Tuesday, 2 September 2014

ಪಾಂಡವಪುರ: ಪಟ್ಟಣದ ಹಾರೋಹಳ್ಳಿಯ ಕಸ್ತೂರ ಗಾಂಧಿ ಬಾಲಿಕಾ ವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ವ ಶಿಕ್ಷಣ ಅಭಿಯಾನದಿಂದ ನಡೆಸಲಾಗುತ್ತಿರುವ ಕಸ್ತೂರ ಗಾಂಧಿ ಬಾಲಿಕಾ ವಿದ್ಯಾಲಯಲ್ಲಿ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದಿರುವಂತಹ ವಿದ್ಯಾರ್ಥಿಗಳೆ ಇರುವುದರಿಂದ, ಸರ್ಕಾರ ನೀಡುತ್ತಿರುವ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಉತ್ತಮ ಭವಿಷ್ಯಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.
ಸಂದರ್ಭದಲ್ಲಿ ಟೌನ್ ಸಿ.ಆರ್.ಪಿ.ರವಿಕುಮಾರ್, ಮುಖ್ಯಶಿಕ್ಷಕಿ ಎಸ್.ವೈ.ಅನಿತಾ, ಸಹ ಶಿಕ್ಷಕಿಯರಾದ ಸೌಮ್ಯ, ಶೈಲಾ, ಮಧು, ಗಾಯಿತ್ರಿ, ಅಶ್ವಿನಿ, ವಾರ್ಡ್‍ನ್ ಕವಿತಾ ಸೇರಿದಂತೆ ಹಲವರು ಭಾಗವಹಿದ್ದರು.

No comments:

Post a Comment