.ನಾರಾಯಣಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿಯನ್ನು ಸಂಪರ್ಕ ಭಾಷೆಯಾಗಿ, ರಾಷ್ಟ್ರದಲ್ಲಿ ಬಳಕೆ ಮಾಡಲು ಎಲ್ಲರಲ್ಲಿ ಒಂದು ಮನೋಭಾವ ಬದಲಾಗಬೇಕಾಗಿದೆ. ಇಲ್ಲಿ ಅನೇಕ ಭಾಷೆಗಳಿದ್ದು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಇದನ್ನು ಸಂಸದೀಯ ಭಾಷೆಯಾಗಿ ಭಾರತ ಸಂವಿಧಾನ ಘೋಷಿಸಿದ್ದು, ಸರ್ಕಾರಿ, ಅರೆ ಸರ್ಕಾರಿ, ಕಾರ್ಯಾಲಯಗಳಲ್ಲಿ ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.
ಇತ್ತೀಚೆಗೆ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮೈಸೂರು ಹಾಗೂ ವಿಜಯವಿಠ್ಠಲ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿಶುಪಾಲ ಗಾಂಧಿ ಹಿಂದಿ ಪ್ರಾಧ್ಯಾಪಕ, ಜೆ.ಎಸ್.ಎಸ್. ಮಹಿಳಾ ಕಾಲೇಜು, ಮೈಸೂರು ಮಾತನಾಡಿ ಆಂಗ್ಲರು ನಮ್ಮ ದೇಶವನ್ನು ಆಳಿದ್ದರು, ಇಲ್ಲಿ ಬಂದು ನಮ್ಮ ಸಂಸ್ಕøತಿಯನ್ನು ಕಲಿತಿದ್ದಾರೆ. ಆದರೆ ನಾವು ಭಾರತೀಯರು ಇಂದು ಅದೇ ಸಂಸ್ಕøತಿಯನ್ನು ಆಳಿಸಲು ಮುಂದಾಗಿದ್ದೇವೆ ಆದು ವಿಪರ್ಯಾಸ. ಇಂದಿನ ಪೀಳಿಗೆಗೆ ಹಿಂದಿ ಬಗ್ಗೆ ತಿಳುವಳಿಕೆ ನೀಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ವಾರ್ತಾ ಸೇವಾಧಿಕಾರಿ ಡಾ. ಟಿ.ಸಿ. ಪೂರ್ಣಿಮ ಮಾತನಾಡಿ ಇಂದಿನ ವಿದ್ಯಾರ್ಥಿಗಳೆಲ್ಲರೂ ಒಂದು ನಿರ್ಧಿಷ್ಟ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿ, ಆ ಭಾಷೆಯ ಮೂಲಕ ಹಿಂದಿ ಭಾಷೆಯನ್ನು ಸರಳವಾಗಿ ಕಲಿತುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಸತ್ಯಪ್ರಸಾದ್ ಹಿಂದಿ ವಿಭಾಗದ ಉಪನ್ಯಾಸಕಿ ಶೋಭಾರಾಣಿ ಹಾಗೂ ಕ್ಷೇತ್ರ ಪ್ರಚಾರ ಸಹಾಯಕ ಮುರಳೀಧರ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ, ಹಿಂದಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಕ್ಟೋಬರ್ 1 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.30.(ಕ.ವಾ.)-ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಅಕ್ಟೋಬರ್ 1 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಸೆಂಚುರಿ ಆಫ್ ಇಂಡಿಯಾ, ಬೆಳಿಗ್ಗೆ 11 ಗಂಟೆಗೆ ಬಣ್ಣದ ಕೊಡೆ, ಮಧ್ಯಾಹ್ನ 2-30 ಗಂಟೆಗೆ ಸುವರ್ಣಪಥ ಸಾಕ್ಷ್ಯಚಿತ್ರ ಮಧ್ಯಾಹ್ನ 3 ಗಂಟೆಗೆ ಚೋಮನದುಡಿ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಆಚಾರ್ಯ ಜಗದೀಶ್, ಬೆಳಗ್ಗೆ 11 ಗಂಟೆಗೆÀ ಶಬ್ಧೋ, ಮಧ್ಯಾಹ್ನ 2-30 ಗಂಟೆಗೆ ದ.ರಾ ಬೇಂದ್ರೆ ಹಾಗೂ ಮಧ್ಯಾಹ್ನ 3 ಗಂಟೆಗೆ ಶಹೀದ್ ಚಲನಚಿತ್ರ ಪ್ರದರ್ಶಿಸಲಾಗುವುದು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀÉ ಚೆರಿ ಬ್ಲಾಸಮ್, ಮಧ್ಯಾಹ್ನ 1-30 ಗಂಟೆಗೆ ಮ್ಯೂಸಿಕ್ ಇನ್ ಡಾರ್ಕ್‍ನೆಸ್, ಮಧ್ಯಾಹ್ನ 3 ಗಂಟೆಗೆ ಉಮನ್ ಆನ್ ದ ಸಿಕ್ಸ್ತ್ ಫ್ಲೋರ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
ಲಕ್ಷ್ಮೀ-ಪರಾರಿ, ತಿಬ್ಬಾದೇವಿ-ಗುಂಡೇ(ಹಿಂದಿ), ಒಲಂಪಿಯಾ-ಕೂರ್ಮಾವತಾರ, ಡಿ.ಆರ್.ಸಿ- ಬಚ್ಚನ್, ಸತ್ಯಂ- ರಾಜಾಹುಲಿ ಚಲನಚಿತ್ರಗಳು ಪ್ರದರ್ಶಿಸಲಾಗುವುದು.
ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ 15 ರೂ. ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
ಕೆ.ಆರ್.ನಗರದ ಶ್ರೀವೆಂಕಟೇಶ್ವರ-ಕೂರ್ಮಾವತಾರ, ನಂಜನಗೂಡಿನ ಲಲಿತ-ಆಟೋರಾಜ, ಟಿ.ನರಸೀಪುರದ ಮುರುಗನ್-ಪರಾರಿ, ಪಿರಿಯಾಪಟ್ಟಣದ ಮಹದೇಶ್ವರ-ಬಚ್ಚನ್, ಹುಣಸೂರಿನ ಲೀಲಾ- ಮೈನಾ ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ- ಬ್ರೇಕಿಂಗ್ ನ್ಯೂಸ್.
ಪ್ರದರ್ಶನದ ಸಮಯ ಪ್ರತಿದಿನ ಸಂಜೆ 4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.
ಅಕ್ಟೋಬರ್ 1 ರಂದು ದಸರಾ ಮಹೋತ್ಸವದ ಕಾರ್ಯಕ್ರಮಗಳು
ಮೈಸೂರು,ಸೆ.29.ಅಕ್ಟೋಬರ್ 1 ರಂದು ಬೆಳಿಗ್ಗೆ 10-30 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರಧಾನಗೋಷ್ಠಿಗೆ ಪ್ರಸಿದ್ಧ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು ಚಾಲನೆ ನೀಡುವರು.
ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಅಕ್ಟೋಬರ್ 1 ರಂದು ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಪಿ. ಮಲ್ಲೇಶ್ ಅವರಿಂದ ಸುಗಮ ಸಂಗೀತ, ಸಂಜೆ 6 ರಿಂದ 7-30 ಗಂಟೆಯವರೆಗೆ ಮೈಸೂರಿನ ಕೊಳಲು-ಡಾ.ಎ.ವಿ.ಪ್ರಕಾಶ್, ವೀಣೆ-ಎಂ.ಕೆ.ಸರಸ್ವತಿ, ಮೃದಂಗ-ಹನುಮಂತರಾಜು ಅವರುಗಳಿಂದ ಜುಗಲ್‍ಬಂದಿ, ಜನಾರ್ಧನ್ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ತಂಡದಿಂದ ಅವರಿಂದ ಗೀತನಿನಾದ.
ಕಲಾಮಂದಿರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ತ್ರಿಪುರ- ಸಂಗ್ರಿ ಮೋಘ್, ಮಾರ್ಗಂಕಲಿ-ಕೇರಳ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಶಾರದಾ ಭರತ್ ಅವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಧಾರವಾಡ ವಿಶ್ವಾಂಬರಿ ನೃತ್ಯ ಶಾಲೆಯ ಅಂಕಿತಾ ರಾವ್ ಅವರಿಂದ ನೃತ್ಯ ರೂಪಕ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಕೇರಳ- ಮಾರ್ಗಂಕಲಿ, ಸಂಜೆ 6 ರಿಂದ 7-30 ಗಂಟೆಯವರೆಗೆ ಮೈಸೂರಿನ ಶ್ರೇಯಾ ಭಟ್ ಅವರಿಂದ ಸುಗಮ ಸಂಗೀತ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಭುವನೇಶ್ವರ್ ಪದ್ಮಶ್ರೀ ಡಾ|| ಇಲಿನಾ ಅವರಿಂದ ಒಡಿಸ್ಸಿ ನೃತ್ಯ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕೇಂದ್ರದಿಂದ ಯಕ್ಷಗಾನ, ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಚನ್ನಪಟ್ಟಣದ ಡಾ|| ರಾಜ್ ಕಲಾಬಳಗದಿಂದ ಪೌರಾಣಿಕ ನಾಟಕ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಬೆಂಗಳೂರಿನ ಸಾಯಿ ಕಲಾಕೇಂದ್ರದ ನಿಶಾ ಗಂಗಾಧರ್ ನಾಟಕ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಚಿಕ್ಕಬಳ್ಳಾಪುರ ಮುನಿವೆಂಕಟಪ್ಪ ಅವರಿಂದ ತಮಟೆ ವಾದನ ಹಾಗೂ ಆಂಧ್ರಪ್ರದೇಶದಿಂದ ಕೂಚುಪುಡಿ, ಸಂಜೆ 6 ರಿಂದ 7-30 ಗಂಟೆಯವರೆಗೆ ಸಾಗರ ಕುಮಾರಿ ಪಿ.ಜಿ. ಸಹನ ಅವರಿಂದ ಸುಗಮಸಂಗೀತ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಮೈಸೂರಿನ ವಿದುಷಿ ರಾಧಾ ನಾಗರಾಜ ಅವರಿಂದ ಕರ್ನಾಟಕ ಸಂಗೀತ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಹರಿಯಾಣ-ಬೈಗಾ ಕರ್ಮ ನೃತ್ಯ, ಸಂಜೆ 6 ರಿಂದ 6-30 ಗಂಟೆಯವರೆಗೆ ಚಿಕ್ಕಮಗಳೂರು ಸವಿತಾ ಮತ್ತು ತಂಡದಿಂದ ಮಹಿಳಾ ವೀರಗಾಸೆ ಹಾಗೂ ಸಂಜೆ 6-30 ರಿಂದ 7 ಗಂಟೆಯವರೆಗೆ ದಕ್ಷಿಣ ಕನ್ನಡದ ಯಡಪದವು ಗೋಪಾಲಗೌಡ ಮತ್ತು ತಂಡದಿಂದ ಗುಮಟೆ ಪಾಂಗ ಕಾರ್ಯಕ್ರಮ ನಡೆಯಲಿವೆ.
ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಅಕ್ಟೋಬರ್ 1 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪೈಲ್ವಾನರಿಗೆ ಮೊಟ್ಟೆ ತಿನ್ನುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಕಡ್ಲೆಕಾಯಿ ತಿನ್ನುವ ಸ್ಪರ್ಧೆ. ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮೈಸೂರಿನ ವಿದ್ವಾನ್ ಜಯರಾಮ್ ಅವರಿಂದ ಕ್ಲಾರಿಯೋನೇಟ್ ವಾದನ್, ಚಿಕ್ಕಮಂಡ್ಯ ಶರತ್ ಕುಮಾರ್ ತಂಡದಿಂದ ಹುಲಿವೇó ಕುಣೀತ, ಮೈಸೂರಿನ ವಿದ್ಯಾರಣ್ಯಪುರಂ ಆಲ್ಬರ್ಟ್ ಕಲಾವೃಂದದಿಂದ ಹಾಸ್ಯಲಾಸ್ಯ, ಸಂಜೆ 6 ರಿಂದ 6-30 ಗಂಟೆಯವರೆಗೆ ಪಿರಿಯಾಪಟ್ಟಣ ತಾಲ್ಲೂಕು ಅನ್ನಭಾಗ್ಯ ಯಾತ್ರೆ ಕಾರ್ಯಕ್ರಮ ಅವರಿಂದ ಜಾನಪದ ವೈವಿದ್ಯ, ಸಂಜೆ 6-30 ರಿಂದ 7 ಗಂಟೆಯವರೆಗೆ ಮಂಡ್ಯಜಿಲ್ಲೆಯ ಬಿ.ಎಸ್. ನಾಗಲಿಂಗೇಗೌಡ ಯದುಗಿರಿ ಕಲಾಸಂಘದಿಂದ ಜನಪದ ಸಂಗೀತ, ರಾತ್ರಿ 7 ರಿಂದ 9 ಗಂಟೆಗೆ ಯುವ ಸಂಭ್ರಮದಲ್ಲಿ ವಿಜೇತ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 9 ರಿಂದ 10 ಗಂಟೆಗೆ ಮೈಸೂರಿನ ರಘು ಎಂ. ಮೆಲೋಡೀಸ್ ಅವರಿಂದ ವಿಶೇಷ ಕಾರ್ಯಕ್ರಮ ಚಲನಚಿತ್ರ ಸಂಗೀತ.
ಕವಿಗೋಷ್ಠಿ: ಅಕ್ಟೋಬರ್ 1 ರಂದು ಬೆಳಿಗ್ಗೆ 10-30 ಗಂಟೆಗೆ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ಬೆಂಗಳೂರಿನ ಪ್ರಸಿದ್ಧ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಮುಖ್ಯ ಅತಿಥಿ ಕೋಲಾರದ ಪ್ರಸಿದ್ಧ ಕವಿ ಕೋಟಿಗಾನಹಳ್ಳಿ ರಾಮಯ್ಯ, ಭಾಗವಹಿಸುವ ಕವಿಗಳು ಅಗ್ರಹಾರ ಕೃಷ್ಣಮೂರ್ತಿ, ಬಾನು ಮುಷ್ತಾಕ್, ಸತೀಶ ಕುಲಕರ್ಣಿ, ಶೂದ್ರ ಶ್ರೀನಿವಾಸ, ಎಲ್. ಹನುಮಂತಯ್ಯ, ಪ್ರತಿಭಾ ನಂದಕುಮಾರ್, ಧರಣೇಂದ್ರ ಕುರಿಕರಿ, ಕಾಶೀನಾಥ ಅಂಬಲಗೆ, ಜಿ.ಪಿ. ಬಸವರಾಜು, ಸಿದ್ದನಗೌಡ ಪಾಟೀಲ, ಮೊಗಳ್ಳಿ ಗಣೇಶ್, ಜಿ.ವಿ.ಆನಂದಮೂರ್ತಿ ಸುಬ್ಬು ಹೊಲೆಯಾರ್, ಮಹ ಜಬೀನ್(ಉರ್ದು), ಶಂಕರ ಕಟಗಿ, ವಿಲಿಯಂ, ಮಂಜುನಾಥ್ ಲತಾ, ಹೊರೆಯಾಲ ದೊರೆಸ್ವಾಮಿ, ಹರಿಯಪ್ಪ ಪೇಜಾವರ, ಬಿ.ಆರ್.ಜೋಯಪ್ಪ(ಅರೆಭಾಷೆ), ಎಂ.ಆರ್. ಕಮಲ, ಜಯಶ್ರೀ ರಾಜು(ಕೊಂಕಣಿ), ಎನ್. ಜಗದೀಶ್ ಕೊಪ್ಪ, ಪ್ರಹ್ಲಾದ ಅಗಸನಕಟ್ಟೆ, ನಟರಾಜ ಬೂದಾಳು, ವಿನಯಾ ವಕ್ಕುಂದ, ಅತ್ರಾಡಿ ಅಮೃತಾ ಶೆಟ್ಟಿ (ತುಳು), ಶ್ರೀಪಾದ ಶೆಟ್ಟಿ, ಮೂವೇರಾ ರೇಖಾ ಪ್ರಕಾಶ್ (ಕೊಡವ) ಹಾಗೂ ಆರಿಫ್ ರಾಜಾ.
ಕುಸ್ತಿ:- ಅಕ್ಟೋಬರ್ 1 ರಂದು ಮಧ್ಯಾಹ್ನ 3ರ ನಂತರ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭ ಮತ್ತು ಅಂತಿಮ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.
ತೋಟಗಾರಿಕೆ ಇಲಾಖೆ:- ಅಕ್ಟೋಬರ್ 1 ರಂದು ಸಾಲಾಡ್ ತಯಾರಿಕೆ ಸ್ಪರ್ಧೆ (ತರಕಾರಿ, ಹಣ್ಣು-ಹಂಪಲುಗಳ ಮತ್ತು ಡ್ರೈಪೋಟ್ಸ್) ಸ್ಪರ್ಧೆ ಮತ್ತು ಬಹುಮಾನ ವಿತರಣೆ.
ಅಕ್ಟೋಬರ್ 2 ರಂದು ಗಾಂಧಿಜಯಂತಿ
ಮೈಸೂರು,ಸೆ.30.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅಕ್ಟೋಬರ್ 2 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ರಂಗಚಾರ್ಲು ಸ್ಮಾರಕ ಪುರಭವನದಲ್ಲಿ ಮಹಾತ್ಮ ಗಾಂಧಿಜಯಂತಿ ಅಂಗವಾಗಿ ಪ್ರಾರ್ಥನಾ ಸಭೆ ನಡೆಯಲಿದೆ.
ಅಕ್ಟೋಬರ್ 2 ರಂದು ಗಾಂಧಿಜಯಂತಿ
ಮೈಸೂರು,ಸೆ.30.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಕ್ಟೋಬರ್ 2 ರಂದು ಬೆಳಿಗ್ಗೆ 9-30 ಗಂಟೆಗೆ ಸೆನೆಟ್ ಭವನದಲ್ಲಿ ಗಾಂಧಿ ಜಯಂತಿ ಆಚರಿಸಲಾಗುವುದು.
ರಘುಲೀಲಾ ಸಂಗೀತ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಗಳು ಹಾಗೂ ಎನ್.ಕೆ.ಕೇಶವಮೂರ್ತಿ ಅವರು ಗಾಂಧಿ ಸ್ಮøತಿ ವಾಚನ ಮಾಡಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದ ಕೃಷಿಕ ಎಂ. ಮಹೇಶ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸೆನೆಟ್ ಭವನ: ಸಿನಿಮಾದಲ್ಲಿ ಬದಲಾವಣೆ
ಮೈಸೂರು,ಸೆ.30.ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ದಿನಾಂಕ 01-10-2014 ರಂದು ಮಧ್ಯಾಹ್ನ 3 ಗಂಟೆಗೆ ಪ್ರದರ್ಶಿಸಲು ಯೋಜಿಸಲಾಗಿದ್ದ ರಸಋಷಿ ಕುವೆಂಪು ಚಲನಚಿತ್ರಕ್ಕೆ ಬದಲು ಚೋಮನದುಡಿ ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಾಕ್ಷ್ಯಚಿತ್ರದ ಬದಲು ಸುವರ್ಣಪಥ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಚಲನಚಿತ್ರ ಸಮಿತಿ ಪ್ರಕಟಣೆ ತಿಳಿಸಿದೆ.
ತಾಂತ್ರಿಕ ತೊಂದರೆ ಕಾರಣಗಳಿಗಾಗಿ ಪ್ರದರ್ಶನದಲ್ಲಿ ಬದಲಾವಣೆಯಾಗಿದ್ದು, ಸಾರ್ವಜನಿಕರು ಸಹಕರಿಸಲು ವಿನಂತಿಸಲಾಗಿದೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಸೆ.30.ನಗರಾಭಿವೃದ್ಧಿ ಸಚಿವ ವಿನಯ್‍ಕುಮಾರ್ ಅವರು ಅಕ್ಟೋಬರ್ 7 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಕಾಮಗಾರಿ ಸ್ಥಳ ಪರಿಶೀಲಿಸುವರು. ನಂತರ ಬೆಳಗ್ಗೆ 11 ಗಂಟೆಗೆ ಟಿ.ನರಸೀಪುರ ದಿಂದ ಕುಶಾಲನಗರಕ್ಕೆ ತೆರಳುವರು.
ಅಕ್ಟೋಬರ್ 1 ರಂದು ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ
ಮೈಸೂರು,ಸೆ.30.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಅಕ್ಟೋಬರ್ 1 ರಂದು ಮಧ್ಯಾಹ್ನ 12 ಗಂಟೆಗೆ ಹೆಗ್ಗಡದೇವನಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಎಸ್. ಚಿಕ್ಕಮಾದು ಅಧ್ಯಕ್ಷತೆ ವಹಿಸುವರು.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಖಮರುಲ್ಲಾ ಇಸ್ಲಾಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅರಮನಾಥ್. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರಾದ ವಾಸು ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್. ಮಾದಪ್ಪ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ದಸರಾ ಮಹೋತ್ಸವ ಗಾಳಿಪಟ ಸ್ಪರ್ಧೆ
ಮೈಸೂರು,ಸೆ.30.ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಪ್ರಚಾರ ಮತ್ತು ಗಾಳಿ ಪಟ ಸ್ಫರ್ಧೆ ಉಪ ಸಮಿತಿಯಿಂದ ಗಾಳಿಪಟ ಹಾರಿಸುವ ಸ್ಪರ್ಧೆ ನಗರದ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಇಂದು ಏರ್ಪಡಿಸಲಾಗಿತ್ತು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎಸ್.ಆರ್. ಪಾಟೀಲ್ ಅವರು ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್, ಸಹಕಾರ ಸಚಿವ ಹೆಚ್.ಎಸ್.ಮಹದೇವಪ್ರಸಾದ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ನರಸಿಂಹ ರಾಜ ವಿಧಾನ ಸಭಾ ಶಾಸಕ ತನ್ವೀರ್ ಸೇಠ್, ದಸರಾ ಪ್ರಚಾರ ಮತ್ತು ಗಾಳಿಪಟ ಸ್ಪರ್ಧೆ ಉಪಸಮಿತಿ ಅಧ್ಯಕ್ಷ ಕೆ.ದೀಪಕ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ, ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಮೈಸೂರು ನಗರ ಹಾಗೂ ಸುತ್ತಮುತ್ತಲಿನÀ ಪ್ರದೇಶಗಳಿಂದ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಳಿಪಟ ಸ್ಪರ್ಧೆಯಲ್ಲಿ
ಭಾಗವಹಿಸಿ ಚಾಮುಂಡೇಶ್ವರಿ, ಹುಲಿ, ಹಾವು, ಗರುಡ, ರಾಕ್ಷಸ ಚಿತ್ರ ಹಾಗೂ ಆಕಾರ ಸೇರಿದಂತೆ ವಿವಿಧ ಬಣ್ಣ ಬಣ್ಣದ
ಗಾಳಿಪಟಗಳನ್ನು ಗಾಳಿಯಲ್ಲಿ ಹಾರಿಬಿಡುತ್ತಿದ್ದುದು ವಿಶೇಷವಾಗಿತ್ತು. ಉತ್ಸಾಹದಿಂದ ಪುರುಷರು, ಮಹಿಳೆಯರು ಹಾಗೂ
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅತಿ ಎತ್ತರಕ್ಕೆ ಗಾಳಿಪಟವನ್ನು ಹಾರಿಸಿದ ಮೂರು ಸ್ಪರ್ಧಿಗಳಿಗೆ
ಬಹುಮಾನ ನೀಡಲಾಯಿತು.
ಮಹಿಳೆಯರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್
ಮೈಸೂರು,ಸೆ.30.ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(Uಉಅ ),ನವದೆಹಲಿ ಇವರು 2014-15ನೇ ಸಾಲಿಗೆ 200 ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ನೀಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಪಿಹೆಚ್.ಡಿ., ಪದವಿ ಹೊಂದಿದ್ದು, ಪೋಸ್ಟ್ ಡಾಕ್ಟರಲ್ ಸಂಶೋಧನೆ ಮಾಡುವ ಆಸಕ್ತಿ ಹೊಂದಿರಬೇಕು.ಖಾಯಂ ನೌಕರಿ ಹೊಂದಿರಬಾರದು.
ತಿತಿತಿ.ugಛಿ.ಚಿಛಿ.iಟಿ/ಠಿಜಜಿತಿ ಇಲ್ಲಿ ಅನ್‍ಲೈನ್ ಮೂಲಕ ಅಕ್ಟೋಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ , ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ ಸಂಖ್ಯೆ 0821-2516844, ಮೊಬೈಲ್ ಸಂಖ್ಯೆ 9449686641 ನ್ನು ಸಂಪರ್ಕಿಸಬಹುದು.
ಮೈಸೂರು ದಸರಾ ವಸ್ತುಪ್ರದರ್ಶನ ಉಪಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ
ಮೈಸೂರು,ಸೆ.30.ದಸರಾ ವಸ್ತುಪ್ರದರ್ಶನದ ಉಪಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನೇಮಕ ಮಾಡಿರುತ್ತಾರೆ ಅವರುಗಳು ವಿವರ ಇಂತಿದೆ.
ಮಹಿಳಾ ಉದ್ದಿಮೆ (ದಸರಾ ವಸ್ತುಪ್ರದರ್ಶನ):-ಅಧ್ಯಕ್ಷರು ಲತಾಮೋಹನ್, ಉಪಾಧ್ಯಕ್ಷ ಡಾ|ಮಹದೇವಮ್ಮ, ಸದಸ್ಯರು-ಚಂದ್ರಶೇಖರ್ ಎಸ್.ಕೆ, ಡಿ. ಪರಮೇಶ, ಆರ್. ಎನ್. ವೆಂಕಟೇಶ್, ಎನ್. ಸುರೇಶ್ ಕುಮಾರ್, ಸಮೀಯುಲ್ಲ, ಎಂ. ರಾಜೀವ್, ಪಿ. ರಾಜೀವ್ ಕುಮಾರ್, ಸುಶೀಲ ಶಶಿಧರ್, ಕಲ್ಪನ ಪಿ., ಸುವರ್ಣ ಆರಾಧ್ಯ, ಶಾಂತಕುಮಾರಿ, ನಿಂಗರಾಜು, ಬಿ.ಟಿ., ನರಸಿಂಹಮೂರ್ತಿ, ಎಂ.ಸಿ. ನಂಜಪ್ಪ, ನೂರ್ ಅಹಮದ್, ಪರಶಿವಮೂರ್ತಿ, ಗಿರೀಶ್, ರಾಧಾಕೃಷ್ಣ, ಅಣ್ಣಾದೊರೆ, ಮಂಜುಳ, ಲೀಲಾ ಪಂಪಾವತಿ, ನಾಗರತ್ನ, ಶಾಂತ, ಶಾಂತಾ.
ಆರೋಗ್ಯ ಸಮಿತಿ:- ಅಧ್ಯಕ್ಷ ಎಂ.ಎನ್.ಮಹದೇವ್, ಉಪಾಧ್ಯಕ್ಷ ಶಕೀಲ್ ಅಹಮದ್, ಸದಸ್ಯರು-ರಮೀಜ ಬೇಗಂ, ಮಂಜುನಾಥ್, ಎಂ.ಆರ್. ರಮೇಶ್, ರಾಚಪ್ಪ, ಸೋಮಾಚಾರಿ, ಶ್ರೀನಿವಾಸ್, ಪುಟ್ಟಸ್ವಾಮಿ, ನಾಗರಾಜು, ನಟರಾಜು, ದಿನೇಶ ಎಂ, ಶಿವರಾಜು, ಲಿಂಗಪ್ಪ, ಆರ್. ಹೆಚ್. ಕುಮಾರ್, ಎಸ್. ಪ್ರತಾಪ್, ಅಯೂಬ್ ಶರೀಫ್, ಸೈಯ್ಯದ್ ಸರ್ ತಾಜ್, ಹುಲಿ ಚಾಮುಂಡನಾಯಕ, ಶಫೀರ್ ಅಹಮದ್, ಗುರುಸ್ವಾಮಿ, ವಿನಯ್ ಕುಮಾರ್ ಕೆ.ಎಸ್., ಮಹೇಶ್, ರವಿ, ಹೆಚ್.ಪಿ. ರಾಜಶೇಖರ ಮೂರ್ತಿ, ಎಸ್. ಗೋವಿಂದ ನಾಯಕ, ಬಸಪ್ಪ,
ಮಹಿಳಾ ಮತ್ತು ಮಕ್ಕಳ ಸಮಿತಿ:- ಅಧ್ಯಕ್ಷ ಡಾ. ಶೈಲಾ ಬಾಲರಾಜ್, ಉಪಾಧ್ಯಕ್ಷ ವಿಜಯಲಕ್ಷ್ಮಮ್ಮ, ಸದಸ್ಯರು-ಸುಜಾತ, ರಾಜೇಂದ್ರ, ಗಾಯತ್ರಿ ನಾರಾಯಣ ಗೌಡ, ನಳಿನಿರಾಜೇ ಅರಸ್, ಸರೋಜಾ ಕೃಷ್ಣಮೂರ್ತಿ, ತಾಜ್ ಉನ್ನೀಸ, ಲೂರ್ದ್ ಮೇರಿ, ಸಿ.ಎಂ. ಮಹದೇವಮ್ಮ, ಲಕ್ಷ್ಮೀನಾಯ್ಡು, ವೆಂಕಟಲಕ್ಷ್ಮಿ, ಸುವರ್ಣ ಆರಾಧ್ಯ, ಮಂಜುಳ ಮಲ್ಲೇಗೌಡ, ವೆಂಕಟಲಕ್ಷ್ಮಮ್ಮ, ನಾಜನಿ ಬೇಗಂ, ವಿಜಯಕುಮಾರಿ, ಕಮಲ, ನಾಗರತ್ನ, ರಜನಿ, ಮಂಜುಳ ರಮೇಶ್, ಚಾಮುಂಡಮ್ಮ, ಅಜಿಯಾ ಶಕೀರ ಬೇಗಂ, ರಾಣಿ ಎನ್., ರೂಪಾ, ಪ್ಯಾರಿಜಾನ್, ವೆಂಕಟಮ್ಮ.
ಸಾಂಸ್ಕøತಿಕ ಸಮಿತಿ: ಅಧ್ಯಕ್ಷ ಆರ್. ಮೂರ್ತಿ, ಉಪಾಧ್ಯಕ್ಷ ಹೆಚ್.ಕೆ. ಅನಂತ, ಮೈ.ನಾ. ಗೋಪಾಲ ಕೃಷ್ಣ, ಸಿ.ಎಸ್. ರಘು, ಸದಸ್ಯರು-ಸಿದ್ದರಾಜು, ಎಂ. ಪುಟ್ಟಸ್ವಾಮಿ, ರಾಜಶೇಖರ್, ಎನ್. ನಂಜುಂಡ, ಹೆಚ್. ತೇಜಸ್ವಿ, ರಮೇಶ್ ಕೆ., ಎಂ. ಮಲ್ಲರಾಜೇ ಅರಸ್, ಸೈಯದ್ ಅಬ್ಬಾಸ್ ಮೆಹದಿ, ಎಂ. ಮಹದೇವ್, ಕುಮಾರ್, ಪ್ರಕಾಶ್, ಡಿ.ಎಂ. ದಿವಾಕರ್, ಸುರೇಶ್, ಎಂ.ಡಿ. ಹ್ಯಾರಿಸ್, ಚಂದ್ರು, ಎಂ.ಎಲ್. ಮಂಜುನಾಥ್, ಎಂ.ಎಲ್. ನಾಗಣ್ಣ, ಬಿ. ಸುರೇಶ್, ಸೋಮಶೇಖರ್, ಮಹೇಶ್, ರವಿಚಂದ್ರು ಪಿ., ಎಂ.ಎಲ್. ರಾಜು, ಆರ್. ಎಲ್. ಅನಂತನಾರಾಯಣ, ಗುರುಸ್ವಾಮಿ, ಮೊಹಮ್ಮದ್ ರಫೀ, ಅಬ್ದುಲ್ ಕುದ್ದೂಸ್, ಮಹಮ್ಮದ್ ಶಫಿ, ಸಯ್ಯದ್ ಅಬ್ದುಲ್ ವಲಿ, ಮಹದೇವನಾಯಕ, ಖದೀರ್ ಅಹಮದ್, ಎಂ. ಶ್ರೀಧರ್, ಬಿ. ಎಸ್. ರಾಮು, ಕುಮಾರ್, ಗಿರಿಶ್, ಕೆ. ಬಿ. ಸೌಮ್ಯ.
No comments:
Post a Comment